Class 9 Science Chapter Work and Energy Question Answers ನಲ್ಲಿ ನೀವು ಅಧ್ಯಾಯದ ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಈ ನೋಟ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಲು ಸಹಾಯಕವಾಗಿದ್ದು, ತ್ವರಿತವಾಗಿ ಅರ್ಥಮಾಡಿಕೊಳ್ಳಲು ಅನುಕೂಲಕರವಾಗಿದೆ.
Work and Energy Notes Kannada Medium ನಲ್ಲಿ ಪ್ರಶ್ನೋತ್ತರಗಳು ಅತಿ ಮುಖ್ಯವಾದ ಹಂತಗಳಲ್ಲಿ ವಿಂಗಡಿಸಲಾಗಿದೆ. ವಿದ್ಯಾರ್ಥಿಗಳು ಈ ನೋಟ್ಸ್ ಓದಿ ತಮ್ಮ ಹೋಮ್ವರ್ಕ್, ರಿವಿಷನ್ ಮತ್ತು ಪರೀಕ್ಷಾ ತಯಾರಿಕೆಯನ್ನು ಸುಲಭವಾಗಿ ಮುಗಿಸಬಹುದು.
ಈ Exam-Oriented Question Answers ನಿಮಗೆ ಸರಳವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ. ಹೆಚ್ಚು ತ್ವರಿತ ಓದಿಗಾಗಿ, ಅಧ್ಯಾಯದ ಸಂಪೂರ್ಣ ನೋಟ್ಸ್ PDF ಪ್ರಿಂಟಬಲ್ ಫಾರ್ಮ್ಯಾಟ್ನಲ್ಲಿ ಲಭ್ಯವಿದೆ.
class 9 science chapter work and energy question answers

ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ,
1. ಭೂಮಿಯ ಮೇಲೆ ಇರುವ 15 kg ತೂಕದ ಹೊರೆಯೊಂದನ್ನು ಕೂಲಿ ಮೇಲೆತ್ತುತ್ತಾನೆ. ಅದನ್ನು ಭೂಮಿಯಿಂದ 1.5m ಎತ್ತರದಲ್ಲಿ ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ. ಆ ಹೊರೆಯ ಮೇಲೆ ಅವನಿಂದ ಆದ ‘ಕೆಲಸ’ವನ್ನು ಲೆಕ್ಕಿಸಿ.
ಉತ್ತರ :- ಹೊರೆಯ ರಾಶಿ m = 15 kg
ಚಲಿಸಿದ ದೂರ S = 1.5 m
ನಡೆದ ಕೆಲಸ W = F × S = mg × S
= 15 kg × 10 m s⁻² × 1.5 m
= 225 kg m s⁻² m
= 225 N m
= 225 J
ನಡೆದ ಕೆಲಸ 225 J ಆಗಿದೆ.
2. ಕೆಲಸ ನಡೆದಿದೆಂದು ನಾವು ಯಾವಾಗ ಹೇಳಬಹುದು?
ಉತ್ತರ :- ‘ಕೆಲಸ’ ನಡೆದಿದೆಂದು ನಾವು ಹೇಳಲು
1) ಕಾಯದ ಮೇಲೆ ಬಲಪ್ರಯೋಗ ಆಗಿರಬೇಕು.
2) ಕಾಯವು ತನ್ನ ಸ್ಥಾನವನ್ನು ಬದಲಾಯಿಸಿರಬೇಕು.
3. ಒಂದು ಕಾಯದ ಮೇಲೆ ಆದರ ಸ್ಥಾನಪಲ್ಲಟದ ದಿಕ್ಕಿನಲ್ಲಿ ಬಲಪ್ರಯೋಗವಾದಾಗ ನಡೆದಿರುವ ಕೆಲಸದ ಉಕ್ತಿಯೊಂದನ್ನು ಬರೆಯಿರಿ.
ಉತ್ತರ :- ಈ ಕಾಯದ ಮೇಲೆ ಸ್ಥಿರ ಬಲ F ಪ್ರಯೋಗಿಸಲ್ಪಡಲಿ, S ನಿರ್ದಿಷ್ಟ ದೂರದವರೆಗೆ ಕಾಯವು ಬಲದ ದಿಕ್ಕಿನಲ್ಲಿ ಸ್ಥಳಾಂತರಗೊಂಡಿರಲಿ, W ಮಾಡಿದ ಕೆಲಸ ಆಗಿರಲಿ, ಆದ ಕಾರಣ ಮಾಡಿದ ಕೆಲಸವು ಬಲ ಮತ್ತು ಸ್ಥಾನಪಲ್ಲಟದ ಗುಣಲಬ್ಧವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತೇವೆ.
= ನಡೆದ ಕೆಲಸ ಬಲ X ಸ್ಥಾನಪಲ್ಲಟ
W=F X S
ಆದ್ದರಿಂದ ಕಾಯದ ಮೇಲೆ ಪ್ರಯೋಗವಾದ ಬಲದಿಂದ ಆದ ಕೆಲಸವು ಬಲದ ಪರಿಮಾಣ ಮತ್ತು ಬಲದ ದಿಕ್ಕಿನಲ್ಲಿ ಕಾಯವು ಚಲಿಸಿದ ದೂರಗಳ ಗುಣಲಬ್ಧಕ್ಕೆ ಸಮವಾಗಿರುತ್ತದೆ. ಈ ಕೆಲಸವು ಪರಿಮಾಣವನ್ನು ಮಾತ್ರ ಹೊಂದಿಕೊಂಡಿದ್ದು ಮತ್ತು ದಿಕ್ಕನ್ನು ಹೊಂದಿರುವುದಿಲ್ಲ.
