class 8 social : ಅಧ್ಯಾಯ 28-ಅರ್ಥಶಾಸ್ತ್ರದಮೂಲಪರಿಕಲ್ಪನೆಗಳು
ಕೆಳಗೆ scroll ಮಾಡಿ ಪಠ್ಯಪುಸ್ತಕದ ಪ್ರಶ್ನೆಗಳನ್ನು ನೀಡಲಾಗಿದೆ

ಪರಿಚಯ:
8th Class Social Studies ಅಧ್ಯಾಯ 28 “ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳು” ಎಂಬ ವಿಷಯವನ್ನು ವಿವರಿಸುತ್ತದೆ.
ಈ ಅಧ್ಯಾಯವು ಅರ್ಥಶಾಸ್ತ್ರದ ಪ್ರಾಥಮಿಕ ಪರಿಕಲ್ಪನೆಗಳನ್ನು ಹಾಗೂ ಅವುಗಳ ಬಳಕೆ, ಉತ್ಪಾದನೆ, ವಿತರಣೆಯ ಪ್ರಕ್ರಿಯೆ, ಹಣ ಮತ್ತು ವಾಣಿಜ್ಯ, ಆರ್ಥಿಕ ಚಟುವಟಿಕೆಗಳು, ಮತ್ತು ಆರ್ಥಿಕ ನೀತಿ ಮತ್ತು ನಿರ್ವಹಣೆ ಕುರಿತು ವಿವರಿಸುತ್ತದೆ. NCERT Social Studies Class 8 ಮತ್ತು KSEEB Solutions for Class 8 ಪಠ್ಯಪುಸ್ತಕಗಳಲ್ಲಿ ಈ ವಿಷಯಗಳನ್ನು ಚೆನ್ನಾಗಿ ವಿವರಿಸಲಾಗಿದೆ.
ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳು: ಅರ್ಥಶಾಸ್ತ್ರವು ಪ್ರಾಥಮಿಕವಾಗಿ ಸಮುದಾಯದ ಆರ್ಥಿಕ ಚಟುವಟಿಕೆಗಳನ್ನು ಅಧ್ಯಯನ ಮಾಡುತ್ತದೆ. ಇವು ವ್ಯಾಪಾರ, ಕೃಷಿ, ಕೈಗಾರಿಕಾ ಉತ್ಪಾದನೆ, ಸೇವೆಗಳು ಮತ್ತು ನೌಕರಿಯಂತಹ ಕ್ಷೇತ್ರಗಳನ್ನು ಒಳಗೊಂಡಿವೆ. 8th Class Social Studies ಅಧ್ಯಾಯ 28 ನಲ್ಲಿ ನಾವು ಕೆಲವೊಂದು ಪ್ರಮುಖ ಅರ್ಥಶಾಸ್ತ್ರದ ತತ್ವಗಳನ್ನು ತಿಳಿಯಬಹುದು.
Resources and Their Use (ಸಂಪನ್ಮೂಲಗಳು ಮತ್ತು ಅವುಗಳ ಬಳಕೆ):
ಸಂಪನ್ಮೂಲಗಳು, ಬಾಹ್ಯ ಮತ್ತು ಒಳಾಂಗಣವಾಗಿ, ಆರ್ಥಿಕ ಚಟುವಟಿಕೆಗೆ ಅಗತ್ಯವಾದ ಮೂಲಭೂತ ಅಂಶಗಳಾಗಿವೆ. ಇವು ಉತ್ಪಾದನೆ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಅವುಗಳನ್ನು ಸಮರ್ಥವಾಗಿ ಬಳಸಿ, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಅಗತ್ಯವಿದೆ.
- Production and Distribution (ಉತ್ಪಾದನೆ ಮತ್ತು ವಿತರಣೆಯ ಪ್ರಕ್ರಿಯೆ): ಉತ್ಪಾದನೆ ಮತ್ತು ವಿತರಣೆಯ ಪ್ರಕ್ರಿಯೆಗಳು ಉತ್ಪನ್ನಗಳು ಮತ್ತು ಸೇವೆಗಳನ್ನು ತಯಾರಿಸಲು ಮತ್ತು ಜನರಿಗೆ ತಲುಪಿಸಲು ಅಗತ್ಯವಿರುವ ಕ್ರಮಗಳಾಗಿವೆ. “Production” ಮುಖ್ಯವಾಗಿ ಆಹಾರ, ಕಚ್ಚಾ ವಸ್ತುಗಳು, ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆ. “Distribution”ವು ಅವುಗಳನ್ನು ವಿವಿಧ ವ್ಯಾಪಾರಿಗಳನ್ನು ಮೂಲಕ ಜನರಿಗೆ ತಲುಪಿಸುವ ಪ್ರಕ್ರಿಯೆಯಾಗಿದೆ.
