class 8 sst : ಅಧ್ಯಾಯ -22 ಪ್ರಜಾಪ್ರಭುತ್ವ (8ನೇ ತರಗತಿ ಸಮಾಜ ವಿಜ್ಞಾನ ಭಾಗ 2)
ಕೆಳಗೆ scroll ಮಾಡಿ ಪಠ್ಯಪುಸ್ತಕದ ಪ್ರಶ್ನೆಗಳು ನೀಡಲಾಗಿದೆ

8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ಅಧ್ಯಾಯ 22 – ಪ್ರಜಾಪ್ರಭುತ್ವ: class 8 sst KSEEB Solutions, ಮತ್ತು ಪ್ರಶ್ನೋತ್ತರಗಳೊಂದಿಗೆ ಸಂಕ್ಷಿಪ್ತ ಗೈಡ್
ಪ್ರಜಾಪ್ರಭುತ್ವ (Democracy) ಬಗ್ಗೆ ಅಧ್ಯಾಯ 22, 8ನೇ ತರಗತಿಯಲ್ಲಿ ಪ್ರಮುಖವಾದ ವಿಷಯವಾಗಿದೆ. ಇದು ಜನರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಹಾಗೂ ಅವರ ಆಯ್ಕೆಗಳನ್ನು ಪ್ರಮಾಣೀಕರಿಸುವುದರ ಮೂಲಕ ಶಕ್ತಿ ವಹಿಸುವ ವ್ಯವಸ್ಥೆಯಾದ ಪ್ರಜಾಪ್ರಭುತ್ವವನ್ನು ವಿವರಿಸುತ್ತದೆ. ಈ ಲೇಖನದಲ್ಲಿ ನಾವು class 8 sst, KSEEB Solution for Class 8, ಮತ್ತು Class 8 Social Science-ನ ಹಲವು ಮುಖ್ಯ ಅಂಶಗಳನ್ನು ಮತ್ತು ಪ್ರಶ್ನೋತ್ತರಗಳನ್ನು ಚರ್ಚಿಸೋಣ. ಪ್ರಜಾಪ್ರಭುತ್ವದ ಬಗ್ಗೆ ವಿವರಗಳನ್ನು ನೀಡುತ್ತೇವೆ.
1. ಪ್ರಜಾಪ್ರಭುತ್ವದ ವಿಶಿಷ್ಟತೆ ಮತ್ತು ಅದರ ಪ್ರಕಾರಗಳು
ಪ್ರಜಾಪ್ರಭುತ್ವ ಎಂದರೇನು?
ಪ್ರಜಾಪ್ರಭುತ್ವವು ಜನರ ಸರ್ಕಾರವಿದೆ ಎನ್ನುವ ತತ್ವದ ಮೇಲೆ ಆಧಾರಿತವಾಗಿದೆ. ಇಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಹಾಗೂ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಪ್ರಜಾಪ್ರಭುತ್ವವು ಸಮಾನತೆಯ, ಸ್ವಾತಂತ್ರ್ಯದ ಮತ್ತು ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತದೆ.
2. ಭದ್ರ ಮತ್ತು ಸಮರ್ಥ ಸರ್ಕಾರ ನಿರ್ಮಾಣ
ಭದ್ರವಾದ ಮತ್ತು ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಲು, ಒಂದು ದೇಶದಲ್ಲಿ ಸದಾ ಸರಿಯಾದ ವಿರೋಧ ಪಕ್ಷ ಇರಬೇಕು. ಇದರ ಪ್ರಕಾರ, ಸರಕಾರದ ಕಾರ್ಯಗಳನ್ನು ನಿರ್ವಹಿಸುವ ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷವು ಮೇಲ್ವಿಚಾರಣೆಯನ್ನು ನಡೆಸುತ್ತದೆ. KSEEB Solution for Class 8 ಮಾದರಿಯಲ್ಲಿ, ಪ್ರಜಾಪ್ರಭುತ್ವವು ಸಮಯಕಾಲದಲ್ಲಿ ಮತ್ತು ದಾರಿತೊಡ್ಡಿಸುವ ಅಧಿಕಾರ ಹೊಂದಿರುವ ವ್ಯವಸ್ಥೆಯಾಗಿ ಪರಿಗಣಿಸಲಾಗಿದೆ.