Work and Energy Notes Kannada Medium
4. ವ್ಯಾಖ್ಯಾನಿಸಿ:
ಉತ್ತರ :- 1. ಕೆಲಸ :- ಒಂದು ನ್ಯೂಟನ್ ಬಲವನ್ನು ಕಾಯದ ಮೇಲೆ ಪ್ರಯೋಗಿಸಿದಾಗ ಬಲದ ದಿಕ್ಕಿನಲ್ಲಿ ಕಾಯವು 1m ದೂರ ಕ್ರಮಿಸಿದಾಗ ಆಗುವ ಕೆಲಸವನ್ನು ಒಂದು ಜೂಲ್ ಕೆಲಸ ಎಂದು ಕರೆಯುತ್ತಾರೆ.
5. ಒಂದು ಜೊತೆ ಎತ್ತುಗಳು ನೇಗಿಲ ಮೇಲೆ 140N ನಷ್ಟು ಬಲವನ್ನು ಪ್ರಯೋಗಿಸುತ್ತದೆ. ಉಳುಮ ಮಾಡದ ಭೂಮಿಯು 15m ಉದ್ದವಿದೆ, ಹಾಗಾದರೆ ಈ ಉದ್ದದ ಭೂ ಉಳುಮೆಯಲ್ಲಿ ನಡೆದ ಕೆಲಸ ಎಷ್ಟು?
ಉತ್ತರ :-
ಪರಿಹಾರ :-
ಒಂದು ಜೊತೆ ಎತ್ತುಗಳು ನೇಗಿಲ ಮೇಲೆ ಪ್ರಯೋಗಿಸಿದ ಬಲವು, F = 140N
ಉಳುಮೆ ಮಾಡಬೇಕಾದ ಭೂಮಿಯ ಉದ್ದವು S = 15m
ನಡೆದ ಕೆಲಸವು, W = ?
ನಡೆದ ಕೆಲಸ= ಬಲ X ಸ್ಥಾನಪಲ್ಲಟ
W = F X S
= 140N x 15m =
2100 Nm ಅಥವಾ 2100J
6. ಶಕ್ತಿ ಎಂದರೇನು?
ಉತ್ತರ :- ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯವನ್ನು ‘ಶಕ್ತಿ’ ಎಂದು ಕರೆಯುತ್ತಾರೆ.
ಈ ಕೆಲಸ ಮಾಡಿದ ಕಾಯವು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಯಾವ ಕಾಯದ ಮೇಲೆ ಕೆಲಸವು ಮಾಡಲ್ಪಟ್ಟಿದೆಯೋ ಆ ಕಾಯವು ಶಕ್ತಿಯನ್ನು ಪಡೆಯುತ್ತದೆ.
ಹೊಂದಿರುವ ಶಕ್ತಿಯನ್ನು ಅದರ ಕೆಲಸ ಮಾಡುವ ಸಾಮರ್ಥ್ಯದಿಂದ ಆಳೆಯಬಹುದು, ಆದ್ದರಿಂದ ಕೆಲಸದ ಏಕಮಾನವೂ ಶಕ್ತಿಯ ಏಕಮಾನವಾಗಿರುವುದು, ಅಂದರೆ, ಜೂಲ್ (J)
1kJ= 1000J.
Exam-Oriented Question Answers
7. ಶಕ್ತಿಯನ್ನು ಹೊಂದಿರುವ ಕಾಯವು ಹೇಗೆ ಕೆಲಸ ಮಾಡುತ್ತದೆ?
ಉತ್ತರ :- ಈ ಶಕ್ತಿಯನ್ನು ಹೊಂದಿರುವ ಕಾಯವು ಇನ್ನೊಂದು ಕಾಯದ ಮೇಲೆ ಬಲಪ್ರಯೋಗವನ್ನು ಮಾಡಬಲ್ಲದು. ಈ ಕ್ರಿಯೆ ನಡೆದಾಗ ಶಕ್ತಿಯು ಮೊದಲಿನ ಕಾಯದಿಂದ ನಂತರದ ಕಾಯಲ್ಲಿ ವರ್ಗಾವಣೆಯಾಗುವುದು. ಎರಡನೆಯ ಕಾಯವು ಶಕ್ತಿಯನ್ನು ಪಡೆದಿರುವುದರಿಂದ ಅದು ಚಲಿಸುತ್ತದೆ ಮತ್ತು ಕೆಲಸವು ನಡೆಯುತ್ತದೆ.
8. ಶಕ್ತಿಯ ರೂಪಗಳು ಯಾವುವು? ತಿಳಿಸಿ,
ಉತ್ತರ :- ಯಾಂತ್ರಿಕ ಶಕ್ತಿ (ಪ್ರಚ್ಛನ್ನ ಶಕ್ತಿ + ಚಲನಶಕ್ತಿ), ಉಷ್ಣಶಕ್ತಿ, ರಾಸಾಯನಿಕ ಶಕ್ತಿ, ವಿದ್ಯುಚ್ಛಕ್ತಿ ಮತ್ತು ಬೆಳಕಿನ ಶಕ್ತಿ, ಮುಂತಾದವುಗಳು ವಿಭಿನ್ನ ಬಗೆಯ ಶಕ್ತಿಯ ರೂಪಗಳಾಗಿವೆ.
