“”Class 10 Science: ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು – Easy Notes In Kannada””

ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

1) ನಿಮಗೆ ಮೂರು ಪ್ರನಾಳವನ್ನು ನೀಡಲಾಗಿದೆ. ಒಂದರಲ್ಲಿ ಭಟ್ಟಿ ಇಳಿಸಿದ ನೀರು ಹಾಗೂ ಇನ್ನೂ ಏರಡರಲ್ಲಿ ಕ್ರಮವಾಗಿ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ದ್ರಾವಣಗಳಿವೆ. ನಿಮಗೆ ಕೇವಲ ಕೆಂಪು ಲಿಟ್ಮಸ್ಕಾಗದವನ್ನು  ಮಾತ್ರ ನೀಡಿದರೆ ಪ್ರನಾಳದಲ್ಲಿರುವ ಪ್ರತಿಯೊಂದು ಮಾದರಿಯನ್ನು ಹೇಗೆ ಗುರುತಿಸುವಿರಿ?

ಪ್ರತಿಯೊಂದು ಪ್ರನಾಳದಲ್ಲಿ ಇರುವ ದ್ರಾವಣವನ್ನು ಕೆಂಪು ಲಿಟ್ರಸ್ ಕಾಗದವನ್ನು ಬಳಸಿ ಪರೀಕ್ಷಿಸಬೇಕು. ಕೆಂಪು ಲಿಟ್ರಸ್ ಕಾಗದವನ್ನು ಒಂದು ಪ್ರನಾಳದಲ್ಲಿರುವ  ದ್ರಾವಣದಲ್ಲಿ ಮುಳುಗಿಸಿದಾಗ ಅದು ನೀಲಿ ಬಣ್ಣಕ್ಕೆ ಬದಲಾದರೆ ಆ ದ್ರಾವಣವು ಪ್ರತ್ಯಾಮ್ಲ ಎಂದು ಕರೆಯುತ್ತಾರೆ , ಮತ್ತು ಅದೇ ಕಾಗದವನ್ನು ಇನ್ನೊಂದು ಪ್ರನಾಳದಲ್ಲಿರುವ ದ್ರಾವಣದಲ್ಲಿ ಮುಳುಗಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಆಮ್ಲಎಂದು ಕರೆಯುತ್ತಾರೆ , ಹಾಗು ಯಾವುದೇ ಬಣ್ಣ ಬದಲಾವಣೆ ತೋರಿಸದೇ ಇರುವ ದ್ರಾವಣವು ಭಟ್ಟಿ ಇಳಿಸಿದ ನೀರು ಎಂದು ತೀರ್ಮಾನಿಸಬಹುದು .

2) ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಯಿಡಬಾರದು ಏಕೆ?

ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿ ಆಮ್ಲಗಳಿರುವ ಕಾರಣ ಅವು ಹಿತ್ತಾಳೆ ಅಥವಾ ತಾಮ್ರದ ಜೊತೆ ವರ್ತಿಸಿ ಅವುಗಳ ಸಂಯುಕ್ತಗಳನ್ನು ಉಂಟು ಮಾಡಿ ಆಹಾರ ಪದಾರ್ಥಗಳನ್ನು ವಿಷಕಾರಿಯನ್ನಾಗಿಸಬಹುದು .

3) ಆಮ್ಲವು ಲೋಹದ ಜೊತೆ ವರ್ತಿಸಿದಾಗ ಸಾಮಾನ್ಯವಾಗಿ ಯಾವ ಅನಿಲ ಬಿಡುಗಡೆಯಾಗುತ್ತದೆ ? ಉದಾಹರಣೆಯೊಂದಿಗೆ ವಿವರಿಸಿ. ಈ ಅನಿಲದ  ಅಸ್ತಿತ್ವವನ್ನು ನೀವು ಹೇಗೆ ಪರೀಕ್ಷಿಸುವಿರಿ.

ಹೈಡ್ರೊಜನ್ ಆಮ್ಲ + ಲೋಹ → ಲವಣ + ಹೈಡೋಜನ್ ಅನಿಲ. ಈ ಕ್ರಿಯೆಯಲ್ಲಿ ಬಿಡುಗಡೆ ಆಗುವ ಅನಿಲವನ್ನು ಉರಿಯುತ್ತಿರುವ ಕಿಡಿಗೊಳ್ಳಿಯ ಸಮೀಪಕ್ಕೆ ತಂದಾಗ ಅದು ಸಶಬ್ದವಾಗಿ ಉರಿಯುತ್ತದೆ .

