Class 8 Social ಬಾದಾಮಿಯ ಚಾಲುಕ್ಯರು ಮತ್ತುಕಂಚಿಯ ಪಲ್ಲವರು

Class 8 Social ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು
8ನೇ ತರಗತಿ ಸಮಾಜ ವಿಜ್ಞಾನ ಭಾಗ 2: ಬಾದಾಮಿ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು: ದಕ್ಷಿಣ ಭಾರತದ ಮಹತ್ವಪೂರ್ಣ ಸಾಮ್ರಾಜ್ಯಗಳು
ದಕ್ಷಿಣ ಭಾರತದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು ಮಹತ್ವಪೂರ್ಣ ಪಾತ್ರವಹಿಸಿದ್ದಾರೆ. ಈ ಎರಡು ಸಾಮ್ರಾಜ್ಯಗಳು ತಮ್ಮ ಆಡಳಿತ, ಸಾಂಸ್ಕೃತಿಕ ಸಾಧನೆಗಳು ಮತ್ತು ವೈಶಿಷ್ಟ್ಯಪೂರ್ಣ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ.
ಬಾದಾಮಿ ಚಾಲುಕ್ಯರು:
ಬಾದಾಮಿ ಚಾಲುಕ್ಯರು 6ನೇ ಶತಮಾನದಲ್ಲಿ ಸ್ಥಾಪಿತವಾದವರು. ಪೂಲಕೇಶಿ I ಅವರು ಬಾದಾಮಿ (ಪ್ರಸ್ತುತ ಬಾಗಲಕೋಟೆ ಜಿಲ್ಲೆ, ಕರ್ನಾಟಕ) ನಗರವನ್ನು ತಮ್ಮ ರಾಜಧಾನಿಯಾಗಿ ಆಯ್ಕೆಮಾಡಿದರು. ಪೂಲಕೇಶಿ II ಅವರ ಆಡಳಿತದಲ್ಲಿ, ಚಾಲುಕ್ಯರು ದಕ್ಷಿಣ ಭಾರತದ ಪ್ರಮುಖ ಸಾಮ್ರಾಜ್ಯವಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದರು. ಅವರು ಹರ್ಷವರ್ಧನನನ್ನು ನರ್ಮದಾ ನದಿಗೆ ದಕ್ಷಿಣದಲ್ಲಿ ಸೋಲಿಸಿ, ದಕ್ಷಿಣ ಭಾರತದ ರಾಜಕೀಯ ಸಮತೋಲನವನ್ನು ಬದಲಾಯಿಸಿದರು. ಅವರ ಕಾಲದಲ್ಲಿ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಅನೇಕ ದೇವಾಲಯಗಳು ನಿರ್ಮಿಸಲ್ಪಟ್ಟವು, ಇದು ಚಾಲುಕ್ಯ ಶಿಲ್ಪಕಲೆಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತದೆ.ಹೆಚ್ಚಿನ ವಿವರಗಳು www.studybyjobs.com ಗೆ ಕ್ಲಿಕ್ ಮಾಡಿ
ಕಂಚಿಯ ಪಲ್ಲವರು:
ಪಲ್ಲವರು 7ನೇ ಶತಮಾನದಲ್ಲಿ ಕಂಚಿ (ಪ್ರಸ್ತುತ ತಮಿಳುನಾಡು) ನಗರವನ್ನು ತಮ್ಮ ರಾಜಧಾನಿಯಾಗಿ ಆಯ್ಕೆಮಾಡಿದರು. ನರಸಿಂಹವರ್ಮನ್ I ಅವರ ಆಡಳಿತದಲ್ಲಿ, ಪಲ್ಲವರು ಚಾಲುಕ್ಯರನ್ನು ಸೋಲಿಸಿ ಬಾದಾಮಿ ನಗರವನ್ನು ಕಬಳಿಸಿದರು. ಅವರು ಕಂಚಿಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿ, ಪಲ್ಲವ ಶಿಲ್ಪಕಲೆಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸಿದರು.
NCERT ಸಾಮಾಜಿಕ ವಿಜ್ಞಾನ ಅಧ್ಯಯನ:
NCERT ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಾದಾಮಿ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು ಕುರಿತು ವಿವರವಾದ ಅಧ್ಯಯನವನ್ನು ನೀಡಲಾಗಿದೆ. ಈ ಅಧ್ಯಾಯದಲ್ಲಿ ಅವರ ಆಡಳಿತ, ಸಾಂಸ್ಕೃತಿಕ ಸಾಧನೆಗಳು ಮತ್ತು ಶಿಲ್ಪಕಲೆಯ ಕುರಿತು ವಿವರಿಸಲಾಗಿದೆ
ಅಧ್ಯಾಯ – 19
ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು
ಪಠ್ಯ ಪುಸ್ತಕದ ಪ್ರಶ್ನೆಗಳನ್ನು ಈ ಕೆಳಗೆ ವಿವರಿಸಲಾಗಿದೆ
| ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ,
1. ಪುಲಿಕೇಶಿಯು ಸೋಲಿಸಿದ ಪಲ್ಲವರ ದೊರೆ ಮಹೇಂದ್ರ ವರ್ಮ.