9. ಚಲನ ಶಕ್ತಿ ಎಂದರೇನು?
ಉತ್ತರ :- ಚಲನೆಯಿಂದ `ಕಾಯಗಳು ಪಡೆದುಕೊಳ್ಳುವ ಶಕ್ತಿಯನ್ನು ಚಲನಶಕ್ತಿ ಎನ್ನುವರು. ಜವ ಹಚ್ಚಿದಂತೆ ಕಾಯಗಳ ಚಲನಶಕ್ತಿವು ಹೆಚ್ಚಾಗುತ್ತದೆ.
ಬೀಳುತ್ತಿರುವ ತೆಂಗಿನಕಾಯಿ, ವೇಗವಾಗಿ ಚಲಿಸುತ್ತಿರುವ ಕಾರು, ಉರುಳುತ್ತಿರುವ ಕಲ್ಲು, ಹಾರುತ್ತಿರುವ ವಿಮಾನ, ಹರಿಯುತ್ತಿರುವ ನೀರು, ಬೀಸುತ್ತಿರುವ ಗಾಳಿ, ಓಡುತ್ತಿರುವ ಓಟಗಾರ ಮುಂತಾದವು ಚಲನಶಕ್ತಿಯನ್ನು ಹೊಂದಿರುತ್ತವೆ.
10. ಚಲಿಸುತ್ತಿರುವ ಕಾಯವು ತನ್ನ ಚಲನೆಯಿಂದ ಎಷ್ಟು ಶಕ್ತಿಯನ್ನು ಹೊಂದಿರುತ್ತದೆ?
ಉತ್ತರ :- ನಿರ್ದಿಷ್ಟ ವೇಗದಿಂದ ಚಲಿಸುತ್ತಿರುವ ಕಾಯದ ಚಲನ ಶಕ್ತಿಯು ಆ ವೇಗವನ್ನು ಪಡೆಯಲು ಆ ಕಾಯದ ಮೇಲೆ ಮಾಡಿದ ಕೆಲಸಕ್ಕೆ ಸಮವಾಗಿರುತ್ತದೆ ಎಂದು ಹೆಳಬಹುದು.
11. ಸಾಮರ್ಥ್ಯ ಎದರೆನು?
ಉತ್ತರ :- ಮಾಡಿದ ಕೆಲಸದ ದರವನ್ನು ಸಾಮರ್ಥ್ಯ ಎಂದು ಕರೆಯುತ್ತಾರೆ. ಸಾಮರ್ಥ್ಯದ ಏಕಮಾನ ವ್ಯಾಟ್ ಆಗಿದ್ದು. ಇದನ್ನು W ಚಿಹ್ನೆಯಿಂದ ಸೂಚಿಸಲಾಗುವುದು.
12. ಒಂದು ವ್ಯಾಟ್ ಸಾಮರ್ಥ್ಯವನ್ನು ವ್ಯಾಖ್ಯಾನಿಸಿ.
ಉತ್ತರ :- ಒಂದು ವ್ಯಾಟ್ ಎಂದರೆ, 1 ಸೆಕೆಂಡ್ನಲ್ಲಿ ಒಂದು ಕಾರಕವು ಮಾಡಿದ ಕೆಲಸ 1 ಜೂಲ್ ಎಂದರ್ಥ.
9th Science Kelasa Mattu Shakti Question Answer
13. ಒಂದು ವಿದ್ಯುತ್ ದೀಪವು 10 ಸೆಕೆಂಡ್ನಲ್ಲಿ 1000 ಪಟ್ಟು ವಿದ್ಯುತ್ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ, ಹಾಗಾದರೆ ಅದರ ಸಾಮರ್ಥ್ಯ ಎಷ್ಟು?
ಉತ್ತರ :-
ಪರಿಹಾರ:-
ವಿದ್ಯುತ್ ದೀಪವು ಬಳಸಿದ ವಿದ್ಯುತ್ ಶಕ್ತಿ = 1000 J,
ತೆಗೆದುಕೊಂಡ ಕಾಲ = 10 ಸೆಕೆಂಡ್
ಸಾಮರ್ಥ್ಯ, = ಕೆಲಸ/ಕಾಲ
P = W / t = 1000 J
10 s
= 100 W
14. ಸರಾಸರಿ ಸಾಮರ್ಥ್ಯದ ವ್ಯಾಖ್ಯಾನಿಸಿ
ಉತ್ತರ :- ಒಟ್ಟಾರ ಉಪಯೋಗಿಸಿದ ಶಕ್ತಿಯನ್ನು ಬಳಸಿದ ಕಾಲದೊಂದಿಗೆ ಭಾಗಿಸಿದಾಗ ಸರಾಸರಿ ಸಾಮರ್ಥ್ಯವು ದೊರೆಯುವುದು.
