8ನೇ ತರಗತಿ ವಿಜ್ಞಾನ ಅಧ್ಯಾಯ 15 Notes Kannada Medium ನಲ್ಲಿ ಮಳೆ, ಗುಡುಗು, ಮಿಂಚು, ಭೂಕಂಪ ಹಾಗೂ ಇತರ ಕೆಲವು ನೈಸರ್ಗಿಕ ವಿದ್ಯಮಾನಗಳ ವೈಜ್ಞಾನಿಕ ಕಾರಣಗಳನ್ನು ಸರಳವಾಗಿ ವಿವರಿಸಲಾಗಿದೆ.
ಈ ಅಧ್ಯಾಯದ Notes ಮತ್ತು ಪ್ರಶ್ನೋತ್ತರಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಉತ್ತರ ಬರವಣಿಗೆ ಹಾಗೂ ಪುನರವಲೋಕನಕ್ಕೆ ಬಹಳ ಉಪಯುಕ್ತವಾಗಿವೆ. ಈ Notes 2025–26 Karnataka State Board syllabus ಆಧಾರಿತವಾಗಿವೆ.
✅ Updated for 2025–26 Karnataka State Board syllabus.

ಅಧ್ಯಾಯ 15 ಪ್ರಮುಖ ವಿಷಯಗಳು (Quick Overview).
=>ಮಳೆ, ಗುಡುಗು ಮತ್ತು ಮಿಂಚು:
ಮೋಡಗಳಲ್ಲಿ ವಿದ್ಯುತ್ ಆವೇಶಗಳ ವಿಸರ್ಜನೆಯ ಪರಿಣಾಮ.
ಮಿಂಚಿನ ವೈಜ್ಞಾನಿಕ ವಿವರಣೆ ಮತ್ತು ಭದ್ರತಾ ಕ್ರಮಗಳು.
=> ಭೂಕಂಪ (Seismic Activity):
ಸೈಸ್ಮಿಕ್ ವಲಯಗಳು ಮತ್ತು ನ್ಯೂನ್ಯತಾ ವಲಯಗಳು.
ಭೂಕಂಪದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಜಾಗರೂಕತಾ ಕ್ರಮಗಳು.
= ಮಿಂಚು ವಾಹಕ (Lightning Conductor):
ಕಟ್ಟಡ ರಕ್ಷಣೆಗಾಗಿ ಎಷ್ಟು ಮುಖ್ಯವಾಗಿದೆ.
ಲೋಹದ ಸರಳಿನ ರಚನೆ ಮತ್ತು ಕಾರ್ಯವಿಧಾನ.
-> ಅಗ್ನಿಶಾಮಕ ಸಾಧನಗಳು:
ಬಹುಮಹಡಿ ಕಟ್ಟಡಗಳಲ್ಲಿ ಅವಶ್ಯಕತೆ.
ಬೆಂಕಿ ಅಪಾಯ ನಿರ್ವಹಣೆ ಮತ್ತು ಭೂಕಂಪದಲ್ಲಿ ಸುರಕ್ಷತೆ.
8ನೇ ತರಗತಿ ವಿಜ್ಞಾನ ಅಧ್ಯಾಯ 15 ಪ್ರಮುಖ ಪರೀಕ್ಷಾ ಪ್ರಶ್ನೆಗಳು (2025–26)
Q1: ಮಿಂಚು ಹೇಗೆ ಉಂಟಾಗುತ್ತದೆ? A: ಮೋಡಗಳು ಮತ್ತು ಭೂಮಿಯ ನಡುವೆ ಅಥವಾ ವಿಭಿನ್ನ ಮೋಡಗಳ ನಡುವಿನ ವಿದ್ಯುತ್ ಆವೇಶಗಳ ವಿಸರ್ಜನೆಯ ಪರಿಣಾಮವಾಗಿ ಮಿಂಚು ಉಂಟಾಗುತ್ತದೆ.
Q2: ಭೂಕಂಪದ ವೇಳೆ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು?
A:ಗೋಡೆ ಗಡಿಯಾರಗಳು, ಚಿತ್ರ ಚೌಕಟ್ಟುಗಳು, ಜಲತಾಪಕ ಮುಂತಾದವುಗಳನ್ನು ಮೇಲಿಂದ ಬೀಳದಂತೆ ಕಟ್ಟಿ ಹಾಕಬೇಕು.
ಕಾರು ಅಥವಾ ಬಸ್ನಲ್ಲಿ ಇದ್ದರೆ ತಕ್ಷಣ ಹೊರಬರಬೇಡಿ, ಚಾಲಕನಿಗೆ ನಿಧಾನವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಲು ಸೂಚಿಸಿ.
ಅಗ್ನಿಶಾಮಕ ಸಾಧನಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ಅಳವಡಿಸಬೇಕು.