4) ಲೋಹೀಯ ಸಂಯುಕ್ತ ʼʼ ಸಾರರಿಕ್ತ ಹೈಡ್ರೋಕ್ಲೋರಿಕ್ಆಮ್ಲದ ಜೊತೆ ವರ್ತಿಸಿ ಗುಳ್ಳೆಗಳನ್ನು ಉಂಟು ಮಾಡುತ್ತದೆ. ಬಿಡುಗಡೆಯಾದ ಅನಿಲ ಉರಿಯುವ ಮೇಣದ ಬತ್ತಿಯನ್ನು ಆರಿಸುತ್ತದೆ. ಕ್ರಿಯೆಯಲ್ಲಿ ಉತ್ಪತ್ತಿಯಾದ ಒಂದು ಸಂಯುಕ್ತ ಕ್ಯಾಲ್ಸಿಯಂ ಕ್ಲೊರೈಡ್ಆದರೆ ಕ್ರಿಯೆಯ ಸರಿದೂಗಿಸಿದ ಸಮೀಕರಣವನ್ನು ಬರೆಯಿರಿ.

CaCO3 + 2HCI → CaCl₂ + CO₂ + H₂O

5) HCl, HNO3 ಇತ್ಯಾದಿಗಳು ಜಲೀಯ ದ್ರಾವಣದಲ್ಲಿ ಆಮ್ಲೀಯ ಗುಣಗಳನ್ನು ಪ್ರದರ್ಶಿಸುತ್ತದೆ. ಆದರೆ ಆಲ್ಕೋಹಾಲ್ಮತ್ತು ಗ್ಲೂಕೋಸ್ ನಂತಹ ದ್ರಾವಣಗಳು ಆಮ್ಲೀಯ ಗುಣವನ್ನು ಪ್ರದರ್ಶಿಸುವುದಿಲ್ಲ ಏಕೆ?

ಆಮ್ಲವು ನೀರಿನೊಂದಿಗೆ ವರ್ತಿಸಿ ಹೈಡೋಜನ್ ಅಯಾನ್ ಉಂಟು ಮಾಡುತ್ತದೆ . ಆಮ್ಲಗಳಾದ HCl , H2SO4 , HNO , ಮತ್ತು CH COOH ನೀರಿನೊಂದಿಗೆ ವರ್ತಿಸಿ ಹೈಡೋಜನ್ ಅಯಾನ್ ( H ‘ ) ಉಂಟುಮಾಡುತ್ತದೆ.ಆದರೆ ಆಲ್ನೋಹಾಲ್ ಮತ್ತು ಗ್ಲೋಕೋಸ್ ನಂತಹ ಸಂಯುಕ್ತಗಳ ದ್ರಾವಣಗಳು ನೀರಿನಲ್ಲಿ ವಿಲೀನಗೊಂಡಾಗ ಹೈಡೋಜನ್ ಅಯಾನುಗಳನ್ನು ಉತ್ಪತ್ತಿ ಮಾಡದೆ ಇರುವ ಕಾರಣ ಆತ್ಮೀಯ ಗುಣಗಳನ್ನು ಪ್ರದರ್ಶಿಸುವುದಿಲ್ಲ .

6) ಆಮ್ಲದ ಜಲೀಯ ದ್ರಾವಣವು ವಿದ್ಯುತ್ತಿನ ವಾಹಕವಾಗಿದೆ ಏಕೆ?

ಆಮ್ಲದ ಜಲೀಯ ದ್ರಾವಣ ವಿದ್ಯುತ್ ವಾಹಕವಾಗಿದೆ ಕಾರಣ ಅದರಲ್ಲಿರುವ ಆವೇಶಯುಕ್ತ ಕಣಗಳಾದ ಅಯಾನುಗಳು ಇರುವುದು .

7) ಶುಷ್ಕ HCI ಅನಿಲ, ಶುಷ್ಕ ಲಿಟ್ಮಸ್ಕಾಗದದ ಬಣ್ಣವನ್ನು ಬದಲಾಯಿಸುವುದಿಲ್ಲ ಏಕೆ?

ಶುಷ್ಕ HCI ಅನಿಲದಲ್ಲಿ ಹೈಡೋಜನ್ ಅಯಾನುಗಳು ಇಲ್ಲದಿರುವ ಕಾರಣ ಅದು ಆಮ್ಮಿಯ ಗುಣಗಳನ್ನು ಪ್ರದರ್ಶಿಸುವುದಿಲ್ಲ .