3. NCERT Solutions for Class 8: ಪ್ರಜಾಪ್ರಭುತ್ವ
Class 8 Social Science – ಅಧ್ಯಾಯ 22 ಪ್ರಜಾಪ್ರಭುತ್ವವು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪುಸ್ತಕದಲ್ಲಿ, Class 8 Political Science ಭಾಗದಲ್ಲಿ ಈ ವಿಷಯವನ್ನೂ ವಿವರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಪರಿಪೂರ್ಣ ಅರ್ಥವನ್ನು ನೀಡುತ್ತದೆ.
4. ಪ್ರಶ್ನೋತ್ತರಗಳು (Question and Answer)
Question 1: ಪ್ರಜಾಪ್ರಭುತ್ವವನ್ನು ಹೇಗೆ ವಿವರಿಸಬಹುದು?
Answer: ಪ್ರಜಾಪ್ರಭುತ್ವವು ಜನರಿಗೆ ಸ್ವಾತಂತ್ರ್ಯ, ಹಕ್ಕು, ಮತ್ತು ಅಧಿಕಾರ ನೀಡುವ ಒಂದು ವ್ಯವಸ್ಥೆಯಾಗಿದೆ. ಇದರಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಹಾಗೂ ಸರ್ಕಾರವನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ.
Question 2: ಪ್ರಜಾಪ್ರಭುತ್ವದ ಯಾವ ಆಯಾಮಗಳು ಮಹತ್ವಪೂರ್ಣವಾಗಿವೆ?
Answer:
- ಸಮಾನತೆ
- ಸ್ವಾತಂತ್ರ್ಯ
- ನ್ಯಾಯ
- ಪ್ರಜಾಪ್ರಭುತ್ವದಲ್ಲಿ ಹಕ್ಕುಗಳನ್ನು ರಕ್ಷಿಸುವ ವ್ಯವಸ್ಥೆ
- ಪ್ರತಿನಿಧಿ ಆಯ್ಕೆ
Question 3: ಪ್ರಜಾಪ್ರಭುತ್ವದಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಅಂದರೆ ಏನು?
Answer: ಸಾರ್ವತ್ರಿಕ ವಯಸ್ಕ ಮತದಾನ ಎಂದರೆ 18 ವರ್ಷ ಹತ್ತಿದ ಪ್ರತಿಯೊಬ್ಬ ನಾಗರಿಕರು ಜಾತಿ, ಧರ್ಮ, ವರ್ಣ, ಇತ್ಯಾದಿ ಆಧಾರದ ಮೇಲೆ ನಿರ್ಧಾರವಿಲ್ಲದೆ ಮತ ಚಲಾಯಿಸಬಹುದು.
5. KSEEB Solution for Class 8: ಪ್ರಜಾಪ್ರಭುತ್ವ
KSEEB Solution for Class 8 Social Science-ನ ವಿವರಗಳು ಮತ್ತು ಸಮಸ್ಯೆಗಳನ್ನು ಸರಳವಾಗಿ ಉತ್ತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಕುರಿತು ಉತ್ತಮ ಅರಿವು ಮೂಡಿಸುತ್ತವೆ. Class 8 Social Science ಅಧ್ಯಾಯ 22 ನಲ್ಲಿ, ಪ್ರಜಾಪ್ರಭುತ್ವದ ವೈಶಿಷ್ಟ್ಯಗಳು, ಹಕ್ಕುಗಳು, ಬೇಲಿಗೆ ಹಕ್ಕುಗಳು ಎಲ್ಲವನ್ನೂ ಪರಿಣಾಮಕಾರಿಯಾಗಿ ವಿವರಣೆ ಮಾಡಲಾಗಿದೆ.
6. ಪ್ರಜಾಪ್ರಭುತ್ವದ ಪ್ರಮುಖ ಗುಣಗಳು KSEEB Solution for Class 8 Social Science
- ಜನರ ಸರ್ಕಾರ: ಪ್ರಜಾಪ್ರಭುತ್ವವು ಜನರ ನಡುವೆ ಸಾಮರಸ್ಯ ಮತ್ತು ಸಮ್ಮತಿಯನ್ನು ಬೆಳೆಸುತ್ತದೆ.
- ಆಯ್ಕೆಯ ಹಕ್ಕು: ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡುತ್ತಾರೆ.
- ಸಾರ್ವತ್ರಿಕ ಮತದಾನ: ಪ್ರತಿಯೊಬ್ಬ ನಾಗರಿಕರೂ ಮತ ಚಲಾಯಿಸಲು ಹಕ್ಕು ಹೊಂದಿರುತ್ತಾರೆ.