Q3: ಮಿಂಚು ವಾಹಕ ಎಂದರೇನು?
A: ಮಿಂಚಿನಿಂದ ಉಂಟಾಗುವ ಅಪಾಯಗಳಿಂದ ಕಟ್ಟಡಗಳನ್ನು ರಕ್ಷಿಸುವ ಸಾಧನವೇ ಮಿಂಚು ವಾಹಕ. ಲೋಹದ ಸರಳಿಯನ್ನು ಮೇಲ್ಬಾಗದಲ್ಲಿ ಮತ್ತು ಭೂಮಿಯಲ್ಲಿ ಹೂಳುವುದರಿಂದ ವಿದ್ಯುತ್ ಆವೇಶವನ್ನು ಭೂಮಿಗೆ ಸುರಕ್ಷಿತವಾಗಿ ಸಾಗಿಸುತ್ತದೆ.
Q4: ರಿಕ್ಟರ್ ಮಾಪನವೆಂದರೇನು?
A: ಭೂಕಂಪದ ಶಕ್ತಿಯನ್ನು ಅಳೆಯಲು ಬಳಸುವ ಮಾಪನ ಪದ್ಧತಿಯನ್ನು ರಿಕ್ಟರ್ ಮಾಪನ ಎಂದು ಕರೆಯುತ್ತಾರೆ. ಈ ಮಾಪನದಲ್ಲಿ ಭೂಕಂಪದ ತೀವ್ರತೆಯನ್ನು ಸಂಖ್ಯೆಗಳ ಮೂಲಕ ಸೂಚಿಸಲಾಗುತ್ತದೆ. ರಿಕ್ಟರ್ ಮಾಪನದ ಮೌಲ್ಯ ಹೆಚ್ಚಾದಷ್ಟೂ ಭೂಕಂಪದ ಹಾನಿಯ ಪ್ರಮಾಣ ಹೆಚ್ಚಾಗುತ್ತದೆ.
5) ಈ ಕೆಳಗಿನವುಗಳಲ್ಲಿ ಘರ್ಷಣೆಯಿಂದ ಆವೇಶಗೊಳಿಸಲು ಸಾಧ್ಯವಿಲ್ಲದ ವಸ್ತು ಯಾವುದು ?
(a) ಪ್ಲಾಸ್ಟಿಕ್ ಅಳತೆಯ ಪಟ್ಟಿ (b) ತಾಮ್ರದ ಸರಳು (C) ಉಬ್ಬಿದ ಬಲೂನ್ (d) ಉಣ್ಣೆಯ ಬಟ್ಟೆ
ಉತ್ತರ: (b) ತಾಮ್ರದ ಸರಳು
8th Standard Science Chapter 15 Question Answer Kannada
6) ಗಾಜಿನ ಕಡ್ಡಿಯನ್ನು, ರೇಷ್ಮೆ ಬಟ್ಟೆಯ ತುಂಡಿಗೆ ಉಜ್ಜಿದಾಗ ಕಡ್ಡಿ__
ಉತ್ತರ: (b) ಧನ ಆವೇಶಗೊಳಿಸುತ್ತದವೆ, ಮತ್ತು ಬಟ್ಟೆಯು ಋಣ ಆವೇಶಗೊಳಿಸುತ್ತದೆ.
7) ಈ ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ True(T) ಎಂದೂ ತಪ್ಪಿದ್ದರೆ false(f)ಎಂದೂ ಬರೆಯಿರಿ.
