8 Class Science Chapter 13 – ಹದಿಹರೆಯಕ್ಕೆ ಪ್ರವೇಶ ಸುಲಭ ಕನ್ನಡ ನೋಟ್ಸ್ & PDF


8 Class Science Chapter 13 Notes in Kannada ವಿದ್ಯಾರ್ಥಿಗಳಿಗೆ ಹದಿಹರೆಯಕ್ಕೆ ಪ್ರವೇಶ ಅಧ್ಯಾಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ 8ನೇ ತರಗತಿ ವಿಜ್ಞಾನ ಅಧ್ಯಾಯ 13 ನೋಟ್ಸ್‌ಗಳಲ್ಲಿ ದೇಹದಲ್ಲಿ ನಡೆಯುವ ಬದಲಾವಣೆಗಳನ್ನು ಸರಳವಾಗಿ ವಿವರಿಸಲಾಗಿದೆ.

8th Standard Science Chapter 13 Kannada Notes ನಲ್ಲಿ ಹಾರ್ಮೋನ್‌ಗಳ ಪಾತ್ರ, ಅಂತಃಸ್ರಾವಕ ಗ್ರಂಥಿಗಳು, ಲೈಂಗಿಕ ಲಕ್ಷಣಗಳು, ಪ್ರಮುಖ ಪ್ರಶ್ನೋತ್ತರಗಳು, KSEEB Solutions, ಮತ್ತು Kannada Medium PDF Download ಆಯ್ಕೆಯೊಂದಿಗೆ ಪರೀಕ್ಷಾ ತಯಾರಿಗಾಗಿ ಉಪಯುಕ್ತ ವಿಷಯಗಳನ್ನು ಒಳಗೊಂಡಿದೆ.

8 Class Science Chapter 13 ಹದಿಹರೆಯಕ್ಕೆ ಪ್ರವೇಶ – ಸಂಪೂರ್ಣ ಕನ್ನಡ ನೋಟ್ಸ್

8 Class Science Chapter 13 – ಹದಿಹರೆಯಕ್ಕೆ ಪ್ರವೇಶ ಸುಲಭವಾಗಿ ಓದಲು ಕನ್ನಡ ನೋಟ್ಸ್ PDF


ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ

1) ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳ ಸ್ರವಿಸುವ ರಾಸಾಯನಿಕಗಳನ್ನು ಸೂಚಿಸಲು ಉಪಯೋಗಿಸುವ ಪದ ಯಾವುದು?

ಉತ್ತರ: ದೇಹದ ಒಳಗೆ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳು ಶ್ರವಿಸುವ ರಾಸಾಯನಿಕವನ್ನು ಸೂಚಿಸಲು ಪಾಸ್ ಎಂಬ ಪದವನ್ನು ಬಳಸಲಾಗುತ್ತದೆ.

2) ಹದಿಹರೆಯದನ್ನು ವ್ಯಾಖ್ಯಾನಿಸಿ,

ಉತ್ತರ: ತಾರುಣ್ಯಾವಸ್ಥೆ ಪ್ರಾರಂಭದಿಂದ ಪ್ರೌಢಾವಸ್ಥೆಯವರೆಗೆ ಇರುವ ಅವಧಿಯನ್ನು ಹದಿಹರೆಯ ಎಂದು ಕರೆಯುತ್ತಾರೆ.
ಈ ಅವಧಿಯಲ್ಲಿ ಸಂತಾನೋತ್ಪತ್ತಿಯ ಪರಿಪಕ್ವತೆಯೊಂದಿಗೆ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ.
ಹದಿಹರೆಯ ಅವಧಿ ಸಾಮಾನ್ಯವಾಗಿ ಬಾಲ್ಯಾವಸ್ಥೆಯಿಂದ ಆರಂಭವಾಗಿ 18 ರಿಂದ 19 ವರ್ಷದ ವಯಸ್ಸಿನವರೆಗೆ ಮುಂದುವರಿಯುತ್ತದೆ.
ಈ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

3) ಋತುಸ್ರಾವು ಎಂದರೇನು? ವಿವರಿಸಿ.

