SST Class 8 Social Science Notes – ಸ್ವಯಂ ಸರ್ಕಾರಗಳು ಪಾಠದ ಸಂಪೂರ್ಣ ನೋಟ್ಸ್

ಇದರಲ್ಲಿ SST Class 8 Social Science Notes – ಸ್ವಯಂ ಸರ್ಕಾರಗಳು ಪಾಠದ ಸಂಪೂರ್ಣ ನೋಟ್ಸ್ ಪರಿಕ್ಷಾ ದೃಷ್ಠಿಯಿಂದ ನೀಡಲಾಗಿದೆ ಈ 8ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್ (Kannada Medium) ನೋಟ್ಸ್ ವಿದ್ಯಾರ್ಥಿಗಳಿಗೆ ಸರಳ ಭಾಷೆಯಲ್ಲಿ ಅರ್ಥವಾಗುವ ಹಾಗೆ ತಯಾರಿಸಲಾಗಿದು, ಮತ್ತು ಇದು ನಿಮ್ಮ final exam ಗೆ unit Test ಗಳಿಗೆ ಉಪಯುಕ್ತವಾಗುತ್ತದೆ

sst class 8 notes ಅಧ್ಯಾಯ 23: ಸ್ಥಳೀಯ ಸ್ವಯಂ ಸರ್ಕಾರಗಳು - NCERT, KSEEB, ಮತ್ತು ಸಾಮಾಜಿಕ ವಿಜ್ಞಾನ

class 8 social science notes : ಸ್ಥಳೀಯ ಸ್ವಯಂ ಸರ್ಕಾರಗಳ ಪಾಠದ ಕುರಿತು ವಿವರಣೆ

ಸ್ಥಳೀಯ ಸ್ವಯಂ ಸರ್ಕಾರಗಳು ದೇಶದ ಹಳೆಯ ಹಂತಗಳಲ್ಲಿ ಒಂದಾಗಿದ್ದು ಇದು ಜನತಮಟ್ಟದಲ್ಲಿ ಸ್ವಯಂ ಪ್ರಭುತ್ವ ಮತ್ತು ಸಾರ್ವಜನಿಕ ಸೇವೆಗಳನ್ನು ನೀಡುವ ಸಲುವಾಗಿ ಪ್ರತ್ಯೇಕ ರೀತಿಯ ವ್ಯವಸ್ಥೆಗಳನ್ನು ಅನುಸರಿಸುತ್ತದೆ ನಮ್ಮ ಸಂವಿಧಾನದಲ್ಲಿ ಸ್ಥಳೀಯ ಸರ್ಕಾರಗಳನ್ನು ಅವಕಾಶ ನೀಡಿದ್ದು ಇವು ಸಾರ್ವಜನಿಕ ಸೇವೆಗಳನ್ನು ಸುಗಮವಾಗಿ ಮತ್ತು ಪ್ರಭಾವಶಾಲಿಯಾಗಿ ನಿರ್ವಹಿಸಿಕೊಂಡು ಹೋಗಲು ಜವಾಬ್ದಾರಿಯನ್ನು ಹೊಂದಿವೆ

NCERT ಪುಸ್ತಕದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಥಳೀಯ ಸ್ವಯಂ ಸರ್ಕಾರಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಈ ಅಧ್ಯಾಯದಲ್ಲಿ, ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ಮತ್ತು ನಗರಸಭೆಗಳಂತಹ ಸಂಸ್ಥೆಗಳ ಕಾರ್ಯಾಚರಣೆಯು ಹೇಗೆ ನಡೆಯುತ್ತದೆ ಎಂದು ತಿಳಿಸಲಾಗಿದೆ

