ncert class 8: ಅಧ್ಯಾಯ – 26 ಜಲಗೋಳ

chapter-26--1024x576 ncert class 8: ಅಧ್ಯಾಯ - 26 ಜಲಗೋಳ

ncert class 8

|.ಬಿಟ್ಟಿರುವ ಸ್ಥಳವನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.

1. ಖಂಡಾವರಣ ಪ್ರದೇಶದ ಸರಾಸರಿ ಆಳವು 100ಫ್ಯಾದಂಗಳು ಆಗಿದೆ

2. ಒಂದು ಫ್ಯಾದಮ್ 6 ಅಡಿ ಗಳಿಗೆ ಸಮವಾಗಿರುತ್ತದೆ.

3 .ಪೆಸಿಫಿಕ್‌ ಸಾಗರದ ಅತ್ಯಂತ ಆಳವಾದ ಸ್ಥಳ ಟೊಂಗ ಪ್ರಪಾತಆಗಿದೆ.

4. ಸಾಗರಗಳ ಸರಾಸರಿ ಲವಣತೆಯ ಪ್ರಮಾಣ 35/°°° ರಷ್ಟಿದೆ.

5 .ಹುಣ್ಣಿಮೆಯ ದಿನಗಳಲ್ಲಿ ಕಂಡುಬರುವ ಉಬ್ಬರಗಳು ಅಧಿಕ ಉಬ್ಬರಗಳು

||.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

6. ಜಲಗೋಳ ಎಂದರೇನು ?

ಉತ್ತರ:- ಜಲರಾಶಿಯಿಂದ ಕೂಡಿದ ಭೂಮಿಯ ಪ್ರದೇಶಕ್ಕೆ ಜಲಗೋಳ ಎಂದು ಕರೆಯುವರು. ಭೂಮಿಯ ಮೇಲ್ಮೈಯಲ್ಲಿರುವ  70-78 ರಷ್ಟು ಭಾಗ ಅಂದರೆ ಸುಮಾರು 361 ದಶಲಕ್ಷ ಚಕಿಮೀ ಪ್ರದೇಶ ಜಲರಾಶಿಯಿಂದ ಆವೃತವಾಗಿದೆ. ನೀರಿನ ಮೂಲಗಳಾದ ಕೊಳ, ಕೆರೆ, ನದಿ, ಸಮುದ್ರಗಳನ್ನು ಹೊಂದಿರುವ ಪ್ರದೇಶಗಳಿಗೆ ಒಟ್ಟಾರೆಯಾಗಿ ಜಲಗೋಳ ಎಂದು ಕರೆಯಲಾಗುವುದು.

7. ಸಾಗರತಳದ ಭೂ ಸ್ವರೂಪದ ನಾಲ್ಕು ಪ್ರಮುಖ ಭಾಗಗಳನ್ನು ತಿಳಿಸಿ

ಉತ್ತರ:- ಭೂ ಸ್ವರೂಪಗಳ ಗುಣಲಕ್ಷಣಗಳನ್ನು ಆಧರಿಸಿ ಸಾಗರ ತಳವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು, ಅವುಗಳೆಂದರೆ ಈ ಕೆಳನಂತಿವೆ;

  • ಖಂಡಾವರಣ ಪ್ರದೇಶ,
  • ಖಂಡಾವರಣ ಇಳಿಜಾರು,
  • ಆಳಸಾಗರ ಮೈದಾನ 
  • ಸಾಗರ ತಗ್ಗುಗಳು.

ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ ಭಾಗವನ್ನೇ ಖಂಡಾವರಣ ಪ್ರದೇಶಎಂದು ಕರೆಯಲಾಗುವುದು.

ಖಂಡಾವರಣ ಇಳಿಜಾರು ಸಾಗರತಳದ ಎರಡನೇ ಭಾಗವಾಗಿದೆ, ಕಡಿದಾದ ಇಳಿಜಾರಿನಿಂದ ಕೂಡಿದ್ದಾಗಿದೆ.

ಸಾಗರಗಳ ತಳದಲ್ಲಿ ವಿಸ್ತಾರವಾದ ಮೈದಾನ ವಿದ್ದು. ಇದನ್ನು ಆಳಸಾಗರ ಮೈದಾನ ಅಥವಾ ಆಬಿಸಲ್ ಮೈದಾನ ಎಂದು ಕರೆಯಲಾಗುವುದು.

ಸಾಗರ ತಗ್ಗುಗಳನ್ನು ಸಾಗರ ಪ್ರಪಾತಗಳೆಂದು ಕರೆಯುರತ್ತಾರೆ.

8. ಸಾಗರ ಪ್ರವಾಹಗಳಿಗೂ ಮತ್ತು ಉಬ್ಬರವಿಳಿತಗಳಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.

