ಈ ಅಧ್ಯಾಯದಿಂದ ಮರು ಮರು ಪ್ರಶ್ನೇಗಳನ್ನು ನೀಡಲಾಗುತ್ತದೆ. ಪರೀಕ್ಷಾ ದೃಷ್ಟಿಯಿಂದ ಅತಿಮುಖ್ಯವಾಗಿದೆ. ಈ ಅಧ್ಯಾಯದಲ್ಲಿ ನ ಪ್ರಶ್ನೋತ್ತರಗಳ ನ್ನು NCERT, KSEEEB ಪಠ್ಯಕ್ರಮ ಆಧಾರಿತವಾಗಿ ಸುಲಭ ಮತ್ತು ಸರಳ ರೂಪದಲ್ಲಿ ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲಕರವಾದ ರೀತಿಯಲ್ಲಿ ನೋಟ್ಸಗಳನ್ನು ನಿಡಲಾಗಿದೆ.

NCERT Solutions Class 8 ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು
|. ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.ncert solutions
1. ಭಾರತದಲ್ಲಿ ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರಿ ಸಂಘಗಳ ಕಾಯಿದೆಯು 1912 ರಂತೆ ನಿಯಂತ್ರಿಸಲ್ಪಡುತ್ತದೆ.
2. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಇಂಗ್ಲೆಂಡ್ದೇಶದಲ್ಲಿ ರಾಬರ್ಟ್ಓವನ್ ಎಂಬುವವರಿಂದ ಸ್ಥಾಪಿತವಾಯಿತು.
3. ಸಹಕಾರಿ ಸಂಘಗಳ ಸದಸ್ಯರ ಸಂಖ್ಯೆಯ ಕನಿಷ್ಠ ಮಿತಿ 10ಜನ.
4. ಸಹಕಾರಿ ಸಂಘಗಳು ಪ್ರಾಂತ್ಯದ ನೋಂದಣಿ ಅಧಿಕಾರಿಗಳಿಂದ ನೋಂದಣಿ ಪ್ರಮಾಣ ಪತ್ರ ಬಂದ ನಂತರ ಅಸ್ತಿತ್ವಕ್ಕೆ ಬರುತ್ತವೆ.
5. ಕರ್ನಾಟಕದಲ್ಲಿ ಮೊದಲ ಸಹಕಾರಿ ಸಂಘವು ಗದಗ ಜಿಲ್ಲೆಯ ಕಣಗಿನಹಾಳ್ ಎಂಬಲ್ಲಿ ಪ್ರಾರಂಭವಾಯಿತು.
6. ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಯ ಮೊದಲ ಹಂತ ಪ್ರವರ್ತನೆ/ ರಚನೆ ಆಗಿದೆ.
7. ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಗೆ ಬೇಕಾಗುವ ಅತ್ಯಂತ ಪ್ರಮುಖ ಪತ್ರಗಳು ಸಂಘಟನೆಯ ಮನವಿ ಪತ್ರ– ಮತ್ತು ಲಿಖಿತ ಕಟ್ಟಳೆ ಆಗಿದೆ.
8. ಬಹುರಾಷ್ಟ್ರೀಯ ಕಂಪನಿಗಳು ಮೊದಲು ಅಮೆರಿಕ ಸಂಯುಕ್ತ ಸಂಸ್ಥಾನ ದೇಶದಲ್ಲಿ ಪ್ರಾರಂಭವಾದವು
9. ಭಾರತದ ತವರನ್ನು ಹೊಂದಿರುವ ಬಹು ರಾಷ್ಟ್ರೀಯ ಕಂಪನಿಗಳಿಗೆ ಟಾಟಾ ಮತ್ತು ಇನ್ಫೋಸಿಸ್ ಉದಾಹರಣೆಯಾಗಿದೆ.
10. ಭಾರತದಲ್ಲಿ ಮೊಟ್ಟಮೊದಲ ಶೇರುಪೇಟೆ ಮುಂಬೈ ಎಂಬಲ್ಲಿ ಪ್ರಾರಂಭವಾಯಿತು.
|| ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಬರೆಯಿರಿ. ncert solutions
11. ಲೋಕೋಪಯೋಗಿ ಸೇವಾ ಸಂಸ್ಥೆಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿ.
ಉತ್ತರ:- ಅಡಿಗೆ ಅನಿಲ, ನೀರು, ಅಂಚೆ ,ದೂರವಾಣಿ, ರೈಲ್ವೆ ಗಳು ಇವು ಲೋಕೋಪಯೋಗಿ ಸೇವಾ ಸಂಸ್ಥೆಗಳ ಉದಾಹರಣೆಗಳಾಗಿವೆ.