sst class 8 notes – ಸ್ವಯಂ ಸರ್ಕಾರಗಳು

ಈ ಸ್ಥಳೀಯ ಸರ್ಕಾರ ಪಾಠದಿಂದ ವಿದ್ಯಾರ್ಥಿಗಳು ಸ್ತಲಿಯದಲ್ಲಿನ ಆಡಳಿತದ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಕಿಸ್ತು ಪ್ರಶ್ನೆಗಳನ್ನು ಹಾಗೂ ವಿವರಣೆಗಳನ್ನು ಕಲಿತ ನಂತರ ಪಾಠವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. KSEEB ಪುಸ್ತಕ ಮತ್ತು ಬೋಧನ ಸಾಮಗ್ರಿಗಳಲ್ಲಿ, ಈ ಅಧ್ಯಾಯವು ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತ ಪದ್ಧತಿಗಳನ್ನು ಅರ್ಥಮಾಡಿಕೊಡುವ ಪ್ರಾಮುಖ್ಯತೆಯನ್ನು ಹೊಂದಿದೆ.

KSEEB Social Science: ಸ್ಥಳೀಯ ಆಡಳಿತ ವ್ಯವಸ್ಥೆ

ವಿದ್ಯಾರ್ಥಿಗಳು 8ನೇ ತರಗತಿಯ ಸಾಮಾಜಿಕ ವಿಜ್ಞಾನದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಮಹತ್ವವನ್ನು ಕಲಿಯುತ್ತಾರೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ಮತ್ತು ನಗರಸಭೆಗಳ ಕಾರ್ಯಕ್ಷಮತೆ, ಅವುಗಳ ಹೊಣೆಗಾರಿಕೆಗಳನ್ನು ವಿವರಿಸುತ್ತದೆ.

Social Science Class 8: ಸ್ಥಳೀಯ ಸ್ವಯಂ ಸರ್ಕಾರಗಳು

ಸ್ಥಳೀಯ ಸ್ವಯಂ ಸರ್ಕಾರಗಳು ಭಾರತದಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತವೆ. Social Science Class 8 ಅಧ್ಯಾಯದಲ್ಲಿ, ವಿದ್ಯಾರ್ಥಿಗಳಿಗೆ ಗ್ರಾಮ ಮಟ್ಟದಿಂದ ಇಡೀ ನಗರಗಳವರೆಗೆ ಆಡಳಿತ ಪದ್ಧತಿಗಳು ಹೇಗೆ ನಿರ್ವಹಿಸಲ್ಪಡುತ್ತವೆ ಎಂಬುದನ್ನು ವಿವರಿಸಲಾಗಿದೆ. ಇದು ದೇಶದಲ್ಲಿ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅಧಿಕಾರ ವಿಂಗಡಣೆ, ಮತ್ತು ಮೂಲಭೂತ ಸೇವೆಗಳು ಪ್ರಾದೇಶಿಕ ಮಟ್ಟದಲ್ಲಿ ಹೇಗೆ ದೊರೆಯುತ್ತವೆ ಎಂಬುದನ್ನು ವಿವರಿಸುತ್ತದೆ.

NCERT Solution for Class 8 Social Science: ಸ್ಥಳೀಯ ಸ್ವಯಂ ಸರ್ಕಾರಗಳು

ವಿದ್ಯಾರ್ಥಿಗಳಲ್ಲಿ ಗ್ರಾಮ ಮಟ್ಟದಲ್ಲಿನ ಜಿಲ್ಲಾ ಮಟ್ಟದಲ್ಲಿನ ಪಂಚಾಯಿತಿಗಳ ಕುರಿತು ತಿಳಿಸುತ್ತದೆ. ಹಾಗೂ ಇದಲ್ಲದೆ NCERT Solution for Class 8 Social Science ಗ್ರಾಮ ಪಂಚಾಯಿತಿ, ನಗರ ಪಂಚಾಯಿತಿ, ಹಾಗೂ ಮಹಾನಗರ ಪಾಲಿಕೆಗಳ ಕೆಲಸವನ್ನು ನಿರ್ವಹಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಸಾಮಾಜಿಕ ವಿಜ್ಞಾನದಲ್ಲಿ, ಈ ಅಧ್ಯಾಯವು ಸ್ಥಳೀಯ ಸಂಸ್ಥೆಗಳ ಪಾಠವನ್ನು ಸಮಗ್ರವಾಗಿ ಗ್ರಹಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ರೂಪುಗೊಂಡಿದೆ.