8) ಅಮ್ಲವನ್ನು ಸಾರರಿಕ್ತಗೊಳಿಸುವಾಗ, ಆಮ್ಲವನ್ನೇ ನೀರಿಗೆ ಸೇರಿಸಬೇಕು ಎಂದು ಮತ್ತು ಆಮ್ಲಕ್ಕೆ ನೀರನ್ನು ಸೇರಿಸಬಾರದೆಂದೂ ಶಿಫಾರಸ್ಸು ಮಾಡುವುದೇಕೆ?

ನೀರನ್ನು ಆಮ್ಲದಲ್ಲಿ ಸೇರಿಸಿದರೆ ಉತ್ಪತ್ತಿಯಾಗುವ ಉಷ್ಣವು ಮಿಶ್ರಣವು ಹೊರಸಿಡಿಯುವಂತೆ ಮಾಡಬಹುದು ಮತ್ತು ಸುಟ್ಟ ಗಾಯಗಳನ್ನು ಉತ್ಪತ್ತಿ ಮಾಡಬಹುದು .

9) ಆಮ್ಲದ ದ್ರಾವಣವನ್ನು ಸಾರರಿಕ್ತಗೊಳಿಸಿದಾಗ ಹೈಡ್ರೋನಿಯಂ ಅಯಾನು (H3O)+ಗಳ ಸಾರತೆಗಳ ಮೇಲೆ ಉಂಟಾಗುವ ಪರಿಣಾಮ ಏನು?

ಆಮ್ಲದ ದ್ರಾವಣವನ್ನು ಸಾರರಿಕ್ತಗೊಳಿಸಿದಾಗ ಏಕಮಾನ ಗಾತ್ರದಲ್ಲಿಯಿರುವ ಅಯಾನುಗಳ ಸಾರತೆಯು ಕಡಿಮೆ ಆಗುತ್ತದೆ .

10) ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಹೆಚ್ಚಿನ ಪ್ರಮಾಣದ ಪ್ರತ್ಯಾಮ್ಲವನ್ನು ವಿಲೀನಗೊಳಿಸಿದಾಗ ಹೈಡ್ರಾಕ್ಸೈಡ್ಅಯಾನು (OH) ಗಳ ಸಾರತೆಯ ಮೇಲೆ ಉಂಟಾಗುವ ಪರಿಣಾಮ ಏನು?

ಹೈಡ್ರಾಕ್ಸೆಡ್ ಅಯಾನುಗಳ ಸಾರತೆಯು ಕಡಿಮೆ ಆಗುತ್ತದೆ .

11) ನಿಮ್ಮಲ್ಲಿ ʼʼ ಮತ್ತು ʼಬಿʼ ಎಂಬ ಎರಡು ದ್ರಾವಣಗಳು ಇವೆ. ದ್ರಾವಣ ʼʼ pH 6 ದ್ರಾವಣ ʼಬಿʼ pH ಮತ್ತು ಯಾವ ದ್ರಾವಣದಲ್ಲಿ ಹೈಡ್ರೋಜನ್ಅಯಾನುಗಳ ಸಾರತೆ ಹೆಚ್ಚು ಇದೆ? ಇವುಗಳಲ್ಲಿ ಆಮ್ಲ ಯಾವುದು ಮತ್ತು ಪ್ರತ್ಯಾಮ್ಲ ಯಾವುದು?

pH  ಮೌಲ್ಯ 7 ಕ್ಕಿಂತ ಕಡಿಮೆಯಿದ್ದರೆ ಅದು ಆತ್ಮೀಯ ಮತ್ತು 7 ಕ್ಕಿಂತ ಜಾಸ್ತಿ ಇದ್ದರೆ ಅದು ಪ್ರತ್ಯಾಮೀಯವಾಗಿದೆ . ಆದ್ದರಿಂದ pH 6 ಇರುವ ದ್ರಾವಣವು ಆತ್ಮೀಯ ಮತ್ತು ಅದರಲ್ಲಿ ಹೈಡೋಜನ್ ಅಯಾನಗಳ ಸಾರತೆಯು ಹೆಚ್ಚು . pH 8 ಇರುವ ದ್ರಾವಣವು ಪ್ರತ್ಯಾಮ್ಲೀಯವಾಗಿರುತ್ತದೆ .

12) ದ್ರಾವಣದ ಸ್ವಭಾವದ ಮೇಲೆ H+(aq) ಅಯಾನುಗಳ ಸಾರತೆಯು ಯಾವ ಪರಿಣಾಮವನ್ನು ಹೊಂದಿದೆ?