a) ಸಜಾತೀಯ ಆವೇಶಗಳು ಆಕರ್ಷಿಸುತ್ತದೆ ಉತ್ತರ: False
b) ಭೂಕಂಪಗಳನ್ನು ಮೊದಲೇ ಊಹಿಸಬಹುದು ಉತ್ತರ: False
b) ಆವೇಶಭರಿತ ಗಾಜಿನ ಕಡ್ಡಿಯ ಆವೇಶಭರಿತ ಪ್ಲಾಸ್ಟಿಕ್ ಕೊಳವೆಯನ್ನು ಆಕರ್ಷಿಸುತ್ತದೆ ಉತ್ತರ: True
(c) ಮಿಂಚುವಾಹಕವು ಕಟ್ಟಡಗಳನ್ನು ಮಿಂಚಿನಿಂದ ರಕ್ಷಿಸುವುದಿಲ್ಲ ಉತ್ತರ: False
8) ಚಳಿಗಾಲದ ಸಮಯದಲ್ಲಿ ದೇಹದಿಂದ ಸ್ವೆಟರ್ ತಗೆಯುವಾಗ ಕೆಲವು ಬಾರಿ ಚಿಟಿ ಚಿಟಿ ಶಬ್ಧ ಕೇಳುತ್ತದೆ. ಇದನ್ನು ವಿವರಿಸಿ
ಉತ್ತರ: ಸ್ವೆಟರ್ ನ್ನು ತೆಗೆಯುವಾಗ, ಸ್ವೆಟರ್ ಹಾಗೂ ದೇಹದ ನಡುವಿನ ಘರ್ಷಣೆಯಿಂದ ಉಣ್ಣೆಯು ಆವೇಶಭರಿತವಾಗುತ್ತವೆ, ಆದ್ದರಿಂದ, ದೇಹದಿಂದ ಸ್ವೆಟರ್ ತೆಗೆಯುವಾಗ ಕೆಲವು ಬಾರಿ ಚಿಟಿ ಚಿಟಿ ಶಬ್ಧ ಕೇಳುತ್ತವೆ,
9) ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈಯಿಂದ ಸ್ಪರ್ಷಿಸಿದಾಗ ಆವೇಶರಹಿತ (ವಿಸರ್ಜನೆ) ಗೊಳ್ಳುತ್ತದೆ ಏಕೆ? ವಿವರಿಸಿ
ಉತ್ತರ: ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈನಿಂದ ಸೃಷ್ಟಿಸಿದಾಗ, ಆ ಆವೇಶಗಳನ್ನು ನಮ್ಮ ದೇಹವು ಭೂಮಿಗೆ ವರ್ಗಾಯಿಸುತ್ತವೆ. ಇದರಿಂದಾಗಿ, ಆ ವಸ್ತುವು ತನ್ನ ಆವೇಶವನ್ನು ಕಳೆದುಕೊಳ್ಳುತ್ತವೆ. ಈ ವಿದ್ಯಮಾನವನ್ನು ಭೂಸಂಪರ್ಕಗೊಳಿಸುವುದು ಎನ್ನುವರು
10) ವಿನಾಶಕಾರಿ ಭೂಕಂಪ ಶಕ್ತಿಯ ಅಳತೆಯನ್ನು ಅಳೆಯುವ ಮಾಪನವನ್ನು ಹೆಸರಿಸಿ? ಮತ್ತು ಭೂಕಂಪದ ಅಳತೆಯ ಮಾಪನದಲ್ಲಿ 3 ಆಗಿದೆ. ಭೂಕಂಪಮಾಪಕವು ಇದನ್ನು ದಾಖಲಿಸುತ್ತದೆಯೇ’ ಇದು ಹೆಚ್ಚು ಹಾನಿಯನ್ನು ಉಂಟುಮಾಡುತ್ತವೆಯೇ ?
ಉತ್ತರ: ರಿಕ್ಟರ್ ಮಾಪನದಲ್ಲಿ ಭೂಕಂಪದ ವಿನಾಶಕಾರಿ ಶಕ್ತಿಯನ್ನು ಅಳೆಯುಯುತ್ತಾರೆ . “ಈ ವಿಷಯವು 1 ರಿಂದ 10 ರವರೆಗೆ ಹಂತ ಹಂತವಾಗಿ ಸಂಪೂರ್ಣ ಆಳವಾದ ತಿಳುವಳಿಕೆಯನ್ನು ನೀಡುತ್ತದೆ. ”ಭೂಕಂಪದ ಅಳತೆಯ ಮಾಪನದಲ್ಲಿ 3 ಆಗಿರುವ ಸಂದರ್ಭದಲ್ಲಿ, ಭೂಕಂಪಮಾಪಕವು ಇದನ್ನು ದಾಖಲಿಸುತ್ತವೆ.
ರಿಕ್ಟರ್ ಮಾಪನದಲ್ಲಿ ಭೂಕಂಪನದ ಅಳತೆಯು 3 ಆಗಿದ್ದರೆ, ಆ ಭೂಕಂಪನದು ಹೆಚ್ಚು ಹಾನಿಯನ್ನು ಉಂಟುಮಾಡುವುದಿಲ್ಲ. ಸಾಮಾನ್ಯವಾಗಿ, ರಿಕ್ಟರ್ ಮಾಪನದಲ್ಲಿ ಭೂಕಂಪನದ ಅಳತೆಯು 5 ಕ್ಕಿಂತ ಹೆಚ್ಚಿದ್ದರೆ, ಆದು ಹೆಚ್ಚು ಹಾನಿಯನ್ನು ಉ೦ಟುಮಾಡುತ್ತವೆ.
