ncert solution ಅಧ್ಯಾಯ 30- ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು

chapter-30-1024x576 ncert solution ಅಧ್ಯಾಯ 30- ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ನೋಟ್ಸ್ ಪ್ರಶ್ನೋತ್ತರಗಳು ncert solutions

|. ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.ncert solutions

1. ಭಾರತದಲ್ಲಿ ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರಿ ಸಂಘಗಳ ಕಾಯಿದೆಯು 1912  ರಂತೆ ನಿಯಂತ್ರಿಸಲ್ಪಡುತ್ತದೆ.

2. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಇಂಗ್ಲೆಂಡ್ದೇಶದಲ್ಲಿ ರಾಬರ್ಟ್ಓವನ್ ಎಂಬುವವರಿಂದ ಸ್ಥಾಪಿತವಾಯಿತು.

3. ಸಹಕಾರಿ ಸಂಘಗಳ ಸದಸ್ಯರ ಸಂಖ್ಯೆಯ ಕನಿಷ್ಠ ಮಿತಿ 10ಜನ.

4. ಸಹಕಾರಿ ಸಂಘಗಳು ಪ್ರಾಂತ್ಯದ ನೋಂದಣಿ ಅಧಿಕಾರಿಗಳಿಂದ  ನೋಂದಣಿ ಪ್ರಮಾಣ ಪತ್ರ ಬಂದ ನಂತರ ಅಸ್ತಿತ್ವಕ್ಕೆ ಬರುತ್ತವೆ.

5. ಕರ್ನಾಟಕದಲ್ಲಿ ಮೊದಲ ಸಹಕಾರಿ ಸಂಘವು  ಗದಗ ಜಿಲ್ಲೆಯ ಕಣಗಿನಹಾಳ್ ಎಂಬಲ್ಲಿ ಪ್ರಾರಂಭವಾಯಿತು.

6. ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಯ ಮೊದಲ ಹಂತ ಪ್ರವರ್ತನೆ/ ರಚನೆ ಆಗಿದೆ.

7. ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಗೆ ಬೇಕಾಗುವ ಅತ್ಯಂತ ಪ್ರಮುಖ ಪತ್ರಗಳು  ಸಂಘಟನೆಯ ಮನವಿ ಪತ್ರಮತ್ತು ಲಿಖಿತ ಕಟ್ಟಳೆ ಆಗಿದೆ.

8. ಬಹುರಾಷ್ಟ್ರೀಯ ಕಂಪನಿಗಳು ಮೊದಲು ಅಮೆರಿಕ ಸಂಯುಕ್ತ ಸಂಸ್ಥಾನ ದೇಶದಲ್ಲಿ ಪ್ರಾರಂಭವಾದವು

9. ಭಾರತದ ತವರನ್ನು ಹೊಂದಿರುವ ಬಹು ರಾಷ್ಟ್ರೀಯ ಕಂಪನಿಗಳಿಗೆ ಟಾಟಾ ಮತ್ತು ಇನ್ಫೋಸಿಸ್ ಉದಾಹರಣೆಯಾಗಿದೆ.

10. ಭಾರತದಲ್ಲಿ ಮೊಟ್ಟಮೊದಲ ಶೇರುಪೇಟೆ ಮುಂಬೈ ಎಂಬಲ್ಲಿ ಪ್ರಾರಂಭವಾಯಿತು.

|| ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಬರೆಯಿರಿ. ncert solutions

11. ಲೋಕೋಪಯೋಗಿ ಸೇವಾ ಸಂಸ್ಥೆಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿ.

ಉತ್ತರ:- ಅಡಿಗೆ ಅನಿಲ, ನೀರು, ಅಂಚೆ ,ದೂರವಾಣಿ, ರೈಲ್ವೆ ಗಳು ಇವು ಲೋಕೋಪಯೋಗಿ ಸೇವಾ ಸಂಸ್ಥೆಗಳ ಉದಾಹರಣೆಗಳಾಗಿವೆ.

