8 class science ಅಧ್ಯಾಯ – 10 ದಹನ ಮತ್ತು ಜ್ವಾಲೆ

NCERT, KSEEB solutions, ncert sceince,
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 8 class science
01) ದಹನಕ್ರಿಯೆ ಉಂಟಾಗಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡಿ,
ಉತ್ತರ: ದಹನಕ್ರಿಯೆ ಉಂಟಾಗಲು ಪ್ರಮುಖವಾದ ಅಂಶಗಳು, 1] ಇಂಧನ 2] ಆಮ್ಲಜನಕ ಮತ್ತು 3) ಜ್ವಲನ ತಾಪ,
02) ಬಿಟ್ಟ ಸ್ಥಳ ತುಂಬಿರಿ
(a) ಕಟ್ಟಿಗೆ ಮುತ್ತು ಕಲ್ಲಿದ್ದಲಿನ ಉರಿಯುವಿಕೆಯ ಗಾಳಿಯ ಮಾಲಿನ್ಯ ಉಂಟುಮಾಡುತ್ತದೆ.
(b) ಮನೆಯಲ್ಲಿ ಬಳಸುವ ಧ್ರವ ಇಂಧನ ಹೆಸರು ದ್ರವೀಕರಿಸಿದ ಪೆಟ್ರೋಲಿಯಮ್ ಅನಿಲ (LPG)
(c) ಇಂಧನ ಹೊತ್ತಿಕೊಳ್ಳುವ ಮುನ್ನ ಅದರ ಜ್ವಲನ ತಾಪ ಕ್ಕೆ ಕಾಸಬೇಕು.
(d) ಎಣ್ಣೆಯಿಂದ ಉಂಟಾದ ಬೆಂಕಿಯನ್ನು ನೀರಿನಿಂದ ನಿಯಂತ್ರಿಸಲಾಗುವುದಿಲ್ಲ.
03) ವಾಹನಗಳಲ್ಲಿ CNG ಯನ್ನು ಬಳಸುವುದರಿಂದ ನಮ್ಮ ನಗರಗಳಲ್ಲಿ ಮಾಲಿನ್ಯ ಹೇಗೆ ಕಡಿಮೆಯಾಗಿದೆ ಎಂದು ವಿವರಿಸಿ
ಉತ್ತರ: ಪೆಟ್ರೋಲಿಯಂ ಇಂಧನಗಳನ್ನು ದಹಿಸುವುದರಿಂದ ಕಾರ್ಬನ್ ಮೊನಾಕ್ಸೈಡ್ ಅನಿಲದೊಂದಿಗೆ ಅದಹ್ಯ ಕಾರ್ಬನ್ ಕಣಗಳು ಉಂಟಾಗುತ್ತವೆ. ಈ ಮಾಲಿನ್ಯಕಾರಕಗಳು ಗಾಳಿಯನ್ನು ಸೇರಿ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ಉಂಟುಮಾಡುತ್ತವೆ. CNGಯ ದಹನದಿಂದ ಈ ಹಾನಿಕಾರಕ ಮಾಲಿನ್ಯಕಾರಕಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇದು ತುಲನಾತ್ಮಕವಾಗಿ ಶುದ್ಧರೂಪದ ಇಂಧನವಾಗಿದೆ. ಆದ್ದರಿಂದ, ವಾಹನಗಳಲ್ಲಿ CNG ಯನ್ನು ಬಳಸುವುದರಿಂದ ನಮ್ಮ ನಗರಗಳಲ್ಲಿ ಮಾಲಿನ್ಯ ಕಡಿಮೆಯಾಗಿದೆ.