- ಸುದ್ದಿ ಮತ್ತು ಅಭಿಪ್ರಾಯಗಳ ಸ್ವಾತಂತ್ರ್ಯ: ಸರ್ಕಾರದ ವಿರುದ್ಧ ಚರ್ಚೆಗಳು ಹಾಗೂ ಅಭಿಪ್ರಾಯಗಳು ಹೊರಹಾಕಲು ಅವಕಾಶ.
- ನಿಷ್ಪಕ್ಷಪಾತ ಚುನಾವಣೆಗಳು: ಸರ್ಕಾರವನ್ನು ಹರಾಜು ಮಾಡುವ ಹಕ್ಕು.
7. class 8 sst , KSEEB Solutions, ಮತ್ತು Class 8 Notes:
ಈ ಎಲ್ಲಾ ಹಂತಗಳನ್ನು ಸಮರ್ಥವಾಗಿ ಕಲಿಯಲು, NCERT Solutions for Class 8, KSEEB Solution for Class 8, Class 8 Social Science, ಮತ್ತು Political Science-ನ ಅಧ್ಯಾಯ 22 ಅನ್ನು ಯಥಾವತ್ತಾಗಿ ಓದಲು ಮತ್ತು ಅಭ್ಯಾಸ ಮಾಡಲು ಪ್ರೋತ್ಸಾಹಿಸೋಣ. Class 8 Notesಗಳು ಸರಳ ಹಾಗೂ ವಿವರವಾದ ಮಾಹಿತಿಯನ್ನು ನೀಡುತ್ತವೆ, ಇದು ವಿದ್ಯಾರ್ಥಿಗಳಿಗೆ ಯಾವುದೇ ಪ್ರಶ್ನೆಗಳ ಉತ್ತರವನ್ನು ಸ್ಪಷ್ಟವಾಗಿ ಬರೆದಿರುವುದರಿಂದ ತ್ವರಿತವಾಗಿ ಕಲಿಯಲು ಸಹಾಯ ಮಾಡುತ್ತದೆ.
8. ನಿರ್ಣಯ (Conclusion) class 8 sst
ಪ್ರಜಾಪ್ರಭುತ್ವ ಮತ್ತು ಅದರ ವೈಶಿಷ್ಟ್ಯಗಳನ್ನು ನಿಖರವಾಗಿ ಕಲಿಯಲು NCERT Solutions, KSEEB Solutions, ಮತ್ತು Class 8 Political Science-ನ ಅಧ್ಯಾಯ 22 ಸೂಕ್ತ ಮಾರ್ಗದರ್ಶನವನ್ನು ನೀಡುತ್ತವೆ. NCERT Solutions for Class 8 ಮತ್ತು KSEEB Solution for Class 8ನಲ್ಲಿ ನೀಡಲಾದ ಪ್ರಶ್ನೋತ್ತರಗಳು ಮತ್ತು ಗ್ರಂಥಸೂಚಿಗಳು ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಸವಾಲಾಗಿ ಆದರೆ ಸರಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಪಠ್ಯಪುಸ್ತಕದ ಪ್ರಶ್ನೆಗಳು
ಅಭ್ಯಾಸಗಳು
ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1 ಡೆಮಾಕ್ರಸಿ ಎಂಬ ಪದವು ಡೆಮೋಕ್ರೀಷಿಯಾ ಪದದಿಂದ ಬಂದಿದೆ.
2 ವಿಧಾನಸಭೆಯಲ್ಲಿ ಪಕ್ಷವೊಂದು ಬಹುಮತವನ್ನು ಸಾಬೀತುಪಡಿಸಿ ಆಡಳಿತದ ಕಡೆ ಗಮನಹರಿಸಿದರೆ ಆ ಪಕ್ಷವನ್ನು ಆಡಳಿತ ಪಕ್ಷ ಎಂದು ಕರೆಯುತ್ತಾರೆ.
3 ಭಾರತದಲ್ಲಿ ಮತಚಲಾಯಿಸುವ ಕನಿಷ್ಠ ವಯಸ್ಸು 18 ವರ್ಷಗಳು.
4 ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಯನ್ನು ನಿರ್ವಹಿಸಿದರೆ ಅಂತಹ ಚುನಾವಣೆಗಳನ್ನು ಸಾರ್ವತ್ರಿಕ ಚುನಾವಣೆಗಳು ಎಂದು ಕರೆಯುತ್ತಾರೆ.
|| ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
5. ಪ್ರಜಾಪ್ರಭುತ್ವದ ಅನುಕೂಲಗಳಾವುವು ?
