ncert science of class 8: ಅಧ್ಯಾಯ -12 ಪ್ರಾಣಿಗಳಲ್ಲಿ ಸಂತಾನೋತ್ಪತಿ
ncert science of class 8, ncert, class 8, kseeb, kseeb solution, science, ncert class 8 science answer,
|. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಜೀವಿಗಳಲ್ಲಿ ಸಂತಾನೋತ್ಪತ್ತಿಯ ಪ್ರಾಮುಖ್ಯತೆಯನ್ನು ವಿವರಿಸಿ.
ಉತ್ತರ: ಸಂತಾನೋತ್ಪತ್ತಿಯು, ಜೀವಿಗಳು ತಮ್ಮ ಜೀವಿತಾವಧಿಯಲ್ಲಿ ತನ್ನಂತೆಯೇ ಇರುವ ಮರಿಜೀವಿಗಳಿಗೆ ಜನ್ಮ ನೀಡುವ ಪ್ರಕ್ರಿಯೆಯಾಗಿದೆ, ಪ್ರತಿ ಜೀವಿಯೂ ತಮ್ಮ ಸಂಖ್ಯೆಗಳನ್ನು ಕಾಯ್ದುಕೊಳ್ಳಲು ಮತ್ತು ಪ್ರಭೇದಗಳ ಮುಂದುವರಿಕೆಗಾಗಿ ಸಂತಾನೋತ್ಪತ್ತಿ ಮಾಡುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಒಂದೇ ರೀತಿಯ ಜೀವಿಗಳು ಮುಂದುವರೆಯುವುದನ್ನು ಕಾತರಿಪಡಿಸಿಕೊಳ್ಳಲು ಸಂತಾನೋತ್ಪತ್ತಿಯು ಅತೀ ಮುಖ್ಯವಾದುದಾಗಿದೆ.
2. ಮಾನವರಲ್ಲಿ ನಿಶೇಚನ ಪ್ರಕ್ರಿಯೆಯನ್ನು ವಿವರಿಸಿ
ಉತ್ತರ: ಅಂಡಾಣು ಮತ್ತು ವೀರ್ಯಾಣುಗಳ ನಡುವಿನ ಸಮ್ಮಿಲನವನ್ನು ನಿಶೇಚನ ಎನ್ನುವರು, ಅಂಡಾಣುವ ಹೆಣ್ಣಿನ ಸಂತಾನೋತ್ಪತ್ತಿಯ ಭಾಗವಾಗಿದೆ, ವೀರ್ಯಾಣುವು ಗಂಡಿನ ಸರತಾನೋತ್ಪತ್ತಿಯ ಭಾಗವಾಗಿದೆ. ನಿಶೇಚನ ಪ್ರಕ್ರಿಯೆಯಲ್ಲಿ ತಾಯಿಯ ಅಂಡಾಣು ಕೋಶ ಮತ್ತು ತಂದೆಯ ವೀರ್ಯಾಣು ಕೋಶದ ಸಂಯೋಗ ಹೊಂದುತ್ತದೆ. ನಿಶೇಚನದ ಸಮುಯದಲ್ಲಾಗುವ, ವೀರ್ಯಾಣು ಮತ್ತು ಅಂಡಾಣುವಿನ ಕೋಶಕೇಂದ್ರಗಳ ಸಮ್ಮಿಲನವು ಒಂದೇ ಕೋಶಕೇಂದ್ರವನ್ನು ರೂಪಿಸಲಾಗುತ್ತದೆ. ಇದು ಫಲಿತ ಅಂಡ ಅಥವಾ ಯುಗ್ಮಜದ ರಚನೆಗೆ ಕಾರಣವಾಗುತ್ತದೆ.
3. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರದೊಂದಿಗೆ ತುಂಬಿ
(a) ಆಂತರಿಕ ನಿಶೇಚನವು ಸಂಭವಿಸುವ ಜಾಗ
ಉತ್ತರ: (1) ಹಣ್ಣಿನ ದೇಹದೊಳಗೆ
(b) ಒಂದು ಗೊದಮೊಟ್ಟೆ ಈ ಯಾವ ಪ್ರಕ್ರಿಯೆಯ ಮೂಲಕ ವಯಸ್ಕ ಕಪ್ಪೆಯಾಗಿ ಬೆಳೆಯುತ್ತದೆ
ಉತ್ತರ: ರೂಪ ಪರಿವರ್ತನೆ
(c) ಯುಗ್ಮಜದಲ್ಲಿ ಕಂಡು ಬರುವ ಕೋಶಕೇಂದ್ರಗಳ ಸಂಖ್ಯೆ
ಉತ್ತರ: (i) ಒಂದು
4. ಮುಂದಿನ ಹೇಳಿಕೆಗಳು ಸರಿಯೇ (ಸ) ಅಥವಾ ತಪ್ಪುಯೇ (ತ) ಎಂದು ಸೂಚಿಸಿ
a. ಅಂಡಜ ಪ್ರಾಣಿಗಳು ಚಿಕ್ಕ ಮರಿಗಳಿಗೆ ಜನ್ಮ ನೀಡುತ್ತದೆ (ತ)
b. ಪ್ರತಿಯೊಂದು ವೀರ್ಯಾಣುವು ಒಂದೇ ಒಂದು ಜೀವಕೋಶವಾಗಿದೆ. (ಸ)
c. ಕಪ್ಪೆಯಲ್ಲಿ ಬಾಹ್ಯನಿಶೇಚನವು ನಡೆಯುತ್ತದೆ (ಸ)
d .ಲಿಂಗಾಣು ಎಂಬ ಕೋಶದಿಂದ ಹೊಸ ಮಾನವ ಜೀವಿಗಳು ಬೆಳೆಯುತ್ತದೆ. (ತ)
e. ನಿಶೇಚನದ ನಂತರ ಇಟ್ಟ ಮೊಟ್ಟೆ ಒಂದೇ ಒಂದು ಜೀವಕೋಶದಿಂದ ಮಾಡಲ್ಪಟ್ಟಿದೆ (ಸ)
f. ಅಮೀಬಾ ಮೊಗ್ಗುವಿಕೆಯ ಮೂಲಕ ಸಂತಾನೋತ್ಪತ್ತಿ ನಡೆಸುತ್ತದೆ. (ತ)
g. ಅಲೈಂಗಿಕ ಸಂತಾನೋತ್ಪತ್ತಿಯಲ್ಲಿಯೂ ನಿಶೇಚನ ಅಗತ್ಯವಾಗಿದೆ (ತ)
h. ದ್ವಿವಿಗಳನನು ಆಲೈಂಗಿಕ ಸಂತಾನೋತ್ಪತ್ತಿಯ ಒಂದು ನಿಧಾನವಾಗಿದೆ (ಸ)
i. ನಿಶೇಚನದ ಪರಿಣಾಮವಾಗಿ ಒಂದು ಯುಗ್ಗಜ ರೂಪುಗೊಳ್ಳುತ್ತದೆ (ಸ)
j ಒಂದು ಭ್ರೂಣದ ಒಂದೇ ಕೋಪದಿಂದ ಮಾಡಲ್ಪಟ್ಟಿದೆ (3)
5. ಯುಗ್ಮಜ ಮತ್ತು ಭ್ರೂಣದ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ
ಯುಗ್ಮಜ | ಭ್ರೂಣ |
ವೀರ್ಯಾಣು ಮತ್ತು ಅಂಡಾಣುವಿನ ಕೋಶಕೇಂದ್ರಗಳ ಸಮ್ಮಿಲನದಿಂದ ಉತ್ಪತಿಯಾಗುವ ಒಂದೇ ಕೋಶಕೇಂದ್ರ | ಕೋಶಗಳು ವಿಭಿನ್ನ ಅಂಗಾಂಶಗಳು ಮತ್ತು ದೇಹದ ಅಂಗಗಳಾಗಿ ಬೆಳೆಯುದ ಗುಂಪುಗಳನ್ನು ರೂಪಿಸಲು ಪ್ರಾರಂಭಿಸುವ ಹಂತ |
ಯುಗ್ಮಜವು ಮತ್ತೆ ಮತ್ತೆ ವಿಭಜನೆಯಾಗಿ ಭ್ರೂಣವಾಗುತ್ತದೆ | ಭ್ರೂಣವು ಮತ್ತಷ್ಟು ಬೆಳವಣಿಗೆ ಹೊಂದಲು ಗರ್ಭಕೋಶದ ಭಿತ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ |
6. ಅಲೈಂಗಿಕ ಸಂತಾನೋತ್ಪತ್ತಿಯನ್ನು ವ್ಯಾಖ್ಯಾನಿಸಿ ಮತ್ತು ಪ್ರಾಣಿಗಳಲ್ಲಿ ಅಲೈಂಗಿಕ ಸಂತಾನೋತ್ಪತ್ತಿಯ ವಿಧಾನಗಳನ್ನು ವಿವರಿಸಿ
ಉತ್ತರ: ಒಂದೇ ಪೋಷಕಜೀವಿಯನ್ನು ಮಾತ್ರ ಒಳಗೊಂಡಿರುವ ಸಂತಾನೋತ್ಪತ್ತಿಯನ್ನು ಅಲೈಂಗಿಕ ಸಂತಾನೋತ್ಪತ್ತಿ ಎಂದು ಕರೆಯುತ್ತಾರೆ.
