class 8th std social science notes: ಅಧ್ಯಾಯ- 23 ಸ್ಥಳೀಯ ಸ್ವಯಂ ಸರ್ಕಾರಗಳು (ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ-2)

8th std ಅಧ್ಯಾಯ 23: ಸ್ಥಳೀಯ ಸ್ವಯಂ ಸರ್ಕಾರಗಳು – NCERT, KSEEB, ಮತ್ತು ಸಾಮಾಜಿಕ ವಿಜ್ಞಾನ

topic-23-1024x1024 class 8th std social science notes: ಅಧ್ಯಾಯ- 23 ಸ್ಥಳೀಯ ಸ್ವಯಂ ಸರ್ಕಾರಗಳು (ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ-2)

ಸ್ಥಳೀಯ ಸ್ವಯಂ ಸರ್ಕಾರಗಳ ಪರಿಚಯ

ಸ್ಥಳೀಯ ಸ್ವಯಂ ಸರ್ಕಾರಗಳು, ಅಥವಾ ಪೌರಕಾರ್ಮಿಕ ಸಂಸ್ಥೆಗಳು, ದೇಶದ ಹಳೆಯ ಮತ್ತು ಪ್ರಮುಖ ಹಂತಗಳಾಗಿವೆ. ಇವು ಜನತಾ ಮಟ್ಟದಲ್ಲಿ ಸ್ವಯಂ ಪ್ರಭುತ್ವವನ್ನು ಹೊರತಾಗಿಯೇ, ಸಾರ್ವಜನಿಕ ಸೇವೆಗಳನ್ನು ನೀಡಲು ಪ್ರತ್ಯೇಕ ರೀತಿಯ ವ್ಯವಸ್ಥೆಗಳನ್ನು ಅನುಸರಿಸುತ್ತವೆ. ಭಾರತದ ಸಂವಿಧಾನದಲ್ಲಿ ಸ್ಥಳೀಯ ಸ್ವಯಂ ಸರ್ಕಾರಗಳನ್ನು ಅನುಕೂಲಪಡಿಸಲಾಗಿದ್ದು, ಅವು ಸಾರ್ವಜನಿಕ ಸೇವೆಗಳನ್ನು ಸುಗಮವಾಗಿ ಮತ್ತು ಪ್ರಭಾವಶಾಲಿಯಾಗಿ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊತ್ತಿವೆ.

NCERT Social Science Class (8th std): ಸ್ಥಳೀಯ ಸ್ವಯಂ ಸರ್ಕಾರಗಳ ಪಾಠ

NCERT ಪುಸ್ತಕದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಥಳೀಯ ಸ್ವಯಂ ಸರ್ಕಾರಗಳ ಬಗ್ಗೆ ಗಹನವಾದ ವಿವರಣೆಯನ್ನು ನೀಡಲಾಗಿದೆ. ಈ ಅಧ್ಯಾಯದಲ್ಲಿ, ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ಮತ್ತು ನಗರಸಭೆಗಳಂತಹ ಸಂಸ್ಥೆಗಳ ಕಾರ್ಯಾಚರಣೆಯು ಹೇಗೆ ನಡೆಯುತ್ತದೆ ಎಂದು ವಿವರಿಸಲಾಗಿದೆ.

KSEEB Solution: ಸ್ಥಳೀಯ ಸ್ವಯಂ ಸರ್ಕಾರಗಳು

ಸ್ಥಳೀಯ ಸ್ವಯಂ ಸರ್ಕಾರಗಳ ಅಧ್ಯಾಯವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಕಿಸ್ತು ಪ್ರಶ್ನೆಗಳನ್ನು ಹಾಗೂ ವಿವರಣೆಗಳನ್ನು ಕಲಿತ ನಂತರ ಪಾಠವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. KSEEB ಪುಸ್ತಕ ಮತ್ತು ಬೋಧನ ಸಾಮಗ್ರಿಗಳಲ್ಲಿ, ಈ ಅಧ್ಯಾಯವು ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತ ಪದ್ಧತಿಗಳನ್ನು ಅರ್ಥಮಾಡಿಕೊಡುವ ಪ್ರಾಮುಖ್ಯತೆಯನ್ನು ಹೊಂದಿದೆ.

