ncert science ಅಧ್ಯಾಯ -1: ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

ncert science
the-crop-1024x576 ncert science  ಅಧ್ಯಾಯ -1: ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

ncert science, class 8, kseeb, kseeb solutions, ncert class 8 science answer, ncert science for class 8,

1) ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆಯ್ಕೆ ಮಾಡಿ ಖಾಲಿಯಾದ ಬಿಟ್ಟ ಸ್ಥಳವನ್ನು ಭರ್ತಿ ಮಾಡಿ,

(a) ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಿ ಬೆಳೆಸುವುದನ್ನು ಬೆಳೆ ಎಂದು ಕರೆಯುತ್ತಾರೆ.

(b) ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ ಪೂರ್ವಸಿದ್ಧತೆ ಮೊದಲ ಹಂತವಾಗಿದೆ.

(C) ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ತೇಲುತ್ತದೆ.

(d) ಬೆಳೆಯುತ್ತಿರುವ ಬೆಳೆಗೆ ಸಾಕಷ್ಟು ಸೌರಬೆಳಕು ಮತ್ತು ಮಣ್ಣಿನಿಂದ ನೀರು ಮತ್ತು ಪೋಷಕಾಂಶಗಳು ಅಗತ್ಯವಾಗಿ ಬೇಕಾಗುತ್ತದೆ.

2) A ಪಟ್ಟಿಯಲ್ಲಿರುವ ಪ್ರಮುಖ ಪದಗಳ ಜೊತೆಗೆ  B ಪಟ್ಟಿಯಲ್ಲಿರುವ ಅಂಶಗಳನ್ನು ಹೊಂದಿಸಿ ಬರೆಯಿರಿ

        A                                                    B

1.ಖಾರಿಫ್ ಬೆಳೆಗಳು                          ಭತ್ತ ಮತ್ತು ಜೋಳ

2.ರಬಿ ಬೆಳೆಗಳು                                ಗೋಧಿ, ಕಡಲೆ, ಬಟಾಣಿ

3.ರಾಸಾಯನಿಕ ಗೊಬ್ಬರಗಳು           ಯೂರಿಯಾ ಮತ್ತು ಸೂಪರ್ ಫಾಸ್ಪೇಟ್

4.ಸಾವಯವ ಗೊಬ್ಬರ                     ಪ್ರಾಣಿತ್ಯಾಜ್ಯ, ಸಗಣಿ, ಮೂತ್ರ , ಸಸ್ಯತ್ಯಾಜ್ಯ                  

3) ಈ ಕೆಳಗಿನ ಪ್ರತಿಯೊಂದರ ಕುರಿತು ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿಯನ್ನು  ಬರೆಯಿರಿ,

(a) ಮಣ್ಣನ್ನು ಸಿದ್ಧಗೊಳಿಸುವಿಕ (b) ಬಿತ್ತನೆ

(c) ಕಳೆ ನಿವಾರಣೆ (d) ಒಕ್ಕಣೆ

(a) ಮಣ್ಣನ್ನು ಸಿದ್ಧಗೊಳಿಸುವಿಕೆ: ಬೆಳೆಯನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸುವುದು ಕೃಷಿಯ ಮೊದಲ ಹಂತವಾಗಿದೆ. ಕೃಷಿಯಲ್ಲಿನ ಬಹುಮುಖ್ಯ ಕಾರ್ಯವೆನೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು. ಇದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತವೆ . ಮಣ್ಣಿನಲ್ಲಿರುವ ಎರೆಹುಳುಗಳು ಮತ್ತು ಸೂಕ್ಷ್ಮಜೀವಿಗಳು ಮಣ್ಣನ್ನು ತಿರುವಿಹಾಕಿ ಸಡಿಲಮಡುತ್ತವೆ  ಮತ್ತು ಅದಕ್ಕೆ ಹೊಮಸ್ಸನ್ನು ಸೇರಿಸುತ್ತದೆ. ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎಂದಯ ಕರೆಯುತ್ತಾರೆ. ಮಣ್ಣು ಸಡಿಲಗೊಳಿಸುವ ಪ್ರಕ್ರಿಯೆಯು ಪೋಷಕಾಂಶದಿಂದ ಸಮೃದ್ಧವಾದ ಮಣ್ಣನ್ನು ಮೇಲ್ಬಾಗಕ್ಕೆ ತರುತದೆ. ಈ ಪೋಷಕಾಂಶಗಳನ್ನು ಸಸ್ಯಗಳು ಬಳಸಿಕೊಳ್ಳುತ್ತವೆ.