KSEEB Political Science: ಸ್ಥಳೀಯ ಸ್ವಯಂ ಸರ್ಕಾರಗಳ ಅಧ್ಯಾಯ

KSEEB ರಾಜಕೀಯ ವಿಜ್ಞಾನದಲ್ಲಿ, ಸ್ಥಳೀಯ ಸ್ವಯಂ ಸರ್ಕಾರಗಳ ಅಧ್ಯಾಯವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಳಿತ ನಡೆಸಲು ಬಲವಂತವಾಗಿ ಒದಗಿಸಲಾಗುವ ಅಗತ್ಯವನ್ನು ಪ್ರತಿಪಾದಿಸುತ್ತದೆ.

ಸ್ಥಳೀಯ ಸರ್ಕಾರಗಳ ಪ್ರಾಮುಖ್ಯತೆ ಕುರಿತು

  1. ಜನಪರ್ಯಾಯ ನಿರ್ಧಾರಗಳು: ಸ್ಥಳೀಯ ಸ್ವಯಂ ಸರ್ಕಾರಗಳು ಜನರ ಅಗತ್ಯಗಳನ್ನು ಮತ್ತು ಹವ್ಯಾಸಗಳನ್ನು ಗುರುತಿಸಿ, ತಮ್ಮ ನಿರ್ಧಾರಗಳನ್ನು ತಗುಲಿಸಲು ಗಮನಹರಿಸವೆ.
  2. ಸೇವೆಗಳ ಸರಬರಾಜು: ಶಿಕ್ಷಣ, ಆರೋಗ್ಯ, ಪೂರೈಕೆ ಸೇವೆಗಳು, ಇತ್ಯಾದಿ ಪ್ರಮುಖ ಸೇವೆಗಳ ಮೂಲಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಸುತ್ತದೆ.
  3. ಅಧಿಕಾರ ವಿಂಗಡಣೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊರತಾಗಿ, ಸ್ಥಳೀಯ ಸ್ವಯಂ ಸರ್ಕಾರಗಳು ತಮ್ಮ ಸ್ವತಂತ್ರ ಕಾರ್ಯಾಚರಣೆಯನ್ನು ನಿರ್ವಹಿಸುತ್ತವೆ, ಇದರಿಂದ ಅವರು ಸ್ಥಳೀಯ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಬಹುದು.
  4. ನಾಗರಿಕತೆಗೆ ಅವಶ್ಯಕತೆ: ಸ್ಥಳೀಯ ಸ್ವಯಂ ಸರ್ಕಾರಗಳು ನಾಗರಿಕರಿಗೆ ಸಾರ್ವಜನಿಕ ವ್ಯವಸ್ಥೆಗಳ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತವೆ. ಇದರಿಂದ ಗಮ್ಯತೆ, ಸೇವೆ ಹಾಗೂ ಹಕ್ಕುಗಳನ್ನು ಅರಿಯಬಹುದು.

ಅಭ್ಯಾಸದ ಪ್ರಶ್ನೋತ್ತರಗಳು ( 8th class social science notes )

|. ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ,

1.ಪ್ರಸ್ತುತ ಚಾಲಿಯಲ್ಲಿರುವ ಕರ್ನಾಟಕ ಪಂಚಾಯತ್‌ ರಾಜ್ ಕಾಯ್ದೆಯು ಜಾರಿಯಾದ ವರ್ಷ 1985

2.ಗ್ರಾಮದಲ್ಲಿರುವ ಎಲ್ಲಾ ಮತದಾರರು ಪಾಲ್ಗೊಳ್ಳಬಹುದಾದ ಗ್ರಾಮದ ಮಂಡಳಿಯನ್ನು ಗ್ರಾಮ ಸಭೆ ಎಂದು ಕರೆಯಲಾಗುತ್ತದೆ.