KSEEB Social Science: ಸ್ಥಳೀಯ ಆಡಳಿತ ವ್ಯವಸ್ಥೆ

ವಿದ್ಯಾರ್ಥಿಗಳು 8ನೇ ತರಗತಿಯ ಸಾಮಾಜಿಕ ವಿಜ್ಞಾನದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಮಹತ್ವವನ್ನು ಕಲಿಯುತ್ತಾರೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ಮತ್ತು ನಗರಸಭೆಗಳ ಕಾರ್ಯಕ್ಷಮತೆ, ಅವುಗಳ ಹೊಣೆಗಾರಿಕೆಗಳನ್ನು ವಿವರಿಸುತ್ತದೆ.

Social Science Class 8: ಸ್ಥಳೀಯ ಸ್ವಯಂ ಸರ್ಕಾರಗಳು

ಸ್ಥಳೀಯ ಸ್ವಯಂ ಸರ್ಕಾರಗಳು ಭಾರತದಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತವೆ. Social Science Class 8 ಅಧ್ಯಾಯದಲ್ಲಿ, ವಿದ್ಯಾರ್ಥಿಗಳಿಗೆ ಗ್ರಾಮ ಮಟ್ಟದಿಂದ ಇಡೀ ನಗರಗಳವರೆಗೆ ಆಡಳಿತ ಪದ್ಧತಿಗಳು ಹೇಗೆ ನಿರ್ವಹಿಸಲ್ಪಡುತ್ತವೆ ಎಂಬುದನ್ನು ವಿವರಿಸಲಾಗಿದೆ. ಇದು ದೇಶದಲ್ಲಿ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅಧಿಕಾರ ವಿಂಗಡಣೆ, ಮತ್ತು ಮೂಲಭೂತ ಸೇವೆಗಳು ಪ್ರಾದೇಶಿಕ ಮಟ್ಟದಲ್ಲಿ ಹೇಗೆ ದೊರೆಯುತ್ತವೆ ಎಂಬುದನ್ನು ವಿವರಿಸುತ್ತದೆ.

NCERT Solution for Class 8 Social Science: ಸ್ಥಳೀಯ ಸ್ವಯಂ ಸರ್ಕಾರಗಳು

NCERT Solution for Class 8 Social Science ಗ್ರಾಮ ಪಂಚಾಯಿತಿ, ನಗರ ಪಂಚಾಯಿತಿ, ಹಾಗೂ ಮಹಾನಗರ ಪಾಲಿಕೆಗಳ ಕೆಲಸವನ್ನು ನಿರ್ವಹಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಸಾಮಾಜಿಕ ವಿಜ್ಞಾನದಲ್ಲಿ, ಈ ಅಧ್ಯಾಯವು ಸ್ಥಳೀಯ ಸಂಸ್ಥೆಗಳ ಪಾಠವನ್ನು ಸಮಗ್ರವಾಗಿ ಗ್ರಹಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ರೂಪುಗೊಂಡಿದೆ.

KSEEB Political Science: ಸ್ಥಳೀಯ ಸ್ವಯಂ ಸರ್ಕಾರಗಳ ಅಧ್ಯಾಯ

KSEEB ರಾಜಕೀಯ ವಿಜ್ಞಾನದಲ್ಲಿ, ಸ್ಥಳೀಯ ಸ್ವಯಂ ಸರ್ಕಾರಗಳ ಅಧ್ಯಾಯವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಳಿತ ನಡೆಸಲು ಬಲವಂತವಾಗಿ ಒದಗಿಸಲಾಗುವ ಅಗತ್ಯವನ್ನು ಪ್ರತಿಪಾದಿಸುತ್ತದೆ.