ಉತ್ತರ: ಸ್ತ್ರೀಯರಲ್ಲಿ ಪ್ರೌಢಾವಸ್ಥೆಯ ಆರಂಭದಲ್ಲಿ ಅಂಡಾಣುಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತವೆ. ಎರಡು ಎಂಡಾಶಯಗಳಲ್ಲಿ ಪರ್ಯಾಯವಾಗಿ 20–30 ದಿನಗಳಲ್ಲಿ (ಸರಾಸರಿ 28 ದಿನ) ಒಂದು ಅಂಡವು ಸಂಪೂರ್ಣವಾಗಿ ಪಕ್ವಗೊಂಡು ಬಿಡುಗಡೆ ಆಗುತ್ತದೆ.ಈ ಅವಧಿಯಲ್ಲಿ ಗರ್ಭಾಶಯದ ಭಿತ್ತಿಯಲ್ಲಿ ಅಂಡವನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಮಂದವಾಗುತ್ತದೆ,ಹಾಗೂ ಒಂದು ವೇಳೆ ಅದು ನಿಶೇಚನನಗೊಂಡಿದ್ದರೆ ಅಭಿವರ್ಧನೆ ಪ್ರಾರಂಭವಾಗುತ್ತವೆ. ಇದು ಗರ್ಭಾವಸ್ಥೆಗೆ ಕಾರಣವಾಗುತ್ತದೆ. ನಿಷೇಚನನವು ಸಂಭವಿಸದಿದ್ದರೆ, ಬಿಡುಗಡೆಯಾದ ಅಂಡವು ಗರ್ಭಾಶಯದದ ಮಂದವಾದ ಭಿತ್ತಿ ಮತ್ತು ಭಿತ್ತಿಯ ರಕ್ತ ನಾಳಗಳ ಜೊತೆಗೆ ಕಳಚಿ ಬೀಳುತ್ತವೆ. ಇದು ಸ್ತ್ರೀಯರಲ್ಲಿ ಋತುಸ್ರಾವ ಎಂದು ಕರೆಯಲಾಗುವ ರಕ್ತಸ್ರಾವವನ್ನು ಉಂಟುಮಾಡುತ್ತವೆ.

4) ಪ್ರೌಢಾವಸ್ಥೆಯಲ್ಲಿ ದೈಹಿಕ ಬದಲಾವಣೆಗಳನ್ನು ಪಟ್ಟಿ ಮಾಡಿ

ಉತ್ತರ: ಪ್ರೌಢಾವಸ್ಥೆಯಲ್ಲಿ ನಡೆಯುವ ದೈಹಿಕ ಬದಲಾವಣೆಗಳು ಈ ಕೆಳೆಗಿ ನಂತಿವೆ 01) ಎತ್ತರ ಮತ್ತು ತೂಕದಲ್ಲಿ ದಿಢೀರ್ ಹೆಚ್ಚಳವಾಗುವುದು,ಹುಡುಗರಲ್ಲಿ ಭುಜಗಳು ವಿಶಾಲವಾಗುತ್ತವೆ ಮತ್ತು ಎದೆಯ ಅಗಲವಾಗುತ್ತದೆ. ಹುಡುಗಿಯರಲ್ಲಿ, ಸೊಂಟದ ಕೆಳಭಾಗದ ಪ್ರದೇಶವು ಅಗಲವಾಗುತ್ತವೆ. ಧ್ವನಿಪೆಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭಿಸುತ್ತವೆ, ಹುಡುಗರಲ್ಲಿ ಧ್ವನಿಪೆಟ್ಟಿಗೆಯು ದೊಡ್ಡದಾಗಿ ಬೆಳೆಯುತ್ತದೆ.ಹುಡುಗಿಯರಲ್ಲಿ, ಸ್ಥರದ ಬೆಳವಣಿಗೆ ಪ್ರಾರಂಭವಾದರೆ, ಹುಡುಗರಲ್ಲಿ ಮುಖದ ಕೂದಲು ಅಂದರೆ, ಮೀಸೆ ಮತ್ತು ಗಡ್ಡ ಬೆಳೆಯಲು ಪ್ರಾರಂಭಿಸುತ್ತವೆ.ಮುಖದ ಮೇಲೆ ಸಣ್ಣ ಗುಳ್ಳೆಗಳಂತಹ ಮೊಡವೆಗಳು ಉಂಟಾಗುತ್ತವೆ. ಕಂಕುಳಲ್ಲಿ ಹಾಗೂ ತೊಡೆಯ ಮೇಲ್ಬಾಗದ ಪ್ರದೇಶ ಅಥವಾ ಜನನಾಂಗ ಪ್ರದೇಶದಲ್ಲಿ ಕೂದಲುಗಳು ಬೆಳೆಯುತ್ತದೆ.ಹುಡುಗರಲ್ಲಿ ವೃಷಣ ಹಾಗೂ ಶಿಶ್ನಗಳಂತಹ ಲೈಗಿಕ ಅಂಗಗಳು ಪೂರ್ಣವಾಗಿ ವಿಕಾಸ ಹೊಂದುತ್ತವೆ. ವೃಷಣಗಳು ವೀರ್ಯಾಣುಗಳನ್ನು ಉತ್ಪಾದಿಸ ಲು ಸಹ ಆರಂಭಿಸುತ್ತವೆ.
ಹುಡುಗಿಯರಲ್ಲಿ ಅಂಡಾಶಯಗಳು ಹಿಗ್ಗುತ್ತ ವೆ ಮತ್ತು ಅಂಡಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತವೆ. ಹಾಗೆಯ ಅಂಡಾಶಯಗಳು ಪಕ್ವಗೊಂಡ ತಂಡಗಳನ್ನು ಬಿಡುಗಡೆಗೊಳಿಸಲೂ ಪ್ರಾದಂಭಿಸುತ್ತವೆ