(b) ಬಿತ್ತನೆ: ಬಿತ್ತನೆಯು ಬೆಳೆ ಉತ್ಪಾದನೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಬಿತ್ತನೆಗೆ ಮೊದಲು ಒಳ್ಳೆಯ ತಳಿಯ, ಆರೋಗ್ಯಕರವಾದ, ಸ್ವಚ್ಛ ಮತ್ತು ಉತ್ತಮವಾದ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಲಾಗುವುದು. ರೈತರು ಅಧಿಕ ಇಳುವರಿ ನೀಡುವ ಬೀಜಗಳ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಬಿತ್ತನೆಯನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಸಲಕರಣೆಗಳಿಂದ ಅಥವಾ  ಯಾಂತ್ರಿಕ ಕೂರಿಗೆಯಿಂದ ಮಾಡಲಾಗುವುದು. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯು  ಒಂದು ಆಲಿಕೆಯ ಆಕಾರದಲ್ಲಿ ಇರುತ್ತದೆ. ಹಿಂದಿನ ಕಾಲದಲ್ಲಿ ಇವನ್ನು ಹೆಚ್ಚು ಬಳಸಲಾಗುತ್ತಿತ್ತು, ಆದರೆ ಈಗಿನ ದಿನಗಳಲ್ಲಿ ಟ್ರ್ಯಾಕ್ಟ‌ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜವನ್ನು ಬಿತ್ತನೆ ಮಾಡುತ್ತದೆ. ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನುಳಿಸುತ್ತದೆ,

(c) ಕಳೆ ನಿವಾರಣೆ:  ಬೆಳೆಯ ಜೊತೆಗೆ ಬೆಳೆಯದ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎಂದು ಕರೆಯುವರು. ಕಳಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು. ಕಳೆಗಳು ನೀರು,ಮತ್ತು ಪೋಷಕಾಂಶಗಳು, ಸ್ಥಳ ಹಾಗೂ ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆಯನ್ನು  ನಡೆಸುವುದರಿಂದ ಬೆಳೆಗಳ ಬೆಳೆಯುವಿಕೆಗೆ ಅವು ಹಾನಿಯನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಇಳುದರಿಯು ಕಡಿಮೆಯಾಗುತ್ತದೆ. ಆದ್ದರಿಂದ, ಕಳೆ ಕೀಳುವಿಕೆಯ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಕಳೆ ಕೀಳುವಿಕೆಯ ಕೆಲವು ವಿಧಾನಗಳು ಹೀಗಿದೆ:

(i) ಕಳೆನಾಶಕಗಳು ಎಂದು ಕರೆಯುವ ಕೆಲವು ರಾಸಾಯನಿಕಗಳನ್ನು ಬಳಸುವುದರಿಂದ ಕಳೆಗಳಿಗೆ  ನಿಯಂತ್ರಿಸಬಹುದು. ಇವುಗಳಿಂದ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

(ii) ಬೆಳೆಗಳ ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆಯು ಕಳೆಗಳನ್ನು ಬುಡಮೇಲಾಗಿಸಿ  ನಾಶ ಪಡಿಸುತ್ತದೆ. ಕಳೆಗಳು. ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅದನ್ನು ಕಿತ್ತು ಹಾಕಬೇಕು,

(iii) ಕಾಲಕಾಲಕ್ಕೆ ಕಳೆಯನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕೈಗಳಿಂದ ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ. ಇದನ್ನು ಕುರ್ಪಿ ಅಥವಾ ಬರ್ಚಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಮಾಡಲಾಗುವುದು. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂ ಸಹ ಬಳಸಲಾಗುವುದು.

(d) ಒಕ್ಕಣೆಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ವಿಭಜಿಸುವ ಪ್ರಕ್ರಿಯೆಯನ್ನು ಒಕ್ಕಣೆ ಎಂದು ಕರೆಯುತ್ತಾರೆ, ಇದನ್ನು ‘ಕಂಬೈನ್’ ಎಂದು ಕರೆಯುವ ಯಂತ್ರದಿಂದ ನಡೆಸಲಾಗುತ್ತದೆ. ವಾಸ್ತವವಾಗಿ ಕಂಟೈನ್ ಎಂಬುದು ಹಾರ್ದೆಸ್ಟರ್ ಮತ್ತು ಒಕ್ಕುದ ಚಿತ್ರಗಳ ಜೋಡಣೆಯಾಗಿದ್ದು. ಇದು ಸಸ್ಯಗಳನ್ನು ಕಟಾವು ಮಾಡುವುದರ ಜೊತೆಗೆ ಕಾಳುಗಳನ್ನು ಶುದ್ದೀಕರಿಸುತ್ತದೆ.