15. 60Wಯಿರುವ ಒಂದು ವಿದ್ಯುತ್ಬಲ್ಬನ್ನು ದಿನಕ್ಕೆ 8 ಘಂಟೆಗಳ ಕಾಲ ಉಪಯೋಗಿಸಲಾಗಿದೆ. ಒಂದು ದಿನದಲ್ಲಿ ಆ ಬಲ್ಪ್ ನಿಂದ ಉಪಯೋಗಿಸಲ್ಪಟ್ಟ ಶಕ್ತಿಯನ್ನು ಯೂನಿಟ್ಗಳ ರೂಪದಲ್ಲಿ ಕಂಡು ಹಿಡಿಯಿರಿ.
ಉತ್ತರ :- ವಿದ್ಯುತ್ ಬಲ್ಬ್ ನ ಸಾಮರ್ಥ್ಯ = 60 w
= 0.06 kw
ಬಳಸಿದ ಅವಧಿ, t = 6 h
ಶಕ್ತಿ = ಸಾಮರ್ಥ್ಯ × ತೆಗೆದುಕೊಂಡ ಕಾಲ
= 0.06 kw × 6 h
= 0.36 kwh
= 0.36 ‘ಯುನಿಟ್ಗಳು’
16. ಒಂದು ಬ್ಯಾಟರಿಯು ಬಲ್ಪ್ ಅನ್ನು ಹೊತ್ತಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಆದ ಶಕ್ತಿಯ ಬದಲಾವಣೆಯನ್ನು ವಿವರಿಸಿ,
ಉತ್ತರ :- ಒಂದು ಬ್ಯಾಟರಿಯನ್ನು ಬಲ್ಬಗೆ ಸಂಪರ್ಕವನ್ನು ಕಲ್ಪಿಸಿದಾಗ, ಬ್ಯಾಟರಿಯ ರಾಸಾಯನಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.
ಬಲ್ಪ್ ವಿದ್ಯುತ್ ಶಕ್ತಿಯನ್ನು ಪಡೆದಾಗ ವಿದ್ಯುತ್ ಶಕ್ತಿಯು ಬೆಳಕು ಮತ್ತು ಉಷ್ಣ ಶಕ್ತಿಯಾಗಿ ಪರಿವರ್ತನೆಯಾಗುವುದು. ರಾಸಾಯನಿಕ ಶಕ್ತಿ- ವಿದ್ಯುತ್ ಶಕ್ತಿ→ ಬೆಳಕು ಮತ್ತು ಉಷ್ಣ ಶಕ್ತಿ ಆಗಿದೆ
class 9 science chapter work and energy question answers
17. ಒಂದು ಬಲವು 20kg ರಾಶಿಯುಳ್ಳ ಒಂದು ಕಾಯದ ವೇಗವನ್ನು 6ms ನಿಂದ 2ms ಗೆ ಬದಲಾಯಿಸಲಾಗುತ್ತದೆ. ಆ ಬಲದಿಂದ ಮಾಡಿದ ಕೆಲಸವನ್ನು ಕಂಡುಹಿಡಿಯಿರಿ.
ಉತ್ತರ :- ಪರಿಹಾರ:-

ಈ ಋಣ ಚಿಹ್ನೆಯು ಕಾಯದ ಚಲನೆಗೆ ವಿರುದ್ಧ ದಿಕ್ಕಿನಲ್ಲಿ ಬಲ ಪ್ರಯೋಗವಾಗಿದೆ ಎಂದು ತಿಳಿಸುತ್ತದೆ.
18. 10kg ರಾಶಿಯು ಒಂದು ಮೇಜಿನ ಮೇಲೆ A ಬಿಂದುವಿನಲ್ಲಿ ಇದೆ, ಅದು B ಬಿಂದುವಿಗೆ ಚಲಿಸಿತು. A ಮತ್ತು B ಅನ್ನು ಸೇರಿಸುವ ರೇಖೆಯು ಅಡ್ಡ ರೇಖೆಯಾಗಿದ್ದರೆ, ಆ ಕಾಯದ ಮೇಲೆ ಗುರುತ್ವ ಬಲವು ಮಾಡಿದ ಕೆಲಸ ಎಷ್ಟು? ನಿಮ್ಮ ಉತ್ತರವನ್ನು ವಿವರಿಸಿರಿ. ಉತ್ತರ :- ಗುರುತ್ವಾಕರ್ಷಣೆಯಿಂದ ಮಾಡಿದ ಕೆಲಸವು ಒಂದು ಕಾಯದ ಎತ್ತರ ಮತ್ತು ಲಂಬಗಳ ನಡುವಿನ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ.
W = mgh ( h= 0 )
W = mg x 0 = 0J
ಗುರುತ್ವ ಬಲದಿಂದ ಆ ಕಾಯದ ಮೇಲೆ ಮಾಡಿದ ಕೆಲಸವು ಶೂನ್ಯವಾಗಿದೆ.
19. ಸ್ವತಂತ್ರವಾಗಿ ಬೀಳುತ್ತಿರುವ ಕಾಯವು ಮುಂದುವರಿದಂತೆಲ್ಲಾ ಅದರ ಪ್ರಚ್ಛನ್ನ ಶಕ್ತಿಯು ಕಡಿಮೆಯಾಗುತ್ತದೆ. ಇದು ಶಕ್ತಿಯ ಸಂರಕ್ಷಣಾ ನಿಯಮವನ್ನು ಉಲ್ಲಂಘಿಸಿತು, ಏಕೆ?