H+ ಅಯಾನುಗಳ ಸಾರತೆಯು ಅಧಿಕವಾಗಿದ್ದಲ್ಲಿ ದ್ರಾವಣವು ಆಮ್ಲಿಯವಾಗುತ್ತದೆ ಮತ್ತು H ಅಯಾನುಗಳ ಸಾರತೆಯು ಕಡಿಮೆಯಿದ್ದಲ್ಲಿ ದ್ರಾವಣವು ಪ್ರತ್ಯಾಮ್ಲೀಯ ಆಗಿರುತ್ತದೆ .

13) ಪ್ರತ್ಯಾಮ್ಲೀಯ ದ್ರಾವಣಗಳೂ H+(aq) ಅಯಾನುಗಳನ್ನು ಹೊಂದಿವೆಯೇ? ಹಾಗದರೆ ಅವು ಏಕೆ ಪ್ರತ್ಯಾಮ್ಲೀಯವವಾಗಿದೆ?

ಪ್ರತ್ಯಾಮ್ಲೀಯ ದ್ರಾವಣಗಳು H+ಅಯಾನುಗಳನ್ನು ಹೊಂದಿಕೊಂಡಿವೆ , ಆದರೆ ಅದರ ಸಾರತೆ ಕಡಿಮೆಯಿರುತ್ತದೆ . ಅವು ಪ್ರತ್ಯಾಮೀಯವಾಗಿರಲು ಕಾರಣ ಅವುಗಳಲ್ಲಿಯಿರುವ OH ಅಯಾನುಗಳ ಸಾರತೆ ಅಧಿಕವಾಗಿರುವುದು

14) ಯಾವ ಸಂದರ್ಭದಲ್ಲಿ ಒಬ್ಬ ರೈತ ತನ್ನ ಕೃಷಿ ಭೂಮಿಯ ಮಣ್ಣಿಗೆ ಸುಟ್ಟ ಸುಣ್ಣ ( ಕ್ಯಾಲ್ಸಿಯಂ ಆಕ್ಸೈಡ್ )‌ ಅಥವಾ ಅರಳಿದ ಸುಣ್ಣ ( ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌ ) ಅಥವಾ ಸೀಮೆಸುಣ್ಣ ( ಕ್ಯಾಲ್ಸಿಯಂ ಕಾರ್ಬೋನೇಟ್)‌ ಅನ್ನು ಬೆರೆಸುತ್ತಾನೆ?

ರೈತನ ಕೃಷಿ ಭೂಮಿಯ ಮಣ್ಣು ಆತ್ಮೀಯ ಆಗಿದ್ದರೆ ಆಗ ಅದನ್ನು ಪ್ರತ್ಯಾಮ್ಲೀಕರಿಸಲು ಅದಕ್ಕೆ ಸುಟ್ಟ ಸುಣ್ಣ , ಅರಳಿದ ಸುಣ್ಣ ಅಥವಾ ಸೀಮೆಸುಣ್ಣಯನ್ನು ಬೆರೆಸುತ್ತಾರೆ .

15) CaOCl2 ಸಂಯುಕ್ತದ ಸಾಮಾನ್ಯ ಹೆಸರು ಏನು?

CaOCl2 ಸಂಯುಕ್ತದ ಸಾಮಾನ್ಯ ಹೆಸರು ಬ್ಲೀಚಿಂಗ್ ಪೌಡರ್ ಆಗಿದೆ.

16) ಕ್ಲೋರಿನ್ನೊಂದಿಗೆ ವರ್ತಿಸಿದಾಗ ಚಲುವೆ ಪುಡಿಯನ್ನು ಉಂಟು ಮಾಡುವ ವಸ್ತುವನ್ನು ಹೆಸರಿಸಿ.

ಕ್ಲೋರಿನ್ ನೊಂದಿಗೆ ವರ್ತಿಸಿದಾಗ ಚಲುವೆ ಪುಡಿಯನ್ನು ಉಂಟು ಮಾಡುವ ವಸ್ತು ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ( Ca (OH)2 ) ಆಗಿದೆ.

17) ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.

ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತ ವಾಷಿಂಗ್ ಸೋಡಾ ( Na2 CO3 .10H2O ) .

18) ಸೋಡಿಯಂ ಹೈಡ್ರೋಜನ್ಕಾರ್ಬೋನೆಟ್ದ್ರಾವಣವನ್ನು ಕಾಸಿದರೆ ಏನಾಗುವುದು? ಕ್ರಿಯೆಯ ಸಮೀಕರಣವನ್ನು ಬರೆಯಿರಿ

ಸೋಡಿಯಂ ಹೈಡೋಜನ್ ಕಾರ್ಬೋನೇಟ್ ಅನ್ನು ಕಾಯಿಸಿದಾಗ ಸೋಡಿಯಂ ಕಾರ್ಬೋನೇಟ್ ಮತ್ತು ನೀರನ್ನು ಉಂಟು ಮಾಡಿ ಇಂಗಾಲದ ಡೈ ಆಕ್ಸೆಡ್ ನ್ನು ಬಿಡುಗಡೆ ಮಾಡುತ್ತದೆ .