ಸ್ಥಳೀಯ ಸ್ವಯಂ ಸರ್ಕಾರಗಳ ಮಹತ್ವ:

  1. ಜನಪರ್ಯಾಯ ನಿರ್ಧಾರಗಳು: ಸ್ಥಳೀಯ ಸ್ವಯಂ ಸರ್ಕಾರಗಳು ಜನರ ಅಗತ್ಯಗಳನ್ನು ಮತ್ತು ಹವ್ಯಾಸಗಳನ್ನು ಗುರುತಿಸಿ, ತಮ್ಮ ನಿರ್ಧಾರಗಳನ್ನು ತಗುಲಿಸಲು ಗಮನಹರಿಸವೆ.
  2. ಸೇವೆಗಳ ಸರಬರಾಜು: ಶಿಕ್ಷಣ, ಆರೋಗ್ಯ, ಪೂರೈಕೆ ಸೇವೆಗಳು, ಇತ್ಯಾದಿ ಪ್ರಮುಖ ಸೇವೆಗಳ ಮೂಲಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಸುತ್ತದೆ.
  3. ಅಧಿಕಾರ ವಿಂಗಡಣೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊರತಾಗಿ, ಸ್ಥಳೀಯ ಸ್ವಯಂ ಸರ್ಕಾರಗಳು ತಮ್ಮ ಸ್ವತಂತ್ರ ಕಾರ್ಯಾಚರಣೆಯನ್ನು ನಿರ್ವಹಿಸುತ್ತವೆ, ಇದರಿಂದ ಅವರು ಸ್ಥಳೀಯ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಬಹುದು.
  4. ನಾಗರಿಕತೆಗೆ ಅವಶ್ಯಕತೆ: ಸ್ಥಳೀಯ ಸ್ವಯಂ ಸರ್ಕಾರಗಳು ನಾಗರಿಕರಿಗೆ ಸಾರ್ವಜನಿಕ ವ್ಯವಸ್ಥೆಗಳ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತವೆ. ಇದರಿಂದ ಗಮ್ಯತೆ, ಸೇವೆ ಹಾಗೂ ಹಕ್ಕುಗಳನ್ನು ಅರಿಯಬಹುದು.

ಪಠ್ಯಪುಸ್ತಕದ ಪ್ರಶೆಗಳನ್ನು ನೀಡಲಾಗಿದೆ( 8th std )

|. ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ,

1.ಪ್ರಸ್ತುತ ಚಾಲಿಯಲ್ಲಿರುವ ಕರ್ನಾಟಕ ಪಂಚಾಯತ್‌ ರಾಜ್ ಕಾಯ್ದೆಯು ಜಾರಿಯಾದ ವರ್ಷ 1985

2.ಗ್ರಾಮದಲ್ಲಿರುವ ಎಲ್ಲಾ ಮತದಾರರು ಪಾಲ್ಗೊಳ್ಳಬಹುದಾದ ಗ್ರಾಮದ ಮಂಡಳಿಯನ್ನು ಗ್ರಾಮ ಸಭೆ ಎಂದು ಕರೆಯಲಾಗುತ್ತದೆ.

3 ತಾಲೂಕು ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಆಯ್ಕೆಮಾಡುವಾಗ ಪರ್ಯಾನುಕ್ರಮ ವನ್ನು ಅನುಸರಿಸಲಾಗುತ್ತದೆ.

4 ಜಿಲ್ಲಾ ಪಂಚಾಯಿತಿಯ ದಿನಂಪ್ರತಿಯ ಕೆಲಸ ನೋಡಿಕೊಳ್ಳಲು ನೇಮಕಗೊಳ್ಳುವ ಅಧಿಕಾರಿಯನ್ನು –ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದು ಕರೆಯುತ್ತಾರೆ.

5 ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿರುವ ಒಟ್ಟು ಹನ್ನೊಂದು ನಗರ ಪಾಲಿಕೆಗಳ ಸಂಖ್ಯೆ ಆಗಿದೆ.

|| ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ. (class 8 social science notes)

6. ಸ್ಥಳೀಯ ಸ್ವಯಂ ಸರ್ಕಾರಗಳ ಉದ್ದೇಶಗಳಾವುವು?

ಉತ್ತರ:- ಸ್ಥಳೀಯ ಸ್ವಯಂಸರ್ಕಾರಗಳ ಉದ್ದೇಶಗಳು :

1.ಸ್ಥಳೀಯದ ಸಮಸ್ಯೆಗಳನ್ನು ಬಗೆಹರಿಸಿಕೊ‍ಳ್ಳುವುದಕ್ಕೆ ಸ್ಥಳೀಯರನ್ನೇ ಬಳಸಿಕೊಳ್ಳುವುದು.

2.ಜನ ಸಾಮಾನ್ಯರಿಗೆ ಆಡಳಿತದ ಕುರಿತು ಜ್ಞಾನ ಒದಗಿಸುವುದು,

3.ಅಧಿಕಾರವನ್ನು ವಿಕೇಂದ್ರೀಕರನಳಿಸಿ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದು.

4.ತಳಮಟ್ಟದ ಹಂತದಲ್ಲಿರುವ ಜನರಿಗೆ ನಾಯಕತ್ವ ದಗುಣಲಕ್ಷಣಗಳನ್ನು ಅಭಿವೃದ್ಧಿಗೊಳಿಸುವುದು ಅಥವಾ ಅವರಿಗೆ ತರಬೇತಿ ನೀಡುವುದು.

7. ನಿಮ್ಮ ಕ್ಷೇತ್ರದ ಸ್ಥಳೀಯ ಮಂಡಳಿ ಹೇಗೆ ರಚಿತವಾಗಿದೆ?

ಉತ್ತರ:-  ನಾನು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ನಗರ ಪಾಲಿಕೆಗೆ ಕಾರ್ಪೊರೇಟರ್ ಗಳನ್ನು ಆಯ್ಕೆ ಮಾಡುತ್ತಾರೆ. ಇವರನ್ನು ಮಹಾನಗರ ಪಾಲಿಕೆ ಸದಸ್ಯರು ಅಥವಾ ಕಾರ್ಪೊರೇಟರ್ ಎಂದು ಕರೆಯುವರು ಇಲ್ಲಿ ಮಹಾನಗರವನ್ನು 45 ವಾರ್ಡ್ ಗಳಾಗಿ ವಿಂಗಡಿಸಿದ್ದು ಪ್ರತಿಯೊಂದು ವಾರ್ಡ್ಗೆ ಒಬ್ಬ ಸದಸ್ಯರಂತೆ 45 ಸದಸ್ಯರು ಆಯ್ಕೆಯಾಗುತ್ತಾರೆ. ಈ 45 ಸದಸ್ಯರು ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅವನನ್ನು ಮೇಯರ್ ಅಥವಾ ಆಯುಕ್ತರು ಎಂದು ಕರೆಯುತ್ತಾರೆ. ಉಪಮೇಯರ್ ಕೂಡ ಆರಿಸುತ್ತಾರೆ. ಈ ಸದಸ್ಯರು ನಗರದ ಅಗತ್ತ್ಯಗಳನ್ನು ಪೂರೈಸುವ ಕಡೆ ಗಮನಹರಿಸುತ್ತಾರೆ.

8. ನಿಮ್ಮ ಸ್ಥಳೀಯ ಮಂಡಳಿಯ ಕಾರ್ಯಗಳನ್ನು ತಿಳಿಸಿ.

ಉತ್ತರ:-  ನಿಮ್ಮ ಸ್ಥಳೀಯ ಮಂಡಳಿಯ ಕಾರ್ಯಗಳು:_

ಆಯ-ವ್ಯಯ ಪಟ್ಟಿರಚಿಸಿ ಮಂಡಳಿಯಿಂದ ಅನುಮೋದನೆ ಪಡೆಯುವ ಕಾರ್ಯ ಮಾಡುತ್ತದೆ.

*ನಗರ ಅಥವಾ ಪಟ್ಟಣದ ಸಂಪೂರ್ಣ ಆಡಳಿತ ನೋಡಿಕೊಳ್ಳುತ್ತದೆ.

*ಉತ್ತಮ ನಗರ ಯೋಜನೆಯನ್ನು ರಚಿಸಿ ಅದನ್ನು ಕಾರ್ಯರೂಪಕ್ಕೆ ತರುವುದು.