12. ಸಹಕಾರಿ ಸಂಘಗಳ ಯಾವುದಾದರು ಪ್ರಮುಖ ಆರು ಲಕ್ಷಣ ಮತ್ತು ತತ್ವಗಳನ್ನು ತಿಳಿಸಿ.

ಉತ್ತರ:- ಸಹಕಾರಿ ಸಂಘಗಳ ಲಕ್ಷಣಗಳು;

1.ಇವು ವ್ಯಕ್ತಿಗಳ ಸ್ವಯಂ ಪ್ರೇರಿತವಾದ ಸಂಸ್ಥೆಗಳಾಗಿವೆ.

2.ಇಲ್ಲಿನ ಸದಸ್ಯತ್ವವು ಜಾತಿ, ಧರ್ಮ, ವರ್ಗ ಮತ್ತು ಲಿಂಗ ಭೇದವಿಲ್ಲದೆ ಎಲ್ಲ ವಯಸ್ಕರಿಗೂ ಇದು ತೆರೆದಿರುತ್ತದೆ.

3.ಇಲ್ಲಿ ಸದಸ್ಯರ ಸಂಖ್ಯೆಗೆ ಗರಿಷ್ಠ ಮಿತಿಯಲ್ಲಿಇರುವುದಿಲ್ಲ.

4.ಇಲ್ಲಿ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಇರುವುದು ಅಂದರೆ ಸಂಘದ ಸರ್ವ ಸಾಮಾನ್ಯ ಸಭೆಗೆ ಎಲ್ಲ ಸದಸ್ಯರೂ ಹಾಜರಾಗಬಹುದು ಮತ್ತು ಪ್ರತಿ ಸದಸ್ಯನಿಗೂ ಎಷ್ಟೇ ಬಂಡವಾಳ ಹೂಡಿದ್ದರೂ ಒಂದೇ ಮತ ಚಲಾಯಿಸುವ ಹಕ್ಕಿರುತ್ತದೆ.

5. ಸಂಸ್ಥೆಯ ಲಾಭವನ್ನು ಬಂಡವಾಳ ಹೂಡಿಕೆಯ ಅನುಗುಣವಾದ ಪ್ರಮಾಣದಲ್ಲಿ ಹಂಚಲಾಗುತ್ತದೆ. (ಶೇ. 6,25 ಕ್ಕಿಂತ ಕಡಿಮೆ ಇಲ್ಲದಂತೆ).

6.ಲಾಭದ ಒಂದು ಭಾಗ ಸಂಘದ ಸಾಮಾನ್ಯ ನಿಧಿಗೆ ವರ್ಗಾಯಿಸಲಾಗುವುದು.

7.ಇವುಗಳ ಸ್ಥಾನಮಾನ ಹಾಗೂ ನಿಯಂತ್ರಣ ಸರ್ಕಾರ  ಮೇಲ್ವಿಚಾರಣೆಗೆ ಒಳಗಾಗಿರುತ್ತದೆ.

13. ಸಹಕಾರಿ ಸಂಘಗಳ ವಿಧಗಳಾವುವು?ncert solutions

ಉತ್ತರ:- ಸಹಕಾರಿ ಸಂಘಗಳ ವಿಧಗಳು ಈ ಕೆಳನಂತಿವೆ;

1 ಸಾಲ ಸಹಕಾರಿ ಸಂಘಗಳು.

2 ಮಾರುಕಟ್ಟೆಯ ಸಹಕಾರಿ ಸಂಘಗಳು.

3 ಉತ್ಪಾದಕರ ಸಹಕಾರಿ ಸಂಘ.

4 ಗ್ರಾಹಕರ ಸಹಕಾರಿ ಸಂಘ.

5 ಬೇಸಾಯ ಸಹಕಾರಿ ಸಂಘಗಳು .

6 ಗೃಹ ನಿರ್ಮಾಣದ ಸಹಕಾರ ಸಂಘಗಳು.