- Money and Commerce (ಹಣ ಮತ್ತು ವಾಣಿಜ್ಯ): ಹಣವು ವಾಣಿಜ್ಯ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದೆ. ಇದು ವ್ಯವಹಾರದಲ್ಲಿ ಸುಲಭತೆಯ ಪ್ರವರ್ತನೆಗಾಗಿ ಬಳಸಲ್ಪಡುತ್ತದೆ. ಉತ್ಪನ್ನಗಳ ವಿನಿಮಯದಲ್ಲಿ, ಹಣ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಾಣಿಜ್ಯವು ಮಾರಾಟ ಮತ್ತು ಖರೀದಿ, ಸಾಗಣೆ ಹಾಗೂ ಷೇರುಗಳನ್ನು ಒಳಗೊಂಡ ಚಟುವಟಿಕೆಗಳನ್ನು ಸಿದ್ಧಪಡಿಸುತ್ತದೆ.
- Economic Activities (ಆರ್ಥಿಕ ಚಟುವಟಿಕೆಗಳು): ಆರ್ಥಿಕ ಚಟುವಟಿಕೆಗಳು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತವೆ, ಉದಾಹರಣೆಗೆ ಕೃಷಿ, ಕೈಗಾರಿಕೆ, ಸೇವೆಗಳು ಮತ್ತು ವ್ಯಾಪಾರ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಿದೆ. ಕೃಷಿ, ಕೈಗಾರಿಕೋತ್ಪಾದನೆ ಮತ್ತು ವಾಣಿಜ್ಯವೆಂದು ವಿಂಗಡಿಸಬಹುದಾದ ಈ ಚಟುವಟಿಕೆಗಳು ದೇಶದ ಬೃಹತ್ ಆರ್ಥಿಕ ಚಕ್ರವನ್ನು ರೂಪಿಸುತ್ತವೆ.
- Economic Policy and Management (ಆರ್ಥಿಕ ನೀತಿ ಮತ್ತು ನಿರ್ವಹಣೆ): ಆರ್ಥಿಕ ನೀತಿ ಮತ್ತು ನಿರ್ವಹಣೆ ದೇಶದ ಆರ್ಥಿಕ ದೃಷ್ಠಿಕೋನವನ್ನು ನಿರ್ಧರಿಸುತ್ತದೆ. ಸರಕಾರವು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ನಯವಾದ ನೀತಿಗಳನ್ನು ರೂಪಿಸುತ್ತದೆ. ಈ ನೀತಿಗಳು ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಅಸ್ತಿತ್ವವನ್ನು ಉಳಿಸಲು ನೆರವಾಗುತ್ತವೆ.
ಪಠ್ಯಪುಸ್ತಕದ ಪ್ರಶ್ನೋತ್ತರಗಳು
I ಈ ಪ್ರಶ್ನೆಗಳಿಗೆ ಉತ್ತರಿಸಿ
1. ಅರ್ಥಶಾಸ್ತ್ರದಲ್ಲಿ ಬೇಡಿಕೆ ಎಂಬುದರ ಆರ್ಥವೇನು?
ಉತ್ತರ:- ಬೇಡಿಕೆ ಬಯಕೆಯಲ್ಲಿ ಬಯಕೆಯ ಜೊತೆಗೆ ಕೊಳ್ಳುವ ಮನೋಭಾವ ಮತ್ತು ಹಣವನ್ನು ವೆಚ್ಚ ಮಾಡುವ ಶಕ್ತಿ ಇದ್ದರೆ ಮಾತ್ರ ಬೇಡಿಕೆ ಎನಿಸಿಕೊಳ್ಳುವುದು.ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ ಪ್ರಮಾಣವೇ ಬೇಡಿಕೆಯಾಗಿದೆ.
2. ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆ ಪ್ರಭಾವವೇನು?
ಉತ್ತರ:- ಉತ್ಪಾದನಾ ಕ್ಷೇತ್ರದ ಮೇಲೆ ಬೇಡಿಕೆಯ ಪ್ರಭಾವ ಅತಿ ಹೆಚ್ಚು. ಬೇಡಿಕೆ ಹೆಚ್ಚಾದಾಗ ಸಾಮಾನ್ಯವಾಗಿ ಉತ್ಪಾದನೆ, ಉದ್ಯೋಗ, ವರಮಾನ ಹಾಗೂ ಪೂರೈಕೆ ಅಧಿಕಗೊಳ್ಳುವುದು.
ಬೇಡಿಕೆ ಕಡಿಮೆಯಾದಾಗ ಸಾಮಾನ್ಯವಾಗಿ ಉತ್ಪಾದನೆ ವರಮಾನ ಹಾಗೂ ಪೂರೈಕೆ ಇಳಿಯುತ್ತದೆ. ನಿರುದ್ಯೋಗ ಹೆಚ್ಚಾಗುತ್ತದೆ.
3. ವಿತರಣೆ ಎಂದರೇನು?