ಪ್ರಾಣಿಗಳಲ್ಲಿ ಆಲೈಂಗಿಕ ಸಂತಾನೋತ್ಪತ್ತಿಯ ಎರಡು ವಿಧಾನಗಳು
ದ್ವಿ ವಿದಳನ ಮತ್ತು ಮೊಗ್ಗುವಿಕೆ.
1) ದ್ವಿ ವಿದಳನ: ಅಮೀಬಾದಂತಹ ಕೆಲವು ಏಕಕೋಶಚೀವಿಗಳು ತಮ್ಮ ಕೋಶಕೇಂದ್ರದ ವಿಭಜನೆಯಿಂದ ಎರಡು ಕೋಶಕೇಂದ್ರಗಳಾಗಿ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ, ನಂತರ, ಅದರ ದೇಹಗಳನ್ನು ಎರಡು ಭಾಗಗಳಾಗಿ ವಿಭಾಗಿಸಿಕೊಳ್ಳುತ್ತದೆ. ಪ್ರತೀಭಾಗಳು ಒಂದೊಂದು ಕೋಶಕೇಂದ್ರವನ್ನು ಪಡೆಯುತ್ತದೆ ಅಂತಿಮವಾಗಿ, ಪೋಷಕ ಜೀವಕೋಶದಿಂದ ಎರಡು ಜೀವಕಣಗಳು ಹುಟ್ಟುತ್ತದೆ ರೀತಿಯಾಗಿ ಒಂದು ಜೀವಿ ಎರಡು ಜೀವಿಗಳಾಗಿ ವಿಭಜನೆಯಾಗುವ ಮೂಲಕ ನಡೆಯುವ ಅಲೈಂಗಿಕ ಸಂತಾನೋತ್ಪತ್ತಿಯನ್ನು ದ್ವಿವಿದಳನ ಎಂದು ಕರೆಯಲಾಗುತ್ತದೆ.
2) ಮೊಗ್ಗುವಿಕೆ : ಮೊಗ್ಗುವಿಕೆಯು ಪೋಷಕ ಜೀವಿಯ ದೇಹದ ಮೇಲೆ ಕಂಡುಬರುವ ಮೊಗ್ಗುಗಳೆಂದು ಕರೆಯಲ್ಪಡುವ ಉಬ್ಬುಗಳಿಂದ ಹೊಸ ಮರಿಜೀವಿ ಉಂಟಾಗುವ ಕ್ರಿಯೆ, ಈ ಪ್ರಕ್ರಿಯೆಯು ಹೈಡ್ರಾದಂತಹ ಜೀವಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರತಿ ಹೈಡ್ರಾದಲ್ಲಿ, ಒಂದು ಅಥವಾ ಹೆಚ್ಚು ತ್ತಿರುವ ಉಬ್ಬುಗಳು ಇರಬಹುದು, ಈ ಉಬ್ಬುಗಳು ಬೆಳೆಯುತ್ತಿರುವ ಹೊಸ ಹೈಡ್ರಾಗಳು. ಹೈಡ್ರಾದಲ್ಲಿ ಹೊಸ ಹೈಡ್ರಾಗಳು ಒಂದೇ ಪೋಷಕ ಜೀವಿಯಿಂದ ಹೊರಬರುವ ಮೊಗ್ಗುಗಳ ಮೂಲಕ ಬೆಳೆಯುತ್ತದೆ.
7. ಹೆಣ್ಣು ಸಂತಾನೋತ್ಪತ್ತಿ ಅಂಗದ ಯಾವ ಭಾಗದಲ್ಲಿ ಭ್ರೂಣವು ಕಾಣಿಸಿಕೊಳ್ಳುತ್ತದೆ ?