ನೈಸರ್ಗಿಕ ವಿದ್ಯಮಾನಗಳು – 8ನೇ ತರಗತಿ ವಿಜ್ಞಾನ ಅಧ್ಯಾಯ 15 ಸಂಪೂರ್ಣ ನೋಟ್ಸ್
11) ಮಿಂಚಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮೂರು ಕ್ರಮಗಳನ್ನು ತಿಳಿಸಿರಿ,
ಉತ್ತರ: A] ಮನೆಯಿಂದ ಹೊರಗೆ ಬರಬಾರದು, ಮತ್ತುಒಂದು ವೇಳೆ ವಾಹನಗಳಲ್ಲಿ ಚಲಿಸುತ್ತಿದ್ದರೆ, ಮಿಂಚು ನಿಲ್ಲುವವರೆಗೆ ಅಲ್ಲಿಯೇ ನಿಲ್ಲಬೇಕು ಮತ್ತು ವಾಹನದ ಕಿಟಕಿಯ ಗಾಜುಗಳನ್ನು ಏರಿಸಿರಬೇಕು,
B) ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳು, ದೂರವಾಣಿ ತಂತಿ, ಮತ್ತು ಲೋಹದ ಕೊಳವೆಗಳು ಮುಂತಾದವುಗಳನ್ನು ಮುಟ್ಟಬಾರದು.
C) ಹರಿಯುವ ನೀರಿನ ಸಂಪರ್ಕ ತಪ್ಪಿಸಲು ಹಾಗೂ ಗುಡುಗುಸಹಿತ ಮಳೆ ಸಂದರ್ಭದಲ್ಲಿ ಸ್ಥಾನ ಮಾಡುವುದು ಸೂಕ್ತವಲ್ಲ,
D) ವಿದ್ಯುತ್ ಉಪಕರಣಗಳಾದ ಗಣಕಯಂತ್ರ, ಮತ್ತು ದೂರದರ್ಶನ ಮುಂತಾದವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು.
12) ಎರಡು ಆವೇಶಭರಿತ ಬಲೂನ್ ಗಳು ಪರಸ್ಪರ ವಿಕರ್ಷಿಸುತ್ತದೆ ಹಾಗೂ ಒಂದು ಆದೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ, ಏಕೆ? ಎಂದು ವಿವರಿಸಿ,
ಉತ್ತರ: ಆವೇಶಭರಿತ ಬಲೂನ್ಗಳ ಮೇಲಿರುವ ಆದೇಶಗಳ ಗುಣಲಕ್ಷಣಗಳು ಒಂದೆ ರೀತಿಯದ್ದಾಗಿರುತ್ತದೆ. ಒಂದೇ ವಿಧದ ಆವೇಶಗಳು ಪರಸ್ಪರ ವಿಕರ್ಷಿಸುವ ಗುಣ ಹೊಂದಿರುವುದರಿಂದ, ಆವೇಶಿತ ಬಲೂನುಗಳು ಪರಸ್ಪರ ದೂರ ಸರಿಯುತ್ತವೆ. ಆದರೆ ಆವೇಶಿತ ಬಲೂನನ್ನು ಆವೇಶವಿಲ್ಲದ ಬಲೂನಿನ ಬಳಿ ತಂದಾಗ, ಪ್ರೇರಣೆಯಿಂದ ಆವೇಶರಹಿತ ಬಲೂನು ವಿರುದ್ಧ ಆವೇಶ ಹೊಂದಿ ಆಕರ್ಷಿತವಾಗುತ್ತದೆ.ವಿಜಾತೀಯ ಆದೇಶಗಳು: ಪರಸ್ಪದ ಆಕರ್ಷಿಸುವುದರಿಂದ, ಒಂದು ಆವೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ
13) ಆವೇಶಭರಿತ ವಸ್ತುವನ್ನು ಪತ್ತೆಹಚ್ಚಲು ಉಪಯೋಗಿಸುವ ಉಪಕರಣಗಳನ್ನು ಚಿತ್ರದ ಸಹಾಯದಿಂದ ವಿವರಿಸಿ.