8ನೇ ತರಗತಿ ವಿಜ್ಞಾನ ಅಧ್ಯಾಯ 13 – ಹದಿಹರೆಯಕ್ಕೆ ಪ್ರವೇಶ ನೋಟ್ಸ್‌ಗಳು (Kannada Medium)

5. ಲೈಂಗಿಕ ಹಾರ್ಮೋನ್ಗಳು ಎಂದರೇನು? ಅವುಗಳನ್ನು ಹಾಗೆ ಏಕೆ ಹೆಸರಿಸಲಾಗಿದೆ. ಅವುಗಳ ಕಾರ್ಯವನ್ನು ಹೆಸರಿಸಿ.

ಉತ್ತರ: ಲೈಂಗಿಕ ಅಂಗಗಳಿಂದ ಬಿಡುಗಡೆಯಾಗುವ ರಾಸಾಯನಿಕ ಪದಾರ್ಥಗಳನ್ನು ಲೈಂಗಿಕ ಹಾರ್ಮೋನ್ಗಳು ಎನ್ನುವರು.
ಉದಾಹರಣೆಗೆ, ಪುರುಷ ಹಾರ್ಮೋನ್ ಗಳು ಅಥವಾ ಟೆಸ್ಟೋಸ್ಟಿರಾನ್ ಪ್ರೌಢಾವಸ್ಥೆಯ ಆರಂಭದಲ್ಲಿ ವೃಷಣಗಳಿಂದ ಬಿಡುಗಡೆಯಾಗುತ್ತದೆ ಹಾಗೂ ಅಂಡಾಶಯಗಳು ಸ್ತ್ರೀ ಹಾರ್ಮೋನ್ ಗಳು ಅಥವಾ ಈಸ್ಟೋಜೆನ್ ಅನ್ನು ಉತ್ಪತ್ತಿ ಮಾಡುತ್ತದೆ.

ಇದು ಜೀವಿಗಳಲ್ಲಿನ ಲೈಂಗಿಕ ಲಕ್ಷಣಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ, ಆದ್ದರಿಂದ, ಅವುಗಳನ್ನು ಲೈಂಗಿಕ ಹಾರ್ಮೋನ್ ಎಂದು ಹೆಸರಿಸಲಾಗಿದೆ.
01) ಟೆಸ್ಟೋಸ್ಟಿರಾನ್: ಈ ಒಂದು ಹುಡುಗರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳಾದ ವೀರ್ಯಾಣುಗಳ ಉತ್ಪತ್ತಿ, ಮೀಸೆ ಮತ್ತು ಗಡ್ಡಗಳ ಬೆಳವಣಿಗೆ, ಹಾಗೂ ಧ್ವನಿಯು ಒರಟಾಗುವುದು ಮುಂತಾದವುಗಳನ್ನು ಉಂಟುಮಾಡುತ್ತವೆ.
02) ಈಸ್ಟೋಜೆನ್: ಈ ಒಂದು ಹುಡುಗಿಯರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳಾದ ಸ್ತನಗಳ ಬೆಳವಣಿಗೆ, ಅಂಡಾಣು ಉತ್ಪತ್ತಿ ಮುಂತಾದವುಗಳನ್ನು ಉಂಟುಮಾಡುತ್ತವೆ