3 ತಾಲೂಕು ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಆಯ್ಕೆಮಾಡುವಾಗ ಪರ್ಯಾನುಕ್ರಮ ವನ್ನು ಅನುಸರಿಸಲಾಗುತ್ತದೆ.

4 ಜಿಲ್ಲಾ ಪಂಚಾಯಿತಿಯ ದಿನಂಪ್ರತಿಯ ಕೆಲಸ ನೋಡಿಕೊಳ್ಳಲು ನೇಮಕಗೊಳ್ಳುವ ಅಧಿಕಾರಿಯನ್ನು –ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದು ಕರೆಯುತ್ತಾರೆ.

5 ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿರುವ ಒಟ್ಟು ಹನ್ನೊಂದು ನಗರ ಪಾಲಿಕೆಗಳ ಸಂಖ್ಯೆ ಆಗಿದೆ.

|| ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

6. ಸ್ಥಳೀಯ ಸ್ವಯಂ ಸರ್ಕಾರಗಳ ಉದ್ದೇಶಗಳಾವುವು?

ಉತ್ತರ:- ಸ್ಥಳೀಯ ಸ್ವಯಂಸರ್ಕಾರಗಳ ಉದ್ದೇಶಗಳನ್ನು ಈ ಕೆಳಗೆ ನೀಡಲಾಗಿದೆ :

1.ಸ್ಥಳೀಯದ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಜನರನ್ನೇ ಬಳಸಿಕೊಳ್ಳುವುದು.

2.ಸ್ಥಳೀಯ ಜನರಿಗೆ ಆಡಳಿತದ ಕುರಿತು ಅರಿವು ಮೂಡಿಸುವುದು,

3.ಅಧಿಕಾರವನ್ನು ವಿಕೇಂದ್ರೀಕರಣ ಗೊಳಿಸಿ ಆಡಳಿತವನ್ನು ಪರಿಣಾಮಕಾರಿಯಾಗಿ ಮಾಡುವುದು.

4.ಕೆಳಮಟ್ಟದ ಹಂತದಲ್ಲಿರುವ ಜನರಲ್ಲಿ ನಾಯಕತ್ವದ ಗುಣವನ್ನು ಅಭಿರುದ್ದಿಗೊಳಿಸುವ ಸಲುವಾಗಿ ತರಬೇತಿಯನ್ನು ನೀಡುವುದು.

7. ನಿಮ್ಮ ಕ್ಷೇತ್ರದ ಸ್ಥಳೀಯ ಮಂಡಳಿ ಹೇಗೆ ರಚಿತವಾಗಿದೆ?

ಉತ್ತರ:- ನಮ್ಮದು ದಾವಣಗೆರೆ ಕ್ಷೇತ್ರದ ಸ್ಥಳೀಯ ಮಂಡಳಿಯಾಗಿದ್ದು ಇಲ್ಲಿನ ನಗರ ಪಾಲಿಕೆಗೆ ಕಾರ್ಪೊರೇಟರ್ ಗಳನ್ನು ಆಯ್ಕೆಮಾಡುವರು ಇವರನ್ನು ಕಾರ್ಪೊರೇಟರ್ ಅಥವಾ ನಗರ ಪಾಲಿಕೆ ಸದಸ್ಯರು ಎನ್ನುವರು ಈ ಮಹಾನಗರವನ್ನು 45 ವಾರ್ಡ್ ಗಳಗಿ ವಿಧಿಸಲಾಗಿದೆ. ಪ್ರತಿಯೊಂದು ವಾರ್ಡ್ಗೆ ಒಬ್ಬ ಸದಸ್ಯರಂತೆ 45 ಸದಸ್ಯರು ಆಯ್ಕೆಯಾಗುತ್ತಾರೆ. ಈ 45 ಸದಸ್ಯರು ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅವನನ್ನು ಮೇಯರ್ ಅಥವಾ ಆಯುಕ್ತರು ಎಂದು ಕರೆಯುತ್ತಾರೆ. ಉಪಮೇಯರ್ ಕೂಡ ಆರಿಸುತ್ತಾರೆ. ಈ ಸದಸ್ಯರು ನಗರದ ಅಗತ್ತ್ಯಗಳನ್ನು ಪೂರೈಸುವ ಕಡೆ ಗಮನಹರಿಸುತ್ತಾರೆ.