ಉತ್ತರ: ಇದು ಒಂದು ಅಲ್ಯೂಮಿನಿಯಮ್ ಸರಳನ್ನು ಹೊಂದಿದೆ. ಸರಳಿನ ಒಂದು ತುದಿಯಲ್ಲಿ ಎರಡು ಅಲ್ಯೂಮಿನಿಯಮ್ ಹಾಳೆಗಳು ಅಳವಡಿಸಲ್ಪಟ್ಟಿರುತ್ತವೆ ಮತ್ತು ಇನ್ನೊಂದು ತುದಿಯಲ್ಲಿ ಲೋಹದ ಬಿಲ್ಲೆ ಸ್ಥಾಪಿತವಾಗಿರುತ್ತದೆ. ಅಲ್ಯೂಮಿನಿಯಮ್ನ ಹಾಳೆಗಳನ್ನು ಕಾನಿಕಲ್ ಪ್ಲಾಸ್ಕ್ ನ ಒಳಗಿರಿಸಿ, ಅದು ಗಾಳಿಯ ಸಂಪರ್ಕಕ್ಕೆ ಬಾರದಂತೆ ಪ್ಲಾಸ್ಕ್ ನ ಮಾದರಿಯನ್ನು, ಕಾರ್ಕ್ ನಿಂದ ಮುಚ್ಚಲಾಗಿರುತ್ತದೆ, ಯಾವುದೇ ಆವೇಶಭರಿತ ವಸ್ತುವಿನಿಂದ ಲೋಹದ ಬಿಲ್ಲೆಯನ್ನು ಸ್ಪರ್ಷಿಸಿದಾಗ, ಅಲ್ಯೂಮಿನಿಯಮ್ಸ್ ಹಾಳೆಗಳು ಪರಸ್ಪರ ದೂರ ಸರಿಯುತ್ತವೆ, ಕಾರಣ, ಆವೇಶಭರಿತ ವಸ್ತುವಿನಿಂದ ಕೆಲವು ಆವೇಶಗಳು ಲೋಹದ ಸುರಳಿನ ಮೂಲಕ ಅಲ್ಯೂಮಿನಿಯಮ್ ಹಾಳೆಗೆ ವರ್ಗಾವಣೆಯಾಗುತ್ತದೆ.ಮತ್ತುಅಲ್ಯೂಮಿನಿಯಮ್ ಹಾಳೆಗಳಿಗೆ ವರ್ಗಾಯಿಸಲ್ಪಟ್ಟ ಆವೇಶಗಳು ಒಂದೆ ರೀತಿಯದ್ದಾಗಿರುತ್ತದೆ. ಆದ್ದರಿಂದ ಹಾಳೆಗಳು ಪರಸ್ಪರ ವಿಕರ್ಷಿಸುತ್ತವೆ. ಯಾವುದೇ ವಸ್ತು ಲೋಹದ ಬಿಲ್ಲೆಯನ್ನು ಸ್ಪರ್ಶಿಸಿದರೂ ಅಲ್ಯೂಮಿನಿಯಮ್ ಹಾಳೆಗಳು ಪರಸ್ಪರ ವಿಕರ್ಷಿಸದಿದ್ದರೆ, ಆ ವಸ್ತುವಿನಲ್ಲಿ ವಿದ್ಯುತ್ ಆವೇಶ ಇಲ್ಲವೆಂದು ತಿಳಿಯಬಹುದು.
8th Standard Science Chapter 15 Question and Answer
14.ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳನ್ನು ಪಟ್ಟಿಯನ್ನು ಮಾಡಿ,
ಉತ್ತರ: ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳೆಂದರೆ ಜಮ್ಮು ಕಾಶ್ಮೀರ, ಗುಜರಾತ್ ಹಾಗೂ, ಅಸ್ಸಾಮ್,
15) ಭೂಕಂಪ ಸಂಭವಿಸಿದ ಸಂಧರ್ಭದಲ್ಲಿ ನೀವು ಮನೆಯಿಂದ ಹೊರಗಿದ್ದೀರಿ ಎಂದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳದ ಮುನ್ನೆಚ್ಚರಿಕೆಗಳು ಯಾವುವು ತಿಳಿಸಿ.
ಉತ್ತರ :- ಭೂಕಂಪ ಸಂಭವಿಸಿದ ಸಂಧರ್ಭದಲ್ಲಿ ನಾವು ಮನೆಯಿಂದ ಹೊರಗಿದ್ದಾಗ, ನಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು ಎಂದರೆ,
- ಕಟ್ಟಡಗಳು, ಮರಗಳು ಹಾಗೂ ಮೇಲ್ಭಾಗದ ವಿದ್ಯುತ್ ತಂತಿಗಳಿಂದ ದೂರವಿರುವ ತೆರೆಯಾದ ಸುರಕ್ಷಿತ ಸ್ಥಳದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು.
- ನೀವು ಕಾರು ಅಥವಾ ಬಸ್ನಲ್ಲಿ ಇದ್ದರೆ ತಕ್ಷಣ ಹೊರಬರಬಾರದು; ಚಾಲಕನಿಗೆ ಭೂಕಂಪ ಪ್ರದೇಶದಿಂದ ನಿಧಾನವಾಗಿ ದೂರ ಸಾಗಲು ತಿಳಿಸಿ, ನಡುಕು ಸಂಪೂರ್ಣವಾಗಿ ನಿಲ್ಲುವವರೆಗೂ ವಾಹನದಲ್ಲೇ ಉಳಿಯಬೇಕು.
16) ಹವಾಮಾನ ಇಲಾಖೆ ಕೆಲವು ದಿನಗಳಲ್ಲಿ ಗುಡುಗುಸಹಿತ ಮಳೆ ಸಂಭವಿಸುತ್ತದೆ ಎಂದು ಊಹಿಸಿದೆ. ಆ ಸಂದರ್ಭದಲ್ಲಿ ನೀವು ಹೊರ ಹೋಗಬೇಕಾಗಿದೆ. ನೀವು ಛತ್ರಿಯನ್ನು ಕೊಂಡೊಯ್ಯುತ್ತೀರಾ ವಿವರಿಸಿ.