04) LPG ಮುತ್ತು ಕಟ್ಟಿಗೆಯನ್ನು ಇಂಧನದ ನೆಲೆಯಲ್ಲಿ ಹೋಲಿಕೆ ಮಾಡಿ
ದ್ರವೀಕರಿಸಿದ ಪೆಟ್ರೋಲಿಯಮ್ ಅನಿಲ | ಕಟ್ಟಿಗೆ |
ಸಾಂಪ್ರದಾಯಿಕ ಇಂಧನವಲ್ಲ. | ಗೃಹ ಮತ್ತು ಕೈಗಾರಿಕೆಗಳ ಸಾಂಪ್ರದಾಯಿಕ ಇಂಧನವಾಗಿದೆ. |
ಹೊಗೆಯನ್ನು ಉಂಟುಮಾಡುವುದಿಲ್ಲ. | ಹೆಚ್ಚು ಹೊಗೆಯನ್ನು ಉಂಟುಮಾಡುತ್ತದೆ |
ಶುದ್ಧರೂಪದ ಇಂಧನವಾಗಿದೆ. | ಶುದ್ಧರೂಪದ ಇಂಧನವಲ್ಲ |
ಇಂಧನ ದಕ್ಷತೆಯು ಹೆಚ್ಚು | ಇಂಧನ ದಕ್ಷತೆಯು ಕಡಿಮೆ |
ಕ್ಯಾಲೋರಿ ಮೌಲ್ಯವು55000 kl/kg ಆಗಿರುತ್ತದೆ. | ಕ್ಯಾಲೋರಿ ಮೌಲ್ಯವು 17000kl/kg bos 22000,kl/kgಗಳ ನಡುವೆ ಇರುತ್ತದೆ. |
5) ಕಾರಣ ಕೊಡಿ
(a) ವಿದ್ಯುತ್ ಉಪಕರಣಗಳಿಂದಾದ ಬೆಂಕಿಯನ್ನು ನಿಯಂತ್ರಿಸಲು ನೀರನ್ನು ಬಳಸುವುದಿಲ್ಲ.
ಉತ್ತರ: ನೀರು ಒಂದು ಉತ್ತಮ ವಿದ್ಯುತ್ ವಾಹಕವಾಗಿದೆ. ಒಂದು ವೇಳೆ ವಿದ್ಯುತ್ ಉಪಕರಣಗಳಿಂದಾದ ಬೆಂಕಿಯನ್ನು ನಿಯಂತ್ರಿಸಲು ನೀರನ್ನು ಬಳಸಿದರೆ, ಬೆಂಕಿಯನ್ನು ನಂದಿಸುತ್ತಿರುವ ವ್ಯಕ್ತಿಗೆ ವಿದ್ಯುತ್ ಸ್ಪರ್ಶದಿಂದ ಅಪಾಯ ಉಂಟಾಗುವುದು ಮತ್ತು ನೀರಿನಿಂದ ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾಗಬಹುದು.
(b) LPG : ಕಟ್ಟಿಗೆಗಿಂತ ಉತ್ತಮವಾದ ಗೃಹಬಳಕೆ ಇಂಧನ,
ಉತ್ತರ: LPGಯು ದಹನಗೊಂಡಾಗ, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉತ್ಪತ್ತಿ ಮಾಡುವ ಹೊಗೆ ಮತ್ತು ಅದಹ್ಯ ಕಾರ್ಬನ್ ಕಣಗಳನ್ನು ಉಂಟುಮಾಡುವುದಿಲ್ಲ. ಆದ್ದರಿಂದ, LPG ಯು ಕಟ್ಟಿಗೆಗಿಂತ ಉತ್ತಮವಾದ ಗೃಹಬಳಕೆ ಇಂಧನವಾಗಿದೆ.
(c) ಕಾಗದಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ ಆದರೆ, ಅಲ್ಯುಮಿನಿಯಂ ಕೊಳವೆಗೆ ಸುತ್ತಿರುವ ಕಾಗದ ಹೊತ್ತಿಕೊಳ್ಳುವುದಿಲ್ಲ. ಏಕೆ?
ಉತ್ತರ: ಅಲ್ಯೂಮಿನಿಯಂ ಒಂದು ಲೋಹವಾದ್ದರಿಂದ, ಉತ್ತಮವಾದ ಉಷ್ಣವಾಹಕವಾಗಿದೆ.ಉಷ್ಣವು ಅಲ್ಯುಮಿನಿಯಂ ಕೊಳವೆಗೆ ಸುತ್ತಿರುವ ಕಾಗದದಿಂದ ಅಲ್ಯೂಮಿನಿಯಂಗೆ ಸುಲಭವಾಗಿ ವರ್ಗಾವಣೆಗೊಳ್ಳುತ್ತದೆ ಮತ್ತು ಕಾಗದವು ಜ್ವಲನ ತಾಪವನ್ನು ಹೊಂದಲು ಸಾಧ್ಯವಾಗುವುದಿಲ್ಲ, ಆದ್ದರಿಂದ, ಅಲ್ಯುಮಿನಿಯಂ ಕೊಳವೆಗೆ ಸುತ್ತಿರುವ ಕಾಗದ ಹೊತ್ತಿಕೊಳ್ಳುವುದಿಲ್ಲ.