8. ನಿಮ್ಮ ಸ್ಥಳೀಯ ಮಂಡಳಿಯ ಕಾರ್ಯಗಳನ್ನು ತಿಳಿಸಿ.

ಉತ್ತರ:-  ನಮ್ಮ ಸ್ಥಳೀಯ ಮಂಡಳಿಯ ಕಾರ್ಯಗಳು ಈ ಕೆಳಗೇ ನೀಡಲಾಗಿದೆ

  • ಆಯಾ ವ್ಯಯ ಪಟ್ಟಿಯನ್ನು ತಯಾರಿಸಿ ಮಂಡಳಿಯಿಂದ ಅನುಮೋದನೆಯನ್ನು ಪಡೆಯುತ್ತದೆ
  • ನಗರದ ಸಂಪೂರ್ಣ ಆಡಳಿತವನ್ನು ನೋಡಿಕೊಳ್ಳುತ್ತದೆ.
  • ಉತ್ತಮವಾದ ನಗರ ಯೋಜನೆಯನ್ನು ತಯಾರಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತದೆ.
  • ಉತ್ತಮವಾದ ರಸ್ತೆ, ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ಶಿಕ್ಷಣ, ವಿದ್ಯುಚ್ಛಕ್ತಿ, ಮಾರುಕಟ್ಟೆ, ಆರೋಗ್ಯ ಮತ್ತು ಮುಂತಾದ ಮೂಲ ಸೌಕರ್ಯ ಗಳನ್ನು ನೀಡುತ್ತದೆ..
  • ನಗರಗಳಲ್ಲಿ ಅಥವಾ ಪಟ್ಟಣಗಳಲ್ಲಿ ಒಳಚರಂಡಿ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಮಾಡಿ ಸ್ವಚ್ಚತೆ ಯನ್ನು ಕಾಪಾಡುತ್ತದೆ.
  • ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿ ನಗರ ಸಭೆಯ ಆಸ್ತಿಯನ್ನು ರಕ್ಷಿಸುತ್ತದೆ
  • ಜನನ ಮತ್ತು ಮರಣ ದರ ವನ್ನು ನೋಂದಣಿ ಮಾಡಿಕೊಳ್ಳುವ ಕಾರ್ಯ ಮಾಡುತ್ತದೆ.
  • ಉದ್ಯಾನವನ ಕ್ರೀಡಾಂಗಣ ಮತ್ತು ಮನೋರಂಜನಾ ಮಂದಿರವನ್ನು ನಿರ್ಮಿಸಿ ಅವುಗಳನ್ನು ನಿರ್ವಹಿಸುತ್ತದೆ.
  • ನಗರದಲ್ಲಿನ ಕೊಳೆಗೆರಿವಾಸಿಗಳಿಗೆ ಮೂಲ ಸೌಲಭ್ಯವನ್ನು ನೀಡಿ , ಅಲ್ಲಿನ ನಿವಾಸಿಗಳ ಜೀವನವನ್ನು ಸುದರಿಸುವಂತೆ ನೋಡಿಕೊಳ್ಳುವುದು.
  • ಮಕ್ಕಳ ಕಲ್ಯಾಣ ಕೇಂದ್ರಗಳು, ವಾರಾಪರಾಧಿ ಗೃಹಗಳು ಭಿಕ್ಷುಕರ ಕಾಲೋನಿಗಳು, ಅನಾಥಾಶ್ರಮಗಳು, ಹೀಗೆ ಮುಂತಾದ ಸಹಾಯಕ ಕೇಂದ್ರಗಳನ್ನು ನಿರ್ಮಿಸಿ ನಿರ್ವಹಿಸಿಕೊಂಡು ಹೋಗುವ ಕಾರ್ಯ ಮಾಡುತ್ತದೆ.
  • ಈಜುಕೊಳ, ಕ್ರೀಡಾಂಗಣ, ಸಂಗ್ರಹಾಲಯ, ವಾಹನ ನಿಲ್ದಾಣ, ವಾಚನಾಲಯ, ಸಾರ್ವಜನಿಕ ಗ್ರಂಥಾಲಯ, ಪಶುವೈದ್ಯಾಲಯ, ಸಿನಿಮಾ ಮಂದಿರ, ಮಾರುಕಟ್ಟೆ ಪ್ರಾಂಗಣ, ಶವಾಗಾರ, ಹಲವು ಕಟ್ಟಡಗಳನ್ನು ನಿರ್ಮಿಸಿ ಅದನ್ನು ನಿರ್ವಹಿಸುತ್ತದೆ
  • ಮಳೆ ನೀರಿನ ಕೊಯ್ಲು ಯೋಜನೆಯನ್ನು ರಚಿಸುತ್ತದೆ.
  • ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ.
  • ನಗರದಲ್ಲಿನ ಹಿಂದುಳಿದ ಮತ್ತು ದುರ್ಬಲ ವರ್ಗದವರ ಪ್ರಗತಿಗಾಗಿ ಕ್ರಮ ಕೈಗೊಳ್ಳುವುದು.
  • ನಗರದ ಸ್ವಚ್ಚತೆ, ಸುಂದರತೆ ಮತ್ತು ಹಸಿರನ್ನು ಕಾಪಾಡಿಕೊಂಡು ಹೋಗುವ ಯೋಜನೆ ಮತ್ತು ಕಾರ್ಯಕ್ರಮವನ್ನು ಕೈಗೊಳ್ಳುವುದು.