2. ಕರ್ನಾಟಕ ಎಂಬ ಹೆಸರನ್ನು ಕೊಟ್ಟ ಬಾದಾಮಿಯ ಚಾಳುಕ್ಯರು.
3′ ‘ಹರ ಪಾರ್ವತೀಯ’ ಸಂಸ್ಕೃತ ನಾಟಕದ ಕರ್ತೃ ಶಿವ ಭಟ್ಟಾರಕ.
4 ‘ವಾತಾಪಿಕೊಂಡ’ ಎಂಬ ಬಿರುದು ಪಡೆದ ಪಲ್ಲವರ ರಾಜ ಪ್ರಥಮ ನರಸಿಂಹವರ್ಮ ನಾಗಿದ್ದನು.
5. ‘ಆರ್ಜುನನ ತಪಸ್ಸು’ ಎಂಬ ಕಲಾಕೃತಿಯು ಮಹಾಬಲಿಪುರ ದಲ್ಲಿದೆ.
Class 8 Social ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು ಪ್ರಶ್ನೆ ಉತ್ತರಗಳನ್ನು ಕೆಲೆಗೆ ನಿಡಿದೆ
||ಸಂಕ್ಷೇಪವಾಗಿ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.
6. ಎರಡನೇ ಪುಲಿಕೇಶಿ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದನು ?
ಉತ್ತರ:- ಇಮ್ಮಡಿ ಪುಲಿಕೇಶಿಯು ,ಕದಂಬರು ಗಂಗರು, ಮತ್ತು ಅಳುಪರನ್ನು ಗೆದ್ದು ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದನು.ದಕ್ಷಿಣ ಪಲ್ಲವರು ತಮ್ಮ ವೈಭವ ಕಾಲದಲ್ಲಿದ್ದರು. ಪುಲಿಕೇಶಿಯ ಪರಮಾಧಿಕಾರತ್ವವನ್ನು ಮಹೇಂದ್ರವರ್ಮನು ಒಪ್ಪಿಕೊಳ್ಳದ ಕಾರಣ ಪುಲಿಕೇಶಿಯು ಆತನನ್ನು ಸೋಲಿಸಿದನು.
ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ, ‘ದಕ್ಷಿಣಾ ಪಥೇಶ್ವರ’, ಎಂಬ ಬಿರುದು ಪಡೆದನು. ಹಾಗೆಯೇ ಸಾಮ್ರಾಜ್ಯವನ್ನು ವೆಂಗಿ ಮತ್ತು ಗುಜುರಾತದವರೆಗೆ ವಿಸ್ತರಿಸಿದನು.
7. ಚಾಳುಕ್ಯರ ಆಡಳಿತ ವ್ಯವಸ್ಥೆ ಬಗ್ಗೆ ತಿಳಿಸಿ
ಉತ್ತರ:- ಚಾಳುಕ್ಯರು ಆಡಳಿತ ಸುವ್ಯವಸ್ತೆಯಿಂದ ಕೂಡಿತ್ತು. ಇವರು ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದರು. ರಾಜನು ನಿರಂತರವಾಗಿಆಡಳಿತದಲ್ಲಿ ಭಾಗವಹಿಸುತ್ತಿದ್ದನು.
ರಾಜ್ಯವನ್ನು ವಿಷಯ (ಜಿಲ್ಲೆ) ಎಂಬುದಾಗಿ ವಿಂಗಡಿಸಿ ವಿಷಯಾಧಿಪತಿಯು ರಾಜ್ಯವನ್ನು ನೋಡಿಕೊಳ್ಳುತ್ತಿದ್ದನು. ಆಡಳಿತದಲ್ಲಿ ಗ್ರಾಮವು ಅತ್ಯಂತ ಚಿಕ್ಕ ಘಟಕವಾಗಿತ್ತು. ಗ್ರಾಮ ಮುಖ್ಯಸ್ಥರು ಲೆಕ್ಕಪತ್ರಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದರು.
8 ಚಾಳುಕ್ಯರು ಸಾಹಿತ್ಯ ಪ್ರಿಯರು ಉದಾಹರಣೆ ಸಹಿತ ವಿವರಿಸಿ.
ಉತ್ತರ:- ಬಾದಾಮಿಯ ಚಾಳುಕ್ಯರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಹಾಗೂ ಸಂಸ್ಕೃತ ಭಾಷೆಗಳು ಚೆನ್ನಾಗಿ ಬೆಳೆದವು. ಕನ್ನಡವನ್ನೇ ಅವರ ಭಾಷೆಯಾಗಿ ಮಾಡಿಕೊಂಡರು.
