class 8 ncert solutions ಸೂಕ್ಷ್ಮ ಜೀವಿಗಳ ಮಿತ್ರ ಮತ್ತು ಶತ್ರು

8ನೇ ತರಗತಿ, ncert, ncert soultions, science, class 8, science solutions, class 8 ncert solutions,
1. ಬಿಟ್ಟ ಸ್ಥಳವನ್ನು ತುಂಬಿರಿ. class 8 ncert solutions,
1. ಸೂಕ್ಷ್ಮಜೀವಿಗಳನ್ನು ಸೂಕ್ಷ್ಮದರ್ಶಕದ ನೆರವಿನಿಂದ ಕಾಣಬಹುದು
2. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ನೀಲಿ ಹಸಿರು ಶೈವಲಗಳು ಗಾಳಿಯಿಂದ ನೇರವಾಗಿ ನೈಟ್ರೋಜನ್ ಅನ್ನು ಸ್ಥಿರೀಕರಿಸುತ್ತವೆ.
3. ಆಲ್ಕೋಹಾಲ್ ಅನ್ನು ಯೀಸ್ಟ್ ಸಹಾಯದಿಂದ ಉತ್ಪಾದಿಸಲಾಗುವುದು.
4. ಕಾಲರಾ ರೋಗವು ಬ್ಯಾಕ್ಟಿರಿಯಾ ಗಳಿಂದ ಉಂಟಾಗುತ್ತದೆ,
2. ಸರಿಯಾದ ಉತ್ತರಗಳನ್ನು ಬರೆಯಿರಿ
(1) ಇದರ ಉತ್ಪಾದನೆಯಲ್ಲಿ ಯೀಸ್ಟ್ ಅನ್ನು ಬಳಸಲಾಗುವುದು.
ಉತ್ತರ: (ಅಲ್ಕೊಹಾಲ್)
(2) ಈ ಕೆಳಗಿನವು ಪ್ರತಿಜೈವಿಕಗಳಾಗಿವೆ
ಉತ್ತರ: ಸ್ಟ್ರೆಪ್ಟೋಮೈಸಿನ್
(2) ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೋಟೋಜೋವಾಗಳ ವಾಹಕ ಯಾವುದು
ಉತ್ತರ : ಅನಾಫಿಲೀಸ್ ಹೆಣ್ಣು ಸೊಳ್ಳೆ
(3) ಸಂಪರ್ಕದಿಂದ ಹರಡುವ ರೋಗಗಳ ಅತ್ಯಂತ ಸಾಮಾನ್ಯ ವಾಹಕ ಯಾವುದು
ಉತ್ತರ : ನೊಣ
(4) ಬ್ರೆಡ್ ಅಥವಾ ಇಡ್ಲಿಹಿಟ್ಟು ಉಬ್ಬುವುದು ಈ ಕಾರಣದಿಂದ
ಉತ್ತರ : ಯೀಸ್ಟ್ ಕೋಶಗಳ ಬೆಳವಣಿಗೆ
(5) ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ.
ಉತ್ತರ : ಹುದುಗುವಿಕೆ
03) A ಪಟ್ಟಿಯಲ್ಲಿ ನೀಡಿರುವ ಸೂಕ್ಷ್ಮಜೀವಿಗಳನ್ನು B ಪಟ್ಟಿಯಲ್ಲಿ ಕೊಟ್ಟಿರುವ ಅವುಗಳ ಕಾರ್ಯಕ್ಕೆ ಅನುಗುಣವಾಗಿ ಹೊಂದಿಸಿರಿ.