8 class science chapter 13 notes kannada

6. ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿಯನ್ನು ಬರೆಯಿರಿ
(a) ಆಡಮ್ಸ್ ಆಪಲ್ (b) ದ್ವಿತೀಯಕ ಲೈಂಗಿಕ ಲಕ್ಷಣಗಳು ಬಗ್ಗೆ (c) ಹುಟ್ಟುವ ಮಗುವಿನ ಲಿಂಗ ನಿರ್ಧರಣೆ

ಉತ್ತರ: (a) ಆಡಮ್ ಆಪಲ್ ಪ್ರೌಢಾವಸ್ಥೆಯಲ್ಲಿ, ಹುಡುಗರ ಧ್ವನಿಪಟ್ಟಿಗೆ ಅದರ ಜೊತೆಗೆ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭಿಸುತ್ತವೆ, ಹುಡುಗರಲ್ಲಿ ಧ್ವನಿಪೆಟ್ಟಿಗೆಯು ದೊಡ್ಡದಾಗಿ ಬೆಳೆಯುತ್ತವೆ. ಹುಡುಗದರಲ್ಲಿ ಬೆಳೆಯುತ್ತಿರುವ ಧ್ವನಿಪೆಟ್ಟಿಗೆಯನ್ನು ಆಡಮ್ಸ್ ಆ್ಯಪಲ್ ಎಂದು ಕರೆಯಲಾಗುವ ಗಂಟಲಿನ ಮುಂದೆ ಚಾಚಿದ ಭಾಗವಾಗಿ ಕಾಣಬಹುದು. ಹುಡುಗಿಯರಲ್ಲಿ ಲ್ಯಾರಿಂಕ್ಸ್ (ಕಂಠಪಿಂಡ) ಚಿಕ್ಕ ಗಾತ್ರದಿಂದ ಹೊರಗೆಯಿಂದ ಕಾಣುವುದು ಕಷ್ಟವಾಗಬಹುದು, ಸಾಮಾನ್ಯವಾಗಿ ಹುಡುಗಿಯರು ಎತ್ತರದ ಧ್ವನಿಯನ್ನು ಹೊಂದಿರುವುದರಿಂದ, ಹುಡುಗರಿಗೆ ಆಳವಾದ ಧ್ವನಿ ವ್ಯಕ್ತವಾಗುತ್ತದೆ.ಹದಿಹರೆಯದ ಹುಡುಗರಲ್ಲಿ, ಮತ್ತು ಬೆಳೆಯುತ್ತಿರುವ ಧ್ವನಿಪೆಟ್ಟಿಗೆಯ ಸ್ನಾಯುಗಳು ನಿಯಂತ್ರಣ ವನ್ನುಹಾಗೂ ತಪ್ಪುಪ್ಪಿದರಿಂದ ಧ್ವನಿಯು ಒರಟಾಗುತ್ತದೆ.