ಉತ್ತರ: ಇಲ್ಲ, ಆ ಸಂದರ್ಭದಲ್ಲಿ ನಾವು ಛತ್ರಿಯನ್ನು ಕೊಂಡೊಯ್ಯುವುದಿಲ್ಲ. ಏಕೆಂದರೆ, ಗುಡುಗುಸಹಿತ ಮಳೆಯ ಸಮಯದಲ್ಲಿ ಮೋಡಗಳಿಂದ ಹೊರಹೊಮ್ಮುವ ಬೆಳಕಿನೊಂದಿಗೆ ವಿದ್ಯುತ್ ಆವೇಶಗಳ ವಿಸರ್ಜನೆ ಛತ್ರಿಯಲ್ಲಿರುವ ಲೋಹದ ಸರಳಿನೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದರಿಂದ, ಛತ್ರಿಯನ್ನು ಹಿಡಿದವರಿಗೆ ವಿದ್ಯುತ್ ಆಘಾತ ಸಂಭವಿಸಬಹುದು.
17) ಮಳೆ ಬರುವಾಗ ಮಿಂಚು ಹೇಗೆ ಉಂಟಾಗುತ್ತದೆ?
ಉತ್ತರ:ಮೋಡಗಳು ಮತ್ತು ಭೂಮಿಯ ನಡುವೆ ಅಥವಾ ವಿಭಿನ್ನ ಮೋಡಗಳ ನಡುವಿನ ವಿದ್ಯುತ್ ಆವೇಶಗಳ ವಿಸರ್ಜನೆಯ ಪರಿಣಾಮವಾಗಿ ಮಿಂಚು ಉಂಟಾಗುತ್ತದೆ.
18) ಮಿಂಚು ಹಾಗೂ ಬಟ್ಟೆಗಳಿಂದ ಉಂಟಾದ ಕಿಡಿಗಳು ಎರಡೂ ಒಂದೇ ವಿದ್ಯಮಾನಗಳು ಎಂದು ಹೋಲಿಸಿ ತೋರಿಸಿದ ವಿಜ್ಞಾನಿ ಯಾರು?
ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಎಂಬ ಅಮೇರಿಕದ ವಿಜ್ಞಾನಿಯು 1752 ರಲ್ಲಿ ಮಿಂಚು ಮತ್ತು ಬಟ್ಟೆಗಳಿಂದ ಉಂಟಾದ ಕಿಡಿಗಳು ಎರಡೂ ಒಂದೇ ವಿದ್ಯಮಾನಗಳು ಎಂದು ಹೋಲಿಸಿ ತೋರಿಸಿದರು.
19) ಮೋಡಗಳಿಂದ ಮಿಂಚು ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿ.
ಉತ್ತರ: ಗುಡುಗುಸಹಿತ ಮಳೆಯ ಸಮಯದಲ್ಲಿ ಗಾಳಿಯ ಪ್ರವಾಹವು ಮೇಲ್ಮುಖವಾಗಿ ಚಲಿಸುತ್ತಿದ್ದು, ನೀರಿನ ಹನಿಗಳು ಕೆಳಮುಖದತ್ತ ಸಾಗುತ್ತವೆ.ಇಲ್ಲಿಯವರೆಗೂ ಪೂರ್ಣವಾಗಿ ಅರ್ಥವಾಗದ ಈ ಕ್ರಿಯೆಯಲ್ಲಿ ಧನಆವೇಶಗಳು ಮೋಡಗಳ ಮೇಲ್ವಾಗದ ಅಂಚಿನಲ್ಲೂ, ಋುಣ ಆವೇಶಗಳು, ಮೋಡಗಳ ಕೆಳಭಾಗದ ಅಂಚಿನಲ್ಲೂ ಶೇಖರಣೆಗೊಳ್ಳುತ್ತದೆ ಮತ್ತು ಧನಾವೇಶಗಳು ಭೂಮಿಯ ಸಮೀಪದಲ್ಲೂ ಸಹ ಶೇಖರಣೆಯಾಗುತ್ತದೆ. ಶೇಖರಗೊಂಡ ವಿದ್ಯುತ್ ಆವೇಶಗಳ ಪ್ರಮಾಣ ಅತ್ಯಧಿಕವಾದಾಗ, ಸಾಮಾನ್ಯವಾಗಿ ವಿದ್ಯುತ್ ಅವಾಹಕವಾಗಿರುವ ಗಾಳಿಯು ಆವೇಶಗಳ ಚಲನೆಯನ್ನು ತಡೆಯದೆ ಸಾಗಲು ಅವಕಾಶ ನೀಡುತ್ತದೆ. ಇದರ ಪರಿಣಾಮವಾಗಿ ಧನ ಮತ್ತು ಋಣ ಆವೇಶಗಳು ಸೇರಿ ಅತ್ಯಂತ ಪ್ರಕಾಶಮಾನವಾದ ಬೆಳಕಿನ ಗೆರೆಗಳು ಹಾಗೂ ಕಟಾವುಗಳನ್ನು ಉಂಟುಮಾಡುತ್ತವೆ. ಈ ಕ್ರಿಯೆಯೇ ವಿದ್ಯುತ್ ಆವೇಶಗಳ ವಿಸರ್ಜನೆ,
8ನೇ ತರಗತಿ ವಿಜ್ಞಾನ ಅಧ್ಯಾಯ 15 Notes Kannada Medium
20) ಮಿಂಚು ವಾಹಕಗಳು ಎಂದರೇನು ? ಅದು ಹೇಗೆ ಕಾರ್ಯನಿರ್ವಹಿಸುತ್ತದೆ.