6) ಮೇಣದ ಬತ್ತಿಯ ಜ್ವಾಲೆಯ ಚಿತ್ರ ಬರೆದು ಭಾಗಗಳನ್ನು ಗುರುತಿಸಿ,

7) ಕ್ಯಾಲೋರಿ ಮೌಲ್ಯವನ್ನು ವ್ಯಕ್ತಪಡಿಸುವ ಏಕಮಾನವನ್ನು ಹೆಸರಿಸಿ,
ಉತ್ತರ: ಕ್ಯಾಲೋರಿ ಮೌಲ್ಯವನ್ನು ವ್ಯಕ್ತಪಡಿಸುವ ಏಕಮಾನದ ಹೆಸರು : ಕಿಲೋ ಜೂಲ್ ಅಥವಾ ಕಿಲೋ ಗ್ರಾಂ
(kl/kg).
8) CO2 ಬೆಂಕಿಯನ್ನು ಹೇಗೆ ನಿಯಂತ್ರಿಸುತ್ತದೆ ಎಂದು ವಿವರಿಸಿ
ಉತ್ತರ:1] CO2, ಆಕ್ಸಿಜನ್‌ಗಿಂತ ಭಾರವಾಗಿದ್ದು, ಬೆ೦ಕಿಯನ್ನು ಹೊದಿಕೆಯಂತೆ ಮುಚ್ಚುತ್ತದೆ. ಇಂಧನ ಹಾಗೂ ಆಕ್ಸಿಜನ್‌ನ ನಡುವೆ ಸಂಪರ್ಕ ಕಡಿತವಾಗುವುದರಿಂದ ಬೆಂಕಿಯು ಹತೋಟಿಗೆ ಬರುವುದು.
2] ಸಿಲಿಂಡರ್‌ನಿಂದ ಬಿಡುಗಡೆಯಾಗುವ CO, ಗಾತ್ರದಲ್ಲಿ ಬಹಳಷ್ಟು ಹಿಗ್ಗುವುತ್ತದೆ ಮತ್ತು ತಂಪಾಗುತ್ತದೆ. ಅದು ಬೆಂಕಿಯ ಸುತ್ತ ಹೊದಿಕೆಯಂತಾಗುವುದು ಅದಲ್ಲದೆ ಇಂಧನದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಅದು ಅತ್ಯುತ್ತಮವಾದ ಅಗ್ನಿಶಾಮಕವಾಗಿದೆ.
9) ಹಸಿರು ಎಲೆಗಳ ರಾಶಿಯನ್ನು ಉರಿಸುವುದು ಕಷ್ಟ. ಆದರೆ ಒಣಗಿದ ಎಲೆಗಳು ಬೇಗನ ಬೆಂಕಿಯಿಂದ ಹೊತ್ತಿಕೊಳ್ಳುತ್ತದೆ. ವಿವರಿಸಿ.
ಉತ್ತರ: ಹಸಿರು ಎಲೆಗಳು ತಮ್ಮಲ್ಲಿ ಸಾಕಷ್ಟು ತೇವಾಂಶವನ್ನು ಹೊಂದಿರುತ್ತದೆ. ಅದು ಸುಲಭವಾಗಿ ಬೆಂಕಿಯನ್ನು ಹೊತ್ತಲು ಬಿಡುವುದಿಲ್ಲ. ಆದರೆ, ಒಣಗಿದ ಎಲೆಗಳು ತೇವಾಂಶವನ್ನು ಹೊಂದಿರುವುದಿಲ್ಲ. ಆದ್ದರಿಂದ, ಅವು ಬೇಗನೆ ಬೆಂಕಿಯಿಂದ ಹೊತ್ತಿಕೊಳ್ಳುತ್ತವೆ.
10) ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ವಲಯವನ್ನು ಬಳಸುತ್ತಾರೆ? ಏಕೆ?