(b) ದ್ವಿತಿಯ ಲೈಂಗಿಕ ಲಕ್ಷಣಗಳು: ದ್ವಿತೀಯಕ ಲೈಂಗಿಕ ಲಕ್ಷಣಗಳು ಗಂಡು ಮತ್ತು ಹೆಣ್ಣಿನ ದೇಹಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಹಾಯಕವಾಗಿವೆ.
ಹುಡುಗರಲ್ಲಿ ದ್ವಿತೀಯ: ಲೈಂಗಿಕ ಲಕ್ಷಣಗಳು ಇಂತಿವೆ.
ಹುಡುಗರಲ್ಲಿ ಭುಜಗಳು ವಿಶಾಲವಾಗುತ್ತದೆ ಹಾಗೂ ಎದೆಯು ಅಗಲವಾಗುವುದು.
ಧ್ವನಿಪೆಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭವಾಗುವುದು,
ಹುಡುಗರಲ್ಲಿ ವೃಷಣ ಹಾಗೂ ಶಿಶ್ನಗಳಂತಹ ಲೈಂಗಿಕ ಅಂಗಗಳು ಪೂರ್ಣವಾಗಿ ವಿಕಾಸ ಹೊಂದುತ್ತವೆ. ವೃಷಣಗಳು ವೀರ್ಯಾಣುಗಳನ್ನು ಉತ್ಪಾದಿಸಲೂ ಸಹ ಆರಂಭಿಸುತ್ತವೆ.
ಹುಡುಗಿಯರಲ್ಲಿ ದ್ವಿತೀಯ ಲೈಂಗಿಕ ಲಕ್ಷಣಗಳು ಇಂತಿವೆ:ಸೊಂಟದ ಕೆಳಭಾಗದ ಪ್ರದೇಶವು ಅಗಲವಾಗುತ್ತವೆ.
ಸ್ತನಗಳ ಬೆಳವಣಿಗೆ ಪ್ರಾರಂಭವಾಗುತ್ತವೆ.
ಹುಡುಗಿಯರಲ್ಲಿ ಅಂಡಾಶಯಗಳು ಹಿಗ್ಗುತ್ತದೆ.ಹಾಗೂ ಅಂಡಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತವೆ. ಹಾಗೆಯೇ ಅಂಡಾಶಯಗಳು ಪಕ್ವಗೊಂಡ ಇನ್ನೂ ಅಂಡಗಳನ್ನು ಬಿಡುಗಡೆಗೊಳಿಸಲು ಪ್ರಾರಂಭಿಸುತ್ತವೆ.

C) ಹುಟ್ಟುವ ಮಗುವಿನ ಲಿಂಗಗಳ ನಿರ್ಧರಣೆ: ತಂದೆಯ ಲಿಂಗ ವರ್ಣತಂತುಗಳು ಹುಟ್ಟಲಿರುವ ಮಗುವಿನ ಲಿಂಗವನ್ನು ನಿರ್ಧರಿಸುತ್ತವೆ. ಮಾನವರ,ಎಲ್ಲಾ ಜೀವಕೋಶಗಳು ತಮ್ಮ ಜೀವಕೋಶಗಳ ಕೋಶಕೇಂದ್ರದಲ್ಲಿ 23 ರ ಜೊತೆ ವರ್ಣತಂತುಗಳನ್ನು ಹೊಂದಿವೆ. ಇವುಗಳಲ್ಲಿ ಎರಡು ಲಿಂಗ ನಿರ್ಧಾರಿತ ವರ್ಣತಂತುಗಳು X ಮತ್ತು Y ಎಂಬ ಹೆಸರಿನಲ್ಲಿ ಪರಿಚಿತರಾಗಿವೆ.ಹೆಣ್ಣಿನಲ್ಲಿ ಎರಡು(2) ವರ್ಣತಂತುಗಳಿದ್ದರೆ, ಗಂಡು ಒಂದು X ಹಾಗೂ ಒಂದು Y ವರ್ಣತಂತು ವನ್ನು ಹೊಂದಿರುತ್ತಾನೆ.ಲಿಂಗಾಣುಗಳು (ಅಂಗ) ಮತ್ತು ವೀರ್ಯಾಣುಗಳಿಗೆ ಸಂಬಂಧಿಸಿದ ವರ್ಣತಂತುಗಳ ಒಂದು ನಿರ್ದಿಷ್ಟ ಗುಂಪನ್ನು ಮಾತ್ರ ಹೊಂದಿರುತ್ತವೆ.ನಿಷೇಚನಗೊಂಡಿರದ ಅಂಡಗಳು ಯಾವಾಗ ಲು ಒಂದು X ವರ್ಣತಂತುವನ್ನು ಮಾತ್ರ ಹೊಂದಿರುತ್ತವೆ. ಆದರೆ ವೀರ್ಯಾಣುಗಳಲ್ಲಿ ಎರಡು(2) ವಿಧಗಳಿವೆ, ಒಂದು ವಿಧವು X ವರ್ಣತಂತು ಮತ್ತು ಇನ್ನೊಂದು ವಿಧವು Y ವರ್ಣತಂತುವ ನ್ನು ಹೊಂದಿರುತ್ತದೆ.

