ncert answers ಅಧ್ಯಾಯ 29-ವಿವಿಧ ವ್ಯವಹಾರ ಸಂಘಟನೆಗಳ ಹುಟ್ಟು

8th class ncert answers
ಅಭ್ಯಾಸಗಳು
|. ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ,
1. ಒಬ್ಬನೇ ವ್ಯಕ್ತಿಯಿಂದ ನಡೆಸಲ್ಪಡುವ ವ್ಯಾಪಾರಿ ಸಂಸ್ಥೆಯನ್ನು ಏಕವ್ಯಕ್ತಿ ಮಾಲಿಕತ್ವ ಸಂಸ್ಥೆ ಎಂದು ಕರೆಯುತ್ತಾರೆ.
2. ಪಾಲುಗಾರಿಕೆ ಸಂಸ್ಥೆಗಳನ್ನು ನಡೆಸಿಕೊಂಡು ಹೋಗಲು 1932 ರಲ್ಲಿ ಪಾಲುಗಾರಿಕಾ ಸಂಸ್ಥೆಯ ಕಾನೂನು ಜಾರಿಗೆ ಬಂದಿತು.
3. ಹಣಕಾಸಿನ ವ್ಯವಹಾರ ಮಾಡುವ ಪಾಲುಗಾರಿಕಾ ಸಂಸ್ಥೆಯಲ್ಲಿ ಗರಿಷ್ಠ10ಜನ ಸೀಮಿತವಾಗಿರುತ್ತದೆ.
4. ಹಿಂದೂ ಅವಿಭಕ್ತ ಕುಟುಂಬ ವ್ಯವಹಾರ ಸಂಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುವನನ್ನು ಕರ್ತ ಎಂದು ಕರೆಯುವರು.
5. ಭಾರತದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆ ಎಂದರೆ ಹಿಂದೂ ಅವಿಭಕ್ತ ಕುಟುಂಬ ಆಗಿದೆ.
8th class ncert answers
||. ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
6. ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳಲ್ಲಿ ಮುಖ್ಯವಾದುವು ಯಾವುವು?
ಉತ್ತರ :- ಸಣ್ಣ ಪ್ರಮಾಣದ ಸಂಘಟನೆಗಳಲ್ಲಿ ಮುಖ್ಯವಾದುವು ಅವುಗಳೆಂದರೇ;-
*ಏಕವ್ಯಕ್ತಿ ಮಾಲೀಕತ್ವ ಸಂಸ್ಥೆಗಳು (sole trading concerns)
*ಪಾಲುಗಾರಿಕೆ ಸಂಸ್ಥೆ (partnership firms)
*ಹಿಂದೂ ಅವಿಭಕ್ತ ಕುಟುಂಬ ಸಂಸ್ಥೆ (hindu undivided family firms)
7. ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳು ಗ್ರಾಹಕರಿಗೆ ಹೇಗೆ ಸಹಾಯ ಮಾಡುತ್ತವೆ?
ಉತ್ತರ:- ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳು ಗ್ರಾಹಕರಿಗೆ ಬೇಕಾದ ದೈನಂದಿನ ಇಷ್ಟಗಳನ್ನು ಅರಿತು ಅವಶ್ಯ ವಸ್ತುಗಳನ್ನು ಸಕಾಲದಲ್ಲಿ ಸರಬರಾಜು ಮಾಡುತ್ತದೆ. ಇವು ಗ್ರಾಹಕರ ಜೊತೆಯಲ್ಲಿ ನೇರ ಸಂಪರ್ಕ ಇಟ್ಟುಕೊಂಡಿರುತ್ತದೆ.
8. ಪಾಲುಗಾರಿಕೆ ಸಂಸ್ಥೆಯೆಂದರೇನು?
ಉತ್ತರ:- ಒಬ್ಬರಿಗಿಂತ ಹೆಚ್ಚು ಜನ ಕಲೆತು ವ್ಯವಹಾರ ಮಾಡುವ ಸಂಸ್ಥೆಗಳನ್ನು ಪಾಲುಗಾರಿಕೆ ವ್ಯವಹಾರ ಸಂಸ್ಥೆಗಳು ಎನ್ನುವರು.