understanding secularism class 8 notes

9. ನಿಮ್ಮ ಸ್ಥಳೀಯ ಮಂಡಳಿಯ ಆದಾಯದ ಮೂಲಗಳಾವುವು?

ನಮ್ಮ ಸ್ಥಳೀಯ ಮಂಡಳಿಯ ಆದಾಯದ ಮೂಲಗಳೆಂದರೆ ಕಟ್ಟಡ ತೆರಿಗೆಗಳು, ಖಾಲಿಯಿರುವ ಸ್ಥಳದ ಮೇಲೆ ವಿಧಿಸುವ ತೇರಿಗೆಗಳು, ಅಂಗಡಿ ಮೇಲಿನ ತೆರಿಗೆ, ಮಾರಾಟ ಮಾಡುವ ತಳ್ಳುಗಾಡಿ ಮೇಲಿನ ತೆರಿಗೆ, ನೀರಿನ ತೆರಿಗೆ, ನಗರ ಸಭೆಗಳ ಅಧೀನದಲ್ಲಿರುವ ಕಟ್ಟಡಗಳು, ಮನೋರಂಜನ ಉಪಕರಣಗಳು, ಮಾರಾಟ ಮತ್ತು ಮಳಿಗೆಗಳಿಂದ ಬರುವ ಬಾಡಿಗೆಗಳು ಮುಂತಾದವುಗಳಿವೆ.

10. ಸ್ಥಳೀಯ ಸಂಸ್ಥೆಗಳಲ್ಲಿ ಮತಚಲಾಯಿಸಲು ಹಕ್ಕಿರುವ ಮತ್ತು ಹಕ್ಕಿಲ್ಲದ ಸದಸ್ಯರುಗಳನ್ನು ಪಟ್ಟಿ ಮಾಡಿ.

ಉತ್ತರ:- ನಾಮ ನಿರ್ದೇಶಿತ ಸದಸ್ಯರುಗಳಿಗೆ ಸಭೆಯ ಚರ್ಚೆಯಲ್ಲಿ ಭಾಗವಹಿಸುವ ಹಕ್ಕಿ ನೀಡಲಾಗಿದ್ದು, ಆದರೇ ಮತ ಚಲಾಯಿಸುವ ಹಕ್ಕಿಲ್ಲ. ಸ್ಥಳೀಯ ವಿಧಾನಸಭಾ ಶಾಸಕರು, ವಿಧಾನಪರಿಷತ್ತಿನ ಶಾಸಕರು ಮತ್ತು ಲೋಕಸಭಾ ಸದಸ್ಯರುಗಳು ಸಭೆಗಳಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ.

II. ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿಸಮಿತಿಗಳನ್ನುರಚಿಸಿಕೊಳ್ಳುವ ಅವಶ್ಯಕತೆಯನ್ನು ತಿಳಿಸಿ.

ಆಡಳಿತ ಪರಿಣಾಮಕಾರಿ ನಿರ್ವಹಿಸಲು ಸ್ಥಾಯಿ ಸಮಿತಿಗಳ ಸ್ಥಾಪನೆ ಅಗತ್ಯವಿದೆ. ಸರ್ಕಾರವು ಆಡಳಿತ ಕ್ರಮವನ್ನು ಸುಸ್ಥಿರ ವಾಗಿ ನಿರ್ವಹಿಸಲು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಕಾರ್ಯಗಳನ್ನು ನಿರ್ವಹಿಸುವ ಜೊತೆಗೆ ಇನ್ನೂ ಕೆಲವು ಕಾರ್ಯಗಳನ್ನು ಪಂಚಾಯಿತಿಗಳು ನಿರ್ವಹಿಸಬೇಕಾಗುತ್ತದೆ.

ಅವುಗಳು ಈ ಕೆಳನಂತಿದೆ:-

  • ಗ್ರಾಮ ಪಂಚಾಯಿತಿ ಜಾರಿಗೆ ತಂದ ವಾರ್ಷಿಕ ಯೋಜನೆಗಳನ್ನು ಜಿಲ್ಲಾ ಪಂಚಾಯಿತಿಗಳಿಗೆ ಸಲ್ಲಿಸುವುದು
  • ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪಂಚಾಯಿತಿ ಗಳು ಜಾರಿಗೆ ತಂದ ಎಲ್ಲಾ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕಾರ್ಯ ನಿರ್ವಹಿಸುವುದು.

12. ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿಯನ್ನು ಕಲ್ಪಿಸಲಾಗಿರುವ ಸದಸ್ಯ ವರ್ಗದ ಪಟ್ಟಿ ನೀಡಿ.

ಉತ್ತರ:- ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿಯನ್ನು ಕಲ್ಪಿಸಲಾಗಿರುವ ಸದಸ್ಯ ವರ್ಗದವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿಯಿದೆ.

13)ಒಂದು ಪ್ರದೇಶವನ್ನು ಪಟ್ಟಣ ಮತ್ತು ನಗರವೆಂದು ವರ್ಗೀಕರಿಸಲು ಇರಬೇಕಾದ ಜನಸಂಖ್ಯಾ ಪ್ರಮಾಣವೆಷ್ಟು?

ನಗರ ಅಥವಾ ಪಟ್ಟಣವನ್ನು ಜನಸಂಖ್ಯೆಯ ಆಧಾರದ ಮೇಲೆ ನಗರ ಪ್ರದೇಶ ಎಂದು ವರ್ಗೀಕಿಸಲಾಗುತ್ತದೆ. 20 ಸಾವಿರ ದಿಂದ 50 ಸಾವಿರ ಜನಸಂಖ್ಯೆ ಇದ್ದರೆ ಅದನ್ನು ಪಟ್ಟಣ ಪ್ರದೇಶ ಎಂದು ಕರೆಯಲಾಗುತ್ತದೆ
50 ಸಾವಿರದಿಂದ 3 ಲಕ್ಷದ ಒಳಗೆ ಇರುವ ಜನಸಂಖ್ಯೆ ಹೊಂದಿರುವ ಪ್ರದೇಶವನ್ನು ನಗರ ಪ್ರದೇಶ ಎಂದು ಪರಿಗಣಿಸಲಾಗುತ್ತದೆ .
ಎರೆಡು ಲಕ್ಷಕಿಂತ ಹೆಚ್ಚು ಜನಸಂಖ್ಯೆ ಇದ್ದು , ಕೋಟಿಕಿಂತ ಹೆಚ್ಚಿನ ಆದಾಯ ವಿದ್ದರೆ ಅಂತಹ ನಗರ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯನ್ನು ನಿರ್ಮಿಸಲಾಗುತ್ತದೆ.