*ಉತ್ತಮವಾದ ರಸ್ತೆ, ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ಶಿಕ್ಷಣ, ವಿದ್ಯುಚ್ಛಕ್ತಿ, ಮಾರುಕಟ್ಟೆ, ಆರೋಗ್ಯ ಮತ್ತು ಇನ್ನಿತರ ಸೌಲಭ್ಯಗಳನ್ನು  ಉತ್ತಮ ರೀತಿಯಲ್ಲಿ ಒದಗಿಸುವುದು.

1.ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೌಕರ್ಯ ನೀಡಿ ಸ್ವಚ್ಚತೆಯನ್ನು ಕಾಪಾಡುವತ್ತದೆ.

2. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವುದು. ನಗರ ಸಭೆಯ ಕಟ್ಟಡಗಳು ಹಾಗೂ ಆಸ್ತಿಯನ್ನು ರಕ್ಷಿಸುತ್ತದೆ,

3.ಜನನ ಮರಣಗಳ ದರವನ್ನು ನೋಂದಣಿ ಮಾಡಿಕೊಳ್ಳುವುದು.

4. ಕ್ರೀಡಾಂಗಣ, ಮನರಂಜನಾ ಮಂದಿರ, ಉದ್ಯಾನವನಗಳನ್ನು ಕಟ್ಟಿಸಿ ಅವುಗಳನ್ನು ನಿರ್ವಹಿಸುವುದು.

5. ನಗರದ ಕೊಳೆಗೇರಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವುದರ ಮೂಲಕ ಅಲ್ಲಿನ ನಿವಾಸಿಗಳ ಜೀವನ ಮಟ್ಟವನ್ನು ಸುಧಾರಿಸುವಂತೆ ನೋಡಿಕೊಳ್ಳುವುದು.

6. ಮಕ್ಕಳ ಕಲ್ಯಾಣ ಕೇಂದ್ರಗಳು, ವಾರಾಪರಾಧಿ ಗೃಹಗಳು ಭಿಕ್ಷುಕರ ಕಾಲೋನಿಗಳು, ಅನಾಥಾಶ್ರಮಗಳು, ಹೀಗೆ ಇತ್ಯಾದಿ ಸಹಾಯಕ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸುವ ಕಾರ್ಯ ಮಾಡುತ್ತದೆ.

7. ಈಜುಕೊಳ, ಕ್ರೀಡಾಂಗಣ, ಸಂಗ್ರಹಾಲಯ, ವಾಹನ ನಿಲ್ದಾಣ, ವಾಚನಾಲಯ, ಸಾರ್ವಜನಿಕ ಗ್ರಂಥಾಲಯ, ಪಶುವೈದ್ಯಾಲಯ, ಸಿನಿಮಾ ಮಂದಿರ, ಮಾರುಕಟ್ಟೆ ಪ್ರಾಂಗಣ, ಶವಾಗಾರ, ಮುಂತಾದ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯವನ್ನು ಮಾಡುವುದು.

8. ಮಳೆನೀರು ಕೊಯ್ಲು ವಿಕೆ ಯೋಜನೆ ನಿರ್ಮಿಸಿ ಕಾರ್ಯಗತಗೊಳಿಸುತ್ತದೆ.

9.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತದೆ.

10. ನಗರದ ಹಿಂದುಳಿದ ವರ್ಗದವರ ಮತ್ತು ದುರ್ಬಲ ವರ್ಗದವರ ಸುಧಾರಣೆ ಮತ್ತು ಅಭಿವೃದ್ದಿಗಾಗಿ ಕ್ರಮ ಕೈಗೊಳ್ಳುವುದು.

11. ನಗರ ಅಥವಾ ಪಟ್ಟಣವ ಸ್ವಚ್ಚ, ಸುಂದರ ಮತ್ತು ಹಸಿರಿನಿಂದ ಕಂಗೊಳಿಸಲು ಸೂಕ್ತ ಯೋಜನೆ ಮತ್ತು ಕ್ರಮಗಳನ್ನು ಕೈಗೊಳ್ಳುವುದು.

9. ನಿಮ್ಮ ಸ್ಥಳೀಯ ಮಂಡಳಿಯ ಆದಾಯದ ಮೂಲಗಳಾವುವು?