ಉತ್ತರ :- ಒಂದು ಕಾಯದ ಚಲನಶಕ್ತಿ ಮತ್ತು ಪ್ರಚ್ಛನ್ನ ಶಕ್ತಿಗಳ ಮೊತ್ತವು ಅದರ ಯಾಂತ್ರಿಕ ಶಕ್ತಿ ಆಗಿರುತ್ತದೆ. ಒಂದು ಕಾಯವು ಸ್ವತಂತ್ರವಾಗಿ ಬೀಳುವಾಗ ಅದರ ಮಾರ್ಗದ ಒಂದು ಬಿಂದುವಿನಲ್ಲಿ ಪ್ರಚ್ಛನ್ನ ಶಕ್ತಿಯ ಕಡಿಮೆ ಆಗುವಿಕೆಯು ಅಷ್ಟೇ ಪ್ರಮಾಣದಲ್ಲಿ ಚಲನಶಕ್ತಿಯ ಹೆಚ್ಚಾಗುವಿಕೆಗೆ ಕಾರಣವಾಗುತ್ತದೆ. ಇಲ್ಲಿ ಗಾಳಿಯ ಪ್ರತಿರೋಧ ತಿರಸ್ಕರಿಸಲಾಗಿದೆ. ಆದ್ದರಿಂದ ಇಲ್ಲಿ ನಿರಂತರವಾಗಿ ಗುರುತ್ವ ಪ್ರಚ್ಛನ್ನ ಶಕ್ತಿಯು ಚಲನಶಕ್ತಿ ಆಗಿ ವರ್ಗಾವಣೆಯಾಗುತ್ತದೆ.
Exam-Oriented Question Answers
20. ನೀವು ಬೈಸಿಕಲ್ಅನ್ನು ತುಳಿಯುವಾಗ ಸಂಭವಿಸುವ ವಿವಿಧ ರೀತಿಯ ಶಕ್ತಿಯ ವರ್ಗಾವಳಿಗಳು ಯಾವುವು? ಬೈಸಿಕಲ್ಅನ್ನು ತುಳಿಯುವಾಗ ಸವಾರನ ಸ್ನಾಯು ಶಕ್ತಿಯು ಸವಾರನ ದೇಹದ ಉಷ್ಣ ಶಕ್ತಿ ಮತ್ತು ಬೈಸಿಕಲ್ನ ಚಲನ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಉತ್ತರ :- ಸ್ನಾಯು ಶಕ್ತಿ → ಉಷ್ಣ ಶಕ್ತಿ ಮತ್ತು ಚಲನ ಶಕ್ತಿ ಆಗಿದೆ.
21. ನಿಮ್ಮ ಎಲ್ಲಾ ವಿಫಲ ಪ್ರಯತ್ನಗಳಲ್ಲಿ ಬೃಹತ್ ಬಂಡೆಯೊಂದನ್ನು ತಳ್ಳುವಾಗ, ಶಕ್ತಿಯು ವರ್ಗಾವಣೆಗೊಂಡಿತು ನೀವು ಪ್ರಯೋಗಿಸಿದ ಶಕ್ತಿಯು ಎಲ್ಲಿಗೆ ಹೋಯಿತು? ತಿಳಿಸಿ,
ಉತ್ತರ :- ಎಲ್ಲಾ ವಿಫಲ ಯತ್ನಗಳಲ್ಲಿ ಬೃಹತ್ ಬಂಡೆಯೊಂದನ್ನು ತಳ್ಳುವಾಗ, ಸ್ಥಿರವಾದ ಬಂಡೆಗೆ ಯಾವುದೇ ಶಕ್ತಿಯು ವರ್ಗಾವಣೆ ಆಗುವುದಿಲ್ಲ. ಆದರೆ ಯಾವುದೇ ಶಕ್ತಿಯು ನಷ್ಟ ಕೂಡ ಆಗುವುದಿಲ್ಲ, ಏಕೆಂದರೆ ಬೃಹತ್ ಬಂಡೆಯೊಂದನ್ನು ತಳ್ಳಲು ಬಳಸಿದ ಸ್ನಾಯು ಶಕ್ತಿಯು ದೇಹದ ಉಷ್ಣ ಶಕ್ತಿಯಾಗಿ ವರ್ಗಾವಣೆಗೊಂಡು ನಮ್ಮ ದೇಹವನ್ನು ಬಿಸಿಯಾಗಲು ಕಾರಣವಾಗುತ್ತದೆ.