ಉತ್ತರ: ಹೆಣ್ಣು ಸಂತಾನೋತ್ಪತ್ತಿ ಅಂಗವಾದ ಗರ್ಭಾಶಯದ ಗೋಡೆಯಲ್ಲಿ ಭ್ರೂಣವು ಕೊಳ್ಳುತ್ತದೆ.
8. ರೂಪ ಪರಿವರ್ತನೆ ಎಂದರೇನು ಉದಾಹರಣೆಗಳನ್ನು ಕೊಡಿ,
ಉತ್ತರ: ತೀವ್ರವಾದ ಬದಲಾವಣೆಗಳ ಮೂಲಕ ಪ್ರೌಢಾವಸ್ಥೆ ತಲುಪುದ ಲಾರ್ವಾಗಳ ರೂಪಾಂತರವನ್ನು ರೂಪ ಪರಿವರ್ತನೆ ಎಂದು ಕರೆಯುತ್ತಾರೆ.
9. ಆಂತರಿಕ ನಿಶೇಚನ ಮತ್ತು ಬಾಹ್ಯ ನಿಷೇಚನಗಳ ನಡುಯಿರುವ ವ್ಯತ್ಯಾಸ ತಿಳಿಸಿ,
ಆಂತರಿಕ ನಿಶೇಚನ | ಬಾಹ್ಯ ನಿಷೇಚನ |
ಹೆಣ್ಣಿನ ದೇಹದ ಒಳಗೆ ನಡೆಯುತ್ತದೆ | ಹೆಣ್ಣಿನ ದೇಹದ ಹೊರಗೆ ನಡೆಯುತ್ತದೆ. |
ಮರಿಜೀವಿಗಳು ಬದುಕುಳಿಯುವ ಪ್ರಮಾಣ ಹೆಚ್ಚಿರುತ್ತದೆ ಆದ್ದರಿಂದ, ಮೊಟ್ಟೆಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಮಾಡುತ್ತದೆ | ಮರಿಜೀವಿಗಳು ಬದುಕುಳಿಯುವ ಪ್ರಮಾಣ ಕಡಿಮೆ ಇರುತ್ತದೆ ಆದ್ದರಿಂದ, ಮೊಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಮಾಡುತ್ತದೆ |
ಉದಾಹರಣೆ: ಮಾನವರು, ಆಕಳು, ಕೋಳಿ | ಉದಾಹರಣೆ: ಕಪ್ಪೆ, ಮೀನು ಮುಂತಾದವುಗಳು. |
10. ಪ್ರಾಣಿಗಳು ಸಂತಾನೊತ್ಪತ್ತಿ ನಡೆಸುವ ಎರಡು ವಿಧಾನಗಳನ್ನು ಹೆಸರಿಸಿ,
ಉತ್ತರ: ಪ್ರಾಣಿಗಳು ಸಂತಾನೋತ್ಪತ್ತಿ ನಡೆಸುವ ಎರಡು ವಿಧಾನಗಳು:
(1) ಲೈಂಗಿಕ ಸಂತಾನೋತ್ಪತ್ತಿ, ಮತ್ತು
(ii) ಅಲೈಂಗಿಕ ಸಂತಾನೋತ್ಪತ್ತಿ.
11. ಆಂತರಿಕ ನಿಶೇಚನ ಎಂದರೇನು? ಅದು ಯಾವ ಪ್ರಾಣಿಗಳಲ್ಲಿ ಕಾಣಬಹುದಾಗಿದೆ
ಉತ್ತರ: ಹೆಣ್ಣು ದೇಹದಲ್ಲಿ ನಡೆಯುವ ನಿಶೇಚನವನ್ನು ಆಂತರಿಕ ನಿಶೇಚನ ಎಂದು ಕರೆಯುತ್ತಾರೆ. ಇದನ್ನು ಮನುಷ್ಯರು ಮತ್ತು ಕೋಳಿಗಳು, ಹಸುಗಳು ಹಾಗೂ ನಾಯಿಗಳಂತಹ ಬೆರೆ ರೀತಿಯ ಪ್ರಾಣಿಗಳಲ್ಲಿ ಕಾಣಬಹುದಾಗಿದೆ.