A B
- ಬ್ಯಾಕ್ಟಿರಿಯಾ ಕಾಲರಾಗೆ ಕಾರಣ
- ರೈಜೋಬಿಯಂ ನೈಟ್ರೋಜನ್ ಸ್ಥಿರೀಕರಿಸುವುದು
- ಲ್ಯಾಕ್ಟೋಬ್ಯಾಸಿಲಸ್ ಮೊಸರು ತಯಾರಿಸುವುದು
- ಯೀಸ್ಟ್ ಬ್ರೆಡ್ ತಯಾರಿಸುವುದು
- ಪ್ರೋಟೋಜೋವಾ ಮಲೇರಿಯಾಗೆ ಕಾರಣ
6. ವೈರಸ್ ಏಡ್ಸಗೆ ಕಾರಣ
04) ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವೇ? ಇಲ್ಲದಿದ್ದರೆ ಅವುಗಳನ್ನು ಹೇಗೆ ನೋಡಬಹುದು?
ಉತ್ತರ: ಇಲ್ಲ, ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡವುದಕ್ಕೆ ಸಾಧ್ಯವಿಲ್ಲ. ಅವುಗಳನ್ನು ಕೇವಲ ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಲು ಸಾಧ್ಯ.
05) ಸೂಕ್ಷ್ಮಜೀವಿಯ ಪ್ರಮುಖ ಗುಂಪುಗಳು ಯಾವುವು?
ಉತ್ತರ: ಸೂಕ್ಷ್ಮಜೀವಿಗಳಿಗೆ ನಾಲ್ಕು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಲಾಗಿದೆ.
- ಬ್ಯಾಕ್ಟಿರಿಯಾಗಳು
- ಶಿಲೀಂಧ್ರ
- ಪ್ರೋಟೋಜೋವಾ
- ಶೈವಲಗಳು
06) ಮಣ್ಣಿನಲ್ಲಿ ವಾತಾವರಣದಲ್ಲಿರುವ ನೈಟ್ರೋಜನ್ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳನ್ನು ಹೆಸರಿಸಿ
ಉತ್ತರ: ರೈಜೋಬಿಯಮ್ ಮತ್ತು ಕೆಲವು ನೀಲಿ ಹಸಿರು ಶೈವಲಗಳು ಮಣ್ಣಿನಲ್ಲಿ ವಾತಾವರಣದಲ್ಲಿರುವ ನೈಟ್ರೋಜನ್ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳಾಗಿವೆ.
17) ನಮ್ಮ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯುಕ್ತತೆ ಕುರಿತು 10 ಸಾಲುಗಳನ್ನು ಬರೆಯಿರಿ,
ಉತ್ತರ: ದೊಡ್ಡ ಪ್ರಮಾಣದಲ್ಲಿ ಮದ್ಯ, ವೈನ್ ಮತ್ತು ಆಸಿಟಿಕ್ ಅನ್ನು ಉತ್ಪಾದನೆಗಾಗಿ ಸೂಕ್ಷ್ಮಜೀವಿಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ. ಯೀಸ್ಟ್‌ಗಳನ್ನು ಮದ್ಯ ಮತ್ತು ವೈನ್ಸನ ವಾಣಿಜ್ಯ ಉತ್ಪಾದನೆಗಳಲ್ಲಿ ಬಳಸಲಾಗುತ್ತದೆ. ಹಾಗು ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟಿರಿಯಾವು ಮೊಸರು ಉಂಟಾಗುವುದನ್ನು ಉತ್ತೇಜಿಸುತ್ತದೆ, ಸೂಕ್ಷ್ಮಜೀವಿಗಳು ಸತ್ತ್ವ ಸಸ್ಯಗಳು ಮತ್ತು ಪ್ರಾಣಿಗಳ ಪಾದಯದ ತ್ಯಾಜ್ಯವನ್ನು ಸರಳ ಪದಾರ್ಥಗಳಾಗಿ ಪರಿವರ್ತನೆ ಮಾಡುತ್ತದೆ.. ರೈಜೋಬಿಯನ್ ನಂತಹ ಕೆಲವು ಬ್ಯಾಕ್ಟಿರಿಯಾಗಳು ಮತ್ತು ಕೆಲವು ನೀಲಿ ಹಸಿರು ಶೈವಲಗಳು ದುಗ್ಗಣ್ಣನ್ನು ಉತ್ಕೃಷ್ಟಗೊಳಿಸಲು ಮತ್ತು ಅವುಗಳ ಫಲವತ್ತತೆಗಳನ್ನು ಹೆಚ್ಚಿಸಲು ವಾತಾವರಣದಿಂದ ನೈಟ್ರೋಜನ್ ಅನ್ನು ಸ್ಥಿರಗೊಳಿಸುತ್ತವೆ. ಸೂಕ್ಷ್ಮಜೀವಿಗಳು ಔಷಧಗಳ ತಯಾರಿಕೆ ಗಳಲ್ಲಿಯೂ ಸಹ ಪ್ರಮುಖ ಪಾತ್ರ ವಹಿಸಿದೆ. ಕೆಲವು ಪ್ರತಿಜೈವಿಕಗಳಾದ ಹೋಮೈಸಿನ್, ಟೆಟ್ರಾಸೈಕ್ಲಿನ್ ಮತ್ತು ಎರಿಥೋಮೈಸಿನ್ ಗಳನ್ನು ತಿಲೀಂಧ್ರ ಮತ್ತು ಬ್ಯಾಕ್ಟಿರಿಯಾಗಳಿಂದ ತಯಾರಿಸಲಾಗುವುದು. ಕೆಲವು ಸೂಕ್ಷ್ಮಜೀವಿಗಳನ್ನು, 1000, ಮತ್ತು ಕೈಗಾರಿಕಾ ತ್ಯಾಜ್ಯಗಳ ಜೈವಿಕ ಸಂಸ್ಕರಣೆಗಳಲ್ಲಿ ಬಳಸಲಾಗುತ್ತದೆ.
8ನೇ ತರಗತಿ, ncert, ncert soultions, science, class 8, science solutions, class 8 ncert solutions,
18) ಸೂಕ್ಷ್ಮಜೀವಿಗಳಿಂದ ಉಂಟಾಗುವ ಹಾನಿಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
ಉತ್ತರ: ಹಲವಾರು ಸೂಕ್ಷ್ಮಜೀವಿಗಳು ಮಾನವರಲ್ಲಿ ಮತ್ತು ಸಸ್ಯಗಳಲ್ಲಿ ರೋಗಗಳನ್ನು ಉತ್ಪತ್ತಿ ಮಾಡುವುದಲ್ಲದೇ ಇತರ ಪ್ರಾಣಿಗಳಲ್ಲೂ ರೋಗಗಳನ್ನು ಉಂಟುಮಾಡುತ್ತದೆ, ಉದಾಹರಣೆಗೆ, ಆಂಫ್ರಾಕ್ ಇದೂಂದು ಬ್ಯಾಕ್ಟಿರಿಯಾದಿಂದ ಉಂಟಾಗದೆ ಮಾನವ ಮತ್ತು ಜಾನುವಾರುಗಳಿಗೆ ತಗುಲುವ ಭಯಾನಕ ರೋಗವಾಗಿದ್ದು, ಜಾನುವಾರುಗಳಿಗೆ ತಗುಲುವ ಕಾಲು ಮತ್ತು ಬಾಯಿ ರೋಗವು ಒಂದು ವೈರಸ್ ನಿಂದ ಉಂಟಾಗುತ್ತದೆ, ಹಲವಾರು ಸೂಕ್ಷ್ಮ ಜೀವಿಗಳು ಗೋಧಿ, ಭತ್ತ, ಆಲೂಗಡ್ಡೆ, ಕಬ್ಬು, ಕಿತ್ತಳೆ, ಸೇಬು ಮುಂತಾದ ಸಸ್ಯಗಳಲ್ಲಿ ರೋಗಗಳನ್ನು ಉಂಟುಮಾಡುತ್ತದೆ, ರೋಗಗಳು ಬೆಳಗಳ ಇಳುವರಿಯನ್ನು ಕುಂಠಿತಗೊಳಿಸುತ್ತದೆ. ಕೆಲವು ಸೂಕ್ಷ್ಮಜೀವಿಗಳಿಂದಾಗಿ ಹಾಳಾದ ಆಹಾರದ ಸೇವನೆಯಿಂದ ‘ಆಹಾರ ವಿಷದಯ’ ಎಂಬ ಪರಿಸ್ಥಿತಿ ಉತ್ಪತ್ತಿಗುತ್ತದೆ. ಆಹಾರದ ಮೇಲೆ ಬೆಳೆಯುವ ಸೂಕ್ಷ್ಮಜೀವಿಗಳು ಕೆಲವೊಮ್ಮೆ ವಿಷಕಾರಿ: ಪದಾರ್ಥಗಳನ್ನು ಉತ್ಪಾದಿಸುತ್ತವೆ. ಇವುಗಳು ಆಹಾರವನ್ನು ವಿಷಯುಕ್ತವಾಗಿ ಮಾಡುವುದರ ಜೊತೆಗೆ ಗಂಭೀರವಾದ ಕಾಯಿಲೆಯನ್ನು ಹಾಗೂ ಸಾವನ್ನು ಕೂಡಾ ಉಂಟುಮಾಡುತ್ತವೆ.