4) ರಸಗೊಬ್ಬರಗಳು ಸಾವಯುವ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ವಿವರಿಸಿ.

ಉತ್ತರ: ರಸಗೊಬ್ಬರಗಳು ಮತ್ತು ಸಾವಯವ ಗೊಬ್ಬರ ನಡುವಿನ ವ್ಯತ್ಯಾಸಗಳು:

ರಸಗೊಬ್ಬರಗಳುಸಾವಯವ ಗೊಬ್ಬರಗಳು
ರಸಗೊಬ್ಬರವು ಮಾನವ ನಿರ್ಮಿತ ನೀರಯವದ ಲವಣವಾಗಿದೆ,11) ಸಾವಯವ ಗೊಬ್ಬರವು ಒಂದು ನೈಸರ್ಗಿಕ ಪದಾರ್ಥವಾಗಿದ್ದು, ಅದನ್ನು ಸಗಣಿ ಮತ್ತು ಸಸ್ಯಗಳ ಉಳಿಕೆಗಳ ವಿಘಟನೆಯಿಂದ ಪಡೆಯಲಾಗುವುದು.
ರಸಗೊಬ್ಬರಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುವುದುಸಾವಯವ ಗೊಬ್ಬರಗಳನ್ನು ಬಯಲು ಪ್ರದೆಶಗಳಲ್ಲಿ ಉತ್ಪಾದಿಸಬಹುದು
ರಸಗೊಬ್ಬರಗಳು ಯಾವುದೇ ರೀತಿಯ ಹೂಮಸ್ ಅನ್ನು ಮಣ್ಣಿಗೆ ಒದಗಿಸುವುದಿಲ್ಲ.ಸಾವಯವ ಗೊಬ್ಬರವು ಸಾಕಷ್ಟು ಹೂಮರ್ ಅನ್ನು ಮಣ್ಣಿಗೆ ಒದಗಿಸುತ್ತದೆ.
ರಸಗೊಬ್ಬರಗಳು ನೈಟ್ರೋಜನ್ ಪಾಸ್ಪರಸ್ ಮತ್ತು ಪೊಟ್ಯಾಸಿಯಂಗಳಂತಹ ಸಸ್ಯ ಪೋಷಕಗಳಿಂದ ಸಮೃದ್ಧದಿಂದ ಕೂಡಿವೆ.ಸಾಪೇಕ್ಷವಾಗಿ ಸಾವಯವ ಗೊಬ್ಬರವು ಸಸ್ಯಪೋಷಕಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿಕೊಂಡಿವೆ,
ರಸಗೊಬ್ಬರಗಳನ್ನು ಬಳಸುವಾಗ ಸೂಕ್ತ ಪ್ರಮಾಣ, ಅವಧಿ ಪ್ರಮಾಣದಲ್ಲಿ ಹೊಂದಿದೆಸಾವಯವ ಗೊಬ್ಬರಗಳನ್ನು ಬಳಸಲು ಸೂಕ್ತ ಪ್ರಮಾಣ, ಅವಧಿ ಇತ್ಯಾದಿ ವಿಶೇಷ ಮಾರ್ಗದರ್ಶದ ಅಗತ್ಯವಿರುತ್ತದೆ
ಇದರ ಅತಿಯಾದ ಬಳಕೆಯು ಪ್ರಕೃತಿಗೆ ಹಾನಿಯನ್ನುಂಟು ಮಾಡುತ್ತದೆಇದರ ಅತಿಯಾದ ಬಳಕೆಯು ಪ್ರಕೃತಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲ.

5) ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.