X ವರ್ಣತಂತು ಹೊಂದಿರುವ ವೀರ್ಯಾಣು: ಅಂಡವನ್ನು ನಿಶೇಚನಗೊಳಿಸಿದಾಗ, ಯುಗ್ಮಜ ಎರಡು X ವರ್ಣತಂತುಗಳನ್ನು ಹೊಂದಿರುತ್ತದೆ ಮತ್ತು ಅದು ಹೆಣ್ಣು ಮಗುವಾಗಿ ಬೆಳೆಯುತ್ತದೆ. ನಿಷೇಚನದಲ್ಲಿ ವೀರ್ಯಾಣುವು ಒಂದು ಬಿ. ವರ್ಣತಂತುವನ್ನು ತಂಡಕ್ಕೆ ನೀಡಿದರೆ, ಯುಗ್ಮಜ ಗಂಡು ಮಗುವಾಗಿ ಬೆಳೆಯುತ್ತದೆ.

ಹದಿಹರೆಯಕ್ಕೆ ಪ್ರವೇಶ | 8 Class Science Chapter 13 KSEEB Notes in Kannada

7. ಋತುಬಂಧ ಎಂದರೇನು?
ಉತ್ತರ: 45 ರಿಂದ 50 ವರ್ಷ ವಯಸ್ಸಿನಲ್ಲಿ ಋತುಚಕ್ರವು ನಿಲ್ಲುತ್ತದೆ. ಋುತುಚಕ್ರದ ನಿಲುಗಡೆಗೆ ಋತುಬಂಧ ಎಂದು ಕರೆಯಲಾಗುತ್ತದೆ.

8. ಮಾನವನ ದೇಹದಲ್ಲಿನ ಅಂತಃಸ್ರಾವಕ ಗ್ರಂಥಿಗಳನ್ನು ಹೆಸರಿಸಿ,
ಉತ್ತರ: ಪಿಟ್ಯುಟರಿ, ಥೈರಾಯ್ಡ್, ಅಡ್ರೆನಲ್, ಮೆಡೋಕ್ರೈನ್, ಅಂಡಾಶಯ, ಮತ್ತು ಲೈಂಗಿಕ ಗ್ರಂಥಿಗಳು ಮಾನವನ ದೇಹದಲ್ಲಿ ಪ್ರಮುಖ ಅಂತಃಸ್ರಾವಕ ಗ್ರಂಥಿಗಳಾಗಿವೆ.

9. ಲೈಂಗಿಕ ಹಾರ್ಮೋನ್ಗಳಲ್ಲದೆ ಇತರ ಹಾರ್ಮೋನ್ಗಳು ಯಾವವು?
ಉತ್ತರ: ಥೈರಾಕ್ಸಿನ್, ಇನ್ಸುಲಿನ್, ಆಡ್ರಿನಲಿನ್ ಮುಂತಾದವುಗಳು ಲೈಂಗಿಕ ಹಾರ್ಮೋನ್ಗಳ ಹೊರತಾಗಿ ದೇಹದ ಇತರ ಪ್ರಮುಖ ಹಾರ್ಮೋನಗಳಾಗಿವೆ.

10. ವ್ಯಕ್ತಿ ತುಂಬಾ ಕೋಪಗೊಂಡಾಗ, ಒತ್ತಡದಲ್ಲಿದ್ದಾಗ ಅಥವಾ ಆತಂಕ ಅನುಭವಿಸುತ್ತಿದ್ದಾಗ ದೇಹದ ಒತ್ತಡವನ್ನು ಸಮತೋಲನಗೊಳಿಸಲು ನೆರವಾಗುವ ಮುಖ್ಯ ಹಾರ್ಮೋನ್ ಯಾವುದು?
ಉತ್ತರ: ವ್ಯಕ್ತಿಯು ತುಂಬಾ ಕೋಪಗೊಂಡಾಗ, ತೊಂದರೆಗೀಡಾದ ಸಂದರ್ಭದಲ್ಲಿ ಅಥವಾ ಆತಂಕಕ್ಕೊಳಗಾದಾಗ ದೇಹವನ್ನು ಒತ್ತಡಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಅಡ್ರಿನಲ್ ಗ್ರಂಥಿಯಿಂದ ಬಿಡುಗಡೆಯಾಗುವ ಆಡ್ರಿನಲಿನ್ ಎಂಬ ಹಾರ್ಮೋನ್ ನೆರವಾಗುತ್ತದೆ.