19) ಪ್ರತಿಜೈವಿಕಗಳು ಎಂದರೇನು? ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು?
ಉತ್ತರ: ಕೆಲವು ರೋಗಕಾರಕ ಸೂಕ್ಷ್ಮಬೇವಿಗಳನ್ನು ಕೊಲ್ಲುವುದಕ್ಕೆ ಮತ್ತು ಅವುಗಳ ಬೆಳವಣಿಗೆಯನ್ನು ನಿಲ್ಲಿಸಲು, ಕೆಲವು ಸೂಕ್ಷ್ಮಜೀವಿಗಳಿಂದಲೇ ತಯಾರಾದ ಔಷಧಿಗಳನ್ನು ಪ್ರತಿಜೈವಿಕಗಳೆಂದು ಕರೆಯುವುದು.
ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮ:
- ಪ್ರತಿಜೈವಿಕಯನ್ನು ಕೇವಲ ಮಾನ್ಯತೆ ಪಡೆದ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ತೆಗೆದುಕೊಳ್ಳಬೇಕು.
- ಪ್ರತಿಜೈವಿಕಗಳನ್ನು ತೆಗೆದುಕೊಳ್ಳಲು ವೈದ್ಯರು ತಿಳಿಸಿರುವ ಪ್ರಮಾಣ ಮತ್ತು ಅವಧಿಯನ್ನು ಪೂರ್ಣಗೊಳಿಸಬೇಕು
- ಪ್ರತಿಜೈವಿಕಗಳನ್ನು ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟಾಗಬಹುದು, ಜೀವಹಾನಿಯೂ ಆಗಬಹುದು,
ಹೆಚ್ಚುವರಿ ಪ್ರಶ್ನೆಗಳು ಈ ಕಳನಂತಿವೆ: class 8 ncert solutions,
1. ಭೇದಿ ಮತ್ತು ಮಲೇರಿಯಾಗಳಂತಹ ಗಂಭೀರ ರೋಗಗಳನ್ನು ಪ್ರೋಟೋಜೋವಾ ಗಳು ಉತ್ಪತ್ತಿ ಮಾಡುತ್ತದೆ.
2. ಟೈಫಾಯ್ಡ್ ಮತ್ತು ಕ್ಷಯ (ಟಿಬಿ) ರೋಗವು ಬ್ಯಾಕ್ಟಿರಿಯಾಗಳಿಂದ ಉಂಟಾಗುತ್ತದೆ.
3. ಪೋಲಿಯೋ ಹಾಗು ಸೀತಾಳೆ ಸಿಡುಬು ಮುಂತಾದ ಗಂಭೀರ ರೋಗಗಳು ವೈರಸ್ ಗಳಿಂದ ಉಂಟಾಗುತ್ತದೆ.
4. ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟಿರಿಯಾ ಮೊಸರು ಉತ್ಪತ್ತಿಯಾಗುವುದನ್ನು ಉತ್ತೇಜಿಸುತ್ತದೆ.
5. ಆಂಥ್ರಾಕ್ಸ್ ರೋಗವನ್ನು ಉಂಟುಮಾಡುವ ಬ್ಯಾಕ್ಟಿರಿಯ: ಜೆಸಿಲಸ್ ಆಂಥ್ರಾಸಿಸ್
6. ಸಕ್ಕರೆಯು ಆಲ್ಕೋಹಾಲ್ ಆಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ಹುದುಗುವಿಕೆ ಎಂದು ಕರೆಯುತ್ತಾರೆ.
10) ವೈರಸ್ ಗಳಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳನ್ನು ಹೆಸರಿಸಿ,
ಉತ್ತರ: ಸಾಮಾನ್ಯ ಕಾಯಿಲೆಗಳಾದ ಶೀತ, ಇನ್‌ಫ್ಲುಯೆಂಜಾ ಮತ್ತು ಕೆಮ್ಮು
2. ಗೋಧಿ ಅಥವಾ ಮೈದಾ ಹಿಟ್ಟು ಮತ್ತು ಬೆಚ್ಚಗಿನ ನೀರಿನ ಮಿಶ್ರಣಕ್ಕೆ ಸ್ವಲ್ಪಪ್ರಮಾಣದಲ್ಲಿ ಯೀಸ್ಟ್ ಪುಡಿಯನ್ನು ಸೇರಿಸಿ ಚೆನ್ನಾಗಿ ನಾದಿ, ಮೃದುವಾದ ಹಿಟ್ಟನ್ನು ತಯಾರಿಸಿ, ಎರಡು ಗಂಟೆಗಳಾದ ನಂತರ ನೀವು ಏನನ್ನು ಗಮನಿಸುತ್ತೀರಿ? ನೀವು ಗಮನಿಸಿದ ಅಂಶಗಳಿಗೆ ಕಾರಣವನ್ನು ವಿವರಿಸಿ
ಉತ್ತರ: ಎರಡು ಗಂಟೆಗಳ ನಂತರ ನಾವು ನಾದಿಯಿಟ್ಟಿರುವ ಹಿಟ್ಟು ಉಬ್ಬಿರುವುದನ್ನು ಗಮನಿಸುತ್ತೇವೆ. ಇದಕ್ಕೆ ಕಾರಣ,ವೆನೆಂದರೆ ಯೀಸ್ಟ್ ವೇಗವಾಗಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಉಸಿರಾಟದ ಸಮಯದಲ್ಲಿ ಕಾರ್ಬನ್ ಡೈಆಕ್ಸಿಡ್ ಅನ್ನು ಉತ್ಪಾದಿಸುತ್ತದೆ. ಅನಿಲದ ಗುಳ್ಳೆಗಳು ಹಿಟ್ಟಿನಲ್ಲಿ ತುಂಬುತ್ತದೆ ಮತ್ತು ಅದರ ಗಾತ್ರ ಹೆಚ್ಚಿಸುತ್ತದೆ.
3. ಹುದುಗುವಿಕೆಯನ್ನು ಯಾರು ಮತ್ತು ಯಾವಾಗ ಅನ್ವೇಷಿಸಿದರು?
ಉತ್ತರ: 1857ರಲ್ಲಿ ಲೂಯಿಸ್ ಫ್ಯಾಕ್ಟರ್‌ರವರು ಹುದುಗುವಿಕೆಯನ್ನು ಅನ್ವೇಷಿಸಿದರು.
4. ಸಿಡುಬು ರೋಗಕ್ಕೆ ಲಸಿಕೆಯನ್ನು ಯಾರು ಮತ್ತು ಯಾವಾಗ ಕಂಡುಹಿಡಿಯಲಾಯಿತು.
ಉತ್ತರ: ಎಡ್ವರ್ಡ್ ಜೆನ್ನರ್ ರವರು 1798ರಲ್ಲಿ ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದರು.