7 ವಿವಿಧ ರೀತಿಯ ಸೇವೆಗಳಿಗೆ ಸಹಕಾರಿ ಸಂಘಗಳು, ಉದಾ: ವಿದ್ಯಾಭ್ಯಾಸ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ, ನೀರು

14. ಸಹಕಾರಿ ಸಂಘಗಳ ಮುಖ್ಯ ಪ್ರಯೋಜನ ಮತ್ತು ದೋಷಗಳನ್ನು ಪಟ್ಟಿ ಮಾಡಿ.

ಉತ್ತರ:- ಸಹಕಾರಿ ಸಂಘಗಳ ಪ್ರಯೋಜನಗಳು ಈ ಕೆಳನಂತವೆ;                                                         
1.ಇವುಗಳ ರಚನೆ ಸುಲಭವಾಗಿದ್ದು, ಹೆಚ್ಚು ಬಂಡವಾಳದ ಅಗತ್ಯ ಇರುವುದಿಲ್ಲ.
2.ಎಲ್ಲ ಸದಸ್ಯರಿಗೂ ಸಮನಾದ ಹಕ್ಕು ಬಾಧ್ಯತೆಗಳಿರುತ್ತದೆ. ಸದಸ್ಯರಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ.
3.ಪ್ರಜಾಪ್ರಭುತ್ವ ಮಾದರಿಯ ರೀತಿಯಲ್ಲಿ ನಡೆಯುವುದು. ಪ್ರತಿಸದಸ್ಯನಿಗೂ ಒಂದೇ ಮತದಾನದ ಹಕ್ಕು ಇರುತ್ತದೆ.
4.ಸದಸ್ಯರ ಹೊಣೆಗಾರಿಕೆಯು ಸೀಮಿತವಾಗಿರುತ್ತದೆ. ಸದಸ್ಯರು ಉಳಿತಾಯ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.
5. ಇದು ಬಂಡವಾಳಶಾಹಿ ಮತ್ತು ಸಮಾಜಶಾಹಿಯ ವ್ಯವಸ್ಥೆಯಾಗಿದ್ದು. ‘ಎಲ್ಲರಿಗಾಗಿ ಒಬ್ಬನು ಮತ್ತು ಒಬ್ಬನಿಗಾಗಿ ಎಲ್ಲರು’ ಎಂಬುದು ಸಹಕಾರಿ ಸಂಘಗಳ ಪ್ರಮುಖವಾದ ಧ್ಯೇಯವಾಗಿದೆ.
ಸಹಕಾರಿ ಸಂಘಗಳ ದೋಷಗಳು;
1.ಬಂಡವಾಳದ ಮಿತಿ ಇರುವುದರಿಂದ ದೊಡ್ಡ ಪ್ರಮಾಣದ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ.
2. ಸರಿಯಾದ ನೌಕರರು ಸಿಗುವುದು ಕಷ್ಟವಾಗುತ್ತದೆ. ಆಡಳಿತದ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು  ಇರುವುತ್ತವೆ.
3. ಹಣವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಗಳಿದ್ದು. ಪಕ್ಷಪಾತ ಮತ್ತು ಲಂಚಗುಳಿತನಕ್ಕೆ ಅವಕಾಶಗಳಿರುತ್ತವದೆ.

15. ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳಾವುವು?

ಉತ್ತರ:- ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳು ಈ ಕೆಳನಂತಿವೆ;

1.ಪ್ರವರ್ತನೆ/ ರಚನೆ
2.ನೋಂದಣಿ
3. ಬಂಡವಾಳ ವಂತಿಕೆ ಅಥವಾ ಷೇರು ಬಂಡವಾಳವನ್ನು ಸಂಗ್ರಹಿಸುವುದು.
4. ವ್ಯಾಪಾರದ ಆರಂಭ.