ಇತರೆ Class 8 Science ಅಧ್ಯಾಯಗಳ ನೋಟ್ಸ್ (Kannada)

8ನೇ ತರಗತಿ ವಿಜ್ಞಾನ ಅಧ್ಯಾಯ 14: ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು | 8th Standard Science Chapter 14 Notes in Kannada

class 8 : ಅಧ್ಯಾಯ-24: ದಿನನಿತ್ಯ ಜೀವನದಲ್ಲಿ ಸಮಾಜಶಾಸ್ತ್ರ Notes in Kannada

8th Std Social ಅಧ್ಯಾಯದ ಸ್ಥಳೀಯ ಸ್ವಯಂ ಸರ್ಕಾರಗಳು ಅಧ್ಯಾಯವು NCERT ಮತ್ತು KSEEB ಪಠ್ಯಕ್ರಮ notes

FAQS

1) ಹದಿಹರೆಯಕ್ಕೆ ಪ್ರವೇಶ ಎಂದರೇನು?

ಹದಿಹರೆಯಕ್ಕೆ ಪ್ರವೇಶ ಎನ್ನುವುದು ಬಾಲ್ಯದಿಂದ ಯೌವನದತ್ತ ಸಾಗುವ ಹಂತವಾಗಿದೆ. ಈ ಅವಧಿಯಲ್ಲಿ ದೇಹದಲ್ಲಿ ವೇಗವಾದ ಬದಲಾವಣೆಗಳು ನಡೆಯುತ್ತವೆ ಮತ್ತು ಹಾರ್ಮೋನ್‌ಗಳ ಪರಿಣಾಮದಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕಂಡುಬರುತ್ತದೆ.

2) ಹದಿಹರೆಯದ ಸಮಯದಲ್ಲಿ ದೇಹದಲ್ಲಿ ಯಾವ ಬದಲಾವಣೆಗಳು ಆಗುತ್ತವೆ?

ಹದಿಹರೆಯದ ಸಮಯದಲ್ಲಿ ಎತ್ತರ ಹೆಚ್ಚಾಗುವುದು, ಧ್ವನಿ ಬದಲಾವಣೆ, ದೇಹದ ಆಕಾರದಲ್ಲಿ ವ್ಯತ್ಯಾಸ ಮತ್ತು ಲೈಂಗಿಕ ಲಕ್ಷಣಗಳ ಬೆಳವಣಿಗೆ ಕಾಣಿಸುತ್ತದೆ. ಈ ಎಲ್ಲಾ ಬದಲಾವಣೆಗಳು ಸಹಜವಾಗಿವೆ.

3) 8th Standard Science Chapter 13 Kannada Notes PDF ಡೌನ್‌ಲೋಡ್ ಮಾಡಬಹುದೇ?

ಹೌದು, 8th Standard Science Chapter 13 Kannada Notes ಅನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದು. ಈ PDF ವಿದ್ಯಾರ್ಥಿಗಳಿಗೆ ಪುನರವಲೋಕನ ಮತ್ತು ಪರೀಕ್ಷಾ ತಯಾರಿಗೆ ಬಹಳ ಉಪಯುಕ್ತವಾಗಿದೆ.

4) ಹಾರ್ಮೋನ್‌ಗಳ ಪಾತ್ರ ಏನು?

ಹಾರ್ಮೋನ್‌ಗಳು ದೇಹದ ವಿವಿಧ ಕ್ರಿಯೆಗಳನ್ನು ನಿಯಂತ್ರಿಸುತ್ತವೆ. ಹದಿಹರೆಯದ ಅವಧಿಯಲ್ಲಿ ಹಾರ್ಮೋನ್‌ಗಳು ದೈಹಿಕ ಬೆಳವಣಿಗೆ, ಲೈಂಗಿಕ ಲಕ್ಷಣಗಳು ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತವೆ.

Leave a Comment

Your email address will not be published. Required fields are marked *

Scroll to Top