14. ಕರ್ನಾಟಕದಲ್ಲಿ ಪಂಚಾಯತಿ ರಾಜ್ಯದ ಮೂರು ಹಂತಗಳಾವುವು?

ಉತ್ತರ:- ಕರ್ನಾಟಕ ರಾಜ್ಯದಲ್ಲಿ ಮೂರು ಹಂತದ ಪಂಚಾಯಿತಿ ಗಳಿವೆ ಅವುಗಳೆಂದರೆ

  • ಗ್ರಾಮ ಪಂಚಾಯತಿ
  • ತಾಲೂಕು ಪಂಚಾಯತಿ
  • ಜಿಲ್ಲಾ ಪಂಚಾಯತಿ

8ನೇ ತರಗತಿ ಸಮಾಜ ವಿಜ್ಞಾನ – ಇತರ ಪಾಠಗಳ ನೋಟ್ಸ್

ಅಧ್ಯಾಯ – 19; ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು 

ಅಧ್ಯಾಯ- 20ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2-ಅಧ್ಯಾಯ -22 ಪ್ರಜಾಪ್ರಭುತ್ವ

FAQS

1. ಸ್ವಯಂ ಸರ್ಕಾರಗಳು ಎಂದರೇನು?

ಉತ್ತರ: ಸ್ಥಳೀಯ ಮಟ್ಟದಲ್ಲಿ ಜನರಿಂದ ಆಯ್ಕೆಯಾದ ಆಡಳಿತ ಸಂಸ್ಥೆಗಳನ್ನೇ ಸ್ವಯಂ ಸರ್ಕಾರಗಳು ಎಂದು ಕರೆಯಲಾಗುತ್ತದೆ. ಇವು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತವೆ

2. ಸ್ವಯಂ ಸರ್ಕಾರಗಳ ಮುಖ್ಯ ವಿಧಗಳು ಯಾವುವು?

ಉತ್ತರ:
ಸ್ವಯಂ ಸರ್ಕಾರಗಳು ಮುಖ್ಯವಾಗಿ ಎರಡು ವಿಧಗಳಾಗಿವೆ:
ಗ್ರಾಮೀಣ ಸ್ವಯಂ ಸರ್ಕಾರಗಳು (ಗ್ರಾಮ ಪಂಚಾಯತ್)
ನಗರ ಸ್ವಯಂ ಸರ್ಕಾರಗಳು (ಮುನ್ಸಿಪಾಲಿಟಿ, ಮಹಾನಗರ ಪಾಲಿಕೆ)

3. ಗ್ರಾಮ ಪಂಚಾಯತ್ ಎಂದರೇನು?

ಉತ್ತರ: ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಆಡಳಿತ ಸಂಸ್ಥೆಯೇ ಗ್ರಾಮ ಪಂಚಾಯತ್. ಇದು ಗ್ರಾಮದ ಅಭಿವೃದ್ಧಿ ಹಾಗೂ ಆಡಳಿತ ನೋಡಿಕೊಳ್ಳುತ್ತದೆ

4. ನಗರ ಸ್ವಯಂ ಸರ್ಕಾರಗಳು ಎಂದರೇನು?

ಉತ್ತರ: ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಆಡಳಿತ ಸಂಸ್ಥೆಗಳಾದ ಮುನ್ಸಿಪಾಲಿಟಿ ಮತ್ತು ಮಹಾನಗರ ಪಾಲಿಕೆಗಳು ನಗರ ಸ್ವಯಂ ಸರ್ಕಾರಗಳಾಗಿವೆ.

Leave a Comment

Your email address will not be published. Required fields are marked *

Scroll to Top