ಉತ್ತರ : ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಸಂಪೂರ್ಣ ದಹನಕ್ರಿಯೆಯ ಹೊರಗಿನ ನೀಲಿ ವಲಯವನ್ನು ಬಳಸುವರು, ಏಕೆಂದರೆ, ಜ್ವಾಲೆಯ ಅತ್ಯಂತ ಹೊರ ವಲಯವು ಸಂಪೂರ್ಣ ದಹನವನ್ನು ಉಂಟುಮಾಡುತ್ತದೆ ಮತ್ತು ಅತ್ಯಂತ ಬಿಸಿಯಾದ ವಲಯವಾಗಿದೆ.
11) ಪ್ರಯೋಗವೊಂದರಲ್ಲಿ 4.5 kg ಇಂಧನವು ಸಂಪೂರ್ಣವಾಗಿ ಉರಿಸಲ್ಪಟ್ಟಿದೆ. ಉತ್ಪತ್ತಿಯಾದ ಉಷ್ಣ 1,80,000 ರಷ್ಟು ಇದ್ದಿತು. ಇಂದನದ ಕ್ಯಾಲೋರಿ ಮೌಲ್ಯವನ್ನು ಲೆಕ್ಕ ಹಾಕಿ,

12) ತುಕ್ಕು ಹಿಡಿಯುವುದನ್ನು ದಹನಕ್ರಿಯೆ ಎನ್ನಬಹುದೇ’ ಚರ್ಚಿಸಿ,
ಉತ್ತರ: ಒಂದು ವಸ್ತುವು ಆಕ್ಸಿಜನ್ ಜೊತೆ ವರ್ತಿಸಿ ಶಕ್ತಿಯನ್ನು ಬಿಡುಗಡೆ ಮಾಡುವ ರಾಸಾಯನಿಕ ಪ್ರಕ್ರಿಯೆಯನ್ನು ದಹನ ಎಂದು ಕರೆಯುವರು. ಈ ಪ್ರಕ್ರಿಯೆಯಲ್ಲಿ ಶಕ್ತಿಯು ಶಾಖ ಅಥವ ಬೆಳಕು ಅಥವ ಎರಡೂ ರೂಪಗಳಲ್ಲೂ ಬಿಡುಗಡೆಯಾಗಬಹುದು, ಕಬ್ಬಿಣ ತುಕ್ಕು ಹಿಡಿಯುವುದು ಒಂದು ಬಹಿರುಷ್ಣಕ ಕ್ರಿಯೆಯಾಗಿದ್ದು, ಉಷ್ಣವು ಬಿಡುಗಡೆಯಾಗುತ್ತದೆ, ಆದ್ದರಿಂದ, ತುಕ್ಕು ಹಿಡಿಯುವುದನ್ನು ದಹನಕ್ರಿಯೆ ಎನ್ನಬಹುದಾಗಿದೆ.
13) ಅಬಿದಾ ಮತ್ತು ರಮೇಶ್ ಬೀಕರ್ ನಲ್ಲಿ ನೀರನ್ನು ಕಾಸುವ ಒಂದು ಪ್ರಯೋಗವನ್ನು ಮಾಡುತ್ತಿದ್ದರು, ಅಬಿದಾ ಬೀಕರನ್ನು ಮೇಣದ ಬತ್ತಿಯ ಜ್ವಾಲೆಯ ಹಳದಿ ಪ್ರದೇಶದ ಬಳಿ ಇರಿಸಿದಳು, ರಮೇಶನು ಬೀಕರ್ ಅನ್ನು ಜ್ವಾಲೆಯ ಅತ್ಯಂತ ಹೊರ ಭಾಗದಲ್ಲಿ ಇರಿಸಿದನು, ಯಾವ ನೀರು ಕಡಿಮೆ ಅವಧಿಯಲ್ಲಿ ಬಿಸಿಯಾಗುತ್ತದೆ?.
ಉತ್ತರ:- ರಮೇಶನ ಬೀಕರಿನಲ್ಲಿರುವ ನೀರು ಕಡಿಮೆ ಅವಧಿಯಲ್ಲಿ ಬಿಸಿಯಾಗುತ್ತದೆ, ಏಕೆಂದರೆ, ಜ್ವಾಲೆಯ ಅತ್ಯಂತ ಹೊರ ವಲಯವು ಅತಿ ಉಷ್ಣವನ್ನು ಹೊಂದಿರುತ್ತದೆ, ಆದರೆ, ಅಬಿದಾಳು ಬೀಕರನ್ನು ಇರಿಸಿರುವ ಜ್ವಾಲೆಯ ಹಳದಿ ಪ್ರದೇಶವು ಕಡಿಮೆ ಉಷ್ಣವನ್ನು ಹೊಂದಿರುತ್ತದೆ.