ಉತ್ತರ:- ಪ್ರಜಾಪ್ರಭುತ್ವದ ಅನುಕೂಲಗಳೆಂದರೇ-
- ಪ್ರಜಾಪ್ರಭುತ್ವವು ಜನರಿಗೆಯಿರುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸ್ವತಂತ್ರ ನ್ಯಾಯಾಂಗದಡಿಯಲ್ಲಿ ರಕ್ಷಿಸುತ್ತದೆ.
- ಜನರು ತಮ್ಮ ಆಯ್ಕೆಯ ಪ್ರತಿನಿಧಿ ಹಾಗೂ ಸರ್ಕಾರವನ್ನು ಚುನಾಯಿಸಿಕೊಳ್ಳಬಹುದಾಗಿದೆ.
- ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಿರ್ಧಾರ ಕೈಗೊಳ್ಳುವಲ್ಲಿ ಭಾಗಿಯಾಗಿ ಸ್ವತಹ ಕಾನೂನು ರಚಿಸಿಕೊಳ್ಳುವಲ್ಲಿ ಅವಕಾಶವಿರುತ್ತದೆ.
- ಪ್ರಜಾಪ್ರಭುತ್ವವು ಸಮಾನತೆಯ ತತ್ವಾಧಾರಿತವಾದುದಾಗಿದೆ.
- ಪ್ರಜಾಪ್ರಭುತ್ವದಲ್ಲಿ ನಿರ್ಧಾರಕ ತೀರ್ಪುಗಳನ್ನು ತಮ್ಮ ಸಾರ್ವಜನಿಕರ ಅಭಿಪ್ರಾಯ ಮತ್ತು ಚರ್ಚೆಗಳಿಂದ ನಿರ್ಧರಿಸಲಾಗುತ್ತವೆ.
- ವಿರೋಧ ಪಕ್ಷವು ಆಡಳಿತ ಪಕ್ಷದ ದುರುಪಯೋಗವನ್ನು ಪರೀಕ್ಷಿಸಿ ತಡೆಗಟ್ಟುವ ಅವಕಾಶವಿದೆ.
- ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮೂಲಭೂತ ಹಕ್ಕು ಅವಕಾಶ ಕಲ್ಪಿಸುತ್ತದೆ.
- ಪ್ರಜಾಪ್ರಭುತ್ವವು ಶಾಂತಿಯುತವಾಗಿ ಚುನಾವಣೆ ಮೂಲಕ ಸರ್ಕಾರಗಳನ್ನು ಬದಲಿಸಲು ಅವಕಾಶವಿರುವುದರಿಂದ ಕ್ರಾಂತಿಗಳನ್ನು ಪುರಸ್ಕರಿಸುವುದಿಲ್ಲ.
- ಪ್ರಜಾಪ್ರಭುತ್ವ ರಾಷ್ಟ್ರೀಯತೆ, ದೇಶಭಕ್ತಿ, ಪ್ರಜೆಗೌರವಗಳನ್ನು ಅಭಿವೃದ್ಧಿಗೊಳಿಸಿ ವಿವಿಧತೆಯಲ್ಲಿ ಏಕತೆಯನ್ನು ಹುಟ್ಟಿಸುತ್ತದೆ.
6 ವಿವಿಧ ಪ್ರಕಾರದ ಸರ್ಕಾರಗಳನ್ನು ತಿಳಿಸಿ ?
ಉತ್ತರ:- ವಿವಿಧ ಪ್ರಕಾರದ ಸರ್ಕಾರಗಳು ಈ ಕೆಳನಂತಿವೆ
- ರಾಜಪ್ರಭುತ್ವ ಸರ್ಕಾರ(Monarchy) : ಅರಸ ಈ ಸರ್ಕಾರದ ಅಧಿಪತಿಯಾಗಿರುತ್ತಾನೆ, ರಾಜನೇ ಪರಮಾಧಿಕಾರವನ್ನು ಹೊಂದಿರುತ್ತಾನೆ. ಕಾನೂನುಗಳ ನಿರ್ಮಾಪಕ ರಾಜ ಆಗಿರುತ್ತಾನೆ.
- ಸರ್ವಾಧಿಕಾರತ್ವ (Dictatorship) : ಸರ್ವಾಧಿಕಾರಿ ಸರ್ಕಾರಗಳಲ್ಲಿ ಪಟ್ಟಾಭಿಷಿಕ್ತನಾಗಿ ವ್ಯಕ್ತಿಯೊಬ್ಬನ ಕೈಯಲ್ಲಿ ಸರ್ವ ಅಧಿಕಾರ ಕೇಂದ್ರೀಕೃತವಾಗಿರುತ್ತದೆ.