ಉತ್ತರ: ಮಿಂಚು ವಾಹಕವು ಮಿಂಚಿನಿಂದ ಉಂಟಾಗುವ ಅಪಾಯಗಳಿಂದ ಕಟ್ಟಡಗಳನ್ನು ರಕ್ಷಿಸುವ ಸುರಕ್ಷತಾ ಸಾಧನವಾಗಿದೆ. ಕಟ್ಟಡ ನಿರ್ಮಾಣದ ವೇಳೆ, ಕಟ್ಟಡಕ್ಕಿಂತ ಎತ್ತರವಾದ ಲೋಹದ ಸರಳನ್ನು ಗೋಡೆಗೆ ಅಳವಡಿಸಲಾಗುತ್ತದೆ. ಈ ಸರಳಿನ ಒಂದು ತುದಿ ಮೇಲ್ಭಾಗದ ಗಾಳಿಯಲ್ಲಿ ಇರುತ್ತದೆ ಹಾಗೂ ಇನ್ನೊಂದು ತುದಿಯನ್ನು ಭೂಮಿಯ ಆಳದಲ್ಲಿ ಹೂಳಲಾಗುತ್ತದೆ. ಗುಡುಗುಸಹಿತ ಮಳೆಯ ಸಮಯದಲ್ಲಿ, ಈ ಸರಳು ವಿದ್ಯುತ್ ಆವೇಶಗಳನ್ನು ಸುರಕ್ಷಿತವಾಗಿ ಭೂಮಿಗೆ ಸಾಗಿಸಲು ಸುಲಭ ಮಾರ್ಗವನ್ನು ಒದಗಿಸುತ್ತದೆ.ಇದರಿಂದ, ಕಟ್ಟಡಗಳಿಗೆ ಹಾನಿ ಉಂಟಾಗುವುದಿಲ್ಲ.
21) ಭೂಕಂಪಗಳಿಗೆ ಸಂಭವನೀಯ ಕಾರಣಗಳು ಯಾವವು?
ಉತ್ತರ: ಜ್ವಾಲಾಮುಖಿಯ ಸ್ಫೋಟ, ಉಲ್ಕೆಯ ಭೂಮಿಗೆ ಅಪ್ಪಳಿಸುವುದು, ಒಳಭಾಗದಲ್ಲಿ ಪರಮಾಣು ಸ್ಫೋಟ ಮತ್ತು ಭೂತಟ್ಟೆಗಳ ಚಲನೆಗಳು ಭೂಕಂಪನಗಳಿಗೆ ಸಂಭವನೀಯ ಕಾರಣಗಳಾಗಿದೆ.
22) ಸೈಸ್ಮಿಕ್ (ಭೂಕಂಪ) ಅಥವಾ ಶೂನ್ಯ ವಲಯಗಳು ಎಂದರೆನು?
ಉತ್ತರ: ಭೂತಟ್ಟೆಯ ಗಡಿಭಾಗಗಳು ದುರ್ಬಲ ವಲಯಗಳಾಗಿದ್ದು ಅವುಗಳ ಚಲನೆಯಿಂದ ಭೂಕಂಪದ ಸಂಭವನೀಯತೆಯು ಉಂಟಾಗುವುದು. ಈ ದುರ್ಬಲ ಪ್ರದೇಶಗಳನ್ನೇ ಸೈಸ್ಮಿಕ್ (ಭೂಕಂಪ) ಅಥವಾ ನ್ಯೂನ್ಯತಾ ವಲಯಗಳು ಎಂದು ಕರೆಯಲಾಗುತ್ತದೆ.