5. ರೋಗಕಾರಕ ಜೀವಿಗಳು ಎಂದರೇನು? class 8 ncert solutions,
ಉತ್ತರ: ಸೂಕ್ಷ್ಮಜೀವಿಗಳು ಹಲವು ರೀತಿಯಲ್ಲಿ ಹಾನಿಕಾರಕಗಳಾಗಿವೆ. ಕೆಲವು ಸೂಕ್ಷ್ಮಜೀವಿಗಳು ಮನುಷ್ಯರಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉತ್ಪತ್ತಿಮಾಡುತ್ತವೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ರೋಗಕಾರಕ ಜೀವಿಗಳು ಎಂದು ಕರೆಯಾಲಾಗುವುದು.
06. ಸಂಪರ್ಕದಿಂದ ಹರಡುವ ರೋಗಗಳು ಎಂದರೇನು ? ಉದಾಹರಿಸಿ,
ಉತ್ತರ: ನಾವು ಉಸಿರಾಡುವ ಗಾಳಿಯ ಮೂಲಕ, ಕುಡಿಯುವ ನೀರಿನ ಮೂಲಕ ಅಥವಾ ತಿನ್ನುವ ಆಹಾರದ ಮೂಲಕ ರೋಗಕಾರಕ ಜೀವಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ ಮತ್ತು ಪ್ರಾಣಿಗಳ ಮೂಲಕವು ಸಹ ಅವು ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಗಾಳಿ, ನೀರು, ಆಹಾರ ಅಥವಾ ದೈಹಿಕ ಸಂಪರ್ಕದ ಮೂಲಕ ಹರಡುವ ಸೂಕ್ಷ್ಮಜೀವಿ ಕಾಯಿಲೆಗಳು ಸಂಪರ್ಕದಿಂದ ಹರಡುವ ರೋಗಗಳು ಎಂದು ಕರಯಲಾಗುವದು. ಉದಾಹರಣೆಗೆ: ಕಾಲರಾ, ಸಾಮಾನ್ಯಶೀತ, ಚಿಕನ್ ಪಾಕ್ಸ್ (ಸೀತಾಳೆ ಸಿಡು) ಮತ್ತು ಕ್ಷಯರೋಗ,
8ನೇ ತರಗತಿ, ncert, ncert soultions, science, class 8, science solutions, class 8 ncert solutions,
7. ಆಹಾರ ಸಂರಕ್ಷಣೆಯ ಕೆಲವು ವಿಧಾನಗಳನ್ನು ಹೆಸರಿಸಿ, ಮತ್ತು ಉದಾಹರಿಸಿ,
ಉತ್ತರ: ಆಹಾರ ಸಂರಕ್ಷಣೆಯ ಕೆಲವು ವಿಧಾನಗಳು ಈ ಕೇಳನಂತಿವೆ:
- ರಾಸಾಯನಿಕ ವಿಧಾನ: ಸೋಡಿಯಂ ಬೆಂಡೋಯೇಟ್ ಮತ್ತು ಸೋಡಿಯಂ ಮಟಾದೈಸಟ್‌ಗಳು ರೂಢಿಯಲ್ಲಿರುವ ರಾಸಾಯನಿಕ ಸಂರಕ್ಷಕಗಳಾಗಿದ್ದು. ಇವುಗಳು ಜಾವ ಮತ್ತು ಹಣ್ಣಿನ ರಸಗಳ ಹಾಳಾಗುವಿಕೆಯನ್ನು ತಡೆಗಟ್ಟಲೂ ಸಹ ಬಳಕೆಯಲ್ಲಿವೆ.