- ಸೈನಿಕ ಸರ್ವಾಧಿಕಾರ (Military Dictatorship) : ಸೈನಿಕ ಸರ್ವಾಧಿಕಾರ ರೂಪದ ಸರ್ಕಾರದಲ್ಲಿ, ರಾಜಕೀಯ ಅಧಿಕಾರವು ಸೈನ್ಯದ ಉನ್ನತ ಅಧಿಕಾರಿಯ ಕೈಯಲ್ಲಿರುತ್ತದೆ.
- ಕಮ್ಯೂನಿಸ್ಟ್ ಸರ್ಕಾರ (Communist Government) : ಇದರಲ್ಲಿ ಪ್ರಜೆಗಳಿಗೆ ನಿರ್ಬಂಧಿತವಾದ ಸ್ವಾತಂತ್ರ್ಯವಿರುತ್ತದೆ. ಕಮ್ಯೂನಿಸ್ಟ್ ಪಕ್ಷವನ್ನು ಹೊರತುಪಡಿಸಿ ಬೇರೆ ಯಾವುದೆ ರಾಜಕೀಯ ಪಕ್ಷ ದೇಶದಲ್ಲಿ ಉಳಿಯುವುದಿಲ್ಲ..
- ಪ್ರಜಾಪ್ರಭುತ್ವ ಸರ್ಕಾರ: ಜನರು ತಮ್ಮ ಪ್ರತಿನಿಧಿಗಳನ್ನು ಚುನಾವಣೆಗಳ ಮೂಲಕ ಆರಿಸಿ ಆಯ್ಕೆ ಮಾಡುತ್ತಾರೆ.
7. ಪ್ರತ್ಯಕ್ಷ ಪ್ರಜಾಪ್ರಭುತ್ವವು ಪರೋಕ್ಷ ಪ್ರಜಾಪ್ರಭುತ್ವದಿಂದ ಹೇಗೆ ಭಿನ್ನವಾಗಿದೆ?
ಉತ್ತರ:- ಪ್ರತ್ಯಕ್ಷ ಪ್ರಜಾಪ್ರಭುತ್ವದಲ್ಲಿ, ಜನರು ತಮ್ಮಗೆ ಬೆಕಾಗುವ ಸರ್ಕಾರವನ್ನು ಚುನಾವಣೆಯ ಮೂಲಕ ರಚಿಸಿಕೊಂಡು ಸಾರ್ವಭೌಮತ್ವ ಮತ್ತು ಅಧಿಕಾರವನ್ನು ನೇರವಾಗಿ ಚಲಾಯಿಸುತ್ತಾರೆ. ಹಾಗು ನಾಗರಿಕರು ನೇರವಾಗಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಮತ್ತು ಪ್ರತಿಯೊಬ್ಬ ನಾಗರಿಕರು ಕೇವಲ ಒಂದು ಮತಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಇಂತಹ ಚುನಾವಣೆಯನ್ನು ವರ್ಗ ಚುನಾವಣೆಗಳು ಮತ್ತು ಇತರ ಸಣ್ಣ ಸಾಂಸ್ಥಿಕ ಚುನಾವಣೆಯಲ್ಲಿ ಕಾಣಬಹುದು. ಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಸೂಕ್ತವಾಗಿದೆ.
ಪರೋಕ್ಷ ಪ್ರಜಾಪ್ರಭುತ್ವದಲ್ಲಿ, ಜನರು ತಮ್ಮ ಸಾರ್ವಭೌಮತ್ವ ಮತ್ತು ಅಧಿಕಾರವನ್ನು ಪರೋಕ್ಷವಾಗಿ ತಮ್ಮ ಆಯ್ಕೆಮಾಡಿದ ಪ್ರತಿನಿಧಿಗಳ ಮೂಲಕ ಚಲಾಯಿಸುತ್ತಾರೆ.