2NaHCO3 → Na2CO3 + H2O + CO2

19) ಪ್ಲಾಸ್ಟರ್ಆಫ್ಪ್ಯಾರಿಸ್ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣವನ್ನು ಬರೆಯಿರಿ.

19.CaSO4.1/2 H₂O + 1 1 / 2H₂O →CaSO4.2H₂O ( ಜಿಪ್ಸಂ)

science class 10 ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

ಅಭ್ಯಾಸದಲ್ಲಿನ ಪ್ರಶ್ನೆಗಳು

1) ಒಂದು ದ್ರಾವಣ ಕೆಂಪು ಲಿಟ್ಮಸ್ನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ PH ಮೌಲ್ಯ ಏನು?

d) 10

2) ಒಂದು ದ್ರಾವಣ ಪುಡಿ ಮಾಡಿದ ಮೊಟ್ಟಯ ಚಿಪ್ಪುಗಳೊಂದಿಗೆ ವರ್ತಿಸಿ ಬಿಡುಗಡೆಯನ್ನು ಮಾಡುವ ಅನಿಲ ಸುಣ್ಣದ ತಿಳಿನೀರನ್ನು ಬಿಳಿಯಾಗಿಸುತ್ತದೆ. ದ್ರಾವಣವು ಇದನ್ನು ಒಳಗೊಂಡಿದೆ.

b) HCl

3) 10mL NaOH ದ್ರಾವಣವು 8mL HCl ದ್ರಾವಣದಿಂದ ಸಂಪೂರ್ಣವಾಗಿ ತಟಸ್ಥೀಕರಣಗೊಳುತ್ತದೆ. ನಾವು ಇದೇ NaOH ದ್ರಾವಣವನ್ನು 20mL ನಷ್ಟು ತೆಗೆದುಕೊಂಡರೆ, ಇದನ್ನು ತಟಸ್ಥಗೊಳಿಸಲು ಬೇಕಾದ HCl ದ್ರಾವಣದ ಪ್ರಮಾಣ ಏನು?

d ) 16ml

4) ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧವನ್ನು ಅಜೀರ್ಣದ ಚಿಕಿತ್ಸೆಗೆ ಬಳಸಲಾಗುತ್ತದೆ?

c ) ಆಮ್ಲಶಾಮಕ

5) ಕೆಳಗಿನ ಸಂದರ್ಭಗಳಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಗಳ ಪದ ಸಮೀಕರಣ ಮತ್ತು ನಂತರ ಸರಿದೂಗಿಸಿದ ಸಮೀಕರಣವನ್ನು ಬರೆಯಿರಿ

a ) ಸಾರರಿಕ್ತ ಸಲ್ಪ್ಯೂರಿಕ್ ಆಮ್ಲ ಸತುವಿನ ಚೂರಿನ ಜೊತೆ ವರ್ತಿಸಿದಾಗ

H2SO4+Zn → ZnSO4+H2

6) ಆಲ್ಕೋಹಾಲ್ಮತ್ತು ಗ್ಲೂಕೋಸ್ ನಂತಹ ಸಂಯುಕ್ತಗಳೂ ಸಹ ಹೈಡ್ರೋಜನ್ಹೊಂದಿವೆಯಾದರೂ ಅವುಗಳನ್ನು ಆಮ್ಲಗಳು ಎಂದು ವರ್ಗೀಕರಿಸಲಾಗಿಲ್ಲ. ಇದನ್ನು ಸಾಧಿಸುವ ಸಲುವಾಗಿ ಒಂದು ಚಟುವಟಿಕೆಯನ್ನು ವಿವರಿಸಿ