- ಅಡುಗೆ ಉಪ್ಪಿನಿಂದ ಸಂರಕ್ಷಣೆ: ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಗಟ್ಟಲು ಮಾಂಸ ಮತ್ತು ಮೀನನ್ನು ಶುಷ್ಕ ಉಪ್ಪಿನಿಂದ ಸಂಸ್ಕರಿಸಲಾಗುವುದು, ನೆಲ್ಲಿಕಾಯಿ, ಮಾವಿನಕಾಯಿ, ಹುಣಸೆಹಣ್ಣು, ಮುಂತಾದವುಗಳನ್ನು ಸಂರಕ್ಷಿಸಲೂ ಸಹ ಉಪ್ಪನ್ನು ಹಚ್ಚುವ ವಿಧಾನವು ಬಳಕೆಯಾಗುತ್ತಿದೆ.
- ಸಕ್ಕರೆಯಿಂದ ಸಂರಕ್ಷಣೆ: ಜಾಮ್, ಜೆಲ್ಲಿ, ಮತ್ತು ಹಣ್ಣಿನ ರಸಗಳು ಸಕ್ಕರೆಯಿಂದ ಸಂರಕ್ಷಿಸಲಾಗುವುದು. ತೇವಾಂಶದ ಪ್ರಮಾಣವನ್ನು ಕಡಿದು ಮಾಡುವುದರ ಮೂಲಕ ಆಹಾರವನ್ನು ಹಾಳು ಮಾಡುವ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
- ಎಣ್ಣೆ ಮತ್ತು ವಿನೇಗರ್ಗಳಿಂದ ಸಂರಕ್ಷಣೆ: ಎಣ್ಣೆ ಮತ್ತು ವಿನೆಗರ್‌ಗಳ ಬಳಕೆಯು ಉಪ್ಪಿನಕಾಯಿಯ ಕಡುವಿಕೆಯನ್ನು ತಪ್ಪಿಸುತ್ತದೆ, ಏಕೆಂದರೆ, ಆ ರೀತಿಯ ಪರಿಸರದಲ್ಲಿ ಬ್ಯಾಕ್ಟಿರಿಯಾ ಬದುಕಲಾರವು, ತರಕಾರಿಗಳು, ಹಣ್ಣುಗಳು, ಮೀನು ಮತ್ತು ಮಾಂಸಗಳನ್ನು ಸಾಮಾನ್ಯವಾಗಿ ಈ ವಿಧಾನದಿಂದ ಸಂರಕ್ಷಿಸಲಾಗುತ್ತದೆ.
- ಶಾಖ ಮತ್ತು ತಂಪು ವಿಧಾನದಿಂದ ಸಂರಕ್ಷಣೆ : ಕುದಿಸುವುದರಿಂದಾಗಿ ಹಲವು ಸೂಕ್ಷ್ಮದ ಜೀವಿಗಳು ನಾಶವಾಗುತ್ತವೆ, ಇದೇ ರೀತಿ, ನಾವು ನಮ್ಮ ಆಹಾರವನ್ನು ರೆಫ್ರಿಜರೇಟರ್ ಗಳಲ್ಲಿ ಇಡುತ್ತೇವೆ. ಕಡಿಮೆ ತಾಪವು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.
- ಸಂಗ್ರಹಣೆ ಮತ್ತು ಮೊಟ್ಟಣ ಕಟ್ಟುವಿಕೆಯಿಂದ ಸಂರಕ್ಷಣೆ: ಸೂಕ್ಷ್ಮಜೀವಿಗಳ ದಾಳಿಯನ್ನು ತಪ್ಪಿಸುವ ಸಲುವಾಗಿ, ಇತ್ತೀಚಿನ ದಿನಗಳಲ್ಲಿ ಒಣಹಣ್ಣುಗಳು ಮತ್ತು ತರಕಾರಿಗಳನ್ನೂ ಸಹ ಗಾಳಿಯಾಡದಂತೆ ಮೊಹರು ಮಾಡಿದ ಪೊಟ್ಟಣಗಳಲ್ಲಿ ಮಾರಟ ಮಾಡಲಾಗುತ್ತದೆ.
8ನೇ ತರಗತಿ, ncert, ncert soultions, science, class 8, science solutions, class 8 ncert solutions,
class – 8 ಅಧ್ಯಾಯ -1: ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
Post Comment