ಎಲ್ಲರು ಕೈಗೊಂಡಿರುವ ಅಥವಾ ಅದರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ ವ್ಯವಹಾರದ ಲಾಭವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧವೇ ಪಾಲುಗಾರಿಕೆಯಾಗಿದೆ.
9. ತಟಸ್ಥ ಪಾಲುಗಾರರೆಂದರೆ ಯಾರು? ತಿಳಿಸಿ.
ಉತ್ತರ:- ತಟಸ್ಥ ಪಾಲುಗಾರರು ಬಂಡವಾಳವನ್ನು ಹೂಡಿರುತ್ತಾರೆ. ಆದರೆ ದಿನವಹಿ ವಹಿವಾಟುಗಳಲ್ಲಿ ನಿರಂತರವಾಗಿ ಭಾಗವಹಿಸುವುದಿಲ್ಲ. ಇವರ ಬಂಡವಾಳದ ಅನುಪಾತಕ್ಕೆ ಅನುಗುಣವಾಗಿ ಲಾಭಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ನಷ್ಟ ಅಥವಾ ಜವಾಬ್ದಾರಿಗಳಿಗೂ ಸಹ ಹೊಣೆಯಾಗಿರುತ್ತಾರೆ.
10. ಪಾಲುಗಾರಿಕೆ ಸಂಸ್ಥೆಯ ವಿಸರ್ಜನೆ ಹೇಗೆ ಸರಳವಾಗಿದೆ ಬರೆಯಿರಿ.
ಉತ್ತರ:- ಪಾಲುಗಾರಿಕೆ ಸಂಸ್ಥೆಯನ್ನು ಸುಲಭವಾಗಿ ವಿಸರ್ಜಿಸಲು ಸಾದ್ಯ. ಯಾವುದೇ ಪಾಲುಗಾರ ಇತರ ಪಾಲುಗಾರರಿಗೆ 14 ದಿನಗಳ ಮುಂದಿನ ಸೂಚನೆ ಕೊಡಬಹುದು ಹಾಗೂ ಇತರ ಪಾಲುಗಾರರ ಸಮ್ಮತಿಯ ಮೇಲೆ ವಿಸರ್ಜಿಸಬಹುದು.
|| ಈ ಕೆಳಗಿನ ಪ್ರಶ್ನೆಗಳನ್ನು ಸೂಕ್ತ ರೀತಿಯ ಉತ್ತರಿಸಿ.(8th class ncert answers)
11. ಏಕ ಮಾಲೀಕತ್ವ ಸಂಸ್ಥೆಯ ಯಾವುದಾದರೂ ನಾಲ್ಕು ಅನುಕೂಲತೆಗಳನ್ನು ತಿಳಿಸಿ.
ಉತ್ತರ:- ಏಕವ್ಯಕ್ತಿ ಮಾಲೀಕತ್ವ ವ್ಯವಹಾರ ಸಂಸ್ಥೆಗಳ ಅನುಕೂಲತೆಗಳು ಈ ಕೆಳಂತಿವೇ:
1. ಇವುಗಳನ್ನು ಪ್ರಾರಂಭಿಸಲು ಯಾವುದೇ ಕಾನೂನಿನ ಕಟ್ಟಲೆಗಳ ಅಗತ್ತ್ಯ ಬೇಕಾಗಿಲ್ಲ.
2. ಸ್ವಂತ ಬಂಡವಾಳದಿಂದಲೇ ಪ್ರಾರಂಭಿಸಬಹುದು. ದಿನ ವಹಿವಾಟುಗಳನ್ನು ನಡೆಸುವುದು ಅಷ್ಟೇನು ಕಷ್ಟವಲ್ಲ.
3. ಸಂಸ್ಥೆ ಗಳಿಸಿದ ಎಲ್ಲಾ ಲಾಭಗಳನ್ನು ಏಕವ್ಯಕ್ತಿ ಮಾಲೀಕರೆ ಅನುಭವಿಸುತ್ತಾರೆ.
4. ವ್ಯಾಪಾರ ಮೇಲ್ವಿಚಾರಣೆ ಸ್ವತ: ತಾವೇ ನೋಡಿಕೊಳ್ಳುತ್ತಾರೆ.
5.ಇವರು ಗ್ರಾಹಕರ ಜೊತೆಯಲ್ಲಿ ನೇರ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ.