12. ಬಾಹ್ಯ ನಿಶೇಚನ ಎಂದರೇನು? ಅದು ಯಾವ ಪ್ರಾಣಿಗಳಲ್ಲಿ ಕಾಣಬಹುದಾಗಿದೆ?
ಉತ್ತರ: ಹೆಣ್ಣಿನ ದೇಹದ ಹೊರಗೆ ನಡೆಯುವ ನಿಶೇಚನವನ್ನು ಬಾಹ್ಯ ನಿಶೇಚನ ಎಂದು ಕರೆಯುತ್ತಾರೆ. ಇದನ್ನು ಕಪ್ಪೆಗಳು, ಮೀನು, ನಕ್ಷತ್ರಮೀನು ಮುಂತಾದವುಗಳಲ್ಲಿ ಕಾಣಬಹುದು.
13. ಲೈಂಗಿಕ ಸಂತಾನೋತ್ಪತ್ತಿ ಎಂದರೇನು?
ಉತ್ತರ: ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮ್ಮಿಲನದಿಂದ ಪ್ರಾರಂಭಿಸುವ ಸಂತಾನೋತ್ಪತ್ತಿಯನ್ನು ಲೈಂಗಿಕ ಸಂತಾನೋತ್ಪತ್ತಿ ಎಂದು ಕರೆಯುತ್ತಾರೆ.
ncert science of class 8, ncert, class 8, kseeb, kseeb solution, science, ncert class 8 science answer,
14. ಮಾನವನ ವೀರ್ಯಾಣುವಿನ ಚಿತ್ರ ಬರೆದು ಭಾಗಗಳನ್ನು ಗುರುತಿಸಿ

15. ಮಾನವರಲ್ಲಿನ ಗಂಡು ಸಂತಾನೋತ್ಪತ್ತಿ ಅಂಗಗಳ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ

16. ಮಾನವರಲ್ಲಿನ ಹೆಣ್ಣು ಸಂತಾನೋತ್ಪತ್ತಿ ಅಂಗಗಳ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ

17. ಕಪ್ಪೆಗಳಲ್ಲಿ ನಡೆಯುವ ನಿಜೇಚನ ಕ್ರಿಯೆಯನ್ನು ವಿವರಿಸಿ
ಉತ್ತರ: ಕಪ್ಪೆಗಳಲ್ಲಿ ಬಾಹ್ಯ ನಿಷೇಚನ ನಡೆಯುತ್ತದೆ. ವಸಂತ ಋತುವಿನಲ್ಲಿ ಅಥವಾ ಮಳೆಗಾಲದಲ್ಲಿ, ಗಂಡುಕಪ್ಪೆ ಮತ್ತು ಹೆಣ್ಣುಕಪ್ಪೆಗಳು ಕೊಳಗಳಿಗೆ ಮುತ್ತು ನಿಧಾನವಾಗಿ ಹರಿಯುವ ಹೊಳೆಗಳಿಗೆ ತೆರಳುತ್ತದೆ, ಗಂಡು ಮತ್ತು ಹೆಣ್ಣು ನೀರಿನಲ್ಲಿ ಜೊತೆಗೂಡಿದಾಗ, ಹೆಣ್ಣು ನೂರಾರು ಮೊಟ್ಟೆಗಳನ್ನು ಇಡುತ್ತದೆ. ಕೋಳಿ ಮೊಟ್ಟೆಯಂತೆ , ಕಪ್ಪೆಯ ಮೊಟ್ಟೆಯ ಕವಚದಿಂದ ಆವರಿಸಲ್ಪಟ್ಟಿಲ್ಲ ಮತ್ತು ಇದು ತುಲನಾತ್ಮಕವಾಗಿ ಬಹಳ ಸೂಕ್ಷ್ಮವಾಗಿದೆ ಎಂದು ಹೆಳಬಹುದು. ಲೋಳೆಪದರದು ಒಟ್ಟಾಗಿ ಮೊಟ್ಟೆಗಳನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಮೊಟ್ಟೆಗಳಿಗೆ ರಕ್ಷಣೆ ಒದಗಿಸುತ್ತದೆ ಹೆಣ್ಣು, ಮೊಟ್ಟೆಗಳನ್ನು ಇಟ್ಟ ನಂತರ ಗಂಡು ಅವುಗಳ ಮೇಲೆ ವೀರ್ಯಾಣುಗಳನ್ನು ಶ್ರವಿಸುವುತ್ತದೆ. ಪ್ರತಿ ವೀರ್ಯಾಣು ತನ್ನ ಉದ್ದನೆಯ ಬಾಲದ ನೆರವಿನಿಂದ ನೀರಿನಲ್ಲಿ ಅಡ್ಡಾದಿಡ್ಡಿಯಾಗಿ ಈಜುತ್ತದೆ, ಈ ವೀರ್ಯಾಣುಗಳು ಮೊಟ್ಟೆಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ, ಇದು ನಿಶೇಚನಕ್ಕೆ ಕಾರಣವಾಗುವುದು.