8 class science, NCERT, KSEEB solutions, ncert sceince,
ಹೆಚ್ಚುವರಿ ಪ್ರಶ್ನೆಗಳು
1) ಜ್ವಲನ ತಾಪ ಎಂದರೇನು?
ಉತ್ತರ: ಒಂದು ವಸ್ತುವು ಬೆಂಕಿಯಿಂದ ಹೊತ್ತಿಕೊಳ್ಳಲು ಅಗತ್ಯವಾಗಿರುವ ಕನಿಷ್ಟ ತಾಪವನ್ನು ಜ್ವಲನ ತಾಪ ಎನ್ನುತ್ತಾರೆ.
2) ದಹನದ ವಿಧಗಳನ್ನು ಹೆಸರಿಸಿ.
ಉತ್ತರ:- ಕ್ಷಿಪ್ರ ದಹನ, ಸ್ವಯಂಪ್ರೇರಿತ ದಹನ, ಸ್ಫೋಟ ಇತ್ಯಾದಿಗಳು ದಹನದ ವಿಧಗಳಾಗಿವೆ.
3) ಒಂದು ಜ್ವಾಲೆಯಲ್ಲಿನ ವಿವಿಧ ವಲಯಗಳು ಯಾವುವು?
ಉತ್ತರ: ಒಂದು ಜ್ವಾಲೆಯಲ್ಲಿ 3 ವಿವಿಧ ವಲಯಗಳಿವೆ ಅವಗಳೆಂದರೇ – ಗಾಢ ವಲಯ, ಉಜ್ವಲ ವಲಯ ಹಾಗು ಪ್ರಕಾಶಿತವಲ್ಲದ ವಲಯ
4) ಒಂದು ಆದರ್ಶ ಇಂಧನವು ಹೇಗಿರುತ್ತದೆ’
ಉತ್ತರ: ಒಂದು ಆದರ್ಶ ಇಂಧನವು ಅಗ್ಗವಾಗಿದ್ದು, ಸುಲಭವಾಗಿ ಲಭ್ಯವಿದೆ, ಸುಲಭವಾಗಿ ದಹ್ಯವಾಗುವಂತಿದ್ದು ಸಾಗಾಣಿಕ ಸುಲಭವಾಗಿರುತ್ತದೆ . ಅದು ಅತ್ಯಂತ ಅಧಿಕ ಕ್ಯಾಲೋರಿ ಮೌಲ್ಯವನ್ನು ಹೊಂದಿರುತ್ತದೆ. ಅದು ಪರಿಸರವನ್ನು ಮಲಿನಗೊಳಿಸುವ ಅನಿಲಗಳು ಅಥವಾ ಶೇಷವಸ್ತುಗಳನ್ನು ಉಂಟು ಮಾಡುವುದಿಲ್ಲ.
5) ಕೆಲವು ಇಂಧನಗಳನ್ನು ಪಟ್ಟಿಮಾಡಿ,
ಉತ್ತರ:– ಸಗಣಿ, ಕಟ್ಟಿಗೆ, ಕಲ್ಲಿದ್ದಲು, ಇದ್ದಲು, ಪೆಟ್ರೋಲ್, ಡೀಸೆಲ್ ಪೆಟ್ರೋಲಿಯದ ಅನಿಲ) ಹೆಚ್ NG (ಸಂಪೀಡಿತ ನೈಸರ್ಗಿಕ ಆನಿಲ), LPG (ದ್ರವೀಕರಿಸಿದ ECNG ಇತ್ಯಾದಿ.
6) ದಹನ ಎಂದರೇನು
ಉತ್ತರ: ಒಂದು ವಸ್ತುವು ಆಕ್ಸಿಜನ್ ಜೊತೆ ವರ್ತಿಸಿ ಶಕ್ತಿಯನ್ನು ಬಿಡುಗಡೆ ಮಾಡುವ ರಾಸಾಯನಿಕ ಪ್ರಕ್ರಿಯೆಯನ್ನು ದಹನ ಎಂದು ಕರೆಯುತ್ತಾರೆ.