ಪರೋಕ್ಷ ಪ್ರಜಾಪ್ರಭುತ್ವದಲ್ಲಿ, ಪ್ರತಿನಿಧಿಗಳಲ್ಲಿ ಜನರಿಗಿಂತ ಹೆಚ್ಚಿನ ಶಕ್ತಿಯನ್ನು ಇರುವುದರಿಂದ, ಈ ರೀತಿಯ ಪ್ರಜಾಪ್ರಭುತ್ವವನ್ನು ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂದೂ ಕರೆಯಲಾಗುತ್ತದೆ. ಮತ್ತು ಪರೋಕ್ಷ ಪ್ರಜಾಪ್ರಭುತ್ವದ ಸಂದರ್ಭದಲ್ಲಿ, ನಾಗರಿಕರು ಪ್ರತಿನಿಧಿಗೆ ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಈ ಪ್ರತಿನಿಧಿಯು ಅವರ ಅಭಿಪ್ರಾಯಗಳಿಗೆ ಸಾಮಾನ್ಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾನೆ ಮತ್ತು ಸಮಸ್ಯೆಗಳ ಮೇಲೆ ಮತ ಚಲಾಯಿಸುತ್ತಾನೆ.
ಹಾಗು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶಗಳಿಗೆ ಪರೋಕ್ಷ ಪ್ರಜಾಪ್ರಭುತ್ವ ಸೂಕ್ತವಾಗಿದೆ.
8 ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎಂದರೇನು ?
ಉತ್ತರ:- ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎಂದರೇ ಭಾರತ ಪ್ರತಿನಿಧಿ ಪ್ರಜಾಪ್ರಭುತ್ವ ವ್ಯವಸ್ತೆ ಹೊಂದಿದ್ದು,ಜನರು ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಆಯಾ ದೇಶಗಳಲ್ಲಿ ನಿಗದಿಪಡಿಸಿದ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರುಗಳು ಜಾತಿ, ಮತ, ವಿದ್ಯಾರ್ಹತೆ, ವರ್ಣ, ವರ್ಗ, ಧಾರ್ಮಿಕತೆ, ಭಾಷೆ, ಲಿಂಗ ಭೇದವಿಲ್ಲದೆ ಚಲಾಯಿಸಬಹುದಾದ ಮತದಾನದ ಹಕ್ಕನ್ನೇ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎನ್ನುವರು.
9 ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುವ ಅಂಶಗಳನ್ನು ಪಟ್ಟಿಮಾಡಿ.
ಉತ್ತರ:- ಪ್ರಜಾಪ್ರಭುತ್ವದ ಯಶಸ್ಸಿಗೆ ಅವಶ್ಯಕವಾಗುವ ಅಂಶಗಳು
1. ಪ್ರಜಾಪ್ರಭುತ್ವವನ್ನು ರಕ್ಷಿಸುವ ಮನೋಭಾವ ಜನರಲ್ಲಿರಬೇಕು.
2.ಜನರು ಸದಾ ಜಾಗರೂಕತೆಯಿಂದಿರಬೇಕು.
3. ಪ್ರಜಾಪ್ರಭುತ್ವದ ಯಶಸ್ಸು ಯಾವತ್ತೂ ತಾಳ್ಮೆಯನ್ನು ಅವಲಂಬಿಸಿರುವುದಾಗಿದೆ. ಜನರು ಕೊಡುವ ಹಾಗೂ ತೆಗೆದುಕೊಳ್ಳುವ ತತ್ವಪಾಲಕರಾಗಬೇಕು.
4. ಪ್ರಜಾಪ್ರಭುತ್ವದ ಯಶಸ್ಸು ಉತ್ತಮ ನಾಯಕತ್ವವನ್ನು ಅವಲಂಬಿಸಿರುತ್ತದೆ. ನಾಯಕನಾದವನು ಸಾಮಾನ್ಯ ಪ್ರಜೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ, ಅವುಗಳಿಗೆ ಪರಿಹಾರ ನೀಡುವ, ಸೇವಾ ಮನೋಭಾವ, ದೇಶಭಕ್ತಿ ಮತ್ತು ತ್ಯಾಗಮಾಡುವ ಗುಣಗಳನ್ನು ಹೊಂದಿರಬೇಕು,
5. ವಿರೋಧ ಪಕ್ಷವು ಆಡಳಿತ ಪಕ್ಷದ ಕಾರ್ಯ ವೈಖರಿಗಳ ಬಗ್ಗೆ ಸದಾ ಎಚ್ಚರಿಕೆಯಿಂದಿದ್ದು ಅವರುಗಳ ಸರ್ವಾಧಿಕಾರಿ ಧೋರಣೆಗಳನ್ನು ನಿಯಂತ್ರಿಸುತ್ತಿರಬೇಕು.