12. ಸಹಕಾರಿ ಸಂಘಗಳ ಯಾವುದಾದರು ಪ್ರಮುಖ ಆರು ಲಕ್ಷಣ ಮತ್ತು ತತ್ವಗಳನ್ನು ತಿಳಿಸಿ.
ಉತ್ತರ:- ಸಹಕಾರಿ ಸಂಘಗಳ ಲಕ್ಷಣಗಳು;
1) ಇದು ವ್ಯಕ್ತಿಗಳಿಂದ ರಚಿತವಾದ ಸ್ವಯಂ ಪ್ರೇರಿತ ಸಂಸ್ಥೆಯಾಗಿದೆ.
2) ಈ ಸಂಸ್ಥೆಯಲ್ಲಿ ಯಾವುದೇ ಜಾತಿ ಲಿಂಗ ಧರ್ಮ ವರ್ಣ ಮೇಲು ಕೀಳು ಎಂಬ ಭೇದ ಭಾವದ ತಾರತಮ್ಯವಿಲ್ಲದೆ ಎಲ್ಲ ವಯಸ್ಕರಿಗೂ ಸದಸ್ಯತ್ವದ ಅವಕಾಶವಿತ್ತು.
3.ಇಲ್ಲಿ ಸದಸ್ಯರ ಸಂಖ್ಯೆಗೆ ಗರಿಷ್ಠ ಮಿತಿಯಲ್ಲಿಇರುವುದಿಲ್ಲ.
4) ಇದರ ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವ ಮಾದರಿಯಲ್ಲಿರುತ್ತದೆ ಸಂಘದ ಸಭೆಗಳಲ್ಲಿ ಎಲ್ಲ ಸದಸ್ಯರು ಭಾಗವಹಿಸಬಹುದು ಮತ್ತು ಎಷ್ಟೇ ಬಂಡವಾಳ ಹೂಡಿದರೂ ಪ್ರತಿ ಸದಸ್ಯನಿಗೆ ಒಂದೇ ಬಾರಿ ಮತ ಚಲಾಯಿಸುವ ಹಕ್ಕಿರುತ್ತದೆ
5) ಸಂಸ್ಥೆಯಿಂದ ಬಂದಿರುವ ಲಾಭವನ್ನು ಬಂಡವಾಳ ಹೂಡಿಕೆಯ ಆಧಾರದ ಮೇಲೆ ಹಂಚಲಾಗುತ್ತದೆ (ಶೇ 6,25 ಕಿಂತ ಕಡಿಮೆಯಿಲ್ಲದಂತೆ)
6) ಲಾಭದ ಒಂದು ಭಾಗ ಸಂಘದ ಸಾಮಾನ್ಯ ನಿಧಿಗೆ ನೀಡಲಾಗುವುದು.
7.ಇವುಗಳ ಸ್ಥಾನಮಾನ ಹಾಗೂ ನಿಯಂತ್ರಣ ಸರ್ಕಾರ ಮೇಲ್ವಿಚಾರಣೆಗೆ ಒಳಗಾಗಿರುತ್ತದೆ.
13. ಸಹಕಾರಿ ಸಂಘಗಳ ವಿಧಗಳಾವುವು?ncert solutions
ಉತ್ತರ:- ಸಹಕಾರಿ ಸಂಘಗಳ ವಿಧಗಳು ಈ ಕೆಳನಂತಿವೆ;
1 ಸಾಲ ಸಹಕಾರಿ ಸಂಘಗಳು.
2 ಮಾರುಕಟ್ಟೆಯ ಸಹಕಾರಿ ಸಂಘಗಳು.
3 ಉತ್ಪಾದಕರ ಸಹಕಾರಿ ಸಂಘ.
4 ಗ್ರಾಹಕರ ಸಹಕಾರಿ ಸಂಘ.
5 ಬೇಸಾಯ ಸಹಕಾರಿ ಸಂಘಗಳು .
6 ಗೃಹ ನಿರ್ಮಾಣದ ಸಹಕಾರ ಸಂಘಗಳು.
7 ವಿವಿಧ ರೀತಿಯ ಸೇವೆಗಳಿಗೆ ಸಹಕಾರಿ ಸಂಘಗಳು, ಉದಾ: ವಿದ್ಯಾಭ್ಯಾಸ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ, ನೀರು
14. ಸಹಕಾರಿ ಸಂಘಗಳ ಮುಖ್ಯ ಪ್ರಯೋಜನ ಮತ್ತು ದೋಷಗಳನ್ನು ಪಟ್ಟಿ ಮಾಡಿ.