7) ಒಬ್ಬ ವ್ಯಕ್ತಿಯ ಬಟ್ಟೆಗೆ ಬೆಂಕಿ ಹೊತ್ತಿದಾಗ, ಬೆಂಕಿಯನ್ನು ನಂದಿಸಲು ಆ ವ್ಯಕ್ತಿಗೆ ಕಂಬಳಿಯನ್ನು ಹೊದಿಸಲಾಗವುದು. ಏಕೆ ?
ಉತ್ತರ:- ಬಟ್ಟೆಗೆ ಬೆಂಕಿ ಹೊತ್ತಿದ ವ್ಯಕ್ತಿಗೆ ಕಂಬಳಿಯನ್ನು ಹೊದಿಸಿದಾಗ, ಬೆಂಕಿಗೆ ಹೊರಗಿನಿಂದ ಆಮ್ಲಜನಕದ ಪೂರೈಕೆಯು ಕಡಿತಗೊಳ್ಳುವ ಮೂಲಕ ಬೆಂಕಿಯು ನಂದಿಹೋಗುವುದು. ಆದ್ದರಿಂದ ಒಬ್ಬ ವ್ಯಕ್ತಿಯ ಬಟ್ಟೆಗೆ ಬೆಂಕಿ ಹೊತ್ತಿದಾಗ, ಬೆಂಕಿಯನ್ನು ನಂದಿಸಲು ಆ ವ್ಯಕ್ತಿಯ ಮೇಲೆ ಕಂಬಳಿಯನ್ನು ಹೊದಿಸಲಾಗುತ್ತದೆ.
8) ಕಟ್ಟಿಗೆ ಅಥವಾ ಕಲ್ಲಿದ್ದಲನ್ನು ಹೊತ್ತಿಸಲು ಕಾಗದ ಅಥವಾ ಸೀಮೆಎಣ್ಣೆಯನ್ನು ನೀವು ಏಕೆ ಉಪಯೋಗಿಸುತ್ತೀರಿ?
ಉತ್ತರ:- ದಹನ ವಸ್ತುವು ತನ್ನ ಜ್ವಲನ ತಾಪಕ್ಕಿಂತ ಕಡಿಮೆ ಉಷ್ಣತೆ ಯಿರುವವರೆಗೂ ಹೊತ್ತಿಕೊಳ್ಳುವುದಿಲ್ಲ, ಕಟ್ಟಿಗೆ ಮತ್ತು ಕಲ್ಲಿದ್ದಲಿನ ಜ್ವಲನ ತಾಪಗಳು ಹೆಚ್ಚು ಇರುವುದರಿಂದ ತಕ್ಷಣ ಹೊತ್ತಿಕೊಳ್ಳುವುದಿಲ್ಲ. ಆದರೆ ಕಾಗದ ಮತ್ತು ಸೀಮೆಎಣ್ಣೆಯ ಜ್ವಲನ ತಾಪಗಳು ಕಡಿಮೆ ಇರುವುದರಿಂದ ತಕ್ಷಣ ಹೊತ್ತಿಕೊಳ್ಳುತ್ತದೆ. ಆದ್ದರಿಂದ, ಕಟ್ಟಿಗೆ ಅಥವಾ ಕಲ್ಲಿದ್ದಲನ್ನು ಹೊತ್ತಿಸುವ ಸಲುವಾಗಿ ಕಾಗದ ಅಥವಾ ಸೀಮೆಎಣ್ಣೆಯನ್ನು ನಾವು ಉಪಯೋಗಿಸುತ್ತೇವೆ.