22. 40kg ರಾಶಿಯಿರುವ ಒಂದು ಕಾಯವನ್ನು ನೆಲದಿಂದ 5mm ಎತ್ತರಕೆ ಏರಿಸಲಾಗಿದ್ದು, ಅದರ ಪ್ರಚ್ಛನ್ನ ಶಕ್ತಿ ಎಷ್ಟು? ಆ ಕಾಯವನ್ನು ಸ್ವತಂತ್ರವಾಗಿ ಬೀಳುವ ಹಾಗೆ ಮಾಡಿದಾಗ ಅರ್ಧ ಮಾರ್ಗದಲ್ಲಿ ಅದರ ಚಲನಶಕ್ತಿಯನ್ನು ಕಂಡುಹಿಡಿಯಿರಿ,
ಉತ್ತರ :- ಕಾಯದ ರಾಶಿ, m = 40 kg
ಸ್ತಾನ ಪಲ್ಲಟ (ಎತ್ತರ) h = 5 m ಮತ್ತು
ಗುರುತ್ವ ವೇಗವರ್ಧನೆ g = 9.8 ms⁻²
➜ ಪ್ರಚನ್ನ ಶಕ್ತಿ = mgh
= 40 kg × 9.8 ms⁻² × 5 m
= 1960 J
➜ ಕಾಯವನ್ನು ಸ್ವತಂತ್ರವಾಗಿ ಬೀಳುವಂತೆ ಮಾಡಿದಾಗ ಅರ್ಧ ಮಾರ್ಗದಲ್ಲಿ ಅದರ ಪ್ರಚನ್ನ ಶಕ್ತಿ = 1960/2
= 980 J
ಶಕ್ತಿಯ ಸಂರಕ್ಷಣಾ ನಿಯಮದ ಕಾರಣದಿಂದ ಕಾಯವು ಸ್ವ೦ತತ್ರವಾಗಿ ಬೀಳುವಾಗ ಅದರ ಅರ್ಧ ಮಾರ್ಗದ ಒಂದು ಬಿಂದುವಿನಲ್ಲಿ ಪ್ರಚನ್ನ ಶಕ್ತಿಯು ಚಲನಶಕ್ತಿಗೆ ಸಮಾನವಾಗಿರುತ್ತದೆ. ಆದುದರಿಂದ ಕಾಯವನ್ನು ಸ್ವತಂತ್ರವಾಗಿ ಬೀಳುವಂತೆ ಮಾಡಿದಾಗ ಅರ್ಧ ಮಾರ್ಗದಲ್ಲಿ ಅದರ ಚಲನ ಶಕ್ತಿ = 980 J
class 9 science chapter work and energy question answers
23.ಭೂಮಿಯನ್ನು ಸುತ್ತುತ್ತಿರುವ ಒಂದು ಉಪಗ್ರಹದ ಮೇಲೆ ಗುರುತ್ವಾಕರ್ಷಣದ ಬಲದಿಂದಾಗಿ ಮಾಡಿದ ಕೆಲಸ ಎಷ್ಟು? ನಿಮ್ಮ ಉತ್ತರವನ್ನು ಸಮರ್ಥಿಸಿರಿ,
ಉತ್ತರ :- ‘ಕೆಲಸ’ ನಡೆಯಲು ಸಾಧಿತವಾಗಬೇಕಾದ ಎರಡು ನಿಬಂಧನೆಗಳು ಈ ಕೆಳನಂತಿವೆ
1) ಕಾಯದ ಮೇಲೆ ಬಲ ಪ್ರಯೋಗವಾಗಿರಬೇಕು.
2) ಕಾಯವು ತನ್ನ ಸ್ಥಾನವನ್ನು ಬದಲಾಯಿಸಿರಬೇಕು.
ಈ ಒಂದು ಕಾಯದ ಮೇಲೆ ವರ್ತಿಸುವ ಬಲವು ಅದರ ಸ್ಥಾನ ಪಲ್ಲಟಕ್ಕೆ ಲಂಬವಾಗಿದ್ದರೆ ಮಾಡಿದ ಕೆಲಸವು ಶೂನ್ಯ ಆಗಿದೆ. ಭೂಮಿಯನ್ನು ಸುತ್ತುತ್ತಿರುವ ಒಂದು ಉಪಗ್ರಹದ ಮೇಲೆ ಗುರುತ್ವಾಕರ್ಷಣೆಯ ಬಲವು ಅದರ ಸ್ಥಾನ ಪಲ್ಲಟಕ್ಕೆ ಲಂಬವಾಗಿದೆ. ಆದರಿಂದ ಕೆಲಸವು ಶೂನ್ಯವಾಗಿದೆ.
24.ಒಂದು ಕಾಯದ ಮೇಲೆ ಯಾವುದೇ ಬಲವು ವರ್ತಿಸದಿರುವಾಗ ಅಲ್ಲಿ ಸ್ಥಾನಪಲ್ಲಟವಿದೆಯೇ? ಎಂದು ಯೋಚಿಸಿ, ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರು ಮತ್ತು ಶಿಕ್ಷಕರ ಬಳಿ ಚರ್ಚಿಸಿರಿ,
ಉತ್ತರ :- ಹೌದು ಇದೆ. ಏಕರೂಪ ಚಲನೆಯಲ್ಲಿರುವ ಕಾಯವು ಏಕರೂಪ ಚಲನೆಯಲ್ಲಿರುವಾಗ ಕಾಯದ ಮೇಲೆ ವರ್ತಿಸುವ ಬಲ ಶೂನ್ಯವಾಗುತ್ತದೆ.ಆದರೆ ಕಾಯದ ಸ್ಥಾನವು ಪಲ್ಲಟವಾಗುತ್ತದೆ. ಆದುದರಿಂದ ಒಂದು ಕಾಯದ ಮೇಲೆ ಯಾವುದೇ ಬಲ ವರ್ತಿಸದಿರುವಾಗ ಅಲ್ಲಿ ಸ್ಥಾನಪಲ್ಲಟ ಇದೆ.