ಉತ್ತರ:- ವಿತರಣೆ ಎಂದರೇ ಒಂದು ಪ್ರಮುಖ ಆರ್ಥಿಕ ಚಟುವಟಿಕೆ. ಉತ್ಪಾದನಾ ಕಾರ್ಯ ದ ಪರಿಣಾಮವಾದ ರಾಷ್ಟ್ರೀಯ ವರಮಾನವನ್ನು ಉತ್ಪಾದನಾಂಗಗಳ ನಡುವೆ ಹಂಚುವಂತ ಮಹತ್ವದ ಕಾರ್ಯವನ್ನನು ವಿತರಣೆ ಎನ್ನುವರು.
4. ವಿತರಣೆ ಸಮರ್ಪಕ ರೀತಿಯಲ್ಲಿ ಮಾಡುವ ಬಗೆ ಹೇಗೆ?
ಉತ್ತರ:- ಆಯ ಉತ್ಪಾದನಾಂಗದ ಪಾತ್ರದ ಪ್ರಮಾಣ ಅನುಸಾರವಾಗಿ ವಿತರಣೆ ಮಾಡಬೇಕು. ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಕಾಪಾಡಿಕೊಂಡು ಬರುವಂತಿರಬೇಕು. ಉತ್ಪಾದನಾ ಕಾರ್ಯಕ್ಕೆ ಅಡ್ಡಿ-ಆತಂಕಗಳು ಉಂಟಾಗದಂತೆ ಇರಬೇಕು. ಯಾವ ಉತ್ಪಾದನಾ ಅಂಗಕ್ಕೂ ಪ್ರಾಶಸ್ಯವೂ ಇರಬಾರದು. ನಿರ್ಲಕ್ಷವೂ ಇರಬಾರದು . ಇದು ಆರ್ಥಿಕ ವ್ಯವಸ್ಥೆಯ ಸಮತೋಲನದ ಬೆಳವಣಿಗೆಗೆ ಅತ್ತ್ಯಗತ್ತ್ಯ.
5. ರಾಷ್ಟ್ರೀಯ ವರಮಾನ ಮತ್ತು ತಲಾ ವರಮಾನದ ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ:- ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದ್ದು. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿದೆ.
ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುವುದು. ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುವುದು.
ತಲಾ ಆದಾಯ = ರಾಷ್ಟೀಯ ಆದಾಯ / ಒಟ್ಟು ಜನಸಂಖ್ಯೆ
6. ಶ್ರಮದ ಮಹತ್ವವೇನು?
ಉತ್ತರ :- ಶ್ರಮದ ಮಹತ್ವವೆನೆಂದರೆ
*ಶ್ರಮವು ಮುಖ್ಯವಾದ ಅತ್ಯಗತ್ತ್ಯವಾದ ಉತ್ಪಾದನಾಂಗವಾಗಿದೆ.
*ಭೂಮಿ ಮತ್ತು ಬಂಡವಾಳದ ಜೊತೆಗೆ ಮುಖ್ಯವಾಗಿರುವ ಉತ್ಪಾದನಾಂಗವಾಗಿದೆ.
*ಶ್ರಮದ ನೆರವುವಿಲ್ಲದೇ ಯಾವುದೇ ವಸ್ತುವನ್ನು ಉತ್ಪಾದಿಸಲು ಸಾಧ್ಯವಿಲ್ಲ.
*ಶ್ರಮವು ಉತ್ಪನ್ನಕಾರಕ ಅಂಶವಾಗಿದ್ದು.
*ಇತರೆ ಉತ್ಪಾದನಾಂಗಗಳನ್ನು ಚುರುಕುಗೊಳಿಸುತ್ತದೆ.
*ಉತ್ಪಾದನಾಂಗಗಳನ್ನು ಉತ್ಪಾದನಾ ಉದ್ದೇಶಗಳಿಗಾಗಿ ಉಪಯೋಗಗಕಾರಿಯನ್ನಾಗಿ ಮಾಡುತ್ತದೆ.
II. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ
7. ಬೇಡಿಕೆ ಹೆಚ್ಚಾದಾಗ ಉತ್ಪಾದನೆ ಅಧಿಕಗೊಳ್ಳುತ್ತದೆ.
8. ಸರಕು ಸೇವೆಗಳನ್ನು ಬಯಕೆಯ ತೃಪ್ತಿಗಾಗಿ ಉಪಯೋಗಿಸುವುದು ಅನುಭೋಗ
9. ಒಂದು ರಾಷ್ಟ್ರದ ಆದಾಯವನ್ನು ರಾಷ್ಟ್ರದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಲಭಿಸುವುದೇ ತಲಾ ವರಮಾನ ಎನ್ನುವರು
10. ಲಾರಿಗಳಿಂದ ಸರಕುಗಳನ್ನು ಇಳಿಸುವ ಕೆಲಸದಲ್ಲಿ ತೊಡಗಿರುವವರು ಬರುವ ಶ್ರಮ ವಿಭಾಗವೇ ದೈಹಿಕ ಶ್ರಮ.
11. ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರು ಈ ಶ್ರಮಕ್ಕೆ ಉದಾ:- ಮಾನಸಿಕಶ್ರಮ.
Post Comment