9) ದಹ್ಯ ವಸ್ತುಗಳು ಎಂದರೇನು? ಉದಾಹರಿಸಿ,
ಉತ್ತರ:- ಯಾವ ವಸ್ತುಗಳು ಅತ್ಯಂತ ಕಡಿಮೆ ಜ್ವಲನ ತಾಪವನ್ನು ಹೊಂದಿದ್ದು ಸುಲಭವಾಗಿ ಜ್ವಾಲೆಯಿಂದ ಹೊತ್ತಿಕೊಳ್ಳುತ್ತದೆಯೋ ಅಂತಹ ವಸ್ತುಗಳನ್ನು ದಹ್ಯ ವಸ್ತುಗಳು ಎಂದು ಕರೆಯುತ್ತಾರೆ,
ಉದಾಹರಣೆಗೆ: ಪೆಟ್ರೋಲ್, ಆಲ್ಕೋಹಾಲ್, ದ್ರವೀಕೃತ ಪೆಟ್ರೋಲಿಯಂಅನಿಲ (LPG) ಇತ್ಯಾದಿಗಳು,
10) ಸಾಮಾನ್ಯವಾಗಿ ಬೆಂಕಿಯ ಮೇಲೆ ನೀರು ಹಾಕಿದರೆ ಅದು ನಂದಿಹೋಗುತ್ತದೆ, ಏಕೆ?
ಉತ್ತರ:- ನೀರು ದಹ್ಯ ವಸ್ತುವಿನ ತಾಪವನ್ನು ಅದರ ದಹನ ತಾಪ / ಜ್ವಲನ ತಾಪಕ್ಕಿಂತ ಕಡಿಮೆ ಯಾಗುವ ಹಾಗೆ ತಂಪುಗೊಳಿಸುತ್ತದೆ. ಇದು ಬೆಂಕಿ ಹರಡುವುದನ್ನು ತಡೆಯುತ್ತದೆ. ನೀರಾವಿಯ ದಹ್ಯ ವಸ್ತುವನ್ನು ಸುತ್ತುವರೆದು ಅದಕ್ಕೆ ಗಾಳಿಯ ಸರಬರಾಜನ್ನು ತಡೆ ಯುವುದು, ಹಾಗಾಗಿ, ಬೆಂಕಿಯು ನಂದಿ ಹೋಗುತ್ತದೆ.
11) ಎಣ್ಣೆ ಮತ್ತು ಪೆಟ್ರೋಲ್ ನಿಂದ ಉತ್ಪತ್ತಿಯಾಗುವ ಬೆಂಕಿಯನ್ನು ನಂದಿಸಲು ನೀರು ಸೂಕ್ತವಲ್ಲ, ಏಕೆ ?
ಉತ್ತರ:– ನೀರಿನ ಸಾಂದ್ರತೆಯು ಎಣ್ಣೆ ಮತ್ತು ಪೆಟ್ರೋಲ್ ಗಳ ಸಾಂದ್ರತೆಗಿಂತ ಹೆಚ್ಚುಗಿರುತ್ತದೆ. ಆದ್ದರಿಂದ, ಅದು ಎಣ್ಣೆಯ ಕೆಳಗೆ ಮುಳುಗುತ್ತದೆ ಮತ್ತು ಎಣ್ಣೆಯು ಮೇಲೆ ಉರಿಯುತ್ತಲೇ ಇರುತ್ತದೆ, ಆದ್ದರಿಂದ, ಎಣ್ಣೆ ಮತ್ತು ಪೆಟ್ರೋಲ್‌ನಿಂದ ಉಂಟಾಗುವ ಬೆಂಕಿಯನ್ನು ನಂದಿಸಲು ನೀರು ಸೂಕ್ತ ಅಲ್ಲ.
12) ಸ್ಫೋಟ ಎಂದರೇನು?
ಉತ್ತರ:- ಕೆಲವು ದಹ್ಯ ವಸ್ತುಗಳನ್ನು ಹೊತ್ತಿಸಿದಾಗ ಕ್ಷಿಪ್ರ ಕ್ರಿಯೆ ನಡೆದು ಉದ್ದ, ಬೆಳಕು ಮತ್ತು ಶಬ್ದ ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದ ಅನಿಲವು ಉತ್ಪತ್ತಿಯಾಗಿ ಬಿಡುಗಡೆಯಾಗುತ್ತದೆ. ಇಂತಹ ಪ್ರಕ್ರಿಯೆಯನ್ನು ಸ್ಫೋಟ ಎನ್ನುತ್ತೇವೆ. ಉದಾಹರಣೆ: ಪಟಾಕಿ ಸಿಡಿಯುವುದು,
13) ಒಂದು ಇಂಧನದ ಕ್ಯಾಲೋರಿ ಮೌಲ್ಯವನ್ನು ವ್ಯಾಖ್ಯಾನಿಸಿ,
ಉತ್ತರ:- ಒಂದು ಕಿಲೋ ಗ್ರಾಂ ಇಂಧನದ ಸಂಪೂರ್ಣ ದಹನದಿಂದ ಬಿಡುಗಡೆಯಾಗುವ ಉಷ್ಣ ಶಕ್ತಿ , ಆ ಇಂಧನದ ಕ್ಯಾಲೋರಿ ಮೌಲ್ಯ ಆಗಿರುತ್ತದೆ.