12. ಏಕ ಮಾಲೀಕತ್ವ ಸಂಸ್ಥೆಯ ಯಾವುದಾದರೂ ನಾಲ್ಕು ದೋಷಗಳನ್ನು ತಿಳಿಸಿ.
ಉತ್ತರ:- . ಏಕ ಮಾಲೀಕತ್ವ ಸಂಸ್ಥೆಯ ಯಾವುದಾದರೂ ನಾಲ್ಕು ದೋಷಗಳು ಈ ಕೆಳಂತಿವೇ;
*ಬಂಡವಾಳವು ಮಿತಿಯಾಗಿದ್ದು ದೊಡ್ಡದಾಗಿ ಬೆಳೆಸಲು ಕಷ್ಟವಾಗುವುದು, ಆಡಳಿತ ಕೌಶಲ್ಯಗಳು ಸೀಮಿತವಾಗಿರುತ್ತವದೆ.
*ಯಾವಾಗಲು ಒಬ್ಬರಿಗಿಂತ ಇಬ್ಬರು ಅಥವಾ ಜಾಸ್ತಿ ವ್ಯಕ್ತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ.
*ಎಲ್ಲ ನಷ್ಟ ಅಥವಾ ಹೊಣೆಗಾರಿಕೆಗಳನ್ನು ಒಬ್ಬನೇ ಹೊರಬೇಕಾಗುತ್ತದೆ.
*ಮಾಲೀಕನ ನಿಧನ ಅಥವಾ ದಿವಾಳಿಯಿಂದಾಗಿ ಸಂಸ್ಥೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಉತ್ಪತ್ತಿಯಾಗುತ್ತದೆ.
13. ಪಾಲುಗಾರಿಕೆ ಸಂಸ್ಥೆಗಳು ಹೇಗೆ ಪ್ರಾರಂಭವಾಗುತ್ತವೆ? ಸಂಕ್ಷಿಪ್ತವಾಗಿ ವಿವರಿಸಿ.
ಉತ್ತರ:- ಒಬ್ಬರಿಗಿಂತ ಹೆಚ್ಚು ಜನ ಸೇರಿ, ವ್ಯವಹಾರ ಪ್ರಾರಂಭಿಸಿದರೆ ಪಾಲುಗಾರಿಕಾ ಸಂಸ್ಥೆಗಳು ಅಸ್ತಿತ್ವಕ್ಕೆ ಬರುತ್ತವೆ. ಪಾಲುಗಾರಿಕೆ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ನಡೆಸಿಕೊಂಡು ಹೋಗಲು 1932 ರಲ್ಲಿ ಪಾಲುಗಾರಿಕೆ ಸಂಸ್ಥೆಯ ಕಾನೂನು ಜಾರಿಗೆಯಾಯಿತು. ಈ ಕಾಯ್ದೆಯ 4ನೇ ಸೆಕ್ಷನ್ ಪ್ರಕಾರ ಎಲ್ಲರು ಕೈಗೊಂಡಿರುವ ಅಥವಾ ಅದರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ ವ್ಯವಹಾರದ ಲಾಭಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ ಪಾಲುಗಾರಿಕೆಯಾಗಿದೆ. ಹಣಕಾಸಿನ ವ್ಯವಹಾರ ಮಾಡುವುದಾದರೆ ಗರಿಷ್ಠ ಹತ್ತು ಜನ ಪಾಲುಗಾರರು ಹಾಗೂ ಸಾಮಾನ್ಯ ಪಾಲುಗಾರಿಕೆ ವ್ಯವಹಾರ ಮಾಡುವುದಾದರೆ ಗರಿಷ್ಠ ಇಪ್ಪತ್ತು ಜನ ಪಾಲುಗಾರರಿಗೂ ಸೀಮಿತವಾಗಿರುವುದು. ಈ ಸಂಸ್ಥೆಗಳನ್ನು ಪಾಲುದಾರಿಕೆ ಸಂಸ್ಥೆಗಳೆಂದು ಪಾಲುಗಾರರನ್ನು ಪಾಲುಗಾರರೆಂದು ಕರೆಯುವರು.
14. ಪಾಲುಗಾರಿಕೆ ಸಂಸ್ಥೆಗಳ ವಿವಿಧ ರೀತಿಯ ಪಾಲುಗಾರರನ್ನು ತಿಳಿಸಿ.