ಉತ್ತರ:- ನಿಶ್ಚಿತ ದಿಕ್ಕಿನಲ್ಲಿ ಸಕ್ರಿಯಾವಾಗಿ ಹರಿಯುವ ಸಾಗರದ ಮೇಲ್ಮೈ ನೀರನ್ನು ‘ಸಾಗರ ಪ್ರವಾಹ’ ಗಳೆಂದು ಕರೆಯುತ್ತಾರೆ.
ಸಮುದ್ರ  ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನು ‘ಉಬ್ಬರ ವಿಳಿತ’ ಎಂದು ಕರೆಯುವರು,

9. ಗರಿಷ್ಠ ಉಬ್ಬರ ಮತ್ತು ಕನಿಷ್ಠ ಉಬ್ಬರಗಳ ನಡುವಿನ ವ್ಯತ್ಯಾಸ ತಿಳಿಸಿ.

ಉತ್ತರ:- ಸಮುದ್ರ ಮತ್ತು ಸಾಗರಗಳ ನೀರಿನ ಮಟ್ಟವ ಏರುವುದಕ್ಕೆ ಗರಿಷ್ಠ ಪ್ರಮಾಣದ ಉಬ್ಬರ ಎನ್ನುವರು.
ಗರಿಷ್ಠ ಪ್ರಮಾಣದ ಉಬ್ಬರವು ಭೂಮಿ, ಚಂದ್ರ, ಸೂರ್ಯ ಇವುಗಳು ಒಂದೇ ಸರಳ ರೇಖೆಯಲ್ಲಿರುವ ಅಮಾವಸ್ಯೆ ಹಾಗು ಹುಣ್ಣಿಮೆ ದಿನಗಳಲ್ಲಿ ಉಂಟಾಗುತ್ತದೆ.

ಸಮುದ್ರ ಮತ್ತು ಸಾಗರಗಳ ನೀರಿನ ಮಟ್ಟವು ಇಳಿಯುವುದನ್ನು ಕನಿಷ್ಠ ಪ್ರಮಾಣದ ಉಬ್ಬರ ಎಂದು ಕರೆವರು.ಕನಿಷ್ಠ ಉಬ್ಬರಗಳು ವೃದ್ಧಿಚಂದ್ರ ಮತ್ತು ಅರ್ದಾದಿತ್ಯ ಚಂದ್ರನ ದಿನಗಳಲ್ಲಿ ಕಂಡುಬರುತ್ತವೆ. ಕನಿಷ್ಠ ಉಬ್ಬರಗಳ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿದ್ದು ಚಂದ್ರನು ಭೂಮಿಗಯ ಲಂಬವಾಗಿರುತ್ತಾನೆ.

10. ಸಾಗರಗಳನ್ನು ನಾವು ಹೇಗೆ ಸಂರಕ್ಷಿಸಬೇಕು?

ಉತ್ತರ:- ಸಾಗರಗಳನ್ನು ಈ ಕೆಳಕಂಡ ಕ್ರಮಗಳ ಮೂಲಕ ಸಂರಕ್ಷಿಸಬಹುದು.

1. ಸಾಗರಗಳ ಮೂಲಕ ಹಡಗುಗಳಲ್ಲಿ ಕಚ್ಚಾ ತೈಲವನ್ನು ರವಾನಿಸುವ ಬದಲು ಕೊಳವೆ ಮಾರ್ಗಗಳ ಮೂಲಕ ಸಾಗಿಸುವುದು.

2. ಅಣು ಇಂಧನ ತಾಜ್ಯವಸ್ತುಗಳನ್ನು ಸಾಗರಗಳಿಗೆ ಹಾಕುವುದನ್ನು ನಿಯಂತ್ರಣಗೊಳಿಸುವುದು,

3. ತೀರವಲಯದಲ್ಲಿರುವ ತೈಲ-ರಾಸಾಯನಿಕ ಕೈಗಾರಿಕೆಗಳು ಮಾಲಿನ್ಯ ಉಂಟು ಮಾಡದಂತೆ ತೀವ್ರ ಕ್ರಮಕೈಗೊಳ್ಳಬೇಕು.

4. ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಬಂದರು ಹಾಗೂ ಹಡಗು ತಾಣಗಳಲ್ಲಿ ಎಸೆಯುವುದನ್ನು ನಿಯಂತ್ರಿಸಬೇಕು.

5. ತೀರಗಳಲ್ಲಿ ಅದಿರುಗಳ ಸಂಗ್ರಹಣೆ, ಗಣಿಗಾರಿಕೆ ಮೊದಲಾದವುಗಳನ್ನು ನಿಯಂತ್ರಿಸಬೆಕು.