14) 1. ಸಹಕಾರ ಸಂಘವನ್ನು ಸುಲಭವಾಗಿ ರಚಿಸಬಹುದು,ಇದರ ರಚನೆಗೆ ಅತಿ ಹೆಚ್ಚು ಬಂಡವಾಳದ ಅಗತ್ಯವಿರುವುದಿಲ್ಲ.
2) ಸದಸ್ಯರಲ್ಲಿ ಯಾವುದೇ ಭೇದ ಭಾವ , ತಾರತಮ್ಯವಿರುವುದಿಲ್ಲ ಎಲ್ಲ ಸದಸ್ಯರಿಗೂ ಸಮಾನ ಹಕ್ಕುಬಾಧ್ಯತೆಗಳಿರುತ್ತವೆ
3) ಸದಸ್ಯರ ಹೊಣೆಗಾರಿಕೆ ಸೀಮಿತ ವಾಗಿರುತ್ತದೆ
4) ಸದಸ್ಯರು ಉಳಿತಾಯ ಮಾಡಿಕೊಳ್ಳುವುದನ್ನು ಕಲಿತು ಕೊಳ್ಳುತ್ತಾರೆ
5)ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ವ್ಯವಸ್ಥೆತೀರುತ್ತದೆ
6) ಒಬ್ಬ ಸದಸ್ಯ ಒಂದೇ ಮತ ಚಲಾಯಿಸುವ ಹಕ್ಕಿರುತ್ತದೆ.
ಸಹಕಾರಿ ಸಂಘಗಳ ದೋಷಗಳು:-
1) ಬಂಡವಾಳ ಮಿತಿಯನ್ನು ಹೊಂದಿದ್ದು ಗರಿಷ್ಠ ಪ್ರಮಾಣದಲ್ಲಿ ವಹಿವಾಟು ನಡೆಸಲು ಸಾದ್ಯವಾಗುವುದಿಲ್ಲ
2) ಸರಿಯಾದ ನೌಕರರು ಸಿಗದ ಕಾರಣ ಆಡಳಿತದ ದುರಪಯೋಗವಾಗುವ ಸಾಧ್ಯತೆ ಇರುತ್ತದೆ
3) ಹಣವನ್ನು ದುರಪಯೋಗ ಮಾಡುವ ಸಾಧ್ಯತೆ ಇರುತ್ತದೆ
4) ಲಂಚ ಮತ್ತು ಪಕ್ಷಪಾತಕ್ಕೆ ಅವಕಾಶವಿರುತ್ತದೆ
15. ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳಾವುವು?
ಉತ್ತರ:- ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳು ಈ ಕೆಳನಂತಿವೆ;
1.ಪ್ರವರ್ತನೆ/ ರಚನೆ
2.ನೋಂದಣಿ
3. ಬಂಡವಾಳ ವಂತಿಕೆ ಅಥವಾ ಷೇರು ಬಂಡವಾಳವನ್ನು ಸಂಗ್ರಹಿಸುವುದು.
4. ವ್ಯಾಪಾರದ ಆರಂಭ.
16. ಕೂಡು ಬಂಡವಾಳ ಸಂಸ್ಥೆಗಳ ಅನುಕೂಲಗಳನ್ನು ತಿಳಿಸಿ,
ಉತ್ತರ:- ಕೂಡು ಬಂಡವಾಳ ಸಂಸ್ಥೆಗಳ ಅನುಕೂಲಗಳು ಈ ಕಳಂನತಿವೆ;
1)ಕೂಡು ಬಂಡವಾಳ ಸಂಸ್ಥೆಗಳಲ್ಲಿ ಗರಿಷ್ಠ ಮಿತಿಯಲ್ಲಿ ಷೇರುದಾರರಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಪಡೆಯುವ ಸಾಧ್ಯತೆ ಇರುತ್ತದೆ
2) ಷೇರುದಾರರು ತಮ್ಮ ಷೇರು ಗಳನ್ನು ಬೇರೆಯವರಿಗೆ ವರ್ಗಾಯಿಸಬಹುದು ಇದರಿಂದ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಲು ಮುಂದೆ ಬರುತ್ತಾರೆ.