Class 8 Science Chapter 15 FAQs Kannada
Q1:ಪ್ರಶ್ನೆ? 8ನೇ ತರಗತಿ ವಿಜ್ಞಾನ ಅಧ್ಯಾಯ 15 ಪರೀಕ್ಷೆಗೆ ಮುಖ್ಯವೇ? A: ಉತ್ತರ: ಹೌದು, ಮಿಂಚು, ಭೂಕಂಪ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುತ್ತವೆ. Q2ಪ್ರಶ್ನೆ? ಮಿಂಚು ಹೇಗೆ ಉಂಟಾಗುತ್ತದೆ? A: ಉತ್ತರ: ಮೋಡಗಳ ಒಳಗೆ ಮತ್ತು ಮೋಡಗಳು–ಭೂಮಿಯ ನಡುವೆ ವಿದ್ಯುತ್ ಆವೇಶಗಳು ಸಂಗ್ರಹವಾಗುತ್ತವೆ. ಈ ಆವೇಶಗಳ ಪ್ರಮಾಣ ಹೆಚ್ಚು ಆದಾಗ, ಅವುಗಳ ಮಧ್ಯೆ ಅಕಸ್ಮಾತ್ ವಿಸರ್ಜನೆ ಸಂಭವಿಸುತ್ತದೆ. ಈ ವಿದ್ಯುತ್ ಆವೇಶಗಳ ವಿಸರ್ಜನೆಯಿಂದ ಉಂಟಾಗುವ ಪ್ರಕಾಶಮಾನವಾದ ಬೆಳಕೇ ಮಿಂಚು. Q3:ಪ್ರಶ್ನೆ? ಮಿಂಚು ವಾಹಕದ ವ್ಯಾಖ್ಯಾನವೇನು? A: ಉತ್ತರ: ಮಿಂಚಿನಿಂದ ಕಟ್ಟಡಗಳನ್ನು ರಕ್ಷಿಸುವ ಸಾಧನವನ್ನು ಮಿಂಚು ವಾಹಕವೆಂದು ಕರೆಯುತ್ತಾರೆ. Q4:ಪ್ರಶ್ನೆ? ಭೂಕಂಪವನ್ನು ಮೊದಲೇ ಊಹಿಸಲು ಸಾಧ್ಯವೇ? A: ಉತ್ತರ: ಇಲ್ಲ, ಪ್ರಸ್ತುತ ಭೂಕಂಪವನ್ನು ನಿಖರವಾಗಿ ಮೊದಲೇ ಊಹಿಸಲು ಸಾಧ್ಯವಿಲ್ಲ. Q5:ಪ್ರಶ್ನೆ? ರಿಕ್ಟರ್ ಮಾಪನವೆಂದರೇನು? A: ಉತ್ತರ ಭೂಕಂಪದ ಶಕ್ತಿಯನ್ನು ಅಳೆಯಲು ಬಳಸುವ ಮಾಪನ ಪದ್ಧತಿಯನ್ನು ರಿಕ್ಟರ್ ಮಾಪನ ಎಂದು ಕರೆಯುತ್ತಾರೆ. ಈ ಮಾಪನದಲ್ಲಿ ಭೂಕಂಪದ ತೀವ್ರತೆಯನ್ನು ಸಂಖ್ಯೆಗಳ ಮೂಲಕ ಸೂಚಿಸಲಾಗುತ್ತದೆ. ಮೌಲ್ಯ ಹೆಚ್ಚಾದಷ್ಟೂ ಹಾನಿ ಹೆಚ್ಚು ಆಗಬಹುದು. |
*ಸಂಬಂಧಿತ ಅಧ್ಯಾಯಗಳ ಲಿಂಕ್ಗಳು:-
- 8ನೇ ತರಗತಿ ವಿಜ್ಞಾನ ಅಧ್ಯಾಯ 14 Notes Kannada
- 8ನೇ ತರಗತಿ ವಿಜ್ಞಾನ ಅಧ್ಯಾಯ 16 Notes Kannada
- Class 8 Science Kannada Notes (ಎಲ್ಲಾ ಅಧ್ಯಾಯಗಳು)
ಸಾರಾಂಶ (Conclusion)
8ನೇ ತರಗತಿ ವಿಜ್ಞಾನ ಅಧ್ಯಾಯ 15 – ಕೆಲವು ನೈಸರ್ಗಿಕ ವಿದ್ಯಮಾನಗಳು ಈ ಅಧ್ಯಾಯವು ಮಳೆ, ಗುಡುಗು, ಮಿಂಚು, ಭೂಕಂಪ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸರಳ ಹಾಗೂ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ. ಈ Kannada Medium notes ಮತ್ತು ಪ್ರಶ್ನೋತ್ತರಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಮತ್ತು ಪುನರವಲೋಕನಕ್ಕೆ ಬಹಳ ಸಹಾಯಕವಾಗಿವೆ.