ಉತ್ತರ: ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎಂದು ಕರೆಯುವರು. ನೀರನ್ನು ಉಳಿತಾಯ ಮಾಡದ ನೀರಾದರಿಯ ಎರಡು ವಿಧಾನಗಳಿವೆ ಅವುಗಳೆಂದರೆ,

(1) ತುಂತುರು ನೀರಾವರಿಸಾಕಷ್ಟು ನೀರಿನ ಲಭ್ಯತೆ ಇಲ್ಲದ ಮತ್ತು ಅಸಮವಾದ ಭೂಮಿಗೆ ಈ ವಿಧಾನವು ಅತ್ಯಂತ  ಉಪಯುಕ್ತವಾಗಿದೆ. ಇಲ್ಲಿ ತುದಿಯಲ್ಲಿ ತಿರುಗುವ ನಳಿಕೆಯನ್ನು ಹೊಂದಿರುವ ಕೊಳವೆಯನ್ನು ಮುಖ್ಯ ಕೊಳವೆಗೆ ನಿಯಮಿತವಾದ ಅಂತರಗಳಲ್ಲಿ ಲಂಬವಾಗಿ ನಿಲ್ಲುವ  ಹಾಗೆ ಜೋಡಿಸಲಾಗಿರುತ್ತದೆ. ಒಂದು ಮೋಟಾರ್ ಪಂಪ್‌ ನೆರವಿನಿಂದ ನೀರನ್ನು ಹೆಚ್ಚು ಒತ್ತಡದಲ್ಲಿ ಮುಖ್ಯ ಕೊಳವೆಗೆ ಹರಿಯುವಂತೆ ಮಾಡಿದರೆ ಅದು ತಿರುಗುವ ಹಳಿಕೆಗಳ ಮೂಲಕ ಹೊರಚಿಮ್ಮುತ್ತದೆ, ಇದು ಮಳೆಯಂತೆ ಬೆಳೆಗಳ ಮೇಲೆ ಬೀಳುತ್ತದೆ.

(2) ಹನಿ ನೀರಾವರಿ: ಈ ವಿಧಾನಗಳಲ್ಲಿ ನೀರು ಹನಿ ಹನಿಯಾಗಿ ಬೇರುಗಳ ಬಳಿ ಬೀಳುವುದು. ಆದ್ದರಿಂದ ಇದನ್ನು ಹನಿ ನೀರಾವರಿ ವಿಧಾನ ಎಂದು ಕರೆಯಲಾಗುವುದು, ಇದು ಹಣ್ಣಿನ ಗಿಡಗಳಿಗೆ, ಉದ್ಯಾನಗಳಿಗೆ ಮತ್ತು ಮರಗಳಿಗೆ ನೀರು ಹಾಯಿಸುವುದಕ್ಕೆ ಅತ್ಯುತ್ತಮವಾಗಿದೆ.

ncert science, class 8, kseeb, kseeb solutions, ncert class 8 science answer, ncert science for class 8,

6. ಸಸ್ಯ ಅಥವಾ ಪ್ರಾಣಿ ತ್ಯಾಜ್ಯಗಳ ವಿಘಟನೆಯಿಂದ ಪಡೆಯಲಾಗುವ ಗೊಬ್ಬರವನ್ನು ಸಾವಯವ ಗೊಬ್ಬರ ಎಂದು ಕರೆಯುತ್ತಾರೆ,

7. ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸಲು ಜಮೀನಿಗೆ ಗೊಬ್ಬರಗಳನ್ನು ಹಾಕುವ ಪ್ರಕ್ರಿಯೆಯನ್ನು ಗೊಬ್ಬರನೀಡಿಕೆ ಎಂದು ಕರೆಯುತ್ತಾರೆ.

8. ಯಜಮಾನ ಆಧಾರದ ಮೇಲೆ ಭಾರತದಲ್ಲಿನ ಬೆಳೆಗಳನ್ನು ಎಷ್ಟು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ? ಅದನ್ನು ಹೆಸರಿಸಿ

ಉತ್ತರ: ಋತುಮಾನದ ಆಧಾರದ ಮೇಲೆ ಭಾರತದಲ್ಲಿನ  ಬೆಳೆಗಳನ್ನು ಪ್ರಮುಖವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ  ಅವುಗಳೆಂದರೆ –

ರಬಿ ಮತ್ತು ಖಾರಿಫ್ ಬೆಳೆಗಳು.

9. ಪಶುಸಂಗೋಪನೆ ಎಂದರೇನು ?