ಉತ್ತರ:- ಪಾಲುಗಾರರಲ್ಲಿ ಕೆಲವು ವಿಧಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವವದೆಂದರೆ:
1) ಕ್ರಿಯಾಶೀಲ ಅಥವ ಸಕ್ರಿಯ ಪಾಲುಗಾರರು: ನಿಗದಿತ ಬಂಡವಾಳ ಹೂಡಿರುತ್ತಾರೆ. ಲಾಭನಷ್ಟಗಳನ್ನು ಅನುಪಾತಕ್ಕನುಗುಣವಾಗಿ ಹಂಚಿಕೊಳ್ಳುತ್ತಾರೆ.
2) ತಟಸ್ಥ ಪಾಲುಗಾರರು: ಇವರು ಬಂಡವಾಳನ್ನು ಹೂಡಿರುತ್ತಾರೆ. ಆದರೆ ದಿನವಹಿ ವಹಿವಾಟುಗಳಲ್ಲಿ ನಿರಂತರವಾಗಿ ಭಾಗವಹಿಸುವುದಿಲ್ಲ.
3) ನಾಮಮಾತ್ರ ಪಾಲುಗಾರರು: ಇವರು ಬಂಡವಾಳವನ್ನು ಹೂಡುವುದಿಲ್ಲ. ನಿರಂತರವಾಗಿ ದೈನಂದಿನ ವಹಿವಾಟುಗಳಲ್ಲಿ ಭಾಗವಹಿಸುವುದಿಲ್ಲ.ಆದರೆ ಸಾಲಗಳಿಗೆ ಅನುಪಾತಕ್ಕನುಗುಣವಾಗಿ ಹೊಣೆಯಾಗಿರುತ್ತಾರೆ.
4) ಅಪ್ರಾಪ್ತ ವಯಸ್ಕ ಪಾಲುದಾರರು: ಇವರು 18 ವರ್ಷ ವಯಸ್ಸಿಗಿಂತ ಕಡಿಮೆ ಇರುವವರು ಪಾಲುಗಾರರಾಗಲು ಸಾಧ್ಯವಿಲ್ಲ. ಆದರೆ ಪಾಲುಗಾರರ ಸಮ್ಮತಿಯಂತೆ ಹಾಗೂ ಕರಾರಿನಂತೆ, ಸಂಸ್ಥೆಯ ಹಿತದೃಷ್ಟಿಯಿಂದ ಹದಿನೆಂಟು ವರ್ಷ ಮೀರದವರನ್ನು ಪಾಲುಗಾರರಾಗಿ ಸೇರಿಸಿಕೊಳ್ಳಬಹುದು.ಇವರು ಲಾಭಗಳಲ್ಲಿ ಮಾತ್ರ ತಮ್ಮ ಪಾಲನ್ನು ಪಡೆಯುತ್ತಾರೆ. ನಷ್ಟಗಳಿಗೆ ಇವರು ಹೊಣೆಯಾಗುವುದಿಲ್ಲ .
ಈ ವಿಧಗಳೇ ಅಲ್ಲದೆ ರಹಸ್ಯಪಾಲುದಾರರು, ಸೀಮಿತಪಾಲುಗಾರರು, ಹಾಗು ಅರೆಪಾಲುಗಾರರು, ಲಾಭದಲ್ಲಿ ಮಾತ್ರ ಪಾಲುಗಾರರು ಮುಂತಾದವರು ಇರುತ್ತಾರೆ.
15. ಪಾಲುಗಾರಿಕೆ ಸಂಸ್ಥೆಗಳ ಯಾವುದಾದರೂ ನಾಲ್ಕು ಅನುಕೂಲತೆಗಳನ್ನು ತಿಳಿಸಿ.
ಉತ್ತರ:- ಪಾಲುಗಾರಿಕೆ ಸಂಸ್ಥೆಯ ನಾಲ್ಕುಅನುಕೂಲತೆಗಳು ಈ ಕಳಂನತಿವೇ;
1. ಸುಲಭ ರಚನೆ: ಈ ಸಂಸ್ಥೆಯನ್ನು ನೊಂದಾಯಿಸುವುದು ಪಾಲುಗಾರರ ಐಚ್ಛಿಕ ನಿರ್ಧಾರಕ್ಕೆ ಸೇರಿದ್ದರಿಂದ ಹೆಚ್ಚಿನ ಕಾನೂನಿನ ನಿಬಂಧನೆಗಳು ಇರುವುದಿಲ್ಲ. ಹೀಗಾಗಿ ಈ ರೀತಿಯ ಸಂಸ್ಥೆಯ ಸುಲಭವಾಗಿ ರಚನೆಯಾಗುತ್ತವೆ.