ಇವರು ರಚಿಸಿರುವ ಕಾವ್ಯದಲ್ಲಿ ತ್ರಿಪದಿ ಶೈಲಿಯು ಬೆಳವಣಿಗೆಯಾಯಿತು. ಕನ್ನಡದಲ್ಲಿಯೇ ಅನೇಕ ಶಾಸನಗಳು ಬರೆಯಲ್ಪಟ್ಟಿವೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸವು ತ್ರಿಪದಿ ಶೈಲಿಯಲ್ಲಿರುವ ಪದ್ಯವಾಗಿರುವುದು ಕಂಡುಬರುತ್ತದೆ.
ಈ ಕಾಲದಲ್ಲಿʼ ರವಿಕೀರ್ತಿ, ವಿಜ್ಜಿಕ ಮತ್ತು ಆಕಳಂಕರು ʼ[ ಪ್ರಮುಖ ಸಂಸ್ಕೃತ ವಿದ್ವಾಂಸರಾಗಿದ್ದರು. ಎರಡನೇ ಪುಲಿಕೇಶಿಯ ಸೊಸೆಯಾದ ವಿಜ್ಜಿಕ’ ಎಂಬ ಕವಿಯತ್ರಿಯು ಬರೆದ ‘ಕೌಮುದಿ ಮಹೋತ್ಸವ’,ಎಂಬ ನಾಟಕ ಮತ್ತು ಶಿವಭಟ್ಟಾರಕನ ‘ಹರ ಪಾರ್ವತೀಯ’ ನಾಟಕ ಪ್ರಮುಖವಾದುದು. ಇವು ಸಂಸ್ಕೃತ ದಲ್ಲಿವೆ.
ಹೆಚ್ಚಿನದನ್ನು ಓದಲು www.studybyjobs.com ಕ್ಲಿಕ್ ಮಾಡಿ
9.ಕಂಚಿಯನ್ನಾಳಿದ ಪಲ್ಲವ ಅರಸರನ್ನು ಹೆಸರಿಸಿ.
ಉತ್ತರ:- ಕಂಚಿಯನ್ನು ಆಳಿದ ಪ್ರಸಿದ್ಧ ಅರಸರಗಳೆಂದರೇ ಶಿವಸ್ಕಂದವರ್ಮ,ಮಹೇಂದ್ರವರ್ಮ, ಪ್ರಥಮ ನರಸಿಂಹವರ್ಮhttps://studybyjobs.com/
10. ಪಲ್ಲವರು ಸಂಸ್ಕೃತಕ್ಕೆ ಮತ್ತು ತಮಿಳಿಗೆ ಯಾವ ರೀತಿ ಪ್ರೋತ್ಸಾಹ ನೀಡಿದರು?
ಉತ್ತರ:- ಪಲ್ಲವರು ಸಂಸ್ಕೃತ ಮತ್ತು ತಮಿಳು ಭಾಷೆಗಳೆರಡಕ್ಕೂ ಪ್ರೋತ್ಸಾಹ ನೀಡಿದರು. ಕಂಚಿಯನ್ನು ಸಂಸ್ಕೃತ ಸಾಹಿತ್ಯದ ಕೇಂದ್ರವನ್ನಾಗಿಸಲಾಯಿತು.
ಪಲ್ಲವರ ಆಸ್ಥಾನದಲ್ಲಿ ಸಂಸ್ಕೃತ ಮತ್ತು ತಮಿಳು ಭಾಷೆಗಳಿಗೆ ಸಂಬಧಿಸಿದ ಕವಿಗಳಿದ್ದರು ಭಾರವಿ (ಕಿರಾತಾರ್ಜುನೀಯ) ಹಾಗೂ ದಂಡಿ (ದಶಕುಮಾರ ಚರಿತ), ರಾಜ ಮಹೇಂದ್ರವರ್ಮನು ಸ್ವತಃ ‘ಮತ್ತ ವಿಲಾಸ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಹಾಗೂ ‘ಭಗವದಜ್ಜುಕೀಯ’ ಗ್ರಂಥವನ್ನು ರಚಿಸಿದ್ದಾನೆ.
People Also Asks:-
ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು
ಬಾದಾಮಿ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು ಪ್ರಶ್ನೆ ಉತ್ತರ
8ನೇ ತರಗತಿಯ ಇತರ ಅಧ್ಯಾಯಗಳ ನೋಟ್ಸ್ ಅನ್ನು ನೀಡಲಾಗಿದ್ದು.
ಅಧ್ಯಾಯ – 16: ಮೌರ್ಯರು ಮತ್ತು ಕುಶಾಣರು
ಅಧ್ಯಾಯ 17-ಗುಪ್ತರು ಮತ್ತು ವರ್ಧನರು
RRB Group D Syllabus 2025,subject – wise CBT Topics
RRB Group D Online Form – 2025 – Apply online for 32000 Posts
Post Comment