6.ಕರಾವಳಿಯ ಮರಳು ದಂಡೆಗಳನ್ನು ಬೀಚ್ ವಿವಿಧ ರೀತಿಯಲ್ಲಿ ಹಾಳುಗುತ್ತಿದ್ದು , ಅವುಗಳನ್ನು ಸಂರಕ್ಷಿಸುವುದು ಅತ್ತ್ಯಗತ್ಯವಾಗಿದೆ.

||| ಹೊಂದಿಸಿ ಬರೆಯಿರಿ,

 II.  ಫ್ಯಾದಮ್                               ಸಾಗರದ ಆಳ

12. ಓಯೋಶಿವೋ.                        ಶೀತಪ್ರವಾಹ

13. ಗಲ್ಫ್ ಸ್ಟ್ರೀಮ್.                         ಅಮೆರಿಕಾದ ಪೂರ್ವಕರಾವಳಿ

14. ಸಮುದ್ರ ಪರ್ವತಗಳು.              ಆಳಸಾಗರದ ಮೈದಾನ

15. ಅಗುಲ್ಹಾಸ್ ಪ್ರವಾಹ.               ಹಿಂದುಮಹಾಸಾಗರ ಪ್ರವಾಹ

IN ಕೆಳಗಿನವುಗಳನ್ನು ಅರ್ಥೈಸಿ

16. ಖಂಡಾವರಣ ಇಳಿಜಾರು:

ಉತ್ತರ:- ಖಂಡಾವರಣ ಇಳಿಜಾರು ಸಾಗರತಳದ ಎರಡನೇ ಭಾಗವಾಗಿದೆ, ಕಡಿದಾದ ಇಳಿಜಾರಿನಿಂದ ಕೂಡಿದ್ದು. ಇದು ಖಂಡಾವರಣ ಪ್ರದೇಶ ಹಾಗೂ ಆಳಸಾಗರ ಮೈದಾನಗಳನ್ನು ಸಂಪರ್ಕಿಸುತ್ತದೆ. ಈ ವಲಯದಲ್ಲಿಯೇ ಸಾಗರದ ಕಂದರಗಳು  ಕಂಡು ಬರುವುದು.

17. ಲವಣತೆ:

ಉತ್ತರ:- ಸಾಗರ ಅಥವಾ ಸಮುದ್ರದ ನೀರಿನಲ್ಲಿ ಕರಗಿರುವ ಉಪ್ಪಿನಾಂಶಗಳ ಪ್ರಮಾಣಗಳನ್ನು ‘ಲವಣತೆ’ ಎನ್ನುವರು. ನೀರಿನಲ್ಲಿ ಲವಣಾಂಶವು ಹೆಚ್ಚು ಕಂಡುಬರುವುದರಿಂದ ಸಮುದ್ರ ಹಾಗೂ ಸಾಗರದ ನೀರು ಉಪ್ಪಾಗಿರುವುದು. ಸಾಗರದ ನೀರಿನ ಲವಣತೆ 35/°°°(ಅಂದರೆ 1000 ಭಾಗದಲ್ಲಿ 35 ಭಾಗ ಎಂದರ್ಥ) ಸಾಗರದ ನೀರು ಆವಿಯಾಗಿ ಅದರಲ್ಲಿರುವ ಲವಣಗಳು ಅಲ್ಲಿಯೇ ಉಳಿದಿರುವುದರಿಂದ ನೀರು ನಿರಂತರವಾಗಿ ಉಪ್ಪಾಗಿ ಪರಿಣಮಿಸಲು ಕಾರಣವಾಗುವುದು.

18. ಉಷ್ಣ ಮತ್ತು ಶೀತ ಸಾಗರ ಪ್ರವಾಹಗಳು

ಉತ್ತರ:- ನಿಶ್ಚಿತ ದಿಕ್ಕಿನಲ್ಲಿ ನಿರಂತರವಾಗಿ ಹರಿಯುವ ಸಾಗರದ ಮೇಲ್ಮೈಯ ನೀರನ್ನು ‘ಸಾಗರ ಪ್ರವಾಹ’ ಗಳೆಂದು ಕರೆಯಲಾಗುವುದು.

ಸಾಗರ ಪ್ರವಾಹಗಳಲ್ಲಿಪ್ರಮುಖವಾಗಿ ಎರಡು ವಿಧಗಳಿವೆ. ಅವುಗಳೇಂದರೆ:

1.ಉಷ್ಣ ಸಾಗರ ಪ್ರವಾಹಗಳು: ಇವುಗಳು ಸಮಭಾಜಕ ವೃತ್ತ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪ ಧ್ರುವೀಯ ಪ್ರದೇಶಗಳ ಕಡೆಗೆ ಹರಿಯುತ್ತವೆ.