2. ಹೆಚ್ಚಿನ ಬಂಡವಾಳ: ಈ ಸಂಸ್ಥೆಯು ಇಬ್ಬರು ಅಥವ ಹೆಚ್ಚಿನ ವ್ಯಕ್ತಿಗಳಿಂದ ರಚಿಸಲ್ಪಡುವುದರಿಂದ ಬಂಡವಾಳದ ಹೂಡಿಕೆ ಹೆಚ್ಚಾಗಿರುತ್ತವೆ.
3. ಹೆಚ್ಚಿನ ಪರಿಣತಿ: ಈ ಸಂಸ್ಥೆಯಲ್ಲಿ ಒಬ್ಬರಿಗಿಂತ ಹೆಚ್ಚಿನ ಮಾಲೀಕರಿದ್ದು ಶ್ರಮದ ವಿಭಜನೆಯ ತತ್ವವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಪರಿಣತಿ ಹೆಚ್ಚಿಸುತ್ತದೆ.
4. ಸರಳ ವಿಸರ್ಜನೆ: ಈ ಸಂಸ್ಥೆಯು ಸುಲಭವಾಗಿ ವಿಸರ್ಜಿಸಬಹುದು, ಯಾವುದೇ ಪಾಲುಗಾರ ಇತರ ಪಾಲುಗಾರರಿಗೆ 14 ದಿನಗಳ ಮುನ್ಸೂಚನೆ ಕೊಡಬಹುದು ಹಾಗೂ ಇತರ ಪಾಲುಗಾರರ ಸಮ್ಮತಿಯ ಮೇಲೆ ವಿಸರ್ಜಿಸಬಹುದು.
16. ಪಾಲುಗಾರಿಕೆ ಸಂಸ್ಥೆಗಳ ಯಾವುದಾದರೂ ನಾಲ್ಕು ದೋಷಗಳನ್ನು ತಿಳಿಸಿ,
ಉತ್ತರ:- ಪಾಲುಗಾರಿಕೆ ಸಂಸ್ಥೆಯ ನಾಲ್ಕು ದೋಷಗಳು ಈ ಕಳಂತಿವೇ:
1. ಕೆಲವು ಸಂದರ್ಭಗಳಲ್ಲಿ ಪಾಲುಗಾರರ ನಡುವೆ ಒಮ್ಮತ ಇಲ್ಲದೆ ಹೋದಾಗ ಅವರವರಲ್ಲಿ ತಾರತಮ್ಯಗಳು ಉಂಟಾಗುವುದು.
2. ನಷ್ಟದ ಹೊಣೆಗಾರಿಕೆ ಅಪರಿಮಿತವಾಗಿದ್ದು ಹೆಚ್ಚು ಜನ ಪಾಲುಗಾರರಾಗಲು ಇಷ್ಟಪಡುವುದಿಲ್ಲ.
3. ಕೆಲವು ಪಾಲುಗಾರರ ಅಜಾಗರೂಕತೆ ಅಥವಾ ಅವಿವೇಕತನದ ನಿರ್ಧಾರಗಳು ಸಂಸ್ಥೆಯ ಹಿನ್ನಡೆಗೆ ಕಾರಣವಾಗುವುದು.
4. ಪಾಲುದಾರಿಕೆ ಸಂಸ್ಥೆ ಸ್ಥಿರತೆಯ ಅಭಾವ ಹೊಂದಿರುತ್ತದೆ. ಯಾರಾದರೂ ಒಬ್ಬ ಪಾಲುಗಾರ ಮರಣ ಹೊಂದಿದರೆ ಅಥವಾ ದಿವಾಳಿಯಾದರೆ ಸಂಸ್ಥೆಯನ್ನು ವಿಸರ್ಜಿಸಬೇಕಾಗುತ್ತದೆ.
17. ಪಾಲುಗಾರಿಕೆ ಸಂಸ್ಥೆಗಳನ್ನು ನೊಂದಾಯಿಸುವುದರಿಂದಾಗುವ ಅನುಕೂಲತೆಗಳೇನು?