ಉತ್ತರ:-  ನಮ್ಮ ನಗರದ ಪ್ರಮುಖ ಆದಾಯದ ಪ್ರಮುಖ ಮೂಲಗಳೆಂದರೆ ಕಟ್ಟಡ ತೆರಿಗೆಗಳು, ಖಾಲಿಸ್ಥಳದ ಮೇಲಿನ ತೆರಿಗೆ, ಅಂಗಡಿ ಮತ್ತು ಮಾರಾಟಮಾಡುವ ತಳ್ಳು ಗಾಡಿಗಳ ಮೇಲೆ ವಿಧಿಸುವ ತೆರಿಗೆ, ನೀರಿನ ಮೇಲಿನ ತೆರಿಗೆ, ಜೊತೆಗೆ ನಗರ ಸಭೆಗಳ ಅಧೀನದಲ್ಲಿರುವ ಕಟ್ಟಡಗಳು, ಮಾರುಕಟ್ಟೆಗಳಲ್ಲಿನ ಮಳಿಗೆಗಳಿಂದ ಬರುವ ಬಾಡಿಗೆಗಳು ಹಾಗೂ ಮಾರಾಟ ಮತ್ತು ಮನರಂಜನಾ ಉಪಕರಣ ಇತ್ಯಾದಿಗಳಾಗಿವೆ.

10. ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾಯಿಸಲು ಹಕ್ಕಿರುವ ಮತ್ತು ಹಕ್ಕಿಲ್ಲದ ಸದಸ್ಯರುಗಳನ್ನು ಪಟ್ಟಿ ಮಾಡಿ.

ಉತ್ತರ:- ನಾಮ ನಿರ್ದೇಶಿತ ಸದಸ್ಯರುಗಳಿಗೆ ಸಭೆಯ ಚರ್ಚೆಯಲ್ಲಿ ಭಾಗವಹಿಸುವ ಹಕ್ಕಿ ನೀಡಲಾಗಿದ್ದು, ಆದರೇ ಮತ ಚಲಾಯಿಸುವ ಹಕ್ಕಿಲ್ಲ. ಸ್ಥಳೀಯ ವಿಧಾನಸಭಾ ಶಾಸಕರು, ವಿಧಾನಪರಿಷತ್ತಿನ ಶಾಸಕರು ಮತ್ತು ಲೋಕಸಭಾ ಸದಸ್ಯರುಗಳು ಸಭೆಗಳಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ.

II. ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿ ಸಮಿತಿಗಳನ್ನು ರಚಿಸಿಕೊಳ್ಳುವ ಅವಶ್ಯಕತೆಯನ್ನು ತಿಳಿಸಿ.

ಉತ್ತರ:- ಆಡಳಿತದ ಪರಿಣಾಮಕಾರಿ ನಿರ್ವಹಣೆಗಾಗಿ ಸ್ಥಾಯಿಸಮಿತಿಗಳನ್ನು ರಚಿಸುವ ಅವಕಾಶವಿದ್ದು, ಸರ್ಕಾರವು ಆಡಳಿತ ಕ್ರಮಗಳನ್ನು ಸುಗಮಗೊಳಿಸಲು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸುತ್ತದೆ. ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳ ಕಾರ್ಯದ ಜೊತೆಗೆ ಇನ್ನೂ ಕೆಲವು ಕಾರ್ಯಗಳನ್ನು ನಿರ್ವಹಿಸಲೆಬೇಕಾಗುತ್ತದೆ.

ಅವುಗಳೆಂದರೆ ಈ ಕೆಳನಂತಿವೇ;

• ಗ್ರಾಮ ಪಂಚಾಯಿತಿಗಳ ವಾರ್ಷಿಕ ಯೋಜನೆಯ ಪ್ರಸ್ತಾವನೆಗಳನ್ನು ಕ್ರೋಡೀಕರಿಸಿ ಜಿಲ್ಲಾ ಪಂಚಾತಿಗಳಿಗೆ ಸಲ್ಲಿಸುವುದು.