6. ಸ್ವತಂತ್ರ ನಿರ್ಭಯ, ನಿಷ್ಪಕ್ಷಪಾತ ಪ್ರತಿಕಾ ಮಾಧ್ಯಮ ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ.
7. ಪ್ರಜಾಪ್ರಭುತ್ವದ ಯಶಸ್ಸು ಜನರ ಮೇಲೆ ಅವಲಂಬಿತವಾಗಿದೆ, ಜನರು ಕಡ್ಡಾಯವಾಗಿ ಮತ ಚಲಾಯಿಸಲೆಬೇಕು ಮತ್ತು ಜನರು ಭ್ರಷ್ಟ ಹಾಗೂ ಅನಿಷ್ಟ ಮಾರ್ಗವನ್ನು ಅನುಸರಿಸಬಾರದು. ಜನರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತಹ ಯೋಗ್ಯ ಹಾಗೂ ಭ್ರಷ್ಟರಲ್ಲದ ಅಭ್ಯರ್ಥಿಗಳನ್ನು ಚುನಾಯಿಸಬೇಕು.
8.ವಿದ್ಯಾವಂತ ಮತ್ತು ಪ್ರಜ್ಞಾವಂತ ಮತದಾರ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣನಾಗಬಲ್ಲ.
9. ಪ್ರಜಾಪ್ರಭುತ್ವದ ಯಶಸ್ಸಿಗೆ ಉತ್ತಮವಾಗಿ ಸಂಘಟಿತವಾದ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಸ್ಥಳೀಯ ಸಂಸ್ಥೆಗಳು ಕಾರಣವಾಗುತ್ತದೆ.
10 ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿರೋಧಪಕ್ಷದ ಅವಶ್ಯಕತೆ ಏಕೆ ಬೇಕಾಗಿದೆ ?
ಉತ್ತರ:- ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿರೋಧಪಕ್ಷದ ಅವಶ್ಯಕತೆ ಇದೆ ಏಕೆಂದರೆ,
(1) ಆಡಳಿತಸರ್ಕಾರವು ಸರ್ವಾಧಿಕಾರಿಯಾಗುವುದನ್ನು ತಡೆಯಲು ಮತ್ತು ಅದರ ಅಧಿಕಾರವನ್ನು ನಿರ್ಬಂಧಿಸಲು, ವಿರೋಧ ಪಕ್ಷಗಳು ಅವರ ಮೇಲೆ ನಿಗಾ ಇಡುತ್ತವೆ.
(2) ಸರ್ಕಾರದ ನೀತಿಗಳನ್ನು ಟೀಕಿಸುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯ.
(3) ಶಾಸಕಾಂಗದ ಹೊರಗೆ ವಿರೋಧ ಪಕ್ಷಗಳು ಪತ್ರಿಕೆಗಳ ಗಮನವನ್ನು ಸೆಳೆಯುತ್ತವೆ ಮತ್ತು ಸಮಾಚರ ಪತ್ರಿಕೆಗಳಲ್ಲಿ ಸರ್ಕಾರದ ನೀತಿಯ ಬಗ್ಗೆ ತಮ್ಮ ಟೀಕೆಗಳನ್ನು ವರದಿ ಮಾಡುತ್ತವೆ.
(4) ವಿರೋಧ ಪಕ್ಷಗಳಿಗೆ ಸರ್ಕಾರದ ವೆಚ್ಚವನ್ನು ಪರಿಶೀಲಿಸುವ ಹಕ್ಕಿದೆ.
(5) ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷಗಳು ಸಾಮಾನ್ಯವಾಗಿ ಸರ್ಕಾರವನ್ನು ಟೀಕಿಸುತ್ತವೆ.
11. ಪ್ರಜಾಪ್ರಭುತ್ವದ ಐದು ಗುಣಗಳನ್ನು ತಿಳಿಸಿ,.
ಉತ್ತರ:- ಪ್ರಜಾಪ್ರಭುತ್ವದ ಐದು ಗುಣಗಳು ಈ ಕೆಳನಂತಿವೇ:
1. ಪ್ರಜಾಪ್ರಭುತ್ವವು ಜನತೆಯ ಸಮ್ಮತಿಯನ್ನು ಆಧರಿಸಿದೆ. ಇದು ಜನರ ಸರ್ಕಾರ.
2. ಇದು ಸಾರ್ವತ್ರಿಕ ವಯಸ್ಕ ಮತದಾನದ ತತ್ವವನ್ನು ಆಧರಿಸಿದೆ.
3. ಇದು ಪ್ರಾತಿನಿಧಿಕ ಸರ್ಕಾರವಾಗಿದ್ದು ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ.