25.ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯನ್ನು 30 ನಿಮಿಷಗಳ ಕಾಲ ಹೊರುವುದರಿಂದ ಆಯಾಸಗೊಂಡಿರುತ್ತಾನೆ. ಅವನು ಕೆಲಸ ಮಾಡಿದ್ದಾನೆಯೇ? ಅಥವಾ ಇಲ್ಲವೇ ? ನಿಮ್ಮ ಉತ್ತರವನ್ನು ಸಮರ್ಥಿಸಿ,
ಉತ್ತರ :- ಕೆಲಸವು ಮಾಡಿಲ್ಲ.
‘ಕೆಲಸ’ ನಡೆಯಲು ಸಾಧಿತವಾಗಬೇಕಾದ ಎರಡು ನಿಬಂಧನೆಗಳು ಇವೆ,
1) ಕಾಯದ ಮೇಲೆ ಬಲ ಪ್ರಯೋಗವಾಗಿರಬೇಕು.
2) ಕಾಯವು ತನ್ನ ಸ್ಥಾನವನ್ನು ಬದಲಾಯಿಸಿರಬೇಕು,
ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತುಕೊಂಡಿರುವಾಗ ಹುಲ್ಲಿನ ಹೊರೆಯ ಸ್ಥಾನಪಲ್ಲಟ ಇರುವುದಿಲ್ಲ.ವ್ಯಕ್ತಿಯು ತಲೆಯ ಮೇಲೆ ಇರುವ ಹುಲ್ಲಿನ ಹೊರೆಯ ಮೇಲೆ ಗುರುತ್ವ ಬಲವನ್ನು ವರ್ತಿಸುತ್ತಿದ್ದರೂ, ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯ ಯಾವುದೇ ಬಲ ಹಾಕಿರುವುದಿಲ್ಲ. ಹಾಗಾಗಿ, ಮಾಡಿದ ಕೆಲಸವು ಶೂನ್ಯವಾಗಿರುವುದು.
class 9 science chapter work and energy question answers
26. ಒಂದು ವಿದ್ಯುತ್ ಹೀಟರ್ನ ಮೇಲೆ 1500W ಎಂಬದನ್ನು ನಮೂದಾಗಿದೆ, ಅದು 10 ಗಂಟೆಗಳಲ್ಲಿ ಎಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ? ವಿವರಿಸಿ
ಉತ್ತರ :- ವಿದ್ಯುತ್ ಹೀಟರ್ ಮೇಲೆ ಮಾಡುವ ಕೆಲಸ ಸಾಮರ್ಥ್ಯ = 1500 w = 1.5 kw
ಕಾಲ = 10 ಗಂಟೆಗಳು
ಸಾಮರ್ಥ್ಯ = ಕೆಲಸ/ಕಾಲ
P = W
t
W = P × t
= 1.5 kw × 10 h
= 15 kwh
27. ಒಂದು ಲೋಲಕದ ಗುಂಡನ್ನು ಒಂದು ಕಡೆಯಿಂದ ಎಳೆದು ಅಂದೋಲನಗೊಳಿಸಿದಾಗ ಶಕ್ತಿಯು ವರ್ಗಾವಣೆಗೊಳ್ಳುವುದನ್ನು ಚರ್ಚಿಸಿ, ಶಕ್ತಿ ಸಂರಕ್ಷಣಾ ನಿಯಮವನ್ನು ವಿವರಿಸಿ, ಅಂತಿಮವಾಗಿ ಅದು ಏಳಿ ಸ್ಥಿರಸ್ಥಿತಿಗೆ ಬಂದಿತು? ಅಂತಿಮವಾಗಿ ಅದರ ಶಕ್ತಿ ಏನಾಯಿತು? ಅದು ಶಕ್ತಿ ಸಂರಕ್ಷಣಾ ನಿಯಮವನ್ನ ಉಲ್ಲಂಘಿಸಿತೇ? ತಿಳಿಸಿ
ಉತ್ತರ :- ಶಕ್ತಿಯ ಸಂರಕ್ಷಣಾ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲು ಅಥವಾ ನಾಶಗೊಳಿಸಲು ಸಾಧ್ಯವಿಲ್ಲ. ಆದರೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ವರ್ಗಾಯಿಸಬಹುದು.

ಈ ಒಂದು ಲೋಲಕದ ಗುಂಡು ತನ್ನ ಸರಾಸರಿ ಸ್ಥಾನವು ” ದಿಂದ A ಅಥವಾ B ಗೆ ಚಲಿಸಿದಾಗ, ತನ್ನ ಸರಾಸರಿ ಸ್ಥಾನ ಗಿಂತ 1) (A ಅಥವಾ B ಸ್ಥಾನ) ಎತ್ತರದಲ್ಲಿರುವುದು. ಈ ಹಂತದಲ್ಲಿ ಲೋಲಕದ ಗುಂಡಿನ ಚಲನ ಶಕ್ತಿಯು ಸಂಪೂರ್ಣವಾಗಿ ಪ್ರಚ್ಛನ್ನ ಶಕ್ತಿಯಾಗಿ ಬದಲಾಗುತ್ತದೆ. ಚಲನ ಶಕ್ತಿಯು ಶೂನ್ಯ ಆಗುತ್ತದೆ.