16. ಕೂಡು ಬಂಡವಾಳ ಸಂಸ್ಥೆಗಳ ಅನುಕೂಲಗಳನ್ನು ತಿಳಿಸಿ,

ಉತ್ತರ:- ಕೂಡು ಬಂಡವಾಳ ಸಂಸ್ಥೆಗಳ ಅನುಕೂಲಗಳು ಈ ಕಳಂನತಿವೆ;

 1.ಕೂಡು ಬಂಡವಾಳ ಸಂಸ್ಥೆಗಳಲ್ಲಿ ಷೇರುದಾರರ ಗರಿಷ್ಠ ಮಿತಿ ಇರುವುದಿಲ್ಲ. ಆದ್ದರಿಂದ ಹೆಚ್ಚು ಬಂಡವಾಳ ದೊರಕುವ ಸಾಧ್ಯತೆಗಳು ಇರುತ್ತದೆ.

2.ಷೇರುದಾರರು ತಮ್ಮ ಷೇರುಗಳನ್ನು ಬೇರೆಯವರಿಗೆ ವರ್ಗಾಯಿಸುವ ಅವಕಾಶವಿರುವುದರಿಂದ ಸಾರ್ವಜನಿಕರು ಹೆಚ್ಚು ಹೆಚ್ಚಾಗಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ.

3.ಕೂಡು ಬಂಡವಾಳ ಸಂಸ್ಥೆಗೆ ಕಾನೂನಿನ ರಕ್ಷಣೆವಿರುವುದರಿಂದ ಯಾವುದೇ ನಿರ್ದೇಶಕನಾಗಲಿ ಅಥವಾ ಷೇರುದಾರನಾಗಲಿ ಮರಣ ಹೊಂದಿದರೆ ಅಥವಾ ದಿವಾಳಿಯಾದರೆ ಕಂಪನಿಯನ್ನು ಮುಚ್ಚಬೇಕಾಗಿಲ್ಲ. ವ್ಯವಹಾರ ನಡೆದುಕೊಂಡು ಹೋಗುತ್ತದೆ.

4.ಹೆಚ್ಚು ಬಂಡವಾಳ ಹಾಗೂ ಕಾರ್ಯಕೌಶಲತೆವಿರುವುದರಿಂದ ದೊಡ್ಡಪ್ರಮಾಣದ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತದೆ.

5.ಹೆಚ್ಚು ಪ್ರಮಾಣದ ಉತ್ಪಾದನೆಗೆ ಅವಕಾಶವಿರುವುದರಿಂದ ಸಾಮಾನ್ಯವಾಗಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಕಡಿಮೆ ಇರುತ್ತದೆ ಹಾಗೂ ಸ್ವರ್ದಾತ್ಮಕ ಬೆಲೆಗೆ ಮಾರಟ ಮಾಡಲು ಸಾದ್ಯವಾಗುತ್ತದೆ.

6.ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುತ್ತದೆ. ಜನರಲ್ಲಿ ಉಳಿತಾಯ ಮನೋಭಾವ ಬೆಳೆಸುತ್ತದೆ ಹಾಗೂ ಸರ್ಕಾರಕ್ಕೆ ಕರ, ತೆರಿಗೆಗಳನ್ನು ಪಾವತಿ ಮಾಡುವುದರಿಂದ ದೇಶದ ಆದಾಯ ಹೆಚ್ಚಾಗುವುದು.

7.ಈ ಸಂಸ್ಥೆಗಳ ಸದಸ್ಯರ (ಷೇರುದಾರರ) ಹೊಣೆಗಾರಿಕೆ ಅಥವಾ ಜವಾಬ್ದಾರಿಯು ಮಿತವಾಗಿರುತ್ತದೆ. ಅಂದರೆ ಕಂಪನಿ ಏನಾದರು ನಷ್ಟ ಅನುಭವಿಸಿದಾಗ ಮತ್ತು ಸಾಲಗಾರರಿಗೆ ಅವರ ಸಾಲ ಹಿಂದಿರುಗಿಸಲು ಸಾಧ್ಯವಿಲ್ಲದೆ ಹೋದಾಗ ಷೇರುದಾರರ ಜವಾಬ್ದಾರಿ ಅವರು ಹೂಡಿರುವ ಷೇರುಗಳ ಮೊತ್ತದಷ್ಟಕ್ಕೆ ಸೀಮಿತವಾಗಿರುತ್ತದೆ.

17. ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳೇನು?

ಉತ್ತರ :- ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳು ಈಕೆಳನಂತಿವೆ:

1 ಕಡಿಮೆ ಬೆಲೆಯಲ್ಲಿ ಆಶ್ರಯದಾತನು  ದೇಶಗಳಿಂದ ಕಚ್ಚಾ ಪದಾರ್ಥಗಳನ್ನು ಪಡೆಯಬಹುದಾಗಿದೆ.

2.ಆಶ್ರಯದಾತನು ದೇಶಗಳಿಂದ ತಂತ್ರಜ್ಞಾನ ಹಾಗೂ ಆಡಳಿತ ಕೌಶಲ್ಯಗಳನ್ನು ಪಡೆಯಬಹುದು.

3.ಆಶ್ರಯದಾತ ದೇಶಗಳಿಗೆ ಕಚ್ಚಾ ಪದಾರ್ಥವನ್ನು ಮತ್ತು ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡುವುದರಿಂದ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ.

4 .ಆಶ್ರಯದಾತ ದೇಶಗಳಿಂದ ಲಾಭಾಂಶದ ಜೊತೆಗೆ ರಾಜಧನ (Royalty) ಮತ್ತು ಆಡಳಿತಾತ್ಮಕ ಒಪ್ಪಂದಗಳಿಂದಲೂ ಭಾರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

5. ತವರು ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ .

18. ಷೇರು ಮಾರುಕಟ್ಟೆಯ ಪ್ರಮುಖ ಕೆಲಸಗಳೇನು?ncert solutions

ಉತ್ತರ:- ಷೇರುಮಾರುಕಟ್ಟೆಗಳು ದ್ವಿತೀಯಕ ಷೇರುಮಾರುಕಟ್ಟೆಗಳಾಗಿವೆ ಕೇವಲ ನೋಂದಾಯಿತ ಕಂಪನಿಗಳ ಷೇರುಗಳ ಕ್ರಯ ಮತ್ತು ವಿಕ್ರಯಗಳಿಗೆ ಅವಕಾಶ ನೀಡುತ್ತದೆ. ಈ ಷೇರುಗಳನ್ನು ಮತ್ತು ಸಾಲ ಪತ್ರಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ  ಕಾರ್ಯಕ್ಕೆ ಅನುಕೂಲಕರವವಾಗಿದೆ.

ncert solutions

Get all kind of information CLICK HERE —- studybyjobs.com

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ – 16: ಮೌರ್ಯರು ಮತ್ತು ಕುಶಾಣರು

8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ- 17: ಗುಪ್ತರು ಮತ್ತು ವರ್ಧನರು

ಅಧ್ಯಾಯ-18ದಕ್ಷಿಣ ಭಾರತದ ರಾಜವಂಶಗಳು ಶಾತವಾಹನರು,ಕದಂಬರು ಗಂಗರು

ಅಧ್ಯಾಯ – 19; ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು 

ಅಧ್ಯಾಯ- 20ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2—-ಅಧ್ಯಾಯ -22 ಪ್ರಜಾಪ್ರಭುತ್ವ

RRB Group D Syllabus 2025,subject – wise CBT Topics

Mahabub khan is a wellknown Full stackweb developer,SEO Specialist,Content writer specialist and alsoa Youtuber,Blogger,subject matter expert of Science,and Mathematics.he is also Digital Marketing Expert. Sheheen Begum is also Famous Full stackweb developer,SEO Specialist, Digital Marketing Expert,Blogger,Youtuber,Online Content writer have written more than 5000+ articles .

Post Comment

You May Have Missed