3)ಕೂಡು ಬಂಡವಾಳ ಸಂಸ್ಥೆಗೆ ಕಾನೂನಿನ ರಕ್ಷಣೆ ಇದೆ ಇದರಿಂದ ಷೇರುದಾರ ನು ಒಂದು ವೇಳೆ ದಿವಾಳಿಯದರೆ ಮರಣ ಹೊಂದಿದರೆ ಕಂಪನಿಯನ್ನು ಮುಚ್ಚುವ ಅವಶ್ಯಕತೆಯಿಲ್ಲ. ವ್ಯವಹಾರ ನಡೆದುಕೊಂಡು ಹೊಗುತ್ತದೆ.
4) ದೊಡ್ಡ ಪ್ರಮಾಣದ ವ್ಯವಹಾರ ನಡೆಸಲು ಹೆಚ್ಚು ಬಂಡವಾಳ ಮತ್ತು ಕಾರ್ಯ ಕೌಶಲ್ಯವನ್ನು ಹೊಂದಿಕೊಂಡಿದೆ.
5) ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ ಈ ವಸ್ತುಗಳ ಬೆಲೆ ಕಡಿಮೆ ಇರುತ್ತದೆ ಇದರಿಂದ ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ.
6) ಹೆಚ್ಚು ಜನರಿಗೆ ಉದ್ಯೋಗಾವಕಾಶ ದೊರಕುತ್ತದೆ. ಜನರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಇದರಿಂದ ಜನರು ಸರ್ಕಾರಕ್ಕೆ ಕರ ತೆರಿಗೆ ನೀಡಿ ದೇಶದ ಹೆಚ್ಚಿಸಲು ಅನುಕೂಲವಾಗುತ್ತದೆ
7) ಸಂಸ್ಥೆಯ ಷೇರುದಾರರ ಜವಾಬ್ದಾರಿ ಕಡಿಮೆಯಿರುತ್ತದೆ ಅಂದರೆ ಕಂಪನಿ ನಷ್ಟದಲ್ಲಿದರೆ ಮತ್ತು ಸಾಲಗಾರರಿಗೆ ಸಾಲ ಹಿಂದಿರುಗಿಸುವ ಸಾಮರ್ಥ್ಯ ಇಲ್ಲದಿದ್ದಾಗ ಷೇರುದಾರರ ಷೇರುದಾರರ ಜವಾಬ್ದಾರಿ ಅವರು ಹೂಡಿರುವ ಮೊಟ್ಟದಷ್ಟೆ ಸೀಮಿತವಾಗಿರುತ್ತದೆ.
17. ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳೇನು?
ಉತ್ತರ :- ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳು ಈಕೆಳನಂತಿವೆ:
1 ಕಡಿಮೆ ಬೆಲೆಯಲ್ಲಿ ಆಶ್ರಯದಾತನು ದೇಶಗಳಿಂದ ಕಚ್ಚಾ ಪದಾರ್ಥಗಳನ್ನು ಪಡೆಯಬಹುದಾಗಿದೆ.
2.ಆಶ್ರಯದಾತನು ದೇಶಗಳಿಂದ ತಂತ್ರಜ್ಞಾನ ಹಾಗೂ ಆಡಳಿತ ಕೌಶಲ್ಯಗಳನ್ನು ಪಡೆಯಬಹುದು.
3.ಆಶ್ರಯದಾತ ದೇಶಗಳಿಗೆ ಕಚ್ಚಾ ಪದಾರ್ಥವನ್ನು ಮತ್ತು ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡುವುದರಿಂದ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ.
4 .ಆಶ್ರಯದಾತ ದೇಶಗಳಿಂದ ಲಾಭಾಂಶದ ಜೊತೆಗೆ ರಾಜಧನ (Royalty) ಮತ್ತು ಆಡಳಿತಾತ್ಮಕ ಒಪ್ಪಂದಗಳಿಂದಲೂ ಭಾರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.
5. ತವರು ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ .
18. ಷೇರು ಮಾರುಕಟ್ಟೆಯ ಪ್ರಮುಖ ಕೆಲಸಗಳೇನು?ncert solutions
ಉತ್ತರ:- ಷೇರುಮಾರುಕಟ್ಟೆಗಳು ದ್ವಿತೀಯಕ ಷೇರುಮಾರುಕಟ್ಟೆಗಳಾಗಿವೆ ಕೇವಲ ನೋಂದಾಯಿತ ಕಂಪನಿಗಳ ಷೇರುಗಳ ಕ್ರಯ ಮತ್ತು ವಿಕ್ರಯಗಳಿಗೆ ಅವಕಾಶ ನೀಡುತ್ತದೆ. ಈ ಷೇರುಗಳನ್ನು ಮತ್ತು ಸಾಲ ಪತ್ರಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಕಾರ್ಯಕ್ಕೆ ಅನುಕೂಲಕರವವಾಗಿದೆ.