4. ಇಲ್ಲಿ ಚುನಾವಣೆಗಳು ನಿಗದಿತ ಕಾಲಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ಮುಕ್ತವಾಗಿ ಚುನಾವಣೆಗಳು ನಡೆಯುತ್ತವೆ.
5. ಪ್ರಜಾಪ್ರಭುತ್ವ ಸರ್ಕಾರವು ಜನತೆಗೆ ಸ್ಪಂದಿಸುವ ಸರ್ಕಾರವಾಗಿದೆ.
12 ಪ್ರಜಾಪ್ರಭುತ್ವದಲ್ಲಿ ನಿಯತಕಾಲಿಕಾ ಚುನಾವಣೆಗಳು ಏಕೆ ಅವಶ್ಯಕ ?
ಉತ್ತರ: ಸರ್ಕಾರದ ಸರಿಯಾದ ಕಾರ್ಯನಿರ್ವಹಿಸುತ್ತದೇಯೇ ಅಥವಾ ಇಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ನಿಯಮಿತ ಮಧ್ಯಂತರಗಳಲ್ಲಿ ಚುನಾವಣೆಗಳನ್ನು ನಡೆಸುವುದು ಅಗತ್ತ್ಯ. ಉದಾಹರಣೆಗೇ ಹಾಲಿ ಅಧಿಕಾರಾವಧಿ ಮುಗಿದರೂ ನಿಯಮಿತ ಚುನಾವಣೆಗಳು ನಡೆಯದಿದ್ದರೆ ಅದು ಅವ್ಯವಸ್ಥೆ ಮತ್ತು ಅರಾಜಕತೆಗೆ ಕಾರಣವಾಗುತ್ತದೆ. ಯಾವುದೇ ಪಕ್ಷವು ಅಧಿಕಾರದಲ್ಲಿ ಇರುವುದಿಲ್ಲ. ಆದ್ದರಿಂದ ನಿರ್ವಾತವನ್ನು ರಚಿಸಲಾಗುವುದು. ಅದು ಸಮಾಜ ವಿರೋಧಿ ಶಕ್ತಿಗಳಿಗೆ ಅಧಿಕಾರವನ್ನು ಹಿಡಿಯಲು ಅವಕಾಶವನ್ನು ನೀಡುತ್ತದೆ. ಮತ್ತು ಅಂತಹ ಪರಿಸ್ಥಿತಿಯು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಆರೋಗ್ಯಕರವಾಗಿರುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ನಿಯಮಿತ ಚುನಾವಣೆಗಳು ನಡೆಯುವುದು ಅಗತ್ಯವಾಗಿದೆ.
13 ಪ್ರಜಾಪ್ರಭುತ್ವದ ಯಶಸ್ಸು ಮತದಾರನನ್ನು ಅವಲಂಬಿಸಿದೆ. ಚರ್ಚಿಸಿ.
ಉತ್ತರ: ಪ್ರಜಾಪ್ರಭುತ್ವದಲ್ಲಿ ಮತದಾರ ಆರಿಸಿದ ಜನಪ್ರತಿನಿಧಿಯೇ ದೇಶವನ್ನು ಆಳುತ್ತಾನೆ ಜನಪ್ರತಿನಿಧಿ ಬುದ್ಧಿವಂತ ಮತ್ತು ದಕ್ಷ ನಾಗಿದ್ದರೆ ದೇಶವು ಅಭಿವೃದ್ಧಿ ಸಾಧಿಸಲು ಕಾರಣವಾಗುತ್ತದೆ. ಹಾಗಾಗಿ ಉತ್ತಮ ಸರ್ಕಾರದ ರಚನೆ ಪ್ರಜ್ಞಾವಂತ ಮತದಾರನ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಪ್ರಜ್ಞಾವಂತನೆನಿಸಿದ ಮತದಾರನು ಮತ ಚಲಾಯಿಸುವಾಗ ಜಾತಿ, ವರ್ಣ, ಹಣ, ಯಾವುದೇ ರೀತಿಯ ಶಿಫಾರಸ್ಸುಗಳಿಗೆ ಮಣಿಯದೆ ತನ್ನ ಅಭ್ಯರ್ಥಿಗೆ ಆಯ್ಕೆ ಮಾಡುವಾಗ ಜಾಗರೂಕವಾಗಿರಬೇಕು. ಮತದಾರನು ಉತ್ತಮ ಗುಣ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು.
Post Comment