ಲೋಲಕದ ಗುಂಡಿ ನ ಕಡೆಗೆ ಚಲಿಸಿದಾಗ ಪ್ರಚ್ಛನ್ನ ಶಕ್ತಿಯು ಕಡಿಮೆಯಾಗುತ್ತದೆ, ಮತ್ತು ಚಲನ ಶಕ್ತಿ ಹೆಚ್ಚಾಗುತ್ತದೆ.
ಈ ಲೋಲಕದ ಗುಂಡು P ಗೆ ತಲುಪಿದಾಗ ಪ್ರಚ್ಛನ್ನ ಶಕ್ತಿಯು ಶೂನ್ಯವಾಗುತ್ತದೆ. ಈ ಲೋಲಕದ ಗುಂಡು ಚಲನ ಶಕ್ತಿಯನ್ನು ಹೊಂದಿರುತ್ತದೆ. ಹೀಗೆ ಲೋಲಕದ ಆಂದೋಲನ ಪುನರಾವರ್ತನೆಯಾಗುತ್ತದೆ.
ಲೋಲಕದ ಗುಂಡು ಶಾಶ್ವತವಾಗಿ ಆಂದೋಲನ ಉತ್ಪತ್ತಿ ಮಾಡುವುದಿಲ್ಲ. ಸ್ವಲ್ಪ ಸಮಯದ ನಂತರ ಸ್ಥಿರ ಸ್ಥಿತಿಗೆ ಬರುತ್ತದೆ, ಕಾರಣ ಗಾಳೆಯ ಪ್ರತಿರೋಧ ಉಂಟಾಗಿ ಘರ್ಷಣೆಯಿಂದ ಚಲನ ಶಕ್ತಿಯನ್ನು ಕಳೆದುಕೊಂಡು ಲೋಲಕದ ಗುಂಡು, ಸ್ಥಿರ ಸ್ಥಿತಿಗೆ ಬರುತ್ತದೆ. ಈ ಶಕ್ತಿ ಸಂರಕ್ಷಣಾ ನಿಯಮ ಉಲ್ಲಂಘನೆ ಯಾಗಿಲ್ಲ.
class 9 science chapter work and energy question answers
28.ಸ್ವತಂತ್ರವಾಗಿ ಬೀಳುತ್ತಿರುವ ಒಂದು ಕಾಯವು ಅಂತಿಮವಾಗಿ ನೆಲವನ್ನು ತಲುಪಿ ನಿಂತಿತು, ಅದರ ಚಲನಶಕ್ತಿ ಏನಾಗುತ್ತದೆ?
ಉತ್ತರ :- ಸ್ವತಂತ್ರವಾಗಿ ನೆಲದ ಕಡೆಗೆ ಬಿದ್ದ ಒಂದು ಕಾಯದ ಪ್ರಚ್ಛನ್ನ ಶಕ್ತಿಯು ಕಡಿಮೆಯಾಗುತ್ತದೆ ಮತ್ತು ಚಲನ ಶಕ್ತಿಯು ಹೆಚ್ಚಾಗುತ್ತದೆ. ಕಾಯವು ನೆಲವನ್ನು ಮುಟ್ಟಿದಾಗ ಎಲ್ಲಾ ಪ್ರಚ್ಛನ್ನ ಶಕ್ತಿಯು ಚಲನ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.
ಕಾಯವು ನೆಲವನ್ನು ಮುಟ್ಟಿದ ನಂತರ ಚಲನ ಶಕ್ತಿಯು ಉಷ್ಣ ಶಕ್ತಿ ಮತ್ತು ಶಬ್ದ ಶಕ್ತಿಯಾಗಿ ಪರಿವರ್ತನೆಯಾಗುವುದು. ಕಾಯದ ಚಲನ ಶಕ್ತಿಯು ಭೂಮಿ ಸ್ವರೂಪವನ್ನು ಅವಲಂಬಿಸಿ ನೆಲವನ್ನು ವಿರೂಪಗೊಳಿಸಬಹುದು.
FAQS
ಹೌದು. ಇಲ್ಲಿ 9ನೇ ತರಗತಿ Science Chapter 11 Work and Energy Question Answers ಸಂಪೂರ್ಣವಾಗಿ Kannada Medium ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಲಾಗಿದೆ.
ಹೌದು. ಈ Important Questions ಪರೀಕ್ಷೆಯಲ್ಲಿ ಮರುಮರು ಕೇಳಲ್ಪಡುವ ಪ್ರಶ್ನೆಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ, ಇದರಿಂದ revision ಮತ್ತು exam preparation ಸುಲಭವಾಗುತ್ತ
ಉತ್ತರ: ಬಲವನ್ನು (Force) ವಸ್ತುವಿನ ಸ್ಥಳಾಂತರದ ದಿಕ್ಕಿನಲ್ಲಿ ಅನ್ವಯಿಸಿದಾಗ ಮಾಡಿದ ಕಾರ್ಯವನ್ನು ಕೆಲಸ ಎಂದು ಕರೆಯುತ್ತಾರೆ.
ಉತ್ತರ: ಕೆಲಸ ಮಾಡುವ ಸಾಮರ್ಥ್ಯವನ್ನೇ ಶಕ್ತಿ ಎಂದು ಹೇ