ಉತ್ತರ: ಪ್ರಾಣಿಗಳಿಂದಲೂ ಸಹ ಆಹಾರವನ್ನು ಪಡೆಯಲಾಗುತ್ತದೆ  ಮತ್ತು ಅದಕ್ಕಾಗಿ ಪ್ರಾಣಿಗಳನ್ನು ಸಾಕುತ್ತಾರೆ ಇದನ್ನು ಪಶುಸಂಗೋಪನೆ ಎಂದು ಕರೆಯಲಾಗುತ್ತದೆ.

10. ದೇಶದ ವಿಭಿನ್ನ ಭಾಗಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ, ಏಕೆ?

ಉತ್ತರ:  ತೇವಾಂಶ ಉಷ್ಣಾಂಶ, ಮತ್ತು ಮಳೆಯ ಪ್ರಮಾಣಗಳಂತಹ ಹವಾಮಾನ ಪರಿಸ್ಥಿತಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುವುದು. ಇದರಿಂದಾಗಿಯೇ ದೇಶದ ಬೆರೆ ಬೆರೆ ಭಾಗಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುವುದು.

11. ಖಾರಿಪ್‌ ಬೆಳೆಗಳು ಎಂದರೇನು ಉದಾಹರಣೆ ಕೊಡಿ

ಉತ್ತರ: ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಖಾರಿಫ್ ಬೆಳಗಳು ಎನ್ನುವರು. ಭಾರತದಲ್ಲಿ ಮಳೆಗಾಲವು ಸಾಮಾನ್ಯವಾಗಿ ಜೂನ್‌ ನಿಂದ ಸೆಪ್ಟೆಂಬರ್ಗಳ ವರೆಗೆ ಇರುವುದು. ಭತ್ತ, ಜೋಳ, ಸೋಯಾಬೀನ್, ನೆಲಗಡಲೆ, ಹತ್ತಿ ಇತ್ಯಾದಿಗಳು ಖಾರಿಫ್

12. ರಬಿ ಬೆಳೆಗಳು ಎಂದರೇನು? ಉದಾಹರಣೆ ಕೂಡಿ,

ಉತ್ತರ: ಚಳಿಗಾಲದಲ್ಲಿ ಬೆಳೆಯುದ ಬೆಳೆಗಳಿಗೆ ರಬಿ ಬೆಳೆಗಳು ಎಂದು ಕರೆಯುವರು, ಅವುಗಳ ಕಾಲಾವಧಿ ಸಾಮಾನ್ಯವಾಗಿ ಆಕ್ಟೋಬರ್‌ ನಿಂದ ಮಾರ್ಚ್‌ವರೆಗೆ ಇರುವುದು, ಗೋಧಿ, ಕಾಳೆ, ಬಟಾಣಿ, ಸಾಸಿದೆ ಮತ್ತು ಅಗಸೆ ಇವುಗಳೆಲ್ಲಾ ರಬಿ ಬೆಳೆಗಳಾಗಿದೆ.

13. ಕೃಷಿ ಪದ್ಧತಿಗಳು ಎಂದರೇನು?

ಉತ್ತರ: ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು  ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದ್ದು. ಈ ಚಟುದಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು.

14. ಕೃಷಿ ಪದ್ಧತಿ(ಚಟುವಟಿಕೆ)ಗಳನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ,

ಉತ್ತರ: ಕೃಷಿ ಪದ್ಧತಿ (ಚಟುವಟಿಕೆ)ಗಳೆಂದರೇ  (1) ಮಣ್ಣನ್ನು ಹದಗೊಳಿಸುವಿಕೆ (1) ಬಿತ್ತನೆ (i) ಸಾವಯದ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು. (v) ನೀರಾವರಿ (v) ಕಳಗಳಿಂದ ರಕ್ಷಣೆ (v) ಕೊಯ್ದು (v) ಸಂಗ್ರಹಣೆ  ಇತ್ಯಾದಿ.

15. ಮಣ್ಣನ್ನು ಸಣ್ಣಕಣಗಳ ಗಾತ್ರದಲ್ಲಿ ಪುಡಿ ಮಾಡಿ ಉದ್ದೇಶಕ್ಕಾಗಿ ಬಳಸುವ ಮುಖ್ಯ ಸಲಕರಣೆಗಳಾವುವು?

ಉತ್ತರ: ಮಣ್ಣನ್ನು ಸಣ್ಣಕಣಗಳ ಗಾತ್ರಕ್ಕೆ ಪುಡಿ ಮಾಡುವ ಉದ್ದೇಶಕ್ಕಾಗಿ ಬಳಸುವ ಮುಖ್ಯ ಸಲಕರಣೆಗಳೆಂದರೆ ನೇಗಿಲು, ಎಡೆಕುಂಟೆಗಳಾಗಿವೆ.