14) ಇಂಧನಗಳ ಹೆಚ್ಚುತ್ತಿರುವ ಬಳಕೆಯು ಪರಿಸರದ ಮೇಲೆ ಉತ್ಪತ್ತಿಮಾಡುವ ದುಷ್ಪರಿಣಮಗಳನ್ನು ಪಟ್ಟಿಮಾಡಿ,
ಉತ್ತರ:- 1) ಕಟ್ಟಿಗೆ, ಕಲ್ಲಿದ್ದಲು, ಪೆಟ್ರೋಲಿಯಂನಂತಹ ಸಾವಯದ ಇಂಧನಗಳು ಅದಹ್ಯ ಕಾರ್ಬನ್ ಕಣಗಳನ್ನು ಬಿಡುಗಡೆಯನ್ನು ಮಾಡುತ್ತದೆ. ಈ ಸೂಕ್ಷ್ಮ ಕಣಗಳು ಅಪಾಯಕಾರಿ ಮಾಲಿನ್ಯಕಾರಕಗಳಾಗಿದ್ದು, ಅಸ್ತಮಾದಂತಹ ಉಸಿರಾಟದ ತೊಂದರೆಗಳನ್ನು ಉತ್ಪತ್ತಿಯನ್ನು ಮಾಡುತ್ತದೆ.
2] ಈ ಇಂಧನಗಳ ಅಪೂರ್ಣ ದಹನದಿಂದ ಕಾರ್ಬನ್ ಮೊನಾಕ್ಸೆಡ್ ಅನಿಲ ಉತ್ಪತ್ತಿಯಾಗುವುದು. ಇದು ಅತಿ ವಿಷಕಾರಿ ಅನಿಲಯಾಗಿದ್ದು ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲ್ಲನ್ನು ಉರಿಸುವುದು ಬಹಳ ಅಪಾಯಕಾರಿ, ಆ ಕೋಣೆಯಲ್ಲಿ ಉತ್ಪತ್ತಿಯಾದ ಅನಿಲವು ಅಲ್ಲಿ ಮಲಗಿರುವ ವ್ಯಕ್ತಿಗಳನ್ನು ಕೊಲ್ಲಬಹುದು.
3) ಬಹುತೇಕ ಇಂಧನಗಳ ದಹನಕ್ರಿಯೆಯು ಪರಿಸರಕ್ಕೆ ಕಾರ್ಬನ್ ಡೈಆಕ್ಸೆಡ್ ಅನ್ನು ಬಿಡುಗಡೆಗೊಳಿಸುತ್ತದೆ. ಗಾಳಿಯಲ್ಲಿನ ಕಾರ್ಬನ್ ಡೈ ಆಕ್ಸೈಡ್ ಅಧಿಕ ಪ್ರಮಾಣದ ಜಾಗತಿಕ ತಾಪ ಹೆಚ್ಚಳವನ್ನು ಉತ್ಪತ್ತಿ ಮಾಡುವುದೆಂದು ನಂಬಲಾಗಿದೆ.
4) ಕಲ್ಲಿದ್ದಲು ಮತ್ತು ಡೀಸೆಲ್ ನ ಉರಿಯುವಿಕೆಯು ಸಲ್ಫರ್ ಡೈಆಕ್ಸೆಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ತೀವ್ರ ಉಸಿರುಗಟ್ಟಿಸುವ ಮತ್ತು ಸಂಕ್ಷಾರಕ ಅನಿಲ, ಮೇಲಾಗಿ ಪೆಟ್ರೋಲ್ ಎಂಜಿನ್‌ಗಳು ನೈಟ್ರೋಜನ್ ಅನಿಲ ರೂಪದ ಆಕ್ಸೈಡ್ ಗಳನ್ನು ಬಿಡುಗಡೆಗೊಳಿಸುತ್ತದೆ.
Post Comment