18. ಮೀನು ಮತ್ತು ಕಪ್ಪೆಗಳು ನೂರಾರು ಮೊಟ್ಟೆಗಳನ್ನು ಇಡುತ್ತದೆ. ಏಕೆ
ಉತ್ತರ: ಮೀನು ಮತ್ತು ಕಪ್ಪೆಗಳು ನೂರಾರು ಮೊಟ್ಟೆಗಳನ್ನು ಇಡುತ್ತವೆ ಮತ್ತು ಲಕ್ಷಾಂತರ ವೀರ್ಯಾಣುಗಳನ್ನು ಬಿಡುಗಡೆಯನ್ನು ಮಾಡುತ್ತದೆ , ಎಲ್ಲಾ ಮೊಟ್ಟೆಗಳು ನಿಶೇಷನ ಗೊಳ್ಳುವುದಿಲ್ಲ ಮತ್ತು ಹೊಸ ಜೀವಿಗಳಾಗಿ ಬೆಳೆಯುವುದಿಲ್ಲ. ಇದಕ್ಕೆ ಕಾರಣವೆನೇಂದರೆ, ಮೊಟ್ಟೆಗಳು ಮತ್ತು ವೀರ್ಯಾಣುಗಳು ನೀರಿನ ಚಲನೆ, ಗಾಳಿ ಮತ್ತು ಮಳೆಗೆ ನಿಲುಕುವುದು, ಅಲ್ಲದೆ, ಕೊಳದಲ್ಲಿರುವ ಇತರ ಪ್ರಾಣಿಗಳೂ ಈ ಮೊಟ್ಟೆಗಳನ್ನು ಆಹಾರವಾಗಿ ಬಳಸುತ್ತದೆ. ಹೀಗಾಗಿ, ಅವುಗಳಲ್ಲಿ ಕನಿಷ್ಟವಾದರೂ ಮೊಟ್ಟೆಗಳ ನಿಶೇಚನವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಮೊಟ್ಟೆಗಳು ಮತ್ತು ವೀರ್ಯಾಣುಗಳ ಉತ್ಪಾದನೆಯ ಅವಶ್ಯಕವಾಗಿದೆ.
19. ಮಾನವರಲ್ಲಿ ಭ್ರೂಣದ ಅಭಿವೃದ್ಧಿಯನ್ನು ವಿವರಿಸಿ.
ಉತ್ತರ: ನಿಶೇಚನದಿಂದ ಯುಗ್ಮಜ ಉತ್ಪತ್ತಿಯಾಗಿ ಅದು ಭ್ರೂಣವಾಗಿ ಬೆಳೆಯಲು ಪ್ರಾರಂಭಿಸುತ್ತದೆ, ಯುಗ್ಮಜ ಕೋಶವು ಪದೇ ಪದೇ ವಿಭಜನೆಗೊಂಡು ಅನೇಕ ಜೀವಕೋಶಗಳ ಉಂಡೆಯಾಗಿ ರೂಪುಗೊಳ್ಳುವುದು. ನಂತರ ಈ ಕೋಶಗಳು ವಿಭಿನ್ನ ರೀತಿಯಾ ಅಂಗಾಂಶಗಳು ಮತ್ತು ದೇಹದ ಅಂಗಗಳಾಗಿ ಬೆಳೆಯುವ ಗುಂಪನ್ನು ರೂಪಿಸಲು ಪ್ರಾರಂಭಿಸುವುದು. ಅಭಿವರ್ಧನೆ ಹೊಂದುತ್ತಿರುವ ಈ ರಚನೆಯನ್ನು ಭ್ರೂಣ ಎಂದು ಕರೆಯುತ್ತಾರೆ, ಭ್ರೂಣವು ಮತ್ತಷ್ಟು ಬೆಳವಣಿಗೆಗಾಗಿ ಗರ್ಭಾಶಯದ ಗೋಡೆಯಲ್ಲಿ ಕಾಣಿಸಿಕೊಳ್ಳುತ್ತದೆ. ಗರ್ಭಾಶಯದಲ್ಲಿ ಭ್ರೂಣದ ಬೆಳವಣಿಗೆ ಮುಂದುವರೆಯುತ್ತದೆ. ಇದು ಕ್ರಮೇಣ ಕೈಕಾಲುಗಳು, ತಲೆ, ಕಣ್ಣುಗಳು, ಕಿವಿಗಳು ಮುಂತಾದ ಭಾಗಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. ದೇಹದ ಎಲ್ಲಾ ಭಾಗಗಳನ್ನು ಗುರುತಿಸಬಹುದಾದ ಭ್ರೂಣದ ಹಂತವನ್ನು ಪಿಂಡ ಎಂದು ಕರೆಯುತ್ತಾರೆ. ಭ್ರೂಣದ ಬೆಳವಣಿಗೆಯು ಪೂರ್ಣಗೊಂಡಾಗ ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ,
20. ಕೋಳಿಗಳಲ್ಲಿ ನಡೆಯುವ ಸಂತಾನೋತ್ಪತ್ತಿಯನ್ನು ವಿವರಿಸಿ
ಉತ್ತರ: ಕೋಳಿಗಳಲ್ಲಿ ನಿಶೇಚನದ ನಂತರ, ಯುಗ್ಮಜ ಮತ್ತೆ ಮುತ್ತೆ ವಿಭಜಿಸುತ್ತದೆ ಮತ್ತು ಅಂಡನಾಳದ ಕೆಳಭಾಗಕ್ಕೆ ಚಲಿಸುತ್ತದೆ: ಹೀಗೆ ಕೆಳಗೆ ಚಲಿಸುವಾಗ, ಅದರ ಸುತ್ತ ಅನೇಕ ರಕ್ಷಣಾತ್ಮಕ ಪದರಗಳು ರಚನೆಯಾಗುತ್ತದೆ, ಕೋಳಿ ಮೊಟ್ಟೆಯೊಂದರಲ್ಲಿ ಕವಚವು ಅಂತಹ ರಕ್ಷಣಾತ್ಮಕ ಪದರವಾಗಿದೆ, ಬೆಳೆಯುತ್ತಿರುವ ಭ್ರೂಣದ ಸುತ್ತಲೂ ಗಟ್ಟಿಯಾದ ಕಂಚವು ರೂಪುಗೊಂಡ ನಂತರ ಅಂತಿಮವಾಗಿ ಕೋಳಿಯು ಮೊಟ್ಟೆಯನ್ನು ಇಡುತ್ತದೆ, ಭ್ರೂಣವು ಸರಿಯಾಗಿ ಬೆಳೆಯಲು ಸುಮಾರು ಮೂರು ವಾರಗಳ ಕಾಲ ತೆಗೆದುಕೊಳ್ಳುತ್ತದೆ. ಸಾಕಷ್ಟು ಉಷ್ಣತೆ ಒದಗಿಸಲು ಮೊಟ್ಟೆಗಳ ಮೇಲೆ ಕೋಳಿ ಕುಳಿತುಕೊಳ್ಳುತ್ತದೆ. ಈ ಅವಧಿಯಲ್ಲಿ ಮೊಟ್ಟೆಯ ಚಿಪ್ಪಿನೊಳಗೆ ಮರಿಯ ಬೆಳವಣಿಗೆ ನಡೆಯುತ್ತದೆ. ಕೋಳಿಮರಿಯ ಸಂಪೂರ್ಣ ಬೆಳವಣಿಗೆ ಆದ ನಂತರ ಅದು ಮೊಟ್ಟೆಯ ಚಿಪ್ಪನ್ನು ಒಡೆದುಕೊಂಡು ಹೊರಬರುವುದು.
21. ಅಮೀಬಾದಲ್ಲಿ ನಡೆಯುವ ದ್ವಿವಿದಳನಗಳ ಚಿತ್ರ ಬರೆದು ಭಾಗಗಳನ್ನು ಹೆಸರಿಸಿ,

ncert science of class 8, ncert, class 8, kseeb, kseeb solution, science, ncert class 8 science answer,
CLICK HERE – https://studybyjobs.com/wp-admin/post.php?post=975&action=edit
Post Comment