ರಬ್ಬರ್ ಕಾರ್ಕ್ಗಳ ಮೇಲೆ ಎರಡು ಮೊಳೆಗಳನ್ನು ಜೋಡಿಸಬೇಕು.ಮತ್ತು ಅದನ್ನು 100 ml ಬೀಕರಿನಲ್ಲಿಯಿಡಬೇಕು.ಮೊಳೆಗಳನ್ನು 6V ಬ್ಯಾಟರಿಯ ಎರಡು ದ್ರುವಗಳಿಗೆ ಸ್ವಿಚ್ ಮತ್ತು ಬಲ್ಟ್ ಮೂಲಕ ಸಂಪರ್ಕಿಸಬೇಕು. ಈಗ ಬೀಕರಿಗೆ ಸ್ವಲ್ಪ ಸಾರರಿಕ್ತ HCI ಅನ್ನು ಸುರಿಯಬೇಕು. ಮತ್ತು ವಿದ್ಯುತ್ ಹಾಯಿಸಬೇಕು . ಗ್ಲೋಕೋಸ್ ಮತ್ತು ಆಲ್ನೋಹಾಲ್ ದ್ರಾವಣದ ಜೊತೆ ಪ್ರತ್ಯೇಕವಾಗಿ ಈ ಚಟುವಟಿಕೆಯನ್ನು ಪುನರಾವರ್ತಿಸಬೇಕು. ಬೀಕರಿನಲ್ಲಿ ಆಮ್ಲ ಇದ್ದಾಗ ಬಲ್ಪ ಬೆಳಗುತ್ತದೆ ಆದರೆ ಗ್ಲುಕೋಸ್ ಮತ್ತು ಆಲ್ನೋಹಾಲ್ ಯಿದ್ದಾಗ ಬೆಳಗುವುದಿಲ್ಲ . ಬಲ್ಪನ ಉರಿಯುವಿಕೆಯು ದ್ರಾವಣದ ಮೂಲಕ ವಿದ್ಯುತ್ ಪ್ರವಾಹ ಹರಿಯುವುದನ್ನು ಸೂಚಿಸುತ್ತದೆ . ದ್ರಾವಣದಲ್ಲಿ ವಿದ್ಯುತ್ವವಾಹವು ಅಯಾನುಗಳ ಮೂಲಕ ಸಾಗುತ್ತದೆ . ಗೂಕೋಸ್ , ದ್ರಾವಣದಲ್ಲಿ ಅಯಾನುಗಳನ್ನು ಉತ್ಪತ್ತಿ ಮಾಡದಿರುವ ಕಾರಣ ವಿದ್ಯುತ್ ಹರಿಯುವುದಿಲ್ಲ .

10th class science chapter 2 , science class 10 , class10th science notes, 10 class chemistry

7) ಮಳೆನೀರು ವಿದ್ಯುತ್ಪ್ರವಾಹವನ್ನು ಪ್ರವಹಿಸಲು ಬಿಡುತ್ತದೆ. ಆದರೆ ಅಸವಿತ ನೀರು ಬಿಡುವುದಿಲ್ಲ ಏಕೆ?

ಅಸವಿತ ನೀರು ಅತ್ಯಂತ ಶುದ್ಧ ನೀರಾಗಿರುವ ಕಾರಣ ಮತ್ತು ಅದರಲ್ಲಿ ಯಾವುದೇ ಅಯಾನುಗಳು ಇಲ್ಲದಿರುವ ಕಾರಣ ಅದು ವಿದ್ಯುತ್ ಹರಿಯಲು ಬಿಡುವುದಿಲ್ಲ . ಆದರೆ ಮಳೆ ನೀರು ಅಶುದ್ಧವಾಗಿರುತ್ತದೆ. ಮತ್ತು ಸಾಕಷ್ಟು ಅಯಾನುಗಳನ್ನು ಹೊಂದಿರುತ್ತದೆ. ಹಾಗಾಗಿ ಅದು ವಿದ್ಯುತ್ ಅನ್ನು ಹರಿಯಲು ಬಿಡುತ್ತದೆ .

8) ಆಮ್ಲಗಳು ನೀರಿನ ಅನುಪಸ್ಥಿತಿಯಲ್ಲಿ ಆಮ್ಲೀಯ ಸ್ವಭಾವವನ್ನು ತೋರಿಸುವುದಿಲ್ಲ ಏಕೆ?

ಏಕೆಂದರೆ ಆಮ್ಲಗಳು ಹೈಡೋಜನ್ ಅಯಾನುಗಳಾಗಿ ವಿಲೀನಗೊಳ್ಳುತ್ತದೆ ನೀರಿನಲ್ಲಿ ಮಾತ್ರ ಆತ್ಮೀಯ ಸ್ವಭಾವಕ್ಕೆ ಹೈಡ್ರೋಜನ್ ಅಯಾನುಗಳ ಅಗತ್ಯತೆ ಇದೆ . ‌

9) A.B.C.D ಮತ್ತು E ಐದು ದ್ರಾವಣಗಳನ್ನು ಸಾರ್ವತ್ರಿಕ ಸೂಚಕದಿಂದ ಪರೀಕ್ಷಿಸಿದಾಗ ಅನುಕ್ರಮವಾಗಿ 4, 11, 7, ಮತ್ತು 9 pH ತೋರಿಸಿದೆ. ಯಾವ ದ್ರಾವಣವು ಹೈಡೋಜನ್ ಅಯಾನುಗಳ ಸಾರತೆಯ ಏರಿಕೆ ಕ್ರಮದಲ್ಲಿ pH ಮೌಲ್ಯಗಳನ್ನು ಕ್ರಮಗೊಳಿಸಿ.