• ರಾಜ್ಯ ಸರ್ಕಾರ ಅಥವಾ ಜಿಲ್ಲಾ ಪಂಚಾಯಿತಿಗಳು ತಿಳಿಸುವ ಎಲ್ಲಾ ಕಲ್ಯಾಣದಾಯಕ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಕಾರ್ಯಗತಗೊಳಿಸುವುದು.

12. ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿಯನ್ನು ಕಲ್ಪಿಸಲಾಗಿರುವ ಸದಸ್ಯ ವರ್ಗದ ಪಟ್ಟಿ ನೀಡಿ.

ಉತ್ತರ:- ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿಯನ್ನು ಕಲ್ಪಿಸಲಾಗಿರುವ ಸದಸ್ಯ ವರ್ಗದವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿಯಿದೆ.

13. ಒಂದು ಪ್ರದೇಶವನ್ನು ಪಟ್ಟಣ ಮತ್ತು ನಗರವೆಂದು ವರ್ಗೀಕರಿಸಲು ಇರಬೇಕಾದ ಜನಸಂಖ್ಯಾ ಪ್ರಮಾಣವೆಷ್ಟು?

ಉತ್ತರ:- ನಗರ ಪ್ರದೇಶಗಳು ಜನಸಂಖ್ಯೆಯ ಆಧಾರವಾಗಿ ಪಟ್ಟಣ ಮತ್ತು ನಗರ ಪ್ರದೇಶಗಳೆಂದು ವರ್ಗೀಕರಿಸಲಾಗಿದ್ದು, 20ರಿಂದ 50 ಸಾವಿರ ಒಳಗಿನ ಜನಸಂಖ್ಯೆಯನ್ನು ಹೊಂದಿದ್ದರೆ, ಅದು ಪಟ್ಟಣವೆಂದು ಪರಿಗಣಿಸಲಾಗುತ್ತದೆ.
50 ಸಾವಿರದಿಂದ 3 ಲಕ್ಷದೊಳಗಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವನ್ನು ನಗರವೆಂದು ವರ್ಗೀಕರಿಸಲಾಗಿದೆ.
ಎರಡು ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಮತ್ತು ಕೋಟಿಗಿಂತಲೂ ಹೆಚ್ಚು ಆದಾಯವಿರುವ ನಗರಪ್ರದೇಶಗಳಲ್ಲಿ ಮಹಾನಗರ ಪಾಲಿಕೆಗಳನ್ನು ನಿರ್ಮಿಸಲಾಗಿದೆ.

14. ಕರ್ನಾಟಕದಲ್ಲಿ ಪಂಚಾಯತಿ ರಾಜ್ಯದ ಮೂರು ಹಂತಗಳಾವುವು?

ಉತ್ತರ:-

  • ಗ್ರಾಮ ಪಂಚಾಯತಿ
  • ತಾಲೂಕು ಪಂಚಾಯತಿ
  • ಜಿಲ್ಲಾ ಪಂಚಾಯತಿ

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 2 class 8th std social science notes

Get all kind of information CLICK HERE —- studybyjobs.com

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ – 16: ಮೌರ್ಯರು ಮತ್ತು ಕುಶಾಣರು

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ- 17: ಗುಪ್ತರು ಮತ್ತು ವರ್ಧನರು

ಅಧ್ಯಾಯ-18ದಕ್ಷಿಣ ಭಾರತದ ರಾಜವಂಶಗಳು ಶಾತವಾಹನರು,ಕದಂಬರು ಗಂಗರು

ಅಧ್ಯಾಯ – 19; ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು 

ಅಧ್ಯಾಯ- 20ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2—-ಅಧ್ಯಾಯ -22 ಪ್ರಜಾಪ್ರಭುತ್ವ

RRB Group D Syllabus 2025,subject – wise CBT Topics

Mahabub khan is a wellknown Full stackweb developer,SEO Specialist,Content writer specialist and alsoa Youtuber,Blogger,subject matter expert of Science,and Mathematics.he is also Digital Marketing Expert. Sheheen Begum is also Famous Full stackweb developer,SEO Specialist, Digital Marketing Expert,Blogger,Youtuber,Online Content writer have written more than 5000+ articles .

Post Comment

You May Have Missed