2.ಶೀತಸಾಗರ ಪ್ರವಾಹಗಳು: ಇವುಗಳು ಧ್ರುವಪ್ರದೇಶದಲ್ಲಿ ಪ್ರಾರಂಭವಾಗಿ ಸಮಭಾಜಕ ವೃತ್ತದ ಕಡೆಗೆ ಹರಿಯುತ್ತವೆ.

19. ಅಧಿಕ ಭರತ ಮತ್ತು ಕನಿಷ್ಪಭರತ

ಉತ್ತರ:- ಸಮುದ್ರ ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನೇ ‘ಉಬ್ಬರ ವಿಳಿತ’ ಎನ್ನುವರು.

ಉಬ್ಬರವಿಳಿತಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ ಅವುಗಳೆಂದರೆ

 ಅ) ಏರುಬ್ಬರ  : ಸಮುದ್ರ ಅಥವಾ ಸಾಗರದ ನೀರು ಒಮ್ಮೆ ಏರುವುದರಿಂದ ಉಂಟಾಗುತ್ತದೆ. ಇದನ್ನು ಏರುಬ್ಬರ ಅಥವಾ ಪ್ರವಾಹದ ಉಬ್ಬರ ಅಥವಾ ಅಧಿಕ ಭರತವೆನ್ನುವರು.

ಆ) ಇಳಿಉಬ್ಬರ : ಒಮ್ಮೆ ಏರುಉಬ್ಬರದ ಪ್ರಮಾಣದಷ್ಟೇ ನೀರಿನ ಮಟ್ಟ ಕೆಳಗೆ ಇಳಿಯುವುದು, ಇದನ್ನೇ ಇಳಿಉಬ್ಬರ ಅಥವಾ ಕನಿಷ್ಠ ಭರತ ಎಂದು ಕರೆಯಲಾಗುವುದು.

20. ಬೆಂಗುಲಾಪ್ರವಾಹ

ಉತ್ತರ:-  ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತ ಸಾಗರ ಪ್ರವಾಹಗಳಲ್ಲಿ ಬೆಂಗ್ವುಲಾ ಪ್ರವಾಹ ಒಂದಾಗಿದ್ದು.ಇದು ಕೇಪ್ ಆಫ್ ಗುಡ್ ಹೋಪ್‌ನಿಂದ ಉತ್ತರಾಭಿಮುಖವಾಗಿ ಹರಿಯುವುದು, ಅಲ್ಲಿ ಇದು ಪಶ್ಚಿಮ ಆಫ್ರಿಕಾದ ಕರಾವಳಿಯ ಸಮಭಾಜಕದ ಕಡೆಗೆ ಚಲಿಸುತ್ತದೆ.

21, ಉಬ್ಬರವಿಳಿತಗಳು,

ಉತ್ತರ:-  ಸಮುದ್ರ  ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವ ಪ್ರಕ್ರಿಯೆಗೆ ‘ಉಬ್ಬರ ಎಳಿತ’ ಎಂದು ಕರೆಯಲಾಗುವುದು, ಉಬ್ಬರವಿಳಿತಗಳಿಗೆ ಮುಖ್ಯಕಾರಣಗಳೆಂದರೆ, ಚಂದ್ರನ ಗುರುತ್ವಾಕರ್ಷಣ ಶಕ್ತಿ, ಸೂರ್ಯನ ಗುರುತ್ವಾಕರ್ಷಣ ಶಕ್ತಿ, ಹಾಗು ಭೂಮಿಯ ದೈನಂದಿನ ಚಲನೆ ಮತ್ತು ಭೂಮಿಯ ಕೇಂದ್ರಾಪಗಮನ ಶಕ್ತಿ.

ncert class 8

Get all kind of information CLICK HERE —- studybyjobs.com

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ – 16: ಮೌರ್ಯರು ಮತ್ತು ಕುಶಾಣರು

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ- 17: ಗುಪ್ತರು ಮತ್ತು ವರ್ಧನರು

ಅಧ್ಯಾಯ-18ದಕ್ಷಿಣ ಭಾರತದ ರಾಜವಂಶಗಳು ಶಾತವಾಹನರು,ಕದಂಬರು ಗಂಗರು

ಅಧ್ಯಾಯ – 19; ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು 

ಅಧ್ಯಾಯ- 20ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2—-ಅಧ್ಯಾಯ -22 ಪ್ರಜಾಪ್ರಭುತ್ವ

RRB Group D Syllabus 2025,subject – wise CBT Topics

Mahabub khan is a wellknown Full stackweb developer,SEO Specialist,Content writer specialist and alsoa Youtuber,Blogger,subject matter expert of Science,and Mathematics.he is also Digital Marketing Expert. Sheheen Begum is also Famous Full stackweb developer,SEO Specialist, Digital Marketing Expert,Blogger,Youtuber,Online Content writer have written more than 5000+ articles .

Post Comment

You May Have Missed