a ) ತಟಸ್ತ  – D pH – 7

b ) ಪ್ರಬಲ ಪ್ರತ್ಯಾಮ್ಲೀಯ – C pH – 11

c ) ಪ್ರಬಲ ಆಮ್ಲೀಯ – B pH – 1

d ) ದುರ್ಬಲವಾದ ಆಮ್ಲೀಯ – A pH – 4

e ) ದುರ್ಬಲವಾದ ಪ್ರತ್ಯಾಮ್ಲೀಯ – E pH – 9

11 < 9 < 7 < 4 < 1

10) ಪ್ರನಾಳ A ಮತ್ತು B ಗಳಲ್ಲಿ ಸಮಾನ ಉದ್ದದ ಮೆಗ್ನೀಷಿಯಂ ಪಟ್ಟಿಯನ್ನು ತೆಗೆದುಕೊಳ್ಳಲಾಗಿದೆ.ಪ್ರನಾಳ A ಗೆ ಹೈಡ್ರೋಕ್ಲೋರಿಕ್ಆಮ್ಲ ( HCl) ಅನ್ನು ಸೇರಿಸಲಾಗಿದೆ. ಪ್ರನಾಳ B ಗೆ ಅಸಿಟಿಕ್ಆಮ್ಲ (CH3COOH)ವನ್ನು ಸೇರಿಸಲಾಗಿದೆ. ತೆಗೆದುಕೊಂಡ ಎರಡೂ ಆಮ್ಲಗಳ ಪ್ರಮಾಣ ಮತ್ತು ಸಾರತೆಯು ಒಂದೇ ಆಗಿದೆ. ಯಾವ ಪ್ರನಾಳದಲ್ಲಿ ಹೆಚ್ಚು ತೀವ್ರವಾಗಿ ಅನಿಲದ ಗುಳ್ಳೆಗಳು ಉತ್ಪತ್ತಿಯಾಗುತ್ತವೆ ಮತ್ತು ಏಕೆ?

ಪ್ರನಾಳ A ದಲ್ಲಿ ಹೆಚ್ಚು ತೀವ್ರವಾಗಿ ಅನಿಲದ ಗುಳ್ಳೆಗಳು ಉಂಟಾಗುತ್ತದೆ ದೆ ಏಕೆಂದರೆ ಹೈಡೋಕ್ಲೋರಿಕ್ ಆಮ್ಲವು ಅಸಿಟಿಕ್ ಆಮ್ಲಕ್ಕಿಂತ ಹೆಚ್ಚು ಪ್ರಬಲವಾಗಿದೆ ಮತ್ತು ವೇಗವಾಗಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ.

11) ತಾಜಾ ಹಾಲಿನ pH 6. ಅದು ಮೊಸರಾದಂತೆ ಅದರ pH ಹೇಗೆ ಬದಲಾಗುತ್ತದೆ ಎಂದು ನೀವು ಭಾವಿಸುತ್ತೀರಿನಿಮ್ಮ ಉತ್ತರಕ್ಕೆ ವಿವರಣೆಯನ್ನು ನೀಡಿ

ಹಾಲು ಮೊಸರಾದಂತೆ ಅದರ pH ಕಡಿಮೆಯಾಗುತ್ತದೆ ಯಾಕೆಂದರೆ ಮೊಸರು ಹುಳಿಯಾಗುತ್ತದೆ ಮತ್ತು ಅದರಲ್ಲಿಯಿರುವ ಆಮ್ಲವು pH ಕಡಿಮೆಯಾಗುವಂತೆ ಮಾಡುತ್ತದೆ .