ಉತ್ತರ:- ಪಾಲುಗಾರಿಕೆ ಸಂಸ್ಥೆಗಳ ನೋಂದಣಿಯಿಂದಾಗುವ ಉಪಯೋಗಗಳು
1.ನೋಂದಣಿ ಹೊಂದಿರುವ ಸಂಸ್ಥೆಯು ಒಂದು ನೂರು ರೂಗಳನ್ನು ಮೀರಿದ ಸಾಲದ ವಸೂಲಾತಿಗಾಗಿ ಮೂರನೆ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿಸಬಹುದು.
2.ನೋಂದಣಿ ಆಗಿರುವ ಸಂಸ್ಥೆಗಳು ಸಾಲಗಳ ವಸೂಲಿಗಾಗಿ, ಇತರೆ ಪಾಲುಗಾರನ ಸಾಲ ವಸೂಲಿಗಾಗಿ ಆತನ ವಿರುದ್ಧವೂ ದಾವೆ ಹೂಡಿಸಬಹುದು.
3.ನೋಂದಣಿಯಾಗದ ಸಂಸ್ಥೆಯ ವಿರುದ್ಧ ಅಥವಾ ಅದರ ಪಾಲುಗಾರರ ವಿರುದ್ಧ ಮೂರನೇ ವ್ಯಕ್ತಿ ದಾವೆಯನ್ನು ಹೂಡಬಹುದು.
4.ನೋಂದಣಿಯಾಗದ ಅಥವಾ ಅದರ ಪಾಲುಗಾರರ ವಿರುದ್ಧ ಯಾವುದೇ ಪಾಲುಗಾರನಾಗಲಿ, ಸಂಸ್ಥೆಯ ವಿಸರ್ಜನೆಗೆ ಅಥವಾ ಲೆಕ್ಕಪತ್ರಗಳು ಇತ್ಯರ್ಥಕ್ಕಾಗಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಬಹುದು.
18. ಹಿಂದೂ ಅವಿಭಕ್ತ ಕುಟುಂಬ ಪದ್ಧತಿಯ ವ್ಯವಹಾರ ಸಂಸ್ಥೆಯ ಕುರಿತು ಬರೆಯಿರಿ.
ಉತ್ತರ:- ಹಿಂದು ಅವಿಭಕ್ತ ಕುಟುಂಬ ವ್ಯವಹಾರ ಸಂಸ್ಥೆಗಳು ಭಾರತದಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದು. ಇವು ಹಿಂದೂ ಕಾನೂನಿನ ಅನ್ವಯ ಜಾರಿಗೆ ಬರುತ್ತದೆ. ಇವು ಹಿಂದೂ ಕುಟುಂಬದ ಎಲ್ಲ ಪುರುಷರಿಂದ ಕೂಡಿದ ಸಂಸ್ಥೆಗಳಾಗಿರುತ್ತವೆ. ಸಕ್ರಿಯವಾಗಿ ಮೂರು ತಲೆಮಾರುಗಳ ಪುರುಷ ಸದಸ್ಯರು ಈ ವ್ಯವಹಾರ ಸಂಸ್ಥೆಗಳ ಸದಸ್ಯರಾಗುತ್ತಾರೆ. ಅವಿಭಕ್ತ ಕುಟುಂಬದ ಅತ್ಯಂತ ಹಿರಿಯ ಪುರುಷ ಸದಸ್ಯ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾನೆ. ಅವನನ್ನು ‘ಕರ್ತ’ ಎಂದು ಕರೆಯುವರು. ಮಾಲಿಕತ್ವವು ಎಲ್ಲ ಸದಸ್ಯರದಾಗಿದ್ದರೂ ಆಡಳಿತವನ್ನು ಕರ್ತನು ನಿರ್ವಹಿಸುತ್ತಾನೆ. ಕರ್ತನ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ. ಇತರೆ ಸದಸ್ಯರ ಹೊಣೆಗಾರಿಕೆಯು ಅವರು ಹೂಡಿರುವ ಬಂಡವಾಳದ ಪ್ರಮಾಣಕ್ಕೆ ಸೀಮಿತವಾಗಿರುತ್ತದೆ.
Post Comment