16. ನೇಗಿಲ ರಚನೆ, ಉಪಯೋಗ ಮತ್ತು ಉಪಯೋಗಿಸುವ ವಿಧಾನಗಳನ್ನು ವಿವರಿಸಿ

ಉತ್ತರ: ಮಣ್ಣನ್ನು ಉಳುಮೆ ಮಾಡಲು, ಬೆಳೆಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಇತ್ಯಾದಿ ಕೆಲಸಗಳಿಗೆ ಅನಾದಿಕಾಲದಿಂದ ಇವುಗಳನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ ಎಳೆಯಲಾಗುವುದು. ಇದು ಬಲಯುತವಾದ, ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿವೆ ಅದನ್ನು ನೇಗಿಲಿನ ಕುಳ ಎಂದು ಕರೆಯಲಾಗುವುದು. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಈಚ ಎಂದು ಕರೆಯಲಾಗುವುದುರ. ಈಚಿನ ಒಂದು ತುದಿಯಲ್ಲಿ ಹಿಡಿಗೆ (ಹೇಳಿ )ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲಿಡುವ ನೊಗಕ್ಕೆ ಕಟ್ಟಲಾಗುವುದು. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಲು ಸಾಧ್ಯ.

ncert science, class 8, kseeb, kseeb solutions, ncert class 8 science answer, ncert science for class 8,

17. ಎಡೆಕುಂಟೆಯ ಕಿರು ಪರಿಚಯ ಕೊಡಿ.

ಉತ್ತರ: ಇದೊಂದು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ, ಇದು ಮರ ಅಥವಾ ಕಬ್ಬಿಣದಿಂದಾದ ಉದ್ದನೆಯ ತುಂಡನ್ನು ಹೊಂದಿರುತ್ತದೆ, ಅಗಲವಾದ, ಬಲಯುತವಾದ ಮತ್ತು ಒಂದು ಕಬ್ಬಿಣದ ತಟ್ಟೆಯಂತಹ ರಚನೆಯನ್ನು ಇದರ ಒಂದು ತುದಿಯಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇದು ಬೇಡ್‌ನಂತೆ ಕೆಲಸ ಮಾಡುತ್ತದೆ. ಇದನ್ನು ಪ್ರಾಣಿಗಳಿಂದ ಎಳೆಯಲಾಗುತ್ತದೆ.

18. ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ಏಕೆ ತೇಲುತ್ತದೆ?

ಉತ್ತರ: ಹಾನಿಗೊಳದ ಬೀಜಗಳು ಟೊಳ್ಳಾಗಿರುವುದರಿಂದ ಆನ್ನು ಹಗುರವಾಗಿರುತ್ತದೆ. ಆದ್ದರಿಂದ ಅದು ನೀರಿನ ಮೇಲೆ ತೇಲುತ್ತದೆ.

19. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯಾದ ಕೂರಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುವುದನ್ನು ತಿಳಿಸಿ?

ಉತ್ತರ: ಬೀಜಗಳನ್ನು ಕೂರಿಗೆಯ ಆಲಿಕೆಯಂತಹ ಭಾಗದಲ್ಲಿ ತುಂಬಲಾಗುವುದು, ಅದು ಚೂಪಾದ ತುದಿಗಳನ್ನು ಹೊಂದಿದ ಎರಡು ಅಥವಾ ಮೂರು ಕೊಳವೆಗಳ ಮೂಲಕ ಕೆಳಗೆ ಬರುತ್ತದೆ. ಈ ತುದಿಗಳು ಮಣ್ಣಿನೊಳಕ್ಕೆ ಚುಚ್ಚಿ ಬೀಜಗಳನ್ನು ಬಿತ್ತುತ್ತದೆ.

ncert science, class 8, kseeb, kseeb solutions, ncert class 8 science answer, ncert science for class 8,

Mahabub khan is a wellknown Full stackweb developer,SEO Specialist,Content writer specialist and alsoa Youtuber,Blogger,subject matter expert of Science,and Mathematics.he is also Digital Marketing Expert. Sheheen Begum is also Famous Full stackweb developer,SEO Specialist, Digital Marketing Expert,Blogger,Youtuber,Online Content writer have written more than 5000+ articles .

Post Comment

You May Have Missed