12) ಒಬ್ಬ ಹಾಲು ಮಾರುವವನು ತಾಜಾ ಹಾಲಿಗೆ ಅತ್ಯಲ್ಪ ಪ್ರಮಾಣದ ಅಡುಗೆ ಸೋಡಾವನ್ನು ಸೇರಿಸುತ್ತಾನೆ.

a) ಅವನು ತಾಜಾ ಹಾಲಿನ pH ಅನ್ನು 6 ರಿಂದ ಸ್ವಲ್ಪ ಕ್ಷಾರೀಯತೆಯ ಕಡೆಗೆ ಏಕೆ ಬದಲಾಯಿಸುತ್ತಾನೆ?

b) ಹಾಲು ಮೊಸರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಏಕೆ?

a ) ಏಕೆಂದರೆ ಕ್ಷಾರೀಯ ಹಾಲು ಬೇಗನೆ ಕೆಟ್ಟು ಹೋಗುವುದಿಲ್ಲ . (ಹುಳಿಯಾಗುವುದಿಲ್ಲ ) .

b ) ಯಾಕೆಂದರೆ ಉತ್ಪತ್ತಿಯಾಗುವ ಆಮ್ಲವು ಕ್ಷಾರದೊಂದಿಗೆ ತಟಸ್ತೀಕರಣಗೊಂಡು ಮೊಸರಾಗಲು ಸಮಯವನ್ನು ತೆಗೆದುಕೊಳ್ಳತ್ತದೆ .

13) ಪ್ಲಾಸ್ಟರ್ಆಫ್ಪ್ಯಾರಿಸ್ನ್ನು ತೇವಾಂಶ ನಿರೋಧಕ ಸಂಗ್ರಾಹಕದಲ್ಲಿ ಸಂಗ್ರಹಿಸಿಡಬೇಕು ಏಕೆ? ವಿವರಿಸಿ.

ಏಕೆಂದರೆ ಅದು ವಾತಾವರಣದಲ್ಲಿಯಿರುವ ತೇವಾಂಶವನ್ನು ಹೀರಿಕೊಂಡು ಘನ ಜಿಪ್ಸಂ ಲವಣವಾಗಿ ಪರಿವರ್ತನೆಯಾಗುತ್ತದೆ .

CaSO4. 1/2 H₂O + 11/₂ H₂O → CaSO4.2H₂O

14) ತಟಸ್ಥೀಕರಣ ಕ್ರಿಯೆ ಎಂದರೇನು? ಎರಡು ಉದಾಹರಣೆಯನ್ನು ಕೊಡಿ.

ಆಮ್ಮ ಮತ್ತು ಪ್ರತ್ಯಾಮ್ಲಗಳು ಪರಸ್ಪರ ವರ್ತಿಸಿ ನೀರು ಮತ್ತು ಲವಣವನ್ನು ಉಂಟು ಮಾಡುವ ರಾಸಾಯನಿಕ ಕ್ರಿಯೆಗೆ ತಟಸೀಕರಣ ಕ್ರಿಯೆ ಎನ್ನುವರು. ಈ ಕ್ರಿಯೆಯಲ್ಲಿ ಉಷ್ಣದ ರೂಪದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ .

NaOH + HCl → NaCl+H2O

( ಆಮ್ಲ) ( ಪ್ರತ್ಯಮ್ಲ) ( ಲವಣ ) ( ನೀರು )

Mg ( OH ) ₂ + 2HCl → MgCl₂ + 2H₂O

15) ವಾಷಿಂಗ್ಸೋಡಾ ಮತ್ತು ಅಡುಗೆ ಸೋಡಾಗಳ ಎರಡು ಪ್ರಮುಖ ಉಪಯೋಗವನ್ನು ಬರೆಯಿರಿ.

a ) ವಾಷಿಂಗ್‌ ಸೊಡಾ :

i ) ಗಾಜು , ಸಾಬೂನು ಮತ್ತು ಕಾಗದ ಕಾರ್ಖಾನೆಗಳಲ್ಲಿ ಉಪಯೋಗಿಸುವರು .

ii ) ನೀರಿನ ಗಡಸುತನ ನಿವಾರಣೆ ಮಾಡಲು ಉಪಯೋಗಿಸುತ್ತಾರೆ .

b ) ಅಡುಗೆ ಸೊಡಾ :

i ) ಬೇಕಿಂಗ್ ಪುಡಿಯ ತಯಾರಿಕೆಯಲ್ಲಿ ಬಳಸುತ್ತಾರೆ .

ii ) ಬೆಂಕಿ ಆರಿಸುವ ಸೋಡಾ – ಆಸಿಡ್ ಉಪಕರಣಗಳಲ್ಲಿ ಉಪಯೊಗಿಸುತ್ತಾರೆ.

science class 10 , class10th science notes, 10 class chemistry

Mahabub khan is a wellknown Full stackweb developer,SEO Specialist,Content writer specialist and alsoa Youtuber,Blogger,subject matter expert of Science,and Mathematics.he is also Digital Marketing Expert. Sheheen Begum is also Famous Full stackweb developer,SEO Specialist, Digital Marketing Expert,Blogger,Youtuber,Online Content writer have written more than 5000+ articles .

